ದೇವನಹಳ್ಳಿ: ನಕಲಿ ಪಾಸ್ಪೋರ್ಟ್ ಮೂಲಕ ಬ್ಯಾಂಕಾಕ್ಗೆ ಹಾರಲು ಯತ್ನ; ನೇಪಾಳ ಮೂಲದ ವ್ಯಕ್ತಿ ಬಂಧನ
ಭಾರತ ಮೂಲದ ಹಾಗೂ ನೇಪಾಳಿ ಮೂಲದ ಮಹಿಳೆ ಜೊತೆ ತಲಾ ಒಬ್ಬರಿಂದ 8 ಲಕ್ಷ, ಜೊತೆಗೆ 1.5 ಲಕ್ಷ ಹಣ ಪಡೆದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್ಗೆ ತೆರಳಲು ಯತ್ನಿಸಿದ್ದ. ಈ ವೇಳೆ ಬಂಧಿಸಲಾಗಿದೆ. ಇನ್ನು ಆರೋಪಿಯನ್ನ ಬಂಧಿಸಿದ ಪೊಲೀಸರು, ಮತ್ತಿಬ್ಬರನ್ನು ವಾಪಸ್ ಕಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ, ಸೆ.20: ನಕಲಿ ಪಾಸ್ಪೋರ್ಟ್ ಬಳಸಿ ವಿದೇಶಕ್ಕೆ ತೆರಳುತ್ತಿದ್ದ ವ್ಯಕ್ತಿಯನ್ನು ಕೆಂಪೇಗೌಡ ವಿಮಾನ ನಿಲ್ದಾಣ(Kempegowda International Airport)ದಲ್ಲಿ ವಲಸೆ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಬಳಿಕ ಏರ್ಪೋರ್ಟ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಉತ್ತಮ್ ಹಲಾಲ್ ಬಂಧಿತ ಆರೋಪಿ. ಇನ್ನು ಇತ ಕೇರಳ ಮೂಲದವನು ಎಂದು ನಕಲಿ ಪಾಸ್ಪೋರ್ಟ್ ಪಡೆದು, ಬೆಂಗಳೂರಿನಿಂದ ಬ್ಯಾಂಕಾಕ್ಗೆ ತೆರಳುತ್ತಿದ್ದ. ಇನ್ನು ಆರೋಪಿ ಉತ್ತಮ್ ಹಲಾಲ್ ತನ್ನ ಜೊತೆಯಲ್ಲಿ ಮತ್ತಿಬ್ಬರಿಗೆ ಕೆಲಸ ಕೊಡಿಸೋದಾಗಿ ಕರೆದುಕೊಂಡು ಹೋಗುತ್ತಿದ್ದ ಭಾರತ ಹಾಗೂ ನೇಪಾಳಿ ಮೂಲದ ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಲಾಗಿದೆ.
ಒಬ್ಬರಿಂದ 8 ಲಕ್ಷ ಪಡೆದು ಕರೆದುಕೊಂಡು ಹೋಗ್ತಿದ್ದ ಆರೋಪಿ
ಹೌದು, ಭಾರತ ಮೂಲದ ಹಾಗೂ ನೇಪಾಳಿ ಮೂಲದ ಮಹಿಳೆ ಜೊತೆ ತಲಾ ಒಬ್ಬರಿಂದ 8 ಲಕ್ಷ, ಜೊತೆಗೆ 1.5 ಲಕ್ಷ ಹಣ ಪಡೆದು ಇಂಡಿಗೋ ವಿಮಾನದಲ್ಲಿ ಬ್ಯಾಂಕಾಕ್ಗೆ ತೆರಳಲು ಯತ್ನಿಸಿದ್ದ. ಈ ವೇಳೆ ಬಂಧಿಸಲಾಗಿದೆ. ಇನ್ನು ಆರೋಪಿಯನ್ನ ಬಂಧಿಸಿದ ಪೊಲೀಸರು, ಮತ್ತಿಬ್ಬರನ್ನು ವಾಪಸ್ ಕಳಿಸಿದ್ದಾರೆ. ಈ ಕುರಿತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಈ ಘಟನೆ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಇದನ್ನೂ ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೂಲಕ ದಾಖಲೆ ಪ್ರಮಾಣದ ಮಾವು ರಫ್ತು; ಬರೋಬ್ಬರಿ ಶೇ 124ರಷ್ಟು ಹೆಚ್ಚಳ
ಇನ್ನು ಕಳೆದ ಆಗಸ್ಟ್ 22 ರಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಬ್ಯಾಗ್ನಲ್ಲಿ ಹೆಬ್ಬಾವು, ಊಸರವಳ್ಳಿ, ಆಮೆ, ಮೊಸಳೆ ಮರಿ ಪತ್ತೆಯಾಗಿತ್ತು. ಹೌದು, ಒಟ್ಟು 234 ಪ್ರಾಣಿಗಳು ಇದ್ದು, ಕೆಂಪೇಗೌಡ ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ ಈ ಪ್ರಕರಣ ಬೆಳಕಿಗೆ ಬಂದಿತ್ತು. ಬ್ಯಾಂಕಾಕ್‌ನಿಂದ ‘ಎಫ್‌ಡಿ 137’ ವಿಮಾನದಲ್ಲಿ ಬಂದಿದ್ದ ಪ್ರಯಾಣಿಕನೊಬ್ಬ ತನ್ನ ಟ್ರ್ಯಾಲಿ ಬ್ಯಾಗ್ನಲ್ಲಿ ವಿವಿಧ ಪ್ರಾಣಿಗಳನ್ನು ಮರೆಮಾಚಿ ಸಾಗಿಸುತ್ತಿದ್ದ. ಈ ವೇಳೆ ಪರಿಶೀಲಿಸಿದಾಗ ಪ್ರಾಣಿಗಳು ಪತ್ತೆಯಾಗಿತ್ತು. ಬಳಿಕ ಕಸ್ಟಮ್ಸ್ ಅಧಿಕಾರಿಗಳು ಪ್ರಾಣಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ನೀಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ