ಹುಬ್ಬಳ್ಳಿ, ಸೆ.17: ನೈಋತ್ಯ ರೈಲ್ವೆ ವಲಯವು ಹಲವು ಕಾಮಗಾರಿಗಳನ್ನು ಕೈಗೊಂಡಿತ್ತು. ಅದರಂತೆ ಕೂಡಗಿ ನಿಲ್ದಾಣದ ಯಾರ್ಡ್(Kudgi Yard) ನಲ್ಲಿ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ, ಕೆಳಗೆ ತಿಳಿಸಲಾದ ರೈಲುಗಳನ್ನು ಈ ಹಿಂದೆ ಭಾಗಶಃ ರದ್ದುಗೊಳಿಸಲು/ನಿಯಂತ್ರಿಸಲು ಸೂಚಿಸಲಾಗಿತ್ತು. ಆದರೆ, ಈ ಕೆಲಸವನ್ನು ಇದೀಗ ಮುಂದೂಡುವುದರಿಂದ ಭಾಗಶಃ ರದ್ದುಗೊಂಡ/ನಿಯಂತ್ರಿಸಲಾದ ಎಲ್ಲಾ ರೈಲುಗಳನ್ನು ಎಂದಿನಂತೆ ಸಂಚರಿಸಲು ಪುನರಾರಂಭಿಸಲಾಗುತ್ತಿದೆ.
ಭಾಗಶಃ ರದ್ದುಗೊಂಡ / ನಿಯಂತ್ರಿತ ರೈಲುಗಳ ಸಂಚಾರ ಪುನರಾರಂಭವಾಗಿದ್ದು, ರೈಲುಗಳ ಸಂಖ್ಯೆ, ರೈಲುಗಳ ಸೇವೆಯ ದಿನಾಂಕ, ಭಾಗಶಃ ರದ್ದುಗೊಳಿಸಲಾದ ನಿಲ್ದಾಣಗಳ ಹೆಸರು ಇಲ್ಲಿವೆ.
ಕ್ರ. ಸಂಖ್ಯೆ | ರೈಲುಗಳ ಸಂಖ್ಯೆ | ರೈಲುಗಳ ಸೇವೆಯ ದಿನಾಂಕ | ಭಾಗಶಃ ರದ್ದುಗೊಳಿಸಲಾದ ನಿಲ್ದಾಣಗಳ ಹೆಸರು | ಕ್ರಮ |
01 | 06919 ಎಸ್ ಎಸ್ ಎಸ್ ಹುಬ್ಬಳ್ಳಿ-ವಿಜಯಪುರ | 22.09.2024 ರಿಂದ 25.09.2024 | ಬಾಗಲಕೋಟ-ವಿಜಯಪುರ | ಈ ಎಲ್ಲಾ ರೈಲುಗಳನ್ನು ಎಂದಿನಂತೆ ಸಂಚರಿಸಲು ಪುನರಾರಂಭಿಸಲಾಗುತ್ತಿದೆ |
02 | 06920 ವಿಜಯಪುರ-ಎಸ್‌ಎಸ್‌ಎಸ್ ಹುಬ್ಬಳ್ಳಿ | ವಿಜಯಪುರ-ಬಾಗಲಕೋಟ | ಪುನರಾರಂಭಿಸಲಾಗುತ್ತಿದೆ | |
03 | 07377 ವಿಜಯಪುರ-ಮಂಗಳೂರು ಸೆಂಟ್ರಲ್ | ವಿಜಯಪುರ-ಬಾಗಲಕೋಟ | ಪುನರಾರಂಭಿಸಲಾಗುತ್ತಿದೆ | |
04 | 17308 ಬಾಗಲಕೋಟ-ಮೈಸೂರು | ಬಾಗಲಕೋಟ-ವಿಜಯಪುರ | ಪುನರಾರಂಭಿಸಲಾಗುತ್ತಿದೆ | |
05 | 06546 ವಿಜಯಪುರ-ಯಶವಂತಪುರ | ವಿಜಯಪುರ-ಗದಗ | ಪುನರಾರಂಭಿಸಲಾಗುತ್ತಿದೆ | |
06 | 07378 ಮಂಗಳೂರು ಸೆಂಟ್ರಲ್-ವಿಜಯಪುರ | 21.09.2024 ರಿಂದ 24.09.2024 | ಬಾಗಲಕೋಟ-ವಿಜಯಪುರ | ಪುನರಾರಂಭಿಸಲಾಗುತ್ತಿದೆ |
07 | 17307 ಮೈಸೂರು-ಬಾಗಲಕೋಟ | ವಿಜಯಪುರ-ಬಾಗಲಕೋಟ | ಪುನರಾರಂಭಿಸಲಾಗುತ್ತಿದೆ | |
08 | 06545 ಯಶವಂತಪುರ-ವಿಜಯಪುರ | ಗದಗ-ವಿಜಯಪುರ | ಪುನರಾರಂಭಿಸಲಾಗುತ್ತಿದೆ | |
09 | 11305 ಸೋಲಾಪುರ-ಹೊಸಪೇಟೆ | 25.09.2024 | ಮಾರ್ಗದಲ್ಲಿ 45 ನಿಮಿಷಗಳ ನಿಯಂತ್ರಿಣ |
ಪುನರಾರಂಭಿಸಲಾಗುತ್ತಿದೆ |
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:18 pm, Tue, 17 September 24