ಆಟೋ ಚಾಲಕರಿಗೆ ಬಿತ್ತು ಬರೆ; ಎಲ್​ಪಿಜಿ ಗ್ಯಾಸ್ ದರ ಏರಿಕೆ

| Updated By: sandhya thejappa

Updated on: Aug 01, 2021 | 10:15 AM

ಲಾಕ್​ಡೌನ್​ನಲ್ಲಿ ಆಟೋಗಳು ಓಡಾಡದೇ ಮನೆಯಲ್ಲೇ ನಿಂತಿದ್ದವು. ಲಾಕ್​ಡೌನ್​ನ ತೆರವುಗೊಳಿಸಿದ ನಂತರ ಆಟೋ ಚಾಲಕರು ನಿಟ್ಟಿಸಿರು ಬಿಟ್ಟಿದ್ದಾರೆ. ಆದರೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ.

ಆಟೋ ಚಾಲಕರಿಗೆ ಬಿತ್ತು ಬರೆ; ಎಲ್​ಪಿಜಿ ಗ್ಯಾಸ್ ದರ ಏರಿಕೆ
ಆಟೋ (ಪ್ರಾತಿನಿಧಿಕ ಚಿತ್ರ)
Follow us on

ಬೆಂಗಳೂರು: ಕೊರೊನಾ ಎರಡನೇ ಅಲೆಯಿಂದ ಆಟೋ ಚಾಲಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿತ್ತು. ಆಟೋ ಬಾಡಿಗೆ ನಂಬಿ ಜೀವನ ಸಾಗಿಸುತ್ತಿದ್ದ ಚಾಲಕರಿಗೆ ಕೊರೊನಾ ಮಹಾ ಕಂಟಕವಾಗಿತ್ತು. ಲಾಕ್​ಡೌನ್​ನಲ್ಲಿ ಆಟೋಗಳು ಓಡಾಡದೇ ಮನೆಯಲ್ಲೇ ನಿಂತಿದ್ದವು. ಲಾಕ್​ಡೌನ್​ನ ತೆರವುಗೊಳಿಸಿದ ನಂತರ ಆಟೋ ಚಾಲಕರು ನಿಟ್ಟಿಸಿರು ಬಿಟ್ಟಿದ್ದಾರೆ. ಆದರೆ ಇದೀಗ ಮತ್ತೊಂದು ಶಾಕ್ ಎದುರಾಗಿದೆ. ಏಕಾ ಏಕಿ ಆಟೋ ಎಲ್​ಪಿಜಿ ಗ್ಯಾಸ್ ದರ ಏರಿಕೆಯಾಗಿದ್ದು, ಆಟೋ ಚಾಲಕರಿಗೆ ಮತ್ತೆ ಬರೆ ಬಿದ್ದಿದೆ.

ಇಂದು (ಆಗಸ್ಟ್ 1) ಒಂದು ಲೀಟರ್​ಗೆ 5 ರೂಪಾಯಿ 41 ಪೈಸೆ ರೂ. ಏರಿಕೆಯಾಗಿದೆ. ಗ್ಯಾಸ್ ಬೆಲೆ ಕಂಡು ಆಟೋ ಚಾಲಕರು ದಂಗಾಗಿದ್ದಾರೆ. 50 ರೂಪಾಯಿ 47 ಪೈಸೆ ಇದ್ದ ಆಟೋ ಗ್ಯಾಸ್ ಬೆಲೆ, ಸದ್ಯ 55 ರೂಪಾಯಿ 88 ಪೈಸೆ ರೂ. ಆಗಿದೆ. ಹೀಗೆ ಆದ್ರೆ ಆಟೋ ಚಾಲಕರು ಬದುಕುವುದಾದರೂ ಹೇಗೆ? ಮನೆ ಬಾಡಿಗೆ, ಮಕ್ಕಳ ಸ್ಕೂಲ್ ಫೀಸ್ ಕಟ್ಟಿ ಜೀವನ ಮಾಡೋದು ಹೇಗೆ? ಅಂತ ಆಟೋ ಚಾಲಕರೊಬ್ಬರು ಪ್ರಶ್ನಿಸಿದ್ದಾರೆ.

ಪ್ಯಾಸೆಂಜರ್ ಬಳಿ ಜಾಸ್ತಿ ಹಣ ಕೇಳಿದರೆ ಕೊಡಲ್ಲ ಅಂತಾರೆ. ಅವರ ಹತ್ತಿರನೂ ದುಡ್ಡಲ್ಲಿದೆ ಕಷ್ಟದಲ್ಲಿದ್ದಾರೆ. ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ಆಟೋ ಗ್ಯಾಸ್ ಬಂಕ್ ಬಳಿ ಬಂದು ನೋಡಿದಾಗಲೆ ಇಷ್ಟು ಜಾಸ್ತಿ ಆಗಿರುವುದು ಗೊತ್ತಾಗಿದೆ ಅಂತ ಆಟೋ ಚಾಲಕರೊಬ್ಬರು ಸ್ಯಾಟಲೈಟ್ ಬಳಿ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ

ಜಾರ್ಖಂಡ್​ ನ್ಯಾಯಾಧೀಶರ ಹತ್ಯೆ ಪ್ರಕರಣದ ತನಿಖೆ ಸಿಬಿಐಗೆ ನೀಡಲು ಸಿಎಂ ಹೇಮಂತ್​ ಸೊರೆನ್​ ನಿರ್ಧಾರ

ಸಿಎಂ ಬೊಮ್ಮಾಯಿ ಸಾಹೇಬ್ರೇ.. ದೆಹಲಿಗೆ ಹೋಗೋದು ಬಿಡಿ, ನಮ್ಮ ಕಷ್ಟ ಸ್ವಲ್ಪ ನೋಡಿ ಸ್ವಾಮಿ: ಅನ್ನದಾತರ ಆಕ್ರೋಶ

(Auto LPG gas rates have gone up)