Karnataka Breaking News LIVE: ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ
Karnataka Bengaluru News LIVE: ಈ ವೇಳೆ ಸಂಪುಟ ರಚನೆ ವಿಚಾರವಾಗಿ ಬಿಎಸ್‌ವೈ ಜೊತೆ ಬೊಮ್ಮಾಯಿ ಚರ್ಚೆ ನಡೆಸಿರುವ ಸಾಧ್ಯತೆಯಿದೆ. ಈಗಾಗಲೇ ಬಿಎಸ್‌ವೈ ಆಪ್ತ ಶಾಸಕರು ಬೊಮ್ಮಾಯಿ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದಾರೆ.
LIVE NEWS & UPDATES
-
ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ: ಮಾಜಿ ಸಚಿವ ಮುರುಗೇಶ್ ನಿರಾಣಿ
ನೂತನ ಸಿಎಂ ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಹೊಸದಾಗಿ ಜವಾಬ್ದಾರಿ ಹೊತ್ತು ಉತ್ತಮ ಕೆಲಸ ಮಾಡುತ್ತಿದ್ದಾರೆ. ನೆರೆ, ಕೊವಿಡ್ ಬಗ್ಗೆ ಈಗಾಗಲೇ ಕಾರ್ಯ ಆರಂಭಿಸಿದ್ದಾರೆ. ಸಂಪುಟ ರಚನೆ ಸಿಎಂ ಪರಮಾಧಿಕಾರಕ್ಕೆ ಬಿಟ್ಟದ್ದು ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಿಳಿಸಿದ್ದಾರೆ.
-
ವರಿಷ್ಠರ ಭೇಟಿಗೆ ಮತ್ತೆ ದೆಹಲಿಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ನೂತನ ಸಚಿವರ ಪಟ್ಟಿ ಕೈಯಲ್ಲಿ ಹಿಡಿದೇ ಅವರು ದೆಹಲಿಗೆ ಬಿಜೆಪಿ ವರಿಷ್ಠರ ಭೇಟಿಗೆ ತೆರಳಿದ್ದಾರೆ. ವರಿಷ್ಠರಿಂದ ಒಪ್ಪಿಗೆ ಪಡೆದು ನಾಳೆಯೇ ಸಿಎಂ ವಾಪಸ್ ಆಗಲಿದ್ದು, ಮಂಗಳವಾರ ಅಥವಾ ಬುಧವಾರ ಸಂಪುಟ ರಚನೆ ಸಾಧ್ಯತೆಯಿದೆ. ಇತ್ತ ಸಿಎಂ ದೆಹಲಿಗೆ ತೆರಳುವ ಮುನ್ನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
-
ಮಂಗಳವಾರ ಅಥವಾ ಬುಧವಾರ ಸಂಪುಟ ರಚನೆ ಸಾಧ್ಯತೆ!
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳುತ್ತಾರೆ. ನೂತನ ಸಚಿವರ ಪಟ್ಟಿಯನ್ನು ತೆಗೆದುಕೊಂಡು ರಾಜ್ಯಕ್ಕೆ ವಾಪಸಾಗಲಿದ್ದಾರೆ. ಮಂಗಳವಾರ ಅಥವಾ ಬುಧವಾರ ಸಂಪುಟ ರಚನೆ ಸಾಧ್ಯತೆಯಿದೆ.
ಇಂದು ದೆಹಲಿಗೆ ತೆರಳಲಿರುವ ಸಿಎಂ ಬಸವರಾಜ್ ಬೊಮ್ಮಾಯಿ
ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಇಂದು ದೆಹಲಿಗೆ ತೆರಳಿದ್ದಾರೆ. ಸಂಜೆ 5.45ರ ವಿಮಾನದಲ್ಲಿ ಸಿಎಂ ಬೊಮ್ಮಾಯಿ ದೆಹಲಿಗೆ ಪ್ರಯಾಣ ಬೆಳೆಸುತ್ತಾರೆ. ನಾಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಭೇಟಿಯಾಗುವೆ. ಭೇಟಿಯಾಗಿ ಸಚಿವರ ಪಟ್ಟಿ ಫೈನಲ್ ಮಾಡ್ತೇನೆ ಎಂದು ಸಿಎಂ ತಿಳಿಸಿದ್ದಾರೆ.
ಯತ್ನಾಳ್ ವಿರುದ್ಧ ಅಭಿನವ ಮುರುಘೇಂದ್ರ ಮಹಾಸ್ವಾಮಿ ಕಿಡಿ
ಸ್ವಾಮೀಜಿಗಳ ವಿರುದ್ಧ ಯತ್ನಾಳ್ ಮಾತನಾಡಿದ್ದು ಸರಿಯಲ್ಲ ಅಂತ ಯತ್ನಾಳ್ ವಿರುದ್ಧ ಅಭಿನವ ಮುರುಘೇಂದ್ರ ಮಹಾಸ್ವಾಮಿ ಕಿಡಿಕಾರಿದ್ದಾರೆ. 2019ರಲ್ಲಿ ಪ್ರವಾಹದ ವೇಳೆ ಪರಿಹಾರಕ್ಕೆ ಯತ್ನಾಳ್ ಆಗ್ರಹಿಸಿದ್ದರು. ಆಗ ಯತ್ನಾಳ್ ನಡೆಯನ್ನು ಸ್ವಾಮೀಜಿಗಳು ಸ್ವಾಗತ ಮಾಡಿದ್ದರು. ಇದೇ ವಿಚಾರಕ್ಕೆ ಯತ್ನಾಳ್‌ರನ್ನು ಉಚ್ಛಾಟನೆಗೆ ಮುಂದಾಗಿತ್ತು. ಬಿಜೆಪಿ ಹೈಕಮಾಂಡ್ ಯತ್ನಾಳ್ ಉಚ್ಛಾಟನೆಗೆ ಮುಂದಾಗಿತ್ತು. ಆಗ ಯತ್ನಾಳ್ ಪರವಾಗಿ ಶ್ರೀಶೈಲ ಜಗದ್ಗುರು ಪತ್ರ ಬರೆದಿದ್ರು. ಕೇಂದ್ರ ನಾಯಕರಿಗೆ ಯತ್ನಾಳ್ ಪರವಾಗಿ ಪತ್ರ ಬರೆದಿದ್ದರು. ಆಗ ಸ್ವಾಮೀಜಿಗಳ ಬಗ್ಗೆ ಶಾಸಕ ಯತ್ನಾಳ್‌ಗೆ ಅಭಿಮಾನವಿತ್ತು. ಈಗ ಯಡಿಯೂರಪ್ಪ ಪರ ಮಾತನಾಡಿದ್ದಕ್ಕೆ ಏಕೆ ಆಕ್ರೋಶ ವ್ಯಕ್ತಪಡಿಸುತ್ತಾರೆ. ಬಿಜೆಪಿ ಶಾಸಕ ಯತ್ನಾಳ್ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಸ್ವಾಮೀಜಿಗಳಿಗೆ ಕೊಡುವ ಗೌರವ ಇದೇನಾ. ನಿಮ್ಮ ಮಾತುಗಳಿಂದಾಗಿ ಮಠಾಧೀಶರಿಗೆ ಅವಮಾನವಾಗಿದೆ. ನೀವು ಮಠಾಧೀಶರ ತಂಟೆಗೆ ಬರಬೇಡಿ ಎಂದು ಮುರುಘೇಂದ್ರ ಮಹಾಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ದೇವೇಗೌಡರ ನಿವಾಸದಿಂದ ತೆರಳಿದ ಸಿಎಂ ಬೊಮ್ಮಾಯಿ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮನೆಗೆ ತೆರಳಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ಶೀರ್ವಾದ ಪಡೆದರು. ಈ ವೇಳೆ ಹೆಚ್‌ಡಿಡಿ ಬೊಮ್ಮಾಯಿಗೆ ಸನ್ಮಾನಿಸಿದರು. ಸ್ವಲ್ಪ ಸಮಯ ಮಾತನಾಡಿ ಬೆಂಗಳೂರಿನ ಪದ್ಮನಾಭನಗರದ ನಿವಾಸದಿಂದ ಮುಖ್ಯಮಂತ್ರಿ ವಾಪಸ್ ಆಗಿದ್ದಾರೆ.
ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಸಲಹೆ ನೀಡಿದ ಹೆಚ್ಡಿ ದೇವೇಗೌಡ
ರಾಜ್ಯಕ್ಕೆ ಒಳ್ಳೆಯ ಕೆಲಸ ಮಾಡಿ ಎಂದು ಆಶೀರ್ವದಿಸಿದ್ದಾರೆ. ಜ್ವಲಂತ ಸಮಸ್ಯೆಗಳನ್ನು ಬಗೆಹರಿಸುವಂತೆ ಹೆಚ್‌ಡಿಡಿ ಸಲಹೆ ನೀಡಿದ್ದಾರೆ ಎಂದು ತಿಳಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಜನತಾ ಪರಿವಾರದಲ್ಲಿದ್ದಾಗಿನ ಒಡನಾಟ ಮೆಲುಕುಹಾಕಿದ್ದಾರೆ. ಸಿಕ್ಕಿರುವ ಅವಕಾಶ ಸಮರ್ಥವಾಗಿ ಬಳಸಿಕೊಳ್ಳುವಂತೆ ಸಲಹೆ ನೀಡಿದರು. ಹೆಚ್.ಡಿ.ದೇವೇಗೌಡರ ಭೇಟಿಯಿಂದ ಮನಸ್ಸಿಗೆ ಸಂತಸವಾಗಿದೆ. ಇದೇ ವೇಳೆ ತಾಯಿ ಚನ್ನಮ್ಮರನ್ನು ಭೇಟಿಯಾಗಿ ಆಶೀರ್ವಾದ ಪಡೆದಿ್ದ್ದೇನೆ ಎಂದು ಹೇಳಿದರು.
ಕೆ.ಎಸ್.ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡುವಂತೆ ಒತ್ತಾಯ
ಮಾಜಿ ಸಚಿವ ಕೆ.ಎಸ್.ಈಶ್ವರಪ್ಪಗೆ ಡಿಸಿಎಂ ಸ್ಥಾನ ನೀಡುವಂತೆ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಸ್ವಾಮೀಜಿಗಳ ಬಳಿಕ, ಈಶ್ವರಪ್ಪ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಬೆಂಬಲಿಗರು ಗದಗದಲ್ಲಿ ರಾಯಣ್ಣ ಪ್ರತಿಮೆಗೆ ಹಾಲಿನ ಅಭಿಷೇಕ ಮಾಡಿ ಸಂಕಲ್ಪ ಮಾಡಿದರು.
ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾದ ಸಿಎಂ ಬೊಮ್ಮಾಯಿ
ಮಾಜಿ ಪ್ರಧಾನಿ ದೇವೇಗೌಡರನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದರು. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್‌ಡಿಡಿ ಮನೆಗೆ ಬೊಮ್ಮಾಯಿ ಭೇಟಿ ಮಾಡಿದರು. ಬೊಮ್ಮಾಯಿ ಸಿಎಂ ಆದ ಬಳಿಕ ಮೊದಲ ಬಾರಿಗೆ ಭೇಟಿ ಮಾಡಿದ್ದಾರೆ. ಈ ವೇಳೆ ದೇವೇಗೌಡರಿಂದ ಆಶೀರ್ವಾದ ಪಡೆದರು. ದೇವೇಗೌಡರು ಮತ್ತು ಬೊಮ್ಮಾಯಿ ಜನತಾ ಪರಿವಾರದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಸೌಹಾರ್ದಯುತವಾಗಿ ಭೇಟಿ ಮಾಡಿದ್ದಾರೆ.
ಹೈಕಮಾಂಡ್‌ನಿಂದ ಕರೆ ಬಂದ ಕೂಡಲೇ ಚರ್ಚಿಸುತ್ತೇವೆ; ಬೊಮ್ಮಾಯಿ ಮಾಹಿತಿ
ಸಚಿವ ಸಂಪುಟ ರಚನೆ ಸಂಬಂಧ ಹೈಕಮಾಂಡ್‌ನಿಂದ ಇಂದು ಅಥವಾ ನಾಳೆ ಕರೆ ಬರಬಹುದು. ಹೈಕಮಾಂಡ್‌ನಿಂದ ಕರೆ ಬಂದ ಕೂಡಲೇ ಚರ್ಚಿಸುತ್ತೇವೆ. ಹೈಕಮಾಂಡ್ ಜತೆ ಚರ್ಚೆ ಬಳಿಕ ಸಂಪುಟದ ಬಗ್ಗೆ ನಿರ್ಧಾರ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದರು.
ನಾಳೆಯಿಂದ ನಮ್ಮ ನಿವಾಸಕ್ಕೆ ಯಾರೂ ಬರುವುದು ಬೇಡ; ಸಿಎಂ ಬೊಮ್ಮಾಯಿ
ನಾಳೆಯಿಂದ 8 ಗಂಟೆಗೆ ಕೆ.ಕೆ.ಗೆಸ್ಟ್ ಹೌಸ್‌ಗೆ ಬರುತ್ತೇನೆ. ಕೆ.ಕೆ.ಗೆಸ್ಟ್ ಹೌಸ್‌ನಿಂದಲೇ ಕೆಲಸ ಮಾಡುತ್ತೇನೆ. ನಾಳೆಯಿಂದ ನಮ್ಮ ನಿವಾಸಕ್ಕೆ ಯಾರೂ ಬರುವುದು ಬೇಡ. ನಾಳೆಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಅಂತ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ. ಜೊತೆಗೆ ಆರ್.ಟಿ ನಗರ ನಿವಾಸದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನಾನುಕೂಲವಾಗುವ ಹಿನ್ನೆಲೆ ರಸ್ತೆಗೆ ಹಾಕಿರುವ ಬ್ಯಾರಿಕೇಡ್ ತೆರವುಗೊಳಿಸುವಂತೆ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಪರಿಹಾರ ಕೆಲಸಕ್ಕೆ 510 ಕೋಟಿ ರೂಪಾಯಿ ಬಿಡುಗಡೆ – ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ
ರಾಜ್ಯದ 13 ಜಿಲ್ಲೆಗಳಲ್ಲಿ ಪ್ರವಾಹ ಬಂದಿದೆ. 466 ಗ್ರಾಮಗಳು ತೊಂದರೆಗೆ ಸಿಲುಕಿಕೊಂಡಿವೆ. 13 ಜನರು ಪ್ರವಾಹಕ್ಕೆ ಬಲಿಯಾಗಿದ್ದಾರೆ. ಈ ಕುರಿತಂತೆ ಸಂಪರ್ಕ ರಸ್ತೆ, ಸೇತುವೆ ದುರಸ್ತಿಗೆ ಸಭೆ ನಡೆಸಿ ಅಧಿಕಅರಿಗಳ ಜತೆಗೆ ಸಭೆ ನಡೆಸಿದ್ದೇನೆ. ಪರಿಹಾರ ಕೆಲಸಕ್ಕೆ 510 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. 700 ಕೋಟಿಗೂ ಹೆಚ್ಚು ಹಣ ಡಿಸಿಗಳ ಖಾತೆಯಲ್ಲಿದೆ. ತುರ್ತು ಕಾಮಗಾರಿಗೆ 600 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ. ಮನೆ, ಬೆಳೆ ನಾಶ ಬಗ್ಗೆ 15 ದಿನದಲ್ಲಿ ಸಮೀಕ್ಷೆಗೆ ಸೂಚನೆ ನೀಡಲಾಗಿದೆ. ಮನೆ ಕಳೆದುಕೊಂಡವರಿಗೆ 10 ಸಾವಿರ ರೂಪಾಯಿ ಪರಿಹಾರ ಹಾಗೂ ರಾಜ್ಯದಲ್ಲಿ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮನೆ ಸಂಪೂರ್ಣ ಹಾನಿಯಾಗಿದ್ದರೆ 5 ಲಕ್ಷ ರೂಪಾಯಿ, ಭಾಗಶಃ ಹಾನಿಯಾಗಿದ್ದರೆ 3 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು. ಅಲ್ಪ ಹಾನಿಗೆ 50 ಸಾವಿರ ರೂಪಾಯಿ ನೀಡಲಾಗುತ್ತಿದೆ. ಇದೇ ಅದೇ ರೀತಿ ಪರಿಹಾರ ಹಣ ಬಿಡುಗಡೆ ಮಾಡುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ನಾನಂತೂ ಮುಖ್ಯಮಂತ್ರಿ ಆಗಬೇಕು ಅನ್ನೋದಕ್ಕೆ ಗಡ್ಡ ಬಿಟ್ಟಿದ್ದಲ್ಲ- ಸಿ.ಟಿ ರವಿ ಪ್ರತಿಕ್ರಿಯೆ
ಮುಂದಿನ ವರ್ಷದ ಮಾರ್ಚ್ ತಿಂಗಳಿಗೆ ಗಡ್ಡಧಾರಿಯೊಬ್ಬರು ಮುಖ್ಯಮಂತ್ರಿಯಾಗುತ್ತಾರೆ ಎಂಬ ವಿಜಯನಗರದ ಮೈಲಾರ ಲಿಂಗ ಭವಿಷ್ಯದ ಬಗ್ಗೆ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ. ವಿಜಯನಗರ ಮೈಲಾರಲಿಂಗ ಭವಿಷ್ಯ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ನಾನಂತೂ ಮುಖ್ಯಮಂತ್ರಿ ಆಗಬೇಕು ಅನ್ನೋದಕ್ಕೆ ಗಡ್ಡ ಬಿಟ್ಟಿದ್ದಲ್ಲ. ಕಾಲೇಜು ದಿನಗಳಿಂದಲೂ ನಿರಂತರವಾಗಿ ಗಡ್ಡ ಬಿಟ್ಟಿದ್ದೇನೆ. ಗಡ್ಡದಾರಿ ಅಂತ ಅವ್ರು ಹೇಳಿದ್ದು ನಿಜವಾಗಿದ್ರೆ ಬಹಳ ಜನ ಗಡ್ಡ ಬಿಡಬಹುದು. ಯಾರ್ಯಾರು ಮುಖ್ಯಮಂತ್ರಿಯಾಗಬೇಕು ಎಂಬ ಆಕಾಂಕ್ಷಿ ಇರುವವರು ಗಡ್ಡ ಬಿಡೋಕೆ ಪ್ರಾರಂಭಿಸಬಹುದು. ನನಗೆ ಪಕ್ಷ ನಿಷ್ಠೆ, ಶ್ರಮದ ಮೇಲೆ ನಂಬಿಕೆ ಇರೋದು. ಏನೇನೂ ಭಗವಂತ ಬರೆದಿದ್ದಾನೋ, ತಾಯಿಯ ಆರ್ಶಿವಾದ ಇದೆಯೋ ಗೊತ್ತಿಲ್ಲ ಎಂದು ಚಿಕ್ಕಮಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರಿ ನಿವಾಸಕ್ಕೆ ತೆರಳದೆ ಕೆಲಸ ಮಾಡಲು ಸಿಎಂ ಚಿಂತನೆ
ಸರ್ಕಾರಿ ನಿವಾಸಕ್ಕೆ ತೆರಳದೆ ಕೆಲಸ ಮಾಡಲು ಸಿಎಂ ಚಿಂತನೆ ನಡೆಸುತ್ತಿದ್ದಾರೆ. ಆರ್.ಟಿ ನಗರ ನಿವಾಸ ಬದಲಿಸದಂತೆ ಸಿಎಂ ಕುಟುಂಬ ಒತ್ತಾಯಿಸಿದ್ದಾರೆ. ಅತಿಥಿ ಗೃಹದಿಂದ ಕಾರ್ಯ ನಿರ್ವಹಿಸುವ ಬಗ್ಗೆ ಸಿಎಂ ಯೋಚಿಸಿದ್ದಾರೆ. ಸದ್ಯ ಕಾವೇರಿ ನಿವಾಸದಲ್ಲಿ ಮಾಜಿ ಸಿಎಂ ಬಿಎಸ್‌ವೈ ವಾಸಿಸುತ್ತಿದ್ದಾರೆ. ಯಡಿಯೂರಪ್ಪ ಕಾವೇರಿ ನಿವಾಸವನ್ನು ಖಾಲಿ ಮಾಡಿದರೆ. ಕಾವೇರಿ ನಿವಾಸಕ್ಕೆ ಸಿಎಂ ಬೊಮ್ಮಾಯಿ ಶಿಫ್ಟ್ ಆಗುವ ಸಾಧ್ಯತೆ ಇದೆ.
ಸಿಎಂ ಆಗೋಕೆ ಯೋಗನೂ ಇರಬೇಕಲ್ವಾ?- ಸಿ.ಟಿ.ರವಿ
ನನ್ನ ಹೆಸರು 15 ದಿನ ಸಿಎಂ ರೇಸ್ ವಿಚಾರದಲ್ಲಿ ಮಾಧ್ಯಮದಲ್ಲಿ ಬರುತ್ತಿತ್ತು. ನಾನೊಬ್ಬನೇ ಅಲ್ಲ ಹಲವರ ಹೆಸರು ಇತ್ತು. ಸಿಎಂ ಆಗೋಕೆ ಯೋಗನೂ ಇರಬೇಕಲ್ವಾ? ಈಗ ಬೊಮ್ಮಯಿ ಅವರಿಗೆ ಯೋಗ ಕೂಡಿ ಬಂದಿದೆ. ಅವರು ಒಳ್ಳೆಯ ಕೆಲಸ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ಎಲ್ಲ ರೀತಿಯ ಸಹಕಾರವನ್ನು ಕೊಡುತ್ತೇವೆ. ಅವರು ನಮ್ಮ ಸ್ನೇಹಿತರು. ರಾಜ್ಯದ ಹಿತಕ್ಕಾಗಿ ಅವರು ಮಾಡುವ ಕೆಲಸಕ್ಕೆ ನಮ್ಮ ಬೆಂಬಲ ಇರುತ್ತದೆ. ರಾಜ್ಯದ ಹಿತದ ಆದ್ಯತೆ ಇಟ್ಕೊಂಡು ಸಂಪುಟ ವಿಸ್ತರಣೆ ಮಾಡಲಿ. ಸಾಮಾಜಿಕ, ಪ್ರಾದೇಶಿಕ ಸಮತೋಲನ ಎರಡನ್ನೂ ಕಾಪಾಡಿಕೊಂಡು ವಿಸ್ತರಣೆ ಮಾಡುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತಿಳಿಸಿದರು.
ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು
ಕೇಂದ್ರದಿಂದ ರಾಜ್ಯದ ಪಾಲಿನ ಹಣ ಬರುತ್ತಿಲ್ಲವೆಂಬ ವಿಚಾರದ ಬಗ್ಗೆ ಸಿದ್ದರಾಮಯ್ಯ ಹೇಳಿಕೆಗೆ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಎಲ್ಲ ಗೊತ್ತಿದ್ದೂ ರಾಜಕೀಯಕ್ಕೆ ಮಾತಾಡ್ತಾರೆ. ಅವರ ಹೇಳಿಕೆ ಬಗ್ಗೆ ಹೆಚ್ಚು ಮಾತನಾಡಲ್ಲ. 13 ಬಾರಿ ಬಜೆಟ್ ಮಂಡಿಸಿರುವ ಅವರಿಗೆ ಎಲ್ಲ ತಿಳಿದಿರುತ್ತೆ. ಹೆದ್ದಾರಿ ಕೆಲಸಕ್ಕೆ 95 ಸಾವಿರ ಕೋಟಿ ಕೊಟ್ಟಿರುವುದು ಕೇಂದ್ರ. ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡ್ತಿರುವುದು ಕೇಂದ್ರ. ರಾಜ್ಯಕ್ಕೆ ಅಗತ್ಯ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಾ ಬಂದಿದೆ. ಸಿದ್ದರಾಮಯ್ಯ ರಾಜಕೀಯಕ್ಕಾಗಿ ಮಾತಾಡುವುದನ್ನ ಬಿಡಬೇಕು ಅಂತ ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರನ್ನು ಭೇಟಿಯಾಗಲಿರುವ ಸಿಎಂ ಬೊಮ್ಮಾಯಿ
ಮಧ್ಯಾಹ್ನ 2 ಗಂಟೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವೇಗೌಡರನ್ನು ಭೇಟಿ ಮಾಡಲಿದ್ದಾರೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಹೆಚ್‌ಡಿಡಿ ನಿವಾಸಕ್ಕೆ ಸಿಎಂ ಭೇಟಿ ನೀಡುತ್ತಾರೆ.
ಕಾಂಗ್ರೆಸ್ ಮುಖಂಡರಿಗೆ ಮಾಜಿ ಸಚಿವ ಈಶ್ವರಪ್ಪ ಸವಾಲ್
ಡಿಕೆಶಿ, ಸಿದ್ದು, ಖರ್ಗೆ, ಪರಮೇಶ್ವರ್ರಲ್ಲೇ ಭಿನ್ನಾಭಿಪ್ರಾಯವಿದೆ. ಒಬ್ಬರ ಕಾಲು ಒಬ್ಬರು ಎಳೆದಿಲ್ಲ ಎಂದು ಪ್ರಮಾಣ ಮಾಡಲಿ. ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಪ್ರಮಾಣ ಮಾಡಲಿ ಅಂತ ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ಮುಖಂಡರಿಗೆ ಸವಾಲ್ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಈಗಲೂ ಗುಂಪುಗಾರಿಕೆ ನಡೆಯುತ್ತಿದೆ ಎಂದು ಈಶ್ವರಪ್ಪ ಹೇಳಿದರು.
ಪಕ್ಷದ ವರಿಷ್ಠರು ಮತ್ತು ಸಿಎಂ ನಿರ್ಧಾರಕ್ಕೆ ಬದ್ದ: ಎಂ.ಪಿ.ರೇಣುಕಾಚಾರ್ಯ
ದಾವಣಗೆರೆ ಜಿಲ್ಲೆಯ ಐದು ಜನ ಶಾಸಕರಲ್ಲಿ ಯಾರಿಗಾದ್ರು ಸಚಿವ ಸ್ಥಾನ ನೀಡಲಿ. ಪಕ್ಷದ ವರಿಷ್ಠರು ಹಾಗೂ ಸಿಎಂ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದನಾಗಿದ್ದೇನೆ ಎಂದು ಶಾಸಕ ಎಂಪಿ.ರೇಣುಕಾಚಾರ್ಯ ಹೇಳಿದರು. ನನಗೆ ಅವಕಾಶ ಕೊಟ್ಟರೆ, ಈಗಾಗಲೇ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕು ಅಭಿವೃದ್ಧಿ ಮಾಡಿದಂತೆ ಇಡಿ ಜಿಲ್ಲೆ ಅಭಿವೃದ್ಧಿ ಮಾಡುವೆ. ಆದರೆ ನನಗೆ ಸಚಿವ ಸ್ಥಾನ ನೀಡುವುದು ಪಕ್ಷದ ವರಿಷ್ಠರಿಗೆ ಹಾಗೂ ಸಿಎಂ ಅವರಿಗೆ ಬಿಟ್ಟು ಕೊಟ್ಟ ವಿಚಾರ. ಅವರು ಎನೇ ನಿರ್ಧಾರ ತೆಗೆದುಕೊಂಡರು ನಾನು ಅದಕ್ಕೆ ಬದ್ಧನಾಗಿರುವೆ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ
ಬಾದಾಮಿಯಲ್ಲಿ ಈಶ್ವರಪ್ಪ ಪುತ್ರ ಸ್ಪರ್ಧಿಸುತ್ತಾರೆಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ನಾನು ವಿಪಕ್ಷ ನಾಯಕ ಸಿದ್ದರಾಮಯ್ಯ ಕುಟುಂಬದವನಲ್ಲ. ಬಾದಾಮಿಗೆ ನಾನೂ ಬರಲ್ಲ, ನನ್ನ ಮಗನೂ ಬರುವುದಿಲ್ಲ. ವಿಪಕ್ಷ ನಾಯಕ ಸಿದ್ದರಾಮಯ್ಯನವರ ಪಕ್ಷ ಯಾವುದು. ಜೆಡಿಎಸ್ ಆಯ್ತು, ಈಗ ಕಾಂಗ್ರೆಸ್ ಪಕ್ಷದಲ್ಲಿ ಇದ್ದೀರಿ. ನಿಮ್ಮ ತಾಯಿ ಪಕ್ಷ ಯಾವುದು ಎಂದು ಈಶ್ವರಪ್ಪ ಲೇವಡಿ ಮಾಡಿದ್ದಾರೆ. ಅಧಿಕಾರ ಇಲ್ಲದಿದ್ದರೆ ಪಕ್ಷವನ್ನು ಜಾಡಿಸಿ ಒದ್ದು ಹೋಗುವುದು ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.
ಯತ್ನಾಳ್ ಹೇಳಿಕೆಗಳು ಒಳ್ಳೆಯದಲ್ಲ; ಈಶ್ವರಪ್ಪ
ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗಳು ಒಳ್ಳೆಯದಲ್ಲ. ಇದನ್ನು ಹಲವು ಬಾರಿ ಯತ್ನಾಳ್‌ಗೂ ತಿಳಿಸಿದ್ದೇನೆ. ನಮ್ಮ ಭಾವನೆಗಳನ್ನು ಪಕ್ಷದಲ್ಲಿ ಹೇಳಿಕೊಳ್ಳಬೇಕು. ವರಿಷ್ಠರು ಬಂದಾಗ ಅವರಿಗೆ ಯತ್ನಾಳ್ ಹೇಳಬೇಕಿತ್ತು. ಶಾಸಕ ಯತ್ನಾಳ್ ಓರ್ವ ಹಿಂದೂ ಕಾರ್ಯಕರ್ತ. ಅವರು ತಿದ್ದುಕೊಳ್ಳುತ್ತಾರೆಂಬ ವಿಶ್ವಾಸವಿದೆ ಎಂದು ಮಾಜಿ ಸಚಿವ ಈಶ್ವರ ತಿಳಿಸಿದರು.
ಕಾಂಗ್ರೆಸ್‌ನಲ್ಲಿ ಹೊಸಬರು ಬರುವ ಪ್ರಶ್ನೆಯೇ ಇಲ್ಲ
ಕಾಂಗ್ರೆಸ್‌ನಲ್ಲಿ ಹೊಸಬರು ಬರುವ ಪ್ರಶ್ನೆಯೇ ಇಲ್ಲ ಎಂದು ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ಕಾಂಗ್ರೆಸ್‌ನಲ್ಲಿ ಅದೇ ಗಾಂಧಿ ಕುಟುಂಬವೇ ಇರುತ್ತದೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ನಿರ್ನಾಮವಾಗಿದೆ. ದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನ ಹುಡುಕಿ ನೋಡಬೇಕು. ಕಾಂಗ್ರೆಸ್‌ನಲ್ಲಿ ನಾನೇ ಸಿಎಂ ಎಂದು ಘೋಷಿಸುತ್ತಾರೆ. ಹೀಗಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಇಂತಹ ಸ್ಥಿತಿ ಬಂದಿದೆ ಎಂದು ಅಭಿಪ್ರಾಯಪಟ್ಟರು.
ಯುವಕರಿಗೆ ಅವಕಾಶ ಕೊಟ್ಟರೆ ಅದು ದೇಶಕ್ಕೆ ದೊಡ್ಡ ಆಸ್ತಿ
ಬಾಗಲಕೋಟೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿಕೆ
ಹೊಸಬರಿಗೆ ಬಿಜೆಪಿಯಲ್ಲಿ ಆದ್ಯತೆ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಯುವಕರಿಗೆ ಆದ್ಯತೆ ನೀಡಬೇಕೆಂಬುದು ಪಕ್ಷದ ತೀರ್ಮಾನ. ಯುವಕರಿಗೆ ಅವಕಾಶ ಕೊಟ್ಟರೆ ಅದು ದೇಶಕ್ಕೆ ದೊಡ್ಡ ಆಸ್ತಿ. ನಾನೇ ಪಿಎಂ, ನಾನೇ ಸಿಎಂ ಎನ್ನುವುದು ಒಳ್ಳೆಯದಲ್ಲ. 3 ವರ್ಷಕ್ಕೊಮ್ಮೆ ಪಕ್ಷದ ಅಧ್ಯಕ್ಷರ ಬದಲಾವಣೆ ಆಗುತ್ತದೆ. ಬಿಜೆಪಿಯಲ್ಲಿ ಹೊಸಬರು, ಯುವಕರಿಗೆ ಅವಕಾಶವಿದೆ ಎಂದು ತಿಳಿಸಿದ ಈಶ್ವರಪ್ಪ, ಇಂತಹ ಪದ್ಧತಿ ಉಳಿದ ಯಾವ ಪಕ್ಷದಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಸಚಿವ ಸಂಪುಟದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬರುತ್ತದೆ- ಬಸವರಾಜ ಬೊಮ್ಮಾಯಿ ಮಾಹಿತಿ
ಸಚಿವ ಸಂಪುಟದ ಬಗ್ಗೆ ಶೀಘ್ರದಲ್ಲೇ ಮಾಹಿತಿ ಬರುತ್ತದೆ. ಹೈಕಮಾಂಡ್‌ನಿಂದ ನಾಳೆ ಅಥವಾ ನಾಡಿದ್ದು ಮಾಹಿತಿ ಬರಲಿದೆ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಪರೋಕ್ಷವಾಗಿ ಡಿಸಿಎಂ ಆಸೆ ಹೊರಹಾಕಿದ ಈಶ್ವರಪ್ಪ
ನಾನು ಡಿಸಿಎಂ ಆಗಬೇಕೆಂದು ಸ್ವಾಮೀಜಿಗಳು ಹೇಳ್ತಿದ್ದಾರೆ. ಬಿಎಸ್‌ವೈ ಜತೆ ಸೇರಿ ಈಶ್ವರಪ್ಪ ಪಕ್ಷವನ್ನು ಕಟ್ಟಿದ್ದಾರೆ. ಬಿಎಸ್‌ವೈ ಬಳಿಕ ನಾನು ಸಿಎಂ ಆಗಬೇಕಿತ್ತು ಎನ್ನುತ್ತಿದ್ದಾರೆ. ಆದರೆ ಈಗ ಡಿಸಿಎಂ ಆದರೂ ಆಗಬೇಕು ಎನ್ನುತ್ತಿದ್ದಾರೆ ಎಂದು ಪರೋಕ್ಷವಾಗಿ ಈಶ್ವರಪ್ಪ ಡಿಸಿಎಂ ಆಸೆ ಹೊರಹಾಕಿದ್ದಾರೆ. ನಮ್ಮ ಪಕ್ಷ ಯಾವುದೋ ಒಬ್ಬ ವ್ಯಕ್ತಿ ಮೇಲೆ ನಿಂತಿಲ್ಲ. ಸಿದ್ಧಾಂತ, ಆದರ್ಶದ ಮೇಲೆ ನಿಂತಿರುವ ಪಕ್ಷವಾಗಿದೆ. ನಾನು ಪಕ್ಷದ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನಗೆ ಕರೆ ಮಾಡುವ ಸ್ವಾಮೀಜಿಗಳಿಗೆ ತಿಳಿಸಿದ್ದೇನೆ ಎಂದು ಹೇಳಿದರು.
ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು
ರಾಜ್ಯ ಬಿಜೆಪಿಯಲ್ಲಿ ಯಾವುದೇ ಅಸಮಾಧಾನ ಇಲ್ಲ. ಏನಾದರು ಸಮಸ್ಯೆ ಇದ್ದರೆ ವರಿಷ್ಠರು ಬಗೆಹರಿಸುತ್ತಾರೆ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಈಶ್ವರಪ್ಪ ಹೇಳಿದರು. ಬಿಜೆಪಿ ಹಾಲು, ಹೊರಗಿನಿಂದ ಬಂದವರು ಜೇನು. ಎರಡೂ ಸೇರಿದರೆ ಹಾಲು ಜೇನು ಇದ್ದಂತೆ ಎಂದು ಈಶ್ವರಪ್ಪ ಅಭಿಪ್ರಾಯಪಟ್ಟರು.
ನಮ್ಮನ್ನು ವಲಸಿಗರೆಂದು ಕರೆಯಬೇಡಿ; ಬಿ.ಸಿ.ಪಾಟೀಲ್ ಗರಂ
ನಮ್ಮನ್ನು ವಲಸಿಗರು ವಲಸಿಗರು ಎಂದು ಕರೆಯಬೇಡಿ ಎಂದು ಹೇಳಿಕೆ ನೀಡಿದ ಬಿ.ಸಿ.ಪಾಟೀಲ್, ವಲಸಿಗ, ಬಾಂಬೆ ಬಾಯ್ಸ್ ಎನ್ನುವ ಶಬ್ದ ಬಿಡಿ. ನಾವು ಬಿಜೆಪಿ ಪಕ್ಷಕ್ಕೆ ಬಂದು ಗೆದ್ದು ಮಂತ್ರಿ ಆಗಿದ್ದೇವೆ. ಹೀಗಿದ್ದರೂ ನೀವು ನಮ್ಮನ್ನು ವಲಸಿಗರು ಎಂದು ಕರೆಯೋದು ಬಿಡಲ್ವಲ್ಲ ಎಂದು ಗರಂ ಆಗಿದ್ದಾರೆ. ಸಂಪುಟ ರಚನೆ ಆಗಲಿ, ಈ ಮೊದಲು ಇದ್ದ ಇಲಾಖೆ ಬಗ್ಗೆಯಾಗಲಿ ನಾನು ಚರ್ಚೆ ಮಾಡಿಲ್ಲ. ಆದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತೇನೆ ಅಂತಾ ಈಗಾಗಲೇ ಸಿಎಂ ಹೇಳಿದ್ದಾರೆ ಎಂದು ಸಿಎಂ ಬೊಮ್ಮಾಯಿ ಭೇಟಿ ನಂತರ ಬಿ.ಸಿ.ಪಾಟೀಲ್ ಹೇಳಿದರು.
ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನೆಡೆಸಿರುವ ಆಪ್ತ ಶಾಸಕರು
ಸಂಪುಟಕ್ಕೆ ಸೇರಿಕೊಳ್ಳಲು ಹಲವು ಆಪ್ತ ಶಾಸಕರು ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇದರಿಂದ ಆಪ್ತರ ಶಾಸಕರ ಪರ ಯಡಿಯೂರಪ್ಪ ಬ್ಯಾಟ್ ಬೀಸುತ್ತಾರ? ಎಂಬ ಪ್ರಶ್ನೆ ಮೂಡಿದೆ. ಅಲ್ಲದೇ ಸಂಪುಟ ರಚನೆ ವಿಚಾರವಾಗಿ ಸಿಎಂ ಬೊಮ್ಮಾಯಿ ಮತ್ತೆ ದೆಹಲಿಗೆ ತೆರಳಲಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ದೆಹಲಿಗೆ ತೆರಳಿದ್ದಾರೆ. ನೂತನ ಸಚಿವರ ಪಟ್ಟಿ ಕೈಯಲ್ಲಿ ಹಿಡಿದೇ ಅವರು ದೆಹಲಿಗೆ ಬಿಜೆಪಿ ವರಿಷ್ಠರ ಭೇಟಿಗೆ ತೆರಳಿದ್ದಾರೆ. ವರಿಷ್ಠರಿಂದ ಒಪ್ಪಿಗೆ ಪಡೆದು ನಾಳೆಯೇ ಸಿಎಂ ವಾಪಸ್ ಆಗಲಿದ್ದು, ಮಂಗಳವಾರ ಅಥವಾ ಬುಧವಾರ ಸಂಪುಟ ರಚನೆ ಸಾಧ್ಯತೆಯಿದೆ. ಇತ್ತ ಸಿಎಂ ದೆಹಲಿಗೆ ತೆರಳುವ ಮುನ್ನ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ.
Published On - Aug 01,2021 12:19 PM