Delta Sub-lineages in Bangalore: ರಾಜ್ಯದ ಜನರೇ ಎಚ್ಚರ ಎಚ್ಚರ, ಪತ್ತೆಯಾಗಿದೆ ಕೊರೊನಾ ಉಪ ರೂಪಾಂತರಿ!

| Updated By: ಸಾಧು ಶ್ರೀನಾಥ್​

Updated on: Sep 10, 2021 | 12:36 PM

ಬೆಂಗಳೂರು: ಬಹುತೇಕ ಕಡೆ ಜನ ಕೊರೊನಾ ಮಹಾಮಾರಿ ಬಂದು ಇತ್ತು ಎಂಬುದನ್ನೇ ಮರೆತವರಂತೆ ಬಿಡುಬೀಸಾಗಿ ತಿರುಗಾಡುತ್ತಿದ್ದಾರೆ. ಆದರೆ ಕೊರೊನಾ 3ನೇ ಅಲೆ ಭೀತಿ ಎದುರಿಗೇ ಇದೆ. ಅಷ್ಟೇ ಅಲ್ಲ ಈ ಕೊರೊನಾ ಆತಂಕದ ಬೆನ್ನಲ್ಲೇ ಮತ್ತೊಂದು ಆತಂಕವೂ ಕಾಡತೊಡಗಿದೆ. ಅದುವೇ ಕೊರೊನಾ ಡೆಲ್ಟಾ ಉಪ ರೂಪಾಂತರಿ AY4, AY12 Sub-lineages ಪತ್ತೆಯಾಗಿರುವುದು. ರಾಜ್ಯದ ಜನರೇ ಎಚ್ಚರ ಎಚ್ಚರ! ಕೋವಿಡ್ ರೂಲ್ಸ್ ಬ್ರೇಕ್ ಮಾಡೋ ಮುನ್ನ ಈ ಸ್ಟೋರಿ ನೋಡಿ. ಇಷ್ಟು ದಿನ ಆರೋಗ್ಯ ಇಲಾಖೆಯ ತಲೆ ಕೆಡಿಸಿದ್ದು […]

Delta Sub-lineages in Bangalore: ರಾಜ್ಯದ ಜನರೇ ಎಚ್ಚರ ಎಚ್ಚರ, ಪತ್ತೆಯಾಗಿದೆ ಕೊರೊನಾ ಉಪ ರೂಪಾಂತರಿ!
ರಾಜ್ಯದ ಜನರೇ ಎಚ್ಚರ ಎಚ್ಚರ, ಪತ್ತೆಯಾಗಿದೆ ಕೊರೊನಾ ಉಪ ರೂಪಾಂತರಿ!
Follow us on

ಬೆಂಗಳೂರು: ಬಹುತೇಕ ಕಡೆ ಜನ ಕೊರೊನಾ ಮಹಾಮಾರಿ ಬಂದು ಇತ್ತು ಎಂಬುದನ್ನೇ ಮರೆತವರಂತೆ ಬಿಡುಬೀಸಾಗಿ ತಿರುಗಾಡುತ್ತಿದ್ದಾರೆ. ಆದರೆ ಕೊರೊನಾ 3ನೇ ಅಲೆ ಭೀತಿ ಎದುರಿಗೇ ಇದೆ. ಅಷ್ಟೇ ಅಲ್ಲ ಈ ಕೊರೊನಾ ಆತಂಕದ ಬೆನ್ನಲ್ಲೇ ಮತ್ತೊಂದು ಆತಂಕವೂ ಕಾಡತೊಡಗಿದೆ. ಅದುವೇ ಕೊರೊನಾ ಡೆಲ್ಟಾ ಉಪ ರೂಪಾಂತರಿ AY4, AY12 Sub-lineages ಪತ್ತೆಯಾಗಿರುವುದು.

ರಾಜ್ಯದ ಜನರೇ ಎಚ್ಚರ ಎಚ್ಚರ! ಕೋವಿಡ್ ರೂಲ್ಸ್ ಬ್ರೇಕ್ ಮಾಡೋ ಮುನ್ನ ಈ ಸ್ಟೋರಿ ನೋಡಿ. ಇಷ್ಟು ದಿನ ಆರೋಗ್ಯ ಇಲಾಖೆಯ ತಲೆ ಕೆಡಿಸಿದ್ದು ಕೋವಿಡ್ ರೂಪಾಂತರಿಗಳ ಬಗ್ಗೆ. ಈಗ ರೂಪಾಂತರಿಗಳಿಗೆ ಉಪ ರೂಪಾಂತರಿಗಳು ಸೃಷ್ಟಿಯಾಗಿವೆ!

ಕೋವಿಡ್ 2 ನೇ ಅಲೆಯಲ್ಲಿ ಅಬ್ಬರಿಸಿದ್ದ ಡೆಲ್ಟಾಗೆ ಹೊಸ ಉಪ ರೂಪಾಂತರಿ ಪತ್ತೆಯಾಗಿದೆ. ಡೆಲ್ಟಾ ಸಾಕಷ್ಟು ಅವಾಂತರ ಸೃಷ್ಟಿ ಮಾಡಿತ್ತು. ಈಗ ಡೆಲ್ಟಾ ಉಪ ರೂಪಾಂತರಿ ಹೇಗೆ ಹರಡುತ್ತೆ ಅನ್ನೋ ಭಯ ಕಾಡತೊಡಗಿದೆ. Ay4 ಮತ್ತು ay12 ಅನ್ನೋ ಉಪ ರೂಪಾಂತರಿ ವೈರಸ್ ವೇಗವಾಗಿ ಹರಡುತ್ತೋ, ಇಲ್ಲವೋ ಅನ್ನುವ ಗೊಂದಲದಲ್ಲಿದ್ದಾರೆ ತಜ್ಞರು.

ಈವರೆಗೆ ಹೊಸ ರೂಪಾಂತರಿಯ 400 ಸ್ಯಾಂಪಲ್ ಟೆಸ್ಟ್ ಆಗಿದ್ದು, ಇದರಲ್ಲಿ ಒಂದಿಷ್ಟು ಜನರಿಗೆ ರೂಪಾಂತರಿ ಕಂಡು ಬಂದಿದೆ. ಸದ್ಯಕ್ಕೆ AY4 ಮತ್ತು AY12 ಬಂದ ಒಂದಿಷ್ಟು ಸೋಂಕಿತರು ಗುಣಮುಖರಾಗಿದ್ದಾರೆ.

ಮತ್ತೊಂದಷ್ಟು ಸೋಂಕಿತರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸಮಾಧಾನಕರ ಸಂಗತಿಯೆಂದರೆ ಡೆಲ್ಟಾ ಉಪ ರೂಪಾಂತರಿಯಿಂದ ಯಾರೂ ಮೃತಪಟ್ಟಿಲ್ಲ. ಕ್ಲಸ್ಟರ್ ಮಟ್ಟದಲ್ಲಿ ಹರಡುತ್ತಿದೆಯಾ ಎಂಬ ಬಗ್ಗೆ ತಪಾಸಣೆ ನಡೆಸುತ್ತಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್ ಹೇಳಿದ್ದಾರೆ.

ಇದನ್ನೂಓದಿ:
ಬೆಂಗಳೂರು: ರಾಜಕುಮಾರ್ ರಸ್ತೆಯಲ್ಲಿ ಮೂರು ಸರ್ಕಾರಿ ಬಸ್​ಗಳ ನಡುವೆ ಡಿಕ್ಕಿ, ಹಲವರಿಗೆ ಗಾಯ

ಇದನ್ನೂಓದಿ:
ಗಣೇಶ ಮೂರ್ತಿ ಮಾರಾಟಕ್ಕೆ ತಯಾರಕರ ವಿಭಿನ್ನ ತಂತ್ರ; ಖರೀದಿಸಿದ ಗಣಪತಿ ಹಿಂದಿರುಗಿಸಿದರೆ 10 ಸಾವಿರ ರೂ. ವಾಪಾಸ್

(AY4, AY12 covid 19 delta sub variant sub-lineages found in bangalore says bbmp commissioner)

Published On - 12:29 pm, Fri, 10 September 21