ರಾಮಂದಿರ ದೇಣಿಗೆ ಲೂಟಿ ಕೇಸ್​​: 40 ಸಿಬ್ಬಂದಿಯಿಂದ್ಲೇ ಸಂಚು! SIT ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ

ಅಯೋಧ್ಯೆ ರಾಮಮಂದಿರ ದೇಣಿಗೆಯಲ್ಲಿನ ಅಕ್ರಮಗಳ ಕುರಿತು ಎಸ್‌ಐಟಿ ಪ್ರಾಥಮಿಕ ವರದಿಯು ಗಂಭೀರ ಭದ್ರತಾ ಲೋಪಗಳು ಮತ್ತು 40 ಜನರ ಪಾತ್ರವನ್ನು ಬಹಿರಂಗಪಡಿಸಿದೆ. ಇನ್ನು ಬೀದರ್‌ನ ಓರ್ವ ವ್ಯಕ್ತಿ ಶಾಸಕ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥರ ವಿರುದ್ಧವೂ ಹಣ ದುರುಪಯೋಗ ಆರೋಪ ಕೇಳಿಬಂದಿದ್ದು, ಎಸ್​ಐಟಿಗೆ ದೂರು ನೀಡಿದ್ದಾರೆ.

ರಾಮಂದಿರ ದೇಣಿಗೆ ಲೂಟಿ ಕೇಸ್​​: 40 ಸಿಬ್ಬಂದಿಯಿಂದ್ಲೇ ಸಂಚು! SIT ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
ರಾಮಮಂದಿರದ ದೇಣಿಗೆಯಲ್ಲಿ ಅಕ್ರಮ
Image Credit source: tv9 kannada
Edited By:

Updated on: Jun 28, 2026 | 3:12 PM

ಮುಖ್ಯಾಂಶಗಳು

  • ಅಯೋಧ್ಯ ರಾಮಮಂದಿರದ ದೇಣಿಗೆ ಪ್ರಕರಣದ
  • SIT ಪ್ರಾಥಮಿಕ ವರದಿ ಇನ್​ಸೈಡ್ ಮಾಹಿತಿ ಟಿವಿ9ಗೆ ಲಭ್ಯ
  • ಭದ್ರತಾ ವ್ಯವಸ್ಥೆಯಲ್ಲಿ ಗಂಭೀರ ದೋಷ

ಬೆಂಗಳೂರು, ಜೂನ್​​ 28: ರಾಮಂದಿರದ (Ram Mandir) ದೇಣಿಗೆಯಲ್ಲಿ ಕೋಟಿ ಕೋಟಿ ಲೂಟಿ ಕೇಸ್​ನ ತನಿಖೆ ಚುರುಕುಗೊಂಡಿದೆ. ಎಸ್​ಐಟಿ (SIT) ಅಧಿಕಾರಿಗಳು ಎರಡು ಹಂತಗಳಲ್ಲಿ ಇಡೀ ಘಟನೆಯ ಬಗ್ಗೆ ಕೂಲಂಕಷ ತನಿಖೆ ಮುಂದುವರಿಸಿದ್ದಾರೆ. ಎಸ್​ಐಟಿ ಪ್ರಾಥಮಿಕ ವರದಿಯ ಇನ್​ಸೈಡ್ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಭದ್ರತಾ ವ್ಯವಸ್ಥೆಯಲ್ಲಿ ಗಂಭೀರ ದೋಷಗಳಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಎಸ್​​ಐಟಿ ವರದಿಯಲ್ಲಿ ಸ್ಫೋಟಕ ಅಂಶ ಬೆಳಕಿಗೆ

ರಾಮ ಮಂದಿರ ದೇಣಿಗೆ ಲೂಟಿ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಎಸ್​​ಐಟಿ ವರದಿಯಲ್ಲಿ ಭದ್ರತಾ ವ್ಯವಸ್ಥೆ ಬಗ್ಗೆ ಗಂಭೀರ ಆರೋಪ ಮಾಡಲಾಗಿದೆ. ನಿಯಂತ್ರಣ ಕೊಠಡಿಯ ಉಸ್ತುವಾರಿ ಸೇರಿದಂತೆ 40 ಜನರು ತಪ್ಪಿತಸ್ಥರೆಂದು ಎಸ್‌ಐಟಿ ತನಿಖೆಯಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ರಾಮಭಕ್ತರೇ ಆತಂಕ ಬೇಡ, ನೀವು ನೀಡಿದ ಬೆಳ್ಳಿ ಇಟ್ಟಿಗೆ, ಒಡವೆಗಳು ಸುರಕ್ಷಿತ; ಅಯೋಧ್ಯೆ ಟ್ರಸ್ಟ್‌ನಿಂದ ಪತ್ರಿಕಾ ಪ್ರಕಟಣೆ

ನಿಯಂತ್ರಣ ಕೊಠಡಿಯ ಉಸ್ತುವಾರಿ, ನಿಯಂತ್ರಣ ಕೊಠಡಿಯೊಳಗೆ ನಿಯೋಜಿಸಲಾದ ಸಿಬ್ಬಂದಿ, ಎಣಿಕೆ ಕೊಠಡಿಯ ಹೊರಗೆ ನಿಯೋಜಿಸಲಾದ ಖಾಸಗಿ ಭದ್ರತಾ ಸಿಬ್ಬಂದಿ, ಪೊಲೀಸ್ ಮತ್ತು ಪಿಎಸಿ ಸಿಬ್ಬಂದಿ ಸೇರಿದ್ದಾರೆ. ಜವಾಬ್ದಾರಿಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಸಿಸಿಟಿವಿ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಬಹು ಹಂತಗಳಲ್ಲಿ ಭದ್ರತಾ ವ್ಯವಸ್ಥೆಯಲ್ಲಿ ಲೋಪವಾದ ಹಿನ್ನೆಲೆ ಭಾರೀ ಅಕ್ರಮ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಪ್ರತಿಯೊಬ್ಬ ವ್ಯಕ್ತಿಯನ್ನು ಇದೀಗ ಎಸ್​ಐಟಿ ಪ್ರತ್ಯೇಕವಾಗಿ ತನಿಖೆ ಮಾಡುತ್ತಿದೆ.

ಶಾಸಕ ಪ್ರಭು ಚೌಹಾಣ್, ಆರ್​ಎಸ್​​ಎಸ್​ನ ಗೋಪಾಲ್ ವಿರುದ್ಧ ದೂರು

ಇನ್ನು ಎಸ್​ಐಟಿ ತನಿಖೆ ಮಧ್ಯೆ ಬೀದರ್‌ ಜಿಲ್ಲೆಯ ಔರಾದ್‌ನ ದೀಪಕ್ ಪಾಟೀಲ್‌ ಎಂಬುವವರಿಂದ ಎಸ್ಐಟಿ ಮುಖ್ಯಸ್ಥ ವಿಜಯ್ ವಿಶ್ವಾಸ್ ಪಂತ್‌ಗೆ ದೂರು ಸಲ್ಲಿಸಿದ್ದಾರೆ. ಮಂದಿರ ಹೆಸರಲ್ಲಿ ಲಕ್ಷಾಂತರ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಶಾಸಕ ಪ್ರಭು ಚೌಹಾಣ್, ಆರ್​ಎಸ್​​ಎಸ್​ನ ಗೋಪಾಲ್ ವಿರುದ್ಧ ದೂರು ನೀಡಿದ್ದಾರೆ.

ಇದನ್ನೂ ಓದಿ: RSS ಬಗ್ಗೆ ಮತ್ತೆ ಪ್ರಿಯಾಂಕ್ ಖರ್ಗೆ​​ ಕಿಡಿ: ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಗೃಹ ಸಚಿವ

ಈ ಹಣವನ್ನು ರಾಮ ಮಂದಿರಕ್ಕೆ ತಲುಪಿಸಿದ ಬಗ್ಗೆ ಖಾತರಿಯಿಲ್ಲ. ಗುತ್ತಿಗೆದಾರರಿಂದ 5 ಲಕ್ಷದಿಂದ ದೊಡ್ಡ ಮೊತ್ತದವರೆಗೆ ಸಂಗ್ರಹಿಸಲಾಗಿದ್ದ ಹಣಕ್ಕೆ ಯಾವುದೇ ದಾಖಲಾತಿ ಕೂಡ ನೀಡಿಲ್ಲ ಎಂದಿದ್ದಾರೆ. ಅಯೋಧ್ಯೆ ರಾಮಮಂದಿರ ಹೆಸರಿನಲ್ಲಿ ಸಂಗ್ರಹಿಸಿದ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಿರುವ ಬಗ್ಗೆ ದಾಖಲೆಗಳಿವೆ. ಎಸ್ಐಟಿ ಮುಂದೆ ದಾಖಲೆಗಳನ್ನು ಸಲ್ಲಿಸಲು ಸಿದ್ಧರಿದ್ದೇವೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Ayodhya Ram Mandir Donation Theft Row: ಎಸ್​ಐಟಿ ಪ್ರಾಥಮಿಕ ವರದಿಯ ಇನ್​ಸೈಡ್ ಮಾಹಿತಿ ಲಭ್ಯ!

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರಸನ್ನ ಗಾಂವ್ಕರ್​

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Loading...
Unable to load recommendations.
Follow Us