RSS ಬಗ್ಗೆ ಮತ್ತೆ ಪ್ರಿಯಾಂಕ್ ಖರ್ಗೆ ಕಿಡಿ: ನೋಂದಣಿಗೆ ಬೇಕಿದ್ರೆ ನಾನೇ ಶುಲ್ಕ ಕಟ್ಟುತ್ತೇನೆಂದ ಗೃಹ ಸಚಿವ
ಮುಖ್ಯಾಂಶಗಳು
- RSS ನೋಂದಣಿ ಬಗ್ಗೆ ಮತ್ತೆ ಮಾತಾಡಿದ ಪ್ರಿಯಾಂಕ್ ಖರ್ಗೆ
- 'ವಿಶ್ವದ ಅತಿ ದೊಡ್ಡ ಸಂಸ್ಥೆಯ ನೋಂದಣಿ ಬಗ್ಗೆ ಕೇಳಬಾರ್ದಾ?'
- ನೋಂದಣಿಯ ಶುಲ್ಕ ಬೇಕಿದ್ದರೆ ಕೊಡುತ್ತೇನೆ: ಗೃಹ ಸಚಿವ
ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ತನ್ನ ಚಟುವಟಿಕೆಗಳಿಗೆ ನೋಂದಣಿ ಮಾಡಿಸಿಕೊಳ್ಳಬೇಕೆಂದು ಮತ್ತೆ ಪುನರುಚ್ಛರಿಸಿರುವ ಕರ್ನಾಟಕ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನೋಂದಣಿಗೆ ಬೇಕಾದ ಎಲ್ಲ ಸಹಕಾರವನ್ನು ತಾವೇ ನೀಡುವುದಾಗಿ ಹೇಳಿದ್ದಾರೆ. ವಿಶ್ವದ ಅತಿ ದೊಡ್ಡ ಸಂಸ್ಥೆ ಆರ್‌ಎಸ್‌ಎಸ್ ಏಕೆ ನೋಂದಣಿ ಆಗಿಲ್ಲಎಂದು ಕೇಳೋದೇ ತಪ್ಪಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರು, ಜೂನ್ 28: RSSನವರು ನಮ್ಮ ಮಾತು, ನಿಮ್ಮ ಮಾತು, ಸಂವಿಧಾನದ ಮಾತು ಕೇಳಲ್ಲ. ಆದರೆ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳೇ RSS ನೋಂದಣಿ ಆಗಲಿ ಅಂದಿದ್ದಾರೆ. ಧರ್ಮಗುರುಗಳ ಮಾತಾದ್ರೂ ಕೇಳಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ವಿಶ್ವದ ಅತಿ ದೊಡ್ಡ ಸಂಸ್ಥೆ ಆರ್‌ಎಸ್‌ಎಸ್ ಏಕೆ ನೋಂದಣಿ ಆಗಿಲ್ಲಎಂದು ಕೇಳೋದೇ ತಪ್ಪಾ? ಅತಿ ದೊಡ್ಡ ಸಂಸ್ಥೆ ಆರ್‌ಎಸ್‌ಎಸ್ ದೊಡ್ಡ ಕಾರ್ಯಕ್ರಮಗಳನ್ನು ಮಾಡುತ್ತೆ. ಅಷ್ಟೊಂದು ಜನ ಬೀದಿಗೆ ಇಳಿಯುತ್ತಾರೆ. ಹೀಗಾಗಿ ನೋಂದಣಿ ಮಾಡಿಸಿಕೊಳ್ಳಿ ಎಂದಿದ್ದೇನೆ. ನೀವು ಯಾರ ಬಳಿಯೂ ಕೈಚಾಚುವುದು ಬೇಡ, ಶುಲ್ಕ ಏನಿದೆಯೋ ಅದನ್ನೂ ಬೇಕಿದ್ದರೆ ನಾನೇ ಕಟ್ಟುತ್ತೇನೆ ಎಂದವರು ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಪ್ರಕಾಶ್ ರಾಜ್ಗೆ ಘೇರಾವ್ ಹಾಕಲು ಯತ್ನ: ಬಿಜೆಪಿ ಕಾರ್ಯಕರ್ತರು ವಶಕ್ಕೆ
ಮೋದಿ ಮೆಚ್ಚಿದ ಬೆಂಗಳೂರಿನ ನಿಂಗಮ್ಮನಿಗೆ ಒತ್ತುವರಿ ತೆರವು ಭಯ!
ಬಿಗ್ಬಾಸ್ ಶುರುವಾಗಿ 13 ಸೀಸನ್ ಆದ್ರೂ ಗೆದ್ದವ್ರಿಗೆ 50 ಲಕ್ಷ ಮಾತ್ರ ಏಕೆ?
ಗೃಹಲಕ್ಷ್ಮಿ ಯೋಜನೆ ಅಪ್ಡೇಟ್: ಮತ್ತೆ ಮರುಪರಿಶೀಲನೆಗೆ ಮುಂದಾದ ಸರ್ಕಾರ!

