ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ; ವೈದ್ಯಕೀಯ ಸೇವೆಗಳನ್ನ ಪರಿಷ್ಕರಣೆ ಮಾಡುವಂತೆ ಒತ್ತಾಯ
ಬಡ ವರ್ಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಒದುಗಿಸುವಲ್ಲಿ ರೂಪಗೊಂಡ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೊಜನೆ ಜಾರಿಯಾಗಿ ಆರು ವರ್ಷಗಳು ಕಳೆದ್ರೂ ಕೂಡಾ ಬಡ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ. ಎಮೆರ್ಜೆನ್ಸಿ ಟೈಮ್ ನಲ್ಲಿ ಬಡ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾದ ಸ್ಥಿತಿ ಎದುರಾಗಿದೆ.

ಬೆಂಗಳೂರು, ಫೆ.14: ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ (Ayushman Bharat Yojana) ವಿಸ್ತರಣೆಯ ಕೊರತೆಯಿಂದಾಗಿ ರಾಜ್ಯದಲ್ಲಿ ಬಡ ಜನರ ಪರದಾಟ ಶುರುವಾಗಿದೆ. ಬಡರೋಗಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ನೀಡುವ ಉದ್ದೇಶದಿಂದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆ ಜಾರಿ ಮಾಡಲಾಗಿದೆ. ಈ ಯೋಜನೆ ಜಾರಿ ಮಾಡಿ ಆರು ವರ್ಷ ಕಳೆದ್ರೂ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ಚಿಕಿತ್ಸೆಗಾಗಿ ಬಡರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ (Hospital) ಅಲೆದಾಡಬೇಕಿದೆ.
ಈ ಆಯುಷ್ಮಾನ್ ಯೋಜನೆಯಲ್ಲಿ ಸದ್ಯ 539 ಖಾಸಗಿ ಆಸ್ಪತ್ರೆಗಳಿದ್ದು ಅವುಗಳಲ್ಲಿ ಮಾತ್ರ ಸೇವೆ ಲಭ್ಯ ಇದೆ. ಇನ್ನು ಹಲವು ಚಿಕಿತ್ಸಾ ವಿಧಾನಗಳನ್ನ ಈ ಯೋಜನೆ ಅಡಿಯಲ್ಲಿ ತಂದಿಲ್ಲ. ಈ ಯೋಜನೆಯಡಿ ಕುಟುಂಬದರಿಗೆ ಐದು ಲಕ್ಷದವರೆಗೆ ನಗದುರಹಿತ ಚಿಕಿತ್ಸೆ ಸಿಗುತ್ತಿದೆ. ಆದ್ರೆ ಕಟುಂಬದಲ್ಲಿ ಒಂದೇ ಸಮಯದಲ್ಲಿ ಇಬ್ಬರಿಗೆ ಹೆಚ್ಚಿನವರಿಗೆ ಸಮಸ್ಯೆಯಾದ್ರೆ ಐದು ಲಕ್ಷದವರೆಗೆ ಮಾತ್ರ ಇದು ಅನ್ವಯವಾಗ್ತೀದೆ. ಈ ಯೋಜನೆಯಡಿ 5 ಲಕ್ಷ ಕುಟುಂಬದ ಪ್ಯಾಕೇಜ್ ಆಗಿದ್ದು ಇಡೀ ಕುಟುಂಬಕ್ಕೆ ಇದು ಅನ್ವಯಾಗ್ತೀದೆ. ಈ ಯೋಜನೆಯಲ್ಲಿ ಚಿಕಿತ್ಸೆಯ ಪ್ಯಾಕೇಜ್ ದರ ಕುಡಾ ಕಡಿಮೆ ಇರುವುದರಿಂದ ಕೆಲವು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿಲ್ಲವಂತೆ. ಸರ್ಜರಿ ದರಗಳು ಕಡಿಮೆ ನಿಗಧಿಯಾಗಿರುವ ಹಿನ್ನಲೆ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಣೆ ಮಾಡ್ತೀವೆ. ಜೊತೆಗೆ ಕೆಲವು ಶಸ್ತ್ರಚಿಕಿತ್ಸೆಗಳು ಈ ಯೋಜನೆಯಡಿ ಇಲ್ಲದೆ ಇರುವುದರಿಂದ ರೋಗಿಗಳು ಪರದಾಡುತ್ತಿದ್ದಾರೆ.
ಇದನ್ನೂ ಓದಿ: Health Budget 2024: ಆಯುಷ್ಮಾನ್ ಭಾರತ್ ಯೋಜನೆಯಡಿ ಆಶಾ ಕಾರ್ಯಕರ್ತೆಯರಿಗೆ ಸುಧಾರಿತ ಆರೋಗ್ಯ ಸೇವೆ
ಕಡಿಮೆ ಪ್ಯಾಕೇಜ್ ಹಾಗೂ ಕಡಿಮೆ ಖಾಸಗಿ ಆಸ್ಪತ್ರೆಗಳ ಲಭ್ಯತೆ ಜೊತೆಗೆ ಚಿಕಿತ್ಸಾ ವಿಧಾನಗಳು ಕಡಿಮೆ ಇರುವುದರಿಂದ ರೋಗಿಗಳಿಗೆ ಈ ಯೋಜನೆ ಸಮಸ್ಯೆಯಾಗುತ್ತಿರುವುದರಿಂದ ಆಯುಷ್ಮಾನ್ ಭಾರತ ಪರಿಷ್ಕರಣೆ ತಜ್ಞರು ಒತ್ತಾಯ ಶುರು ಮಾಡಿದ್ದಾರೆ. ಸಾಕಷ್ಟು ಚಿಕಿತ್ಸೆಗಳು ಈ ಸ್ಕೀಮ್ ವ್ಯಾಪ್ತಿಯಲ್ಲಿ ಇಲ್ಲ. ಹೀಗಾಗಿ ತುಂಬಾ ಅನಾನುಕೂಲವಾಗುತ್ತಿದೆ. 5 ಲಕ್ಷ ಇಡೀ ಕುಟುಂಬಕ್ಕೆ ಅನ್ವಯ ಆಗ್ತೀದೆ. ಒಬ್ಬ ರೋಗಿಗೆ ಮಾತ್ರವಲ್ಲ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯನ್ನ ಪರಿಷ್ಕರಿಸಿ ಮತಷ್ಟು ವಿಸ್ತರಣೆ ಮಾಡುವಂತೆ ಆರೋಗ್ಯ ತಜ್ಞರಿಂದ ಸರ್ಕಾರಕ್ಕ ಶಿಫಾರಸ್ಸು ಕೇಳಿ ಬಂದಿದೆ.
ಇನ್ನು ಈ ಯೋಜನೆಯಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚಾಗಿರುವ ಚಿಕಿತ್ಸೆಗೆ ಬರ್ತಿರೋದೆ ಒಂದು ಲಕ್ಷ ಮಾತ್ರ. ಹೀಗಾಗಿ ಉಳಿದ ಹಣವನ್ನ ರೋಗಿಗಳೆ ಖರ್ಚು ನೀಡಬೇಕಾದ ಸ್ಥಿತಿ ಎದುರಾಗಿದೆ. ಅದರಲ್ಲೂ ಕೆಲವು ಹಾರ್ಟ್ ಸರ್ಜರಿ , ಸೋಲ್ಡರ್ ಸರ್ಜರಿ, ಬ್ರೈನ್ ಸ್ಟೊಕ್, ಇಂಪ್ಲಾಂಟ್ ಸರ್ಜರಿ, ಆಥ್ರೋಸ್ಕೋಪಿ ಸೇರಿದಂತೆ ಕೆಲವು ಕ್ಯಾನ್ಸರ್ ಸರ್ಜರಿಗಳಿಗೆ ಈಯೋಜನೆ ಅಲಭ್ಯವಾಗಿದೆ. ಅನೇಕ ಸರ್ಜರಿಗಳ ದರ ಪರಿಸ್ಕರಣೇ ಆಗಿಲ್ಲ. ದರ ಪರಿಷ್ಕರಣೆಯಾಗದ ಹಿನ್ನಲೆ ತುರ್ತು ಸಂದರ್ಭದಲ್ಲಿ ಕೆಲವು ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನಿರಾಕರಣೆ ಮಾಡ್ತೀವೆ. ಸದ್ಯ 2950 ಸರ್ಕಾರಿ ಆಸ್ಪತ್ರೆಗಳು ಹಾಗೂ 539 ಖಾಸಗಿ ಆಸ್ಪತ್ರೆಗಳು ಮಾತ್ರ ಈ ಯೋಜನೆಯಡಿ ಚಿಕಿತ್ಸೆ ನೀಡುತ್ತಿದ್ದು 1650 ಒಟ್ಟು ಚಿಕಿತ್ಸಾ ವಿಧಾನಗಳಿವೆ. ಉಳಿದ ಚಿಕಿತ್ಸೆಗೆ ರೋಗಿಗಳು ಹಣ ನೀಡಬೇಕಿದೆ. ಆದ್ರೆ ಈ ಬಗ್ಗೆ ಆರೋಗ್ಯ ಇಲಾಖೆಯ ಆಯುಕ್ತರನ್ನ ಕೇಳಿದ್ರೆ ಈ ಬಗ್ಗೆ ಚರ್ಚೆ ಮಾಡ್ತೀವಿ ಆರ್ಥಿಕ ದೃಷ್ಠಿಯಿಂದ ಈ ಬಗ್ಗೆ ಗಮನ ಹರಿಸಬೇಕಿದೆ ಎಂದಿದ್ದಾರೆ.
ಒಟ್ನಲ್ಲಿ ಬಡವರ್ಗದ ಎಲ್ಲರಿಗೂ ಉತ್ತಮ ಹಾಗೂ ಉಚಿತ ಚಿಕಿತ್ಸೆಯಿಂದ ಆಯುಷ್ಮಾನ್ ಭಾರತ್ ಆರೋಗ್ಯ ಯೋಜನೆ ಜಾರಿಗೆ ತರಲಾಗಿದೆ. ಆದ್ರೆ ಈ ಯೋಜನೆಯಲ್ಲಿ ಕಾಲ ಕಾಲಕ್ಕೆ ಮಾಡಬೇಕಾದ ಪರಿಷ್ಕರಣೆ ಹಾಗೂ ಮೇಲ್ದರ್ಜೆಗೆ ಏರಿಸದೇ ಇರುವುದು ಬರ ರೋಗಿಗಳ ಪರದಾಟಕ್ಕೆ ಕಾರಣವಾಗಿದೆ. ಹೀಗಾಗಿ ಸರ್ಕಾರ ಈ ಕಡೆ ಕೊಂಚ ಗಮನ ಹರಿಸಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ



