ಬೆಂಗಳೂರು: ಹೊಸೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುದದ್ವಾರ ಇಲ್ಲದ ಮಗು ಜನಿಸಿದೆ. ಮಗುವಿಗೆ ಗುದದ್ವಾರ ಇಲ್ಲದೊಂದು ಬಿಟ್ಟರೆ ಮಗು ಆರೋಗ್ಯವಾಗಿದೆ. 2.3 ಕೆಜಿ ತೂಕವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಹೊಸೂರಿನ ಆರೋಗ್ಯ ಕೇಂದ್ರದಲ್ಲಿ ಹುಟ್ಟಿದ ಮಗುವಿಗೆ ಸದ್ಯ ಬನ್ನೇರುಘಟ್ಟದ ಮಕ್ಕಳ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗುಣಪಡಿಸಲಾಗಿದೆ. ಸದ್ಯ ಶಿಶು ಆರೋಗ್ಯವಾಗಿದ್ದು ಡಿಸ್ಚಾರ್ಜ್ ಆಗಿದೆ.
ಈ ರೀತಿ ಹುಟ್ಟುವ ಮಕ್ಕಳನ್ನು ಇಂಪಾರ್ಪೋರೆಟ್ ಆನಸ್ (imperforate anus) ಎಂದು ಕರೆಯಲಾಗುತ್ತೆ. ಇಂತಹ ಶಿಶುಗಳಲ್ಲಿ, ಹೊಟ್ಟೆಯು ಗ್ಯಾಸ್‌ನಿಂದ ಹಿಗ್ಗಲು ಪ್ರಾರಂಭಿಸುತ್ತದೆ. ಮಗು ಅತ್ತಾಗ ಆ ಗ್ಯಾಸ್ ಹೊಟ್ಟೆಯನ್ನು ಮತ್ತಷ್ಟು ಹಿಗ್ಗಿಸುತ್ತದೆ ಮತ್ತು ಇದು ರಂಧ್ರಕ್ಕೆ ಕಾರಣವಾಗಬಹುದು” ಎಂದು ಬನ್ನೇರುಘಟ್ಟ ರಸ್ತೆಯ ರೈನ್‌ಬೋ ಮಕ್ಕಳ ಆಸ್ಪತ್ರೆಯ ಮಕ್ಕಳ ಮೂತ್ರಶಾಸ್ತ್ರಜ್ಞ ಡಾ.ಮುಕುಂದ ರಾಮಚಂದ್ರ ತಿಳಿಸಿದರು.
ಇದನ್ನೂ ಓದಿ: ಬಾಲಕನ ಗುದದ್ವಾರಕ್ಕೆ ನಳಿಕೆ ಹಾಕಿ ಗಾಳಿ ತುಂಬಿದ ಗಿರಣಿ ಕೆಲಸಗಾರರು; 2 ದಿನ ಯಾತನೆ ಅನುಭವಿಸಿ ಮೃತಪಟ್ಟ ಹುಡುಗ
ಇಂತಹ ಸಂದರ್ಭಗಳಲ್ಲಿ ಕ್ರಿಯಾತ್ಮಕ ಫಲಿತಾಂಶವು ಬಹಳ ಮುಖ್ಯವಾಗಿದೆ. ಒಂದು ಶಸ್ತ್ರಚಿಕಿತ್ಸೆ ಅಥವಾ ಅನೇಕ ಶಸ್ತ್ರಚಿಕಿತ್ಸೆಗಳ ಮೂಲಕ ಮಗು ಗುಣಪಡಿಸಬಹುದು ಎಂದು ತೀರ್ಮಾನಿಸಲಾಗದು. ಈ ರೀತಿ ಮಾಡುವುದರಿಂದ ಮಗುವಿಗೆ ಜೀವಿತಾವಧಿಯಲ್ಲಿ ಮಲವನ್ನು ನಿಯಂತ್ರಿಸುವ ಕಾರ್ಯವಿಧಾನದಲ್ಲಿ ಸಮಸ್ಯೆಯಾಗಬಹುದು. ಸದ್ಯ ಶಸ್ತ್ರಚಿಕಿತ್ಸೆ ಮೂಲಕ ಮಗುವಿನ ಗುದದ್ವಾರ ಸಮಸ್ಯೆಯನ್ನು ಸರಿಪಡಿಸಲಾಗಿದ್ದು ಮಗು ಆಸ್ಪತ್ರೆಗೆ ದಾಖಲಾದ ಒಂದು ವಾರದಲ್ಲಿ ಡಿಸ್ಚಾರ್ಜ್ ಮಾಡಲಾಗಿದೆ. 5,000 ಶಿಶುಗಳಲ್ಲಿ 1 ಗುದದ್ವಾರವಿಲ್ಲದ ಮಗು ಜನಿಸುತ್ತದೆ ಎಂದು ಡಾ.ಮುಕುಂದ ಮಾಹಿತಿ ನೀಡಿದರು.
ಇನ್ನು ಜನಿಸಿದ ಮಕ್ಕಳಲ್ಲಿ ಗುದದ್ವಾರ ಸಮಸ್ಯೆ ಹೇಗೆ ಆಗುತ್ತೆ ಎಂಬ ಬಗ್ಗೆ ನಿಖರ ಕಾರಣ ಗೊತ್ತಿಲ್ಲ. ಆದ್ರೆ ಅಪೂರ್ಣವಾದ ಗುದದ್ವಾರವನ್ನು ಸರಿಪಡಿಸುವಲ್ಲಿ ಆರಂಭಿಕ ಪತ್ತೆಹಚ್ಚುವಿಕೆ ನಿರ್ಣಾಯಕವಾಗಿದೆ. ಮೊದಲ ಬಾರಿ ಮಾಡುವ ಶಸ್ತ್ರಚಿಕಿತ್ಸೆ ಬಹಳ ಮುಖ್ಯ. ಇದಾದ ಬಳಿಕ ಮಾಡುವ ಶಸ್ತ್ರಚಿಕಿತ್ಸೆಗಳು ಸವಾಲಾಗಿರುತ್ತವೆ ಮತ್ತು ಒಳ್ಳೆಯ ಫಲಿತಾಂಶ ನೀಡುತ್ತವೆ ಎಂದು ಹೇಳಲಾಗದು. ಹೀಗಾಗಿ ಮೊದಲ ಶಸ್ತ್ರಚಿಕಿತ್ಸೆಯಲ್ಲೇ ಗುದದ್ವಾರವನ್ನು ಸರಿಪಡಿಸಬೇಕು ಎಂದರು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:31 am, Wed, 8 March 23