HLFT-42 “ಮಾರುತ್” ಯುದ್ಧ ವಿಮಾನದ ಮೇಲಿದ್ದ ಭಜರಂಗಬಲಿ ಚಿತ್ರ ತೆರವು
HLFT-42 Marut: ಹೆಚ್ಎಎಲ್ ಸಂಸ್ಥೆ ತಯಾರಿಸಿದ HLFT-42 "ಮಾರುತ್" ಯುದ್ಧ ವಿಮಾನದ ಮೇಲಿದ್ದ ಬಜರಂಗಬಲಿ ಚಿತ್ರವನ್ನು ತೆರವು ಮಾಡಲಾಗಿದೆ.
ಬೆಂಗಳೂರು: ಹೆಚ್ಎಎಲ್ ಸಂಸ್ಥೆ ತಯಾರಿಸಿದ HLFT-42 “ಮಾರುತ್” ಯುದ್ಧ ವಿಮಾನದ ಮೇಲಿದ್ದ ಭಜರಂಗಬಲಿ ಚಿತ್ರ ಹಾಕಿದ್ದು ಸಾಕಷ್ಟು ಸುದ್ದಿಯಾಗಿತ್ತು. ಯುದ್ಧ ವಿಮಾನದ ಮೇಲಿನ ಭಜರಂಗಬಲಿ ಚಿತ್ರದ ಕುರಿತಾಗಿ ಪರ-ವಿರೋಧದ ಚರ್ಚೆಗಳು ಪ್ರಾರಂಭವಾಗಿದ್ದವು. ಈ ಹಿನ್ನೆಲೆ ಈಗ ಹೆಚ್ಎಎಲ್ ಯುದ್ಧ ವಿಮಾನದ ಮೇಲಿನ ಭಜರಂಗಬಲಿ ಚಿತ್ರವನ್ನು ತೆರವುಗೊಳಿಸಿದೆ. ಒಂದು ಧರ್ಮಕ್ಕೆ ಸೇರಿದ ಭಾವಚಿತ್ರ ಅಂಟಿಸಿದ ಹಿನ್ನೆಲೆ ವಿವಾದ ಸೃಷ್ಟಿಯಾಗಿತ್ತು.
ವೈರಲ್ ಆದ ಟ್ವೀಟ್
“ರಾಮ ದೂತ ಅತುಲಿತ ಬಲ ಧಾಮ -ಅಂಜನಿ ಪುತ್ರ ಪವನ ಸುತ ನಾಮ”
HAL ಸಂಸ್ಥೆಯಿಂದ ತಯಾರಿಸಲ್ಪಟ್ಟ “ಮಾರುತ್” ಹೆಸರಿನ HLFT-42 ವಿಮಾನದ ಮೇಲೆ ಬಜರಂಗಬಲಿಯ ಚಿತ್ರ ಬಹಳ ವಿಶೇಷವಾಗಿ ರಾರಾಜಿಸುತ್ತಿರುವ ದೃಶ್ಯ. #AeroIndia2023 pic.twitter.com/WzeFmNvnET
— Pralhad Joshi (@JoshiPralhad) February 13, 2023
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಯುದ್ಧ ವಿಮಾನದ ಮೇಲಿನ ಆಂಜನೇಯ ಫೋಟೋವನ್ನು ಟ್ವೀಟ್ ಮಾಡಿ ಹನುಮಾನ್ ಚಾಲಿಸಾ ಮೇಲಿನ ಮೊದಲ ಸಾಲನ್ನು ಬರೆದು ಟ್ವೀಟ್ ಮಾಡಿದ್ದರು. “ರಾಮ ದೂತ ಅತುಲಿತ ಬಲ ಧಾಮ -ಅಂಜನಿ ಪುತ್ರ ಪವನ ಸುತ ನಾಮ”. “HAL ಸಂಸ್ಥೆಯಿಂದ ತಯಾರಿಸಲ್ಪಟ್ಟ “ಮಾರುತ್” ಹೆಸರಿನ HLFT-42 ವಿಮಾನದ ಮೇಲೆ ಬಜರಂಗಬಲಿಯ ಚಿತ್ರ ಬಹಳ ವಿಶೇಷವಾಗಿ ರಾರಾಜಿಸುತ್ತಿರುವ ದೃಶ್ಯ.” ಎಂದು ಟ್ವೀಟ್ ಮಾಡಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:47 am, Tue, 14 February 23