2 ಜೀವಗಳು ಬಲಿ ಬೆನ್ನಲ್ಲೇ ಮತ್ತೊಂದು ಅವಘಡ: ಮೆಟ್ರೊ ಕಾಮಗಾರಿ ಗುಂಡಿಗೆ ಬಿದ್ದ ಬೈಕ್ ಸವಾರ

ಮೊನ್ನೆಯಷ್ಟೇ ನಮ್ಮ ಮೆಟ್ರೋ ಕಾಮಾಗಾರಿಗೆ ಎರಡು ಜೀವಗಳನ್ನು ಬಲಿ ಪಡೆದಿತ್ತು. ಇದೀಗ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನಿಗೆ ಗಾಯವಾಗಿರುವಂತಹ ಘಟನೆ ನಗರದ ಬ್ರಿಗೇಡ್​​ ರಸ್ತೆಯಲ್ಲಿ ನಡೆದಿದೆ.

2 ಜೀವಗಳು ಬಲಿ ಬೆನ್ನಲ್ಲೇ ಮತ್ತೊಂದು ಅವಘಡ: ಮೆಟ್ರೊ ಕಾಮಗಾರಿ ಗುಂಡಿಗೆ ಬಿದ್ದ ಬೈಕ್ ಸವಾರ
ರಸ್ತೆಯಲ್ಲಿ ಗುಂಡಿ ಬಿದ್ದಿರುವುದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Jan 12, 2023 | 3:54 PM

ಬೆಂಗಳೂರು: ಮೊನ್ನೆಯಷ್ಟೇ ನಮ್ಮ ಮೆಟ್ರೋ (metro) ಕಾಮಾಗಾರಿಗೆ ಎರಡು ಜೀವಗಳನ್ನು ಬಲಿ ಪಡೆದಿತ್ತು. ಇದೀಗ ರಸ್ತೆ ಗುಂಡಿಗೆ ಬಿದ್ದು ಬೈಕ್ ಸವಾರನಿಗೆ ಗಾಯವಾಗಿರುವಂತಹ ಘಟನೆ ನಗರದ ಬ್ರಿಗೇಡ್​​ ರಸ್ತೆಯಲ್ಲಿ ನಡೆದಿದೆ. ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಬ್ರಿಗೇಡ್ ಟವರ್ ಬಳಿಯ ಜಾನ್ಸನ್​ ಮಾರ್ಕೆಟ್​​​ ರಸ್ತೆಯ ಮಧ್ಯೆ ಭಾಗದಲ್ಲಿ ಏಕಾಏಕಿ ಗುಂಡಿ ಬಿದ್ದು ಅವಘಡ ಉಂಟಾಗಿತ್ತು. ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದಾನೆ. ಅಶೋಕನಗರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸದ್ಯ ರಸ್ತೆ ಗುಂಡಿ ಸುತ್ತಲೂ ಬ್ಯಾರಿಕೇಡ್​ ಮತ್ತು ಪರದೆ ಹಾಕಲಾಗಿದೆ. ಬ್ರಿಗೇಡ್ ಟವರ್ ಬಳಿ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.

ಮೊನ್ನೆಯಷ್ಟೇ ಎರಡು ಜೀವ ಬಲಿ ಪಡೆದ ನಮ್ಮ ಮೆಟ್ರೋ ಕಾಮಾಗಾರಿ

ರಸ್ತೆ ಗುಂಡಿ ಬಿದ್ದ ಜಾಗದಲ್ಲಿ ನಮ್ಮ ಮೆಟ್ರೋ ಅಂಡರ್ ಗ್ರೌಂಡ್ ಕಾಮಾಗಾರಿ ನಡೆಯುತ್ತಿದೆ. ಕಳೆದ ಐದು ದಿನಗಳ ಹಿಂದೆಯಷ್ಟೇ ಬಿಎಂಆರ್​ಸಿಎಲ್ ಸುರಂಗ ಮಾರ್ಗ ಕಾಮಾಗಾರಿ ಮುಗಿಸಿತ್ತು. ಹೆವಿ ಟ್ರಾಫಿಕ್ ವೇಳೆಯಲ್ಲಿಯೇ ಗುಂಡಿ ಬಿದ್ದಿದೆ. ಕೊಟ್ಟಿಗೆರೆಯಿಂದ ನಾಗವಾರ ಮಾರ್ಗದಲ್ಲಿ ಮೆಟ್ರೋ ಸುರಂಗ ಮಾರ್ಗ ಕಾಮಾಗಾರಿ ನಡೆಯುತ್ತಿದೆ. ಇನ್ನು ಸ್ಥಳಕ್ಕೆ ನಮ್ಮ ಮೆಟ್ರೋ ಅಧಿಕಾರಿಗಳು ಆಗಮಿಸಿ ಪರಿಶೀಲನೆ ಮಾಡಿದರು.

ಇದನ್ನೂ ಓದಿ: Hangal: ಮೆಕ್ಕೆಜೋಳ ರಾಶಿಗೆ ಬೆಂಕಿ ಇಟ್ಟ ದುಷ್ಕರ್ಮಿಗಳು: 3 ಲಕ್ಷಕ್ಕೂ ಅಧಿಕ ಮೌಲ್ಯದ ತೆನೆರಾಶಿ ಬೆಂಕಿಗಾಹುತಿ

ಪ್ರತ್ಯಕ್ಷದರ್ಶಿ ಹೇಳಿದ್ದೇನು

ಪ್ರತ್ಯಕ್ಷದರ್ಶಿ ಪವನ್ ಹೇಳಿಕೆ ನೀಡಿದ್ದು, ಸಾಕಷ್ಟು ಜನ ಟು ವೀಲರ್​ನಲ್ಲಿ ಇಲ್ಲಿ ಹಾದು ಹೋದಾಗ ಜಂಪ್ ಆಗ್ತಾ ಇತ್ತು. ಬೆಳಗ್ಗೆ ಸಾಕಷ್ಟು ವಾಹನಗಳು ಜಂಪ್ ಆಗಿ ಈ ಸ್ಥಳದಲ್ಲಿ ಹಾದು ಹೋಗ್ತಾ ಇದ್ವು. ಜಂಪ್ ಆದ ಬಳಿಕ ಮಹಿಳೆಯ ಹೆಲ್ಮೆಟ್ ಕೂಡ ಕೆಳಗೆ ಬಿತ್ತು. ಆ ಮೇಲೆ ನೋಡಿದಾಗ ನಿಧಾನವಾಗಿ ರಸ್ತೆ ಕುಸಿತು ಎಂದು ಹೇಳಿದರು.

ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನ, ಮಗು ಸಾವು

ಹಾಸನ: ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನಿಸಿದ್ದು, ಒಂದು ಮಗು ಸಾವನ್ನಪ್ಪಿದ್ದು, ಇನ್ನೊಂದು ಮಗುವಿನ ಸ್ಥಿತಿ ಗಂಭೀರವಾಗಿರುವಂತಹ ಘಟನೆ ಹಾಸನ ನಗರದ ಚಿಪ್ಪಿನಕಟ್ಟೆ ಬಡಾವಣೆಯಲ್ಲಿ ನಡೆದಿದೆ. 4 ವರ್ಷದ ಗಂಡು ಮಗು ಮೊಹಮ್ಮದ್​​ ಆರಾನ್​ ಮೃತಪಟ್ಟಿದ್ದು, 6 ವರ್ಷದ ಮಗಳು ಸುನೈನಾ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಪುತ್ರಿ ಸುನೈನಾಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಾನಸ ಜಿಲ್ಲಾಸ್ಪತ್ರೆಯಲ್ಲಿ ತಾಯಿ ಜೀನತ್‌ಬಾನುಗೆ ಚಿಕಿತ್ಸೆ ನೀಡಲಾಗುತ್ತಿದೆ. ಜನವರಿ 7ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪೋಷಕರು ಕಡೆಗಣಿಸಿದ್ದಾರೆ ಎಂದು ನೊಂದು ಟೀನಲ್ಲಿ ಇಲಿ ಪಾಶಾಣ ಬೆರೆಸಿ ಮಕ್ಕಳಿಗೆ ಕುಡಿಸಿ, ಬಳಿಕ ತಾಯಿ ಜೀನತ್ ಬಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಸಿದ್ದಾಳೆ. ದ.ಕ.ಜಿಲ್ಲೆ ಉಪ್ಪಿನಂಗಡಿ ಬಳಿ ಸತ್ತಿಗಲ್‌ನ ನಿವಾಸಿ ಜೀನತ್‌ಬಾನು. 12 ವರ್ಷದ ಹಿಂದೆ ಹಾಸನದ ದಿಲ್​ದಾರ್-ಜೀನತ್​​ಬಾನು ಮದುವೆ ಆಗಿತ್ತು. 5 ದಿನದ ಬಳಿಕ ವಿಷ ನೀಡಿರುವುದಾಗಿ ಬಾಯ್ಬಿಟ್ಟಿದ್ದರು. ಹಾಸನದ ಪೆನ್ಷನ್​​ಮೊಹಲ್ಲಾ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.