AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಗಾಳಿಯ ಗುಣಮಟ್ಟ; ಉಸಿರಾಟದ ಸಮಸ್ಯೆಗಿದು ಬುನಾದಿ

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, AQI 200 ದಾಟಿದೆ. PM2.5 ಮತ್ತು PM10 ಪ್ರಮಾಣ ಹೆಚ್ಚಳದಿಂದ ಉಸಿರಾಟದ ಸಮಸ್ಯೆಗಳು ಹೆಚ್ಚುತ್ತಿವೆ. ವಾಹನಗಳ ಹೊಗೆ, ಕೈಗಾರಿಕೆ ಹಾಗೂ ಧೂಳು ಮಾಲಿನ್ಯಕ್ಕೆ ಪ್ರಮುಖ ಕಾರಣ. ದೆಹಲಿಯಂತೆ ಪರಿಸ್ಥಿತಿ ಬಿಗಡಾಯಿಸಬಾರದೆಂದು ತಜ್ಞರು ಎಚ್ಚರಿಸಿದ್ದಾರೆ. ಸಾರ್ವಜನಿಕರು, ವಿಶೇಷವಾಗಿ ಉಸಿರಾಟದ ತೊಂದರೆಯಿರುವವರು ಜಾಗರೂಕರಾಗಿರಬೇಕು.

ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಗಾಳಿಯ ಗುಣಮಟ್ಟ; ಉಸಿರಾಟದ ಸಮಸ್ಯೆಗಿದು ಬುನಾದಿ
ಬೆಂಗಳೂರಿನಲ್ಲಿ ಪಾತಾಳಕ್ಕಿಳಿದ ಗಾಳಿಯ ಗುಣಮಟ್ಟ; ಉಸಿರಾಟದ ಸಮಸ್ಯೆಗಿದು ಬುನಾದಿ
ಭಾವನಾ ಹೆಗಡೆ
|

Updated on:Dec 13, 2025 | 12:30 PM

Share

ಬೆಂಗಳೂರು, ಡಿಸೆಂಬರ್ 13: ಬೆಂಗಳೂರಿನಲ್ಲಿ ದಿನೇ ದಿನೇ ವಾಯು ಗುಣಮಟ್ಟ ಕುಸಿಯುತ್ತಲೇ ಇದ್ದು, ವಾಯುಮಾಲಿನ್ಯ ಹೆಚ್ಚುತ್ತಿದೆ. ನಗರದಲ್ಲಿ ಇದೇ ವಾತಾವರಣ ಮುಂದುವರೆದರೆ ಮುಂದೊಂದು ದಿನ ದೆಹಲಿಯಂತೆ ಇಲ್ಲಿಯೂ ಉಸಿರಾಡುವುದೂ ಕಷ್ಟವೆಂಬಂತಾಗುತ್ತೆ ಎಂಧು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ನಿನ್ನೆ (ಡಿ.12) ಗಾಳಿಯ ಗುಣಮಟ್ಟ ಸೂಚ್ಯಂಕ (AQI) 175ಕ್ಕೆ ತಲುಪಿತ್ತು. ಇಂದು ಗಾಳಿಯ ಗುಣಮಟ್ಟ ಸುಮಾರು 186 ರಿಂದ 206ರ ವರೆಗೂ ಏರಿಕೆ ಕಂಡಿದ್ದು, ಉಸಿರಾಟಕ್ಕೆ ತೀವ್ರ ಬಿಕ್ಕಟ್ಟು ಎದುರಾಗಲಿದೆ.

200ರ ಗಡಿದಾಟಿದ ಗಾಳಿಯ ಕ್ವಾಲಿಟಿ

ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, 5ಕ್ಕಿಂತ ಹೆಚ್ಚಿನ PM2.5(Particulate Matter) ಜನರಲ್ಲಿ ಉಸಿರಾಟದ ಸಮಸ್ಯೆ ತಂದೊಡ್ಡಬಹುದು. ಆದರೆ ಭಾರತೀಯ ಸುರಕ್ಷಾ ಮಿತಿಗಳ ಪ್ರಕಾರ 40ಕ್ಕಿಂತ ಕಡಿಮೆ PM2.5 ಇದ್ದರೂ ಸ್ವೀಕಾರಾರ್ಹವಾಗಿದೆ. PM10 ಪ್ರಮಾಣವೂ 50 ಮೈಕ್ರೋಗ್ರಾಮ್​ವರೆಗೂ ಇರಬಹುದು.ಈಗಾಗಲೇ ಇಂದು ಬೆಂಗಳೂರಿನ ಗಾಳಿಯ ಗುಣಮಟ್ಟ 200 ದಾಟಿರುವುದರಿಂದ ಉಸಿರಾಟದ ತೊಂದರೆಯಿರುವವರು ಜಾಗರೂಕರಾಗಿರಬೇಕಿದೆ. ಇಂದು ನಗರದಲ್ಲಿ PM2.5 95 ಮೈಕ್ರೋಗ್ರಾಮ್ ಇದ್ದು, PM10 ಪ್ರಮಾಣ 96 ಇದೆ.

PM ಎಂದರೆ ಗಾಳಿಯಲ್ಲಿರುವ ಕಣಗಳು. PM2.5ನ ಕಣಗಳು ವಾಹನ ಹೊಗೆ, ಕೈಗಾರಿಕಾ ಹೊಗೆ, ಹಾಗೂ ಇಂಧನಗಳ ಹೊಗೆಯಿಂದ ಉತ್ಪತ್ತಿಯಾಗುತ್ತವೆ ಹಾಗೂ PM10 ನ ಕಣಗಳು ಕನ್ಸ್ಟ್ರಕ್ಷನ್​ನ ಧೂಳು, ಪರಾಗದಿಂದೆಲ್ಲಾ ಉತ್ಪತ್ತಿಯಾಗುತ್ತವೆ. ಎರಡರ ಪ್ರಮಾಣವೂ ಮಿತಿ ಮೀರಿದಾಗ ಸಾರ್ವಜನಿಕಲ್ಲಿ ಆಸ್ತಮಾದಂತಹ ಉಸಿರಾಟದ ತೊಂದರೆಗಳು ಎದುರಾಗುತ್ತವೆ. ಕೇವಲ PM ಮಾತ್ರವಲ್ಲೆ ಖಾರ್ಬನ್ ಮೊನಾಕ್ಸೈಡ್, ಓಜೋನ್, ನೈಟ್ರೋಜನ್ ಡೈ ಆಕ್ಸೈಡ್​ಗಳ ಹೆಚ್ಚಳವೂ ಗಾಳಿಯನ್ನು ಉಸಿರಾಡಲು ಅನರ್ಹವನ್ನಾಗಿಸುತ್ತವೆ. ಸಧ್ಯ ಬೆಂಗಳೂರು ಮಾತ್ರವಲ್ಲದೇ ಅರೆಕೆರೆ, ಬೆಳ್ಳಂದೂರು ಸೇರಿದಂತೆ ಸುತ್ತಮುತ್ತಲಿನ ಹಲವು ಪ್ರದೇಶಗಳಲ್ಲಿಯೂ ಗಾಳಿಯ ಗುಣಮಟ್ಟ ತೀವ್ರ ಕುಸಿತ ಕಂಡಿದೆ.

ಇದನ್ನೂ ಓದಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಉಲ್ಬಣ: ಇಂದು ಮತ್ತೆ ಗಾಳಿಮಟ್ಟ ಕುಸಿತ

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಪ್ರಮುಖ ನಗರಗಳಲ್ಲಿ ಗಾಳಿ ಗುಣಮಟ್ಟ

  • ಬೆಂಗಳೂರು – 180
  • ಮಂಗಳೂರು -146
  • ಮೈಸೂರು – 118
  • ಬೆಳಗಾವಿ- 143
  • ಕಲಬುರಗಿ – 77
  • ಶಿವಮೊಗ್ಗ- 77
  • ಬಳ್ಳಾರಿ- 167
  • ಹುಬ್ಬಳ್ಳಿ – 90
  • ಉಡುಪಿ – 85
  • ವಿಜಯಪುರ – 79

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:53 am, Sat, 13 December 25

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?