
ಬೆಂಗಳೂರು, ಜನವರಿ 03: ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕದ ಪ್ರಕಾರ (Bengaluru Air Quality) ಇಂದಿನ ಗಾಳಿಯ ಗುಣಮಟ್ಟ 167 ಇದ್ದು, ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿದೆ. ಇಂದೂ PM2.5 79 ಇದ್ದರೆ, PM10 108 ಇದೆ. ಕಳೆದ ಕೆಲ ದಿನಕ್ಕೆ ಹೋಲಿಸಿದರೆ ಇಂದಿನ ಏರ್ ಕ್ವಾಲಿಟಿ ಸುಧಾರಿಸಿದೆ ಎನಿಸಿದರೂ WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ.
ವಿಶೇಷವಾಗಿ BTM, ಜೆ. ಪಿ. ನಗರ್, ಹೆಬ್ಬಲ್, ಸಿಲ್ಕ್‌ಬೋರ್ಡ್ ಮುಂತಾದ ಪ್ರದೇಶಗಳಲ್ಲಿ PM2.5 ಮಟ್ಟ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಇದು ಸಾಮಾನ್ಯವಾಗಿ ಸಂವೆದನಶೀಲ ಗುಂಪಿನವರ ಮೇಲೆ ಖಾಸಗಿ ಪರಿಣಾಮ ಬೀರಬಹುದು ಮತ್ತು ಹೊರಗಡೆ ದೀರ್ಘ ಕಾಲ ಇದ್ದರೆ ಆರೋಗ್ಯದ ಮೇಲೆ ಹಾನಿ ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. 2025 ರಲ್ಲಿ, ಬೆಂಗಳೂರು ನಗರದಲ್ಲಿ ವಾಯು ಗುಣಮಟ್ಟ ಹಂತ ಹಂತವಾಗಿ ಹಾನಿಕರ ದಿಕ್ಕಿನಲ್ಲಿ ಬದಲಾಗಿದೆ.
ವರ್ಷಾಂತ್ಯದ ಅಂಕಿಅಂಶಗಳನ್ನು ನೋಡಿದರೆ 2025 ರಲ್ಲಿ ನಗರವು ಕಳೆದ ಐದು ವರ್ಷಗಳಲ್ಲಿ ಅತ್ಯಂತ ಕೆಟ್ಟ ವಾಯು ಗುಣಮಟ್ಟವನ್ನು ದಾಖಲಿಸಿದೆ . ವರ್ಷದಲ್ಲಿ ಬಹುತೇಕ ದಿನಗಳು ಮಧ್ಯಮದಿಂದ ಅನಾರೋಗ್ಯಕರ ಮಟ್ಟದವರೆಗೆ ತಲುಪಿದ್ದು, 2024 ರೊಂದಿಗೆ ಹೋಲಿಸಿದರೆ ಗುಣಮಟ್ಟದಲ್ಲಿ ಬಹುದೊಡ್ಡ ಕುಸಿತ ಕಂಡಿದೆ. 2025 ರ ಡಿಸೆಂಬರ್‌ನಲ್ಲಿ ಸರಾಸರಿ 143 ಸರಾಸರಿ AQI ರೇಟ್ ಕಂಡು ಬಂದಿದೆ. ನಗರದಲ್ಲಿ ವಾಹನಗಳ ಸಂಖ್ಯೆ ವ್ಯಾಪಕವಾಗಿ ಹೆಚ್ಚಾಗಿದೆ. ರಸ್ತೆಯಿಂದ ಹೊಮ್ಮುವ ಧೂಳು, ಕಟ್ಟಡ ನಿರ್ಮಾಣದ ಧೂಳು ಮತ್ತು ಚಳಿಗಾಲದ ಮಂಜಿನ ಪರಿಣಾಮಗಳು ಈ ಕಳಪೆ ಗುಣಮಟ್ಟಕ್ಕೆ ಕಾರಣವಾಗಿದೆ ಎಂದು ವಾಯು ಗುಣಮಟ್ಟ ತಜ್ಞರು ಹೇಳುತ್ತಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.