ಪ್ರವಾಸಿಗರೇ ಎಚ್ಚರ: ಕಳಪೆ ಏರ್ ಕ್ವಾಲಿಟಿಯಲ್ಲಿ ಬೆಂಗಳೂರನ್ನೂ ಮೀರಿಸುತ್ತಿದೆ ಈ ಜಿಲ್ಲೆ!
ಬೆಂಗಳೂರಿನ ಏರ್ ಕ್ವಾಲಿಟಿ ದಿನೇ ದಿನೇ ಕುಸಿಯುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಕೆಲ ದಿನಗಳ ಹಿಂದೆ AQI 200 ದಾಟಿತ್ತು. ಈ ಕಳಪೆ ಗುಣಮಟ್ಟವನ್ನೂ ಮೀರಿಸುವ AQI ಬಳ್ಳಾರಿಯಲ್ಲಿ ಕಂಡುಬಂದಿದ್ದು, 200ರ ಗಡಿ ದಾಟಿದೆ. ಇದರೊಂದಿಗೆ PM2.5 ಮತ್ತು PM10 ಪ್ರಮಾಣ ಹೆಚ್ಚಳದಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿದ್ದು, ಮನೆಯಿಂದ ಹೊರಬರುವ ಮೊದಲು ಮುಂಜಾಗ್ರತಾಕ್ರಮ ವಹಿಸುವಂತೆ ತಜ್ಞರು ಹೇಳಿದ್ದಾರೆ.

ಬೆಂಗಳೂರು, ಡಿಸೆಂಬರ್ 22: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಗಾಳಿಯ ಗುಣಮಟ್ಟ (Bengaluru Air Quality) ಹದಗೆಟ್ಟಿದೆ. ಬೆಂಗಳೂರಿನಲ್ಲಿ ಗರಿಷ್ಠ 200ಕ್ಕೆ ತಲುಪಿದ್ದ ಕ್ವಾಲಿಟಿಯನ್ನು ಮೀರಿಸಿರುವ ಬಳ್ಳಾರಿ, ಉಸಿರಾಡಲು ಅನರ್ಹ ವಾತಾವರಣ ಹೊಂದಿದೆ. ಬೆಂಗಳೂರಿನಲ್ಲಂತೂ ಏರ್ ಕ್ವಾಲಿಟಿ ಪಾತಾಳಕ್ಕಿಳಿದಿದೆ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಬೆಂಗಳೂರಿನ ಗಾಳಿಯ ಗುಣಮಟ್ಟ, ಇಂದು 173ರಷ್ಟಿದೆ.
ಪಾತಾಳಕ್ಕಿಳಿದ ಬಳ್ಳಾರಿ ಏರ್ ಕ್ವಾಲಿಟಿ
ಕಳೆದ ಎರಡು ದಿನಗಳಿಂದ 180ರ ಆಸು ಪಾಸಿನಲ್ಲಿದ್ದ ಬಳ್ಳಾರಿಯ ಏರ್ ಕ್ವಾಲಿಟಿ, ಇಂದು ಧಿಡೀರನೆ 240ಕ್ಕೆ ತಲುಪಿದೆ. ಬೆಂಗಳೂರಿನಲ್ಲಿ ದಾಖಲಾದ ಅತೀ ಕಳಪೆ ಏರ್ ಕ್ವಾಲಿಟಿ ಇಂಡೆಕ್ಸ್ ಮೀರಿಸಿರಿರುವ ಬಳ್ಳಾರಿಯಲ್ಲಿ, PM2.5 ಪ್ರಮಾಣ 167ಕ್ಕೆ ತಲುಪಿದ್ದು, PM10 ಪ್ರಮಾಣ 230ಕ್ಕೆ ಇಳಿದಿದೆ. ಇದು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಾಳಿಯ ಗುಣಮಟ್ಟ 150 ದಾಟಿದರೆ ಶ್ವಾಸಕೋಶ ಕಾಯಿಲೆಯ ಜೊತೆಗೆ ಹೃದಯ ಸಂಬಂಧಿ ರೋಗಗಳೂ ಬರಬಹುದೆಂದು ತಜ್ಞರು ಹೇಳುತ್ತಾರೆ. ಹೀಗಿರುವಾಗ ಬಳ್ಳಾರಿಯ ಜನ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ತಜ್ಞರು ತಿಳಿಸಿದ್ದಾರೆ.
ವಾಯುಮಾಲಿನ್ಯಕ್ಕೆ ಬುನಾದಿ
ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 112ಕ್ಕೆ ತಲುಪಿದ್ದು, PM10 ಪ್ರಮಾಣ 155ಕ್ಕೆ ಇಳಿದಿದೆ. ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಕಳೆದ ನಾಲ್ಕು ವರ್ಷದಲ್ಲಿ ಈ ವರ್ಷವೇ ಬೆಂಗಳೂರಿನ ಹವೆ ಇಷ್ಟರ ಮಟ್ಟಿಗೆ ಹದಗೆಟ್ಟಿದೆ.
ಇದನ್ನೂ ಓದಿ ಹೃದಯ ಸಂಬಂಧಿ ರೋಗಕ್ಕೂ ಆಹ್ವಾನ ನೀಡಬಹುದು ಬೆಂಗಳೂರಿನ ಏರ್ ಕ್ವಾಲಿಟಿ!
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
- ಬೆಂಗಳೂರು –173
- ಮಂಗಳೂರು – 156
- ಮೈಸೂರು – 139
- ಬೆಳಗಾವಿ – 172
- ಕಲಬುರ್ಗಿ – 124
- ಶಿವಮೊಗ್ಗ – 92
- ಬಳ್ಳಾರಿ – 240
- ಹುಬ್ಬಳ್ಳಿ- 120
- ಉಡುಪಿ – 146
- ವಿಜಯಪುರ –132
ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?
- ಉತ್ತಮ- 0-50
- ಮಧ್ಯಮ – 50-100
- ಕಳಪೆ – 100-150
- ಅನಾರೋಗ್ಯಕರ – 150-200
- ಗಂಭೀರ – 200 – 300
- ಅಪಾಯಕಾರಿ – 300 -500+
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:56 am, Mon, 22 December 25




