AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೃದಯ ಸಂಬಂಧಿ ರೋಗಕ್ಕೂ ಆಹ್ವಾನ ನೀಡಬಹುದು ಬೆಂಗಳೂರಿನ ಏರ್ ಕ್ವಾಲಿಟಿ!

ಬೆಂಗಳೂರಿನಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿದ್ದು, ಕೆಲ ದಿನಗಳ ಹಿಂದೆ AQI 200 ದಾಟಿತ್ತು. ಇಂದೂ ಸಹ 196ಕ್ಕೆ ತಲುಪಿರುವ ಗಾಳಿಯ ಗುಣಮಟ್ಟ ಇನ್ನೂ ಕುಸಿಯಬಹುದೆಂದು ಹೇಳಲಾಗಿದೆ. PM2.5 ಮತ್ತು PM10 ಪ್ರಮಾಣ ಹೆಚ್ಚಳದಿಂದ ಹೃದಯ ಸಂಬಂಧಿ ಸಮಸ್ಯೆಗಳು ಹೆಚ್ಚುತ್ತಿದ್ದು, ಮನೆಯಿಂದ ಹೊರಬರುವ ಮೊದಲು ಮುಂಜಾಗೃತಾ ಕ್ರಮ ವಹಿಸುವಂತೆ ತಜ್ಞರು ಹೇಳಿದ್ದಾರೆ.

ಹೃದಯ ಸಂಬಂಧಿ ರೋಗಕ್ಕೂ ಆಹ್ವಾನ ನೀಡಬಹುದು ಬೆಂಗಳೂರಿನ ಏರ್ ಕ್ವಾಲಿಟಿ!
ಹೃದಯ ಸಂಬಂಧಿ ರೋಗಕ್ಕೂ ಆಹ್ವಾನ ನೀಡಬಹುದು ಬೆಂಗಳೂರಿನ ಏರ್ ಕ್ವಾಲಿಟಿ!
ಭಾವನಾ ಹೆಗಡೆ
|

Updated on: Dec 21, 2025 | 8:16 AM

Share

ಬೆಂಗಳೂರು, ಡಿಸೆಂಬರ್ 21:ರಾಜ್ಯದ ಹಲವೆಡೆ ಈಗಾಗಲೇ ಗಾಳಿಯ ಗುಣಮಟ್ಟ (Bengaluru Air Quality) ,ಹದಗೆಟ್ಟಿದೆ. ಬೆಂಗಳೂರಿನಲ್ಲಂತೂ ಏರ್ ಕ್ವಾಲಿಟಿ ಪಾತಾಳಕ್ಕಿಳಿದಿದೆ. ಕಳೆದ ಹಲವು ದಿನಗಳಿಂದ 170 ರಿಂದ 200ರವೆಗೂ ಏರಿಳಿತ ಕಾಣುತ್ತಿರುವ ಗುಣಮಟ್ಟ ವಾಯು ಮಾಲಿನ್ಯ, ಇಂದೂ ಸಹ 190ಕ್ಕೆ ತಲುಪಿದೆ. ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣವೂ ಹೆಚ್ಚಾಗಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅನಾರೋಗ್ಯ ಉಂಟು ಮಾಡಬಹುದು ಬೆಂಗಳೂರಿನ ಗಾಳಿ

ಇಂದೂ ಬೆಂಗಳೂರಿನಲ್ಲಿ PM2.5 ಪ್ರಮಾಣ 112ಕ್ಕೆ ತಲುಪಿದ್ದು, PM10 ಪ್ರಮಾಣ 155ಕ್ಕೆ ಇಳಿದಿದೆ. ರಾಜ್ಯದೆಲ್ಲೆಡೆ ಉಂಟಾಗುತ್ತಿರುವ ಶೀತದಲೆಯ ಪರಿಣಾಮ ಈಗಾಗಲೇ ಮಕ್ಕಳು, ವೃದ್ಧರು ಸೇರಿದಂತೆ ಎಲ್ಲರಿಗೂ ಉಸಿರಾಟದ ಸಮಸ್ಯೆಗಳು ಎದುರಾಗುತ್ತಿವೆ. ಅದರೊಂದಿಗೆ ವಾಯು ಮಾಲಿನ್ಯ ಮತ್ತು ಹದಗೆಟ್ಟ ಗಾಳಿಯೂ ಸೇರಿ ಅನಾರೊಗ್ಯ ಉಂಟುಮಾಡಬಹುದೆಂದು ತಜ್ಞರು ಹೇಳುತ್ತಾರೆ. ಕಳೆದ ನಾಲ್ಕು ವರ್ಷದಲ್ಲಿ ಈ ವರ್ಷವೇ ಬೆಂಗಳೂರಿನ ಹವೆ ಇಷ್ಟರ ಮಟ್ಟಿಗೆ ಹದಗೆಟ್ಟಿದೆ.

ಮುನ್ನೆಚ್ಚರಿಕೆ ವಹಿಸಲು ಸೂಚನೆ

ನಿನ್ನೆ ಬೆಳಗ್ಗೆ 7 ಗಂಟೆಯ ಹೊತ್ತಿಗೆ 200 ರಷ್ಟಿದ್ದ ಏರ್ ಕ್ವಾಲಿಟಿ ಸಧ್ಯಕ್ಕೆ 190ಕ್ಕಿಳಿದಿದೆ. ಈ ಎರಡು ದಿನಗಳಲ್ಲಿ ಗಾಳಿಯ ಗುಣಮಟ್ಟದಲ್ಲಿ ಹೆಚ್ಚಿನ ಏರಿಳಿತವಾಗುತ್ತಿದ್ದು, ಪರಿಸ್ಥಿತಿ ಇನ್ನೂ ಹದಗೆಡುವ ಸಾಧ್ಯತೆ ಇದೆ. 150ಕ್ಕಿಂತ ಜಾಸ್ತಿ ಹದಗೆಟ್ಟ ಗಾಳಿಯ ಸೇವನೆಯಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಎದುರಾಗಲಿದ್ದು, ಮನೆಯಿಂದ ಹೊರ ಬೀಳುವಾಗ ಆದಷ್ಟು ಮಾಸ್ಕ್ ಧರಿಸುವಂತೆ ಸೂಚನೆ ನೀಡಲಾಗಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index):

  • ಬೆಂಗಳೂರು –196
  • ಮಂಗಳೂರು – 157
  • ಮೈಸೂರು – 112
  • ಬೆಳಗಾವಿ – 163
  • ಕಲಬುರ್ಗಿ – 137
  • ಶಿವಮೊಗ್ಗ – 84
  • ಬಳ್ಳಾರಿ – 196
  • ಹುಬ್ಬಳ್ಳಿ- 97
  • ಉಡುಪಿ – 124
  • ವಿಜಯಪುರ –96

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ