ಚಳಿಗಾಲದ ಎಫೆಕ್ಟ್: ಸಾವಿರ ರೂ ಗಡಿಯತ್ತ ಮಟನ್ ದರ; ನಾನ್‌ವೆಜ್ ಪ್ರಿಯರಿಗೆ ಶಾಕ್!
ಚಳಿ ಮತ್ತು ಗಾಳಿಗೆ ಸಿಲಿಕಾನ್ ಸಿಟಿ ಜನ ಥರಗುಟ್ಟುತ್ತಿದ್ದಾರೆ. ಜನ ಮಾಂಸಹಾರಕ್ಕೆ ಹೆಚ್ಚು ಮೊರೆ ಹೋಗುತ್ತಿದ್ದಾರೆ. ಕ್ರಿಸ್‌ಮಸ್ ಹಾಗೂ ಹೊಸ ವರ್ಷದಿಂದಾಗಿ ಬೇಡಿಕೆ ಹೆಚ್ಚಿದ್ರಿಂದ ಮಟನ್ ರೇಟ್ ಸಾವಿರ ಗಡಿ ಮುಟ್ಟುತ್ತಿದೆ. ಚಳಿಗೆ ಕುರಿ ಬೆಳವಣಿಗೆ ಕುಸಿತ, ಪೂರೈಕೆ ವ್ಯತ್ಯಾಸ, ಸಾಗಾಣಿಕೆ ವೆಚ್ಚ ಹೆಚ್ಚಳದಿಂದ ಕೆಜಿ ಮಟನ್ ರೇಟ್ 900 ರೂಪಾಯಿಗೇರಿದೆ.

ಬೆಂಗಳೂರು, ಡಿಸೆಂಬರ್ 21: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರ ಚಳಿ (Cold) ಹಾಗೂ ಶೀತಗಾಳಿ ಶುರುವಾಗಿದೆ. ಚಳಿ ಮತ್ತು ಗಾಳಿಗೆ ಥರಗುಟ್ಟುತ್ತಿರುವ ಜನರು ಮಾಂಸಹಾರಕ್ಕೆ (Non-Veg) ಹೆಚ್ಚು ಮೊರೆ ಹೋಗುತ್ತಿದ್ದಾರೆ. ಕುರಿ, ಕೋಳಿ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಅದರಲ್ಲೂ ಕ್ರಿಸ್‌ಮಸ್ ಹಾಗೂ ಹೊಸ ವರ್ಷದಿಂದಾಗಿ ಬೇಡಿಕೆ ಹೆಚ್ಚಿದ್ರಿಂದ ರೇಟ್ ಸಾವಿರ ಗಡಿ ಮುಟ್ಟಿದ್ದು, ನಾನ್‌ವೆಜ್ ಪ್ರಿಯರಿಗಂತೂ ಬಿಗ್ ಶಾಕ್ ಉಂಟಾಗಿದೆ.
ರಾಜ್ಯದಲ್ಲಿ ಅತಿಯಾದ ಚಳಿ ಹಿನ್ನೆಲೆ ಮಟನ್, ಚಿಕನ್ ದರ ಏರಿಕೆಯಾಗಿದೆ. ಸಾವಿರ ಗಡಿಯತ್ತ ಮಟನ್ ದರ ಏರಿಕೆಯ ಸಾಧ್ಯತೆ ಇದ್ದು, ಕೋಳಿ ಬೆಲೆಯೂ ಏರಿಕೆ ಕಂಡಿರುವುದು ನಾನ್‌ವೆಜ್ ಪ್ರಿಯರಿಗೆ ಬೇಸರ ಉಂಡಾಗಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಯೋ ಚಳಿ; 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್!
ತೀವ್ರಚಳಿ, ಹವಮಾನದಲ್ಲಿ ಬದಲಾವಣೆ ಹಿನ್ನಲೆ ಕುರಿ, ಕೋಳಿ ಉತ್ಪದಾನೆ ಕುಸಿತವಾಗಿದೆ. ಜೊತೆಗೆ ಕ್ರಿಸ್ ಮಸ್ ಹಾಗೂ ನ್ಯೂಇಯರ್ ಹಿನ್ನಲೆ ಮಟನ್ ಹಾಗೂ ಚಿಕನ್, ಮೊಟ್ಟೆಗೆ ಬೇಡಿಕೆ ಹೆಚ್ಚಿದೆ. ದಾಖಲೆಯ ಪ್ರಮಾಣದಲ್ಲಿ ಚಿಕನ್ ಹಾಗೂ ಮಟನ್ ದರದಲ್ಲಿ ದರ ಏರಿಕೆಯಾಗಿದೆ.
ಮಟನ್ ರೇಟ್ 900 ರೂ
ಕಳೆದೊಂದು ತಿಂಗಳಿನಿಂದ ಚಿಕನ್ ಹಾಗೂ ಮಟನ್ ದರದಲ್ಲಿ ಗರಿಷ್ಠ ಏರಿಕೆ ಕಂಡಿದೆ. ಚಳಿಯಿಂದ ಕುರಿ ಬೆಳವಣಿಗೆ ಕುಸಿತವಾದ ಹಿನ್ನಲೆ ಕೆಜಿ ಮಟನ್ಗೆ 900 ರೂ. ಇದ್ದು, ಮುಂದಿನ ವಾರ ಒಂದು ಸಾವಿರ ರೂ. ಆಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ 230 ರಿಂದ 240 ರೂ. ರವರಗೆ ಇರುತ್ತಿದ್ದ ಚಿಕನ್ ದರ ಇದೀಗ ಕೆಜಿಗೆ 300 ರಿಂದ 310 ರೂ. ಗೆ ಏರಿಕೆ ಕಂಡಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ: ಮಕ್ಕಳು, ಗರ್ಭಿಣಿಯರಿಗೆ ಅಪಾಯ; ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ
ಅತಿಯಾದ ಹವಾಮಾನ ಹಾಗೂ ಬೇಡಿಕೆ ಹೆಚ್ಚಾದ ಹಿನ್ನಲೆ ದರ ಏರಿಕೆಯಾಗಿದೆ. ಮೊಟ್ಟೆಯಲ್ಲಿ ಕ್ಯಾನ್ಸರ್ ಅಂಶದ ಚರ್ಚೆ ನಡುವೆ ಹೊಸ ವರ್ಷ ಹಾಗೂ ಕ್ರಿಸ್ ಮಸ್ ಹಬ್ಬದ ಬೇಡಿಕೆ ಮಧ್ಯೆ ಮಾಂಸ ಪ್ರಿಯರಿಗೆ ಇದು ನಿಜಕ್ಕೂ ಆಘಾತ ಉಂಟುಮಾಡಿದೆ.
ಒಟ್ಟಿನಲ್ಲಿ ಅತಿಯಾದ ಚಳಿ ಹಾಗೂ ಹೆಚ್ಚಾದ ಬೇಡಿಕೆಯಿಂದ ಬೆಲೆ ಏರಿಕೆ ನಾನ್ ವೆಜ್ ಪ್ರಿಯರಿಗೆ ಟೆನ್ಷನ್ ಶುರುವಾಗಿದ್ದು, ಬೆಲೆ ಏರಿಕೆಗೆ ಕಂಗೆಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



