ಇನ್ಸ್ಪೆಕ್ಟರ್, ಎಸಿಪಿ ಜೀಪಿಗೂ ಇನ್ಮುಂದೆ ಡ್ಯಾಶ್ ಕ್ಯಾಮೆರಾ!ಬೆಂಗಳೂರು ಕಮಿಷನರ್ ಮಹತ್ವದ ನಿರ್ಧಾರ
ಹೊಯ್ಸಳ ವಾಹನಕ್ಕೆ ಡ್ಯಾಶ್ ಕ್ಯಾಮೆರಾ ಅಳವಡಿಕೆ ಸಕ್ಸಸ್ ಹಿನ್ನೆಲೆ ಇನ್ಸ್ಪೆಕ್ಟರ್ ಮತ್ತು ಎಸಿಪಿ ಜೀಪ್ಗೂ ಇನ್ಮುಂದೆ ಡ್ಯಾಶ್ ಕ್ಯಾಮೆರಾ ಅಳವಡಿಸಲು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್(B Dayananda) ಅವರು ಮಹತ್ವದ ನಿರ್ಧಾರ ಕೈಗೊಂಡಿರುವ ಕುರಿತು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು, ಏ.05: ಹೊಯ್ಸಳ ವಾಹನಕ್ಕೆ ಡ್ಯಾಶ್ ಕ್ಯಾಮೆರಾ ಅಳವಡಿಕೆ ಸಕ್ಸಸ್ ಹಿನ್ನೆಲೆ ಇನ್ಸ್ಪೆಕ್ಟರ್ ಮತ್ತು ಎಸಿಪಿ ಜೀಪ್ಗೂ ಇನ್ಮುಂದೆ ಡ್ಯಾಶ್ ಕ್ಯಾಮೆರಾ ಅಳವಡಿಸಲು ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ್(B Dayananda) ಅವರು ಮಹತ್ವದ ನಿರ್ಧಾರ ಕೈಗೊಂಡಿರುವ ಕುರಿತು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಹೌದು, ಪಾರದರ್ಶಕ ಆಡಳಿತ ವ್ಯವಸ್ಥೆ ಜಾರಿಗೊಳಿಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಇನ್ನು ಹೊಯ್ಸಳದಲ್ಲಿ ಘಟನೆಗಳ ಮಾಹಿತಿ, ಸ್ಪಾಟ್ ರೀಚ್ ಆದ ಸಮಯ,ಎಲ್ಲದರ ಚಿತ್ರೀಕರಣ ಆಗಿತ್ತು. ಈ ಮೂಲಕ ಹೊಯ್ಸಳದ ಸಂಪೂರ್ಣ ಸಂಪರ್ಕ ಕಮಾಂಡ್ ಸೆಂಟರ್ನಲ್ಲಿದ್ದು, ಪೊಲೀಸ್ ಸಿಬ್ಬಂದಿಯ ಕರ್ತವ್ಯ ಲೋಪದ ಬಗ್ಗೆಯೂ ಪರಿಶೀಲನೆ ನಡೆಸಲಾಗಿತ್ತು. ಇದರ ಮುಂದುವರೆದ ಭಾಗವಾಗಿ ಇನ್ಸ್ಪೆಕ್ಟರ್, ಎಸಿಪಿ ಜೀಪ್ಗೂ ಕ್ಯಾಮೆರಾ ಅಳವಡಿಕೆ ಮಾಡುವುದಾಗಿ ಕಮಿಷನರ್ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:ಅನಧಿಕೃತ ಬೆಟ್ಟಿಂಗ್ ಹಿನ್ನೆಲೆ ರೇಸ್ ಕೋರ್ಸ್ ಮೇಲೆ ಸಿಸಿಬಿ ದಾಳಿ: ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ
ಆನೇಕಲ್ ಬಳಿ ಹಿಟ್ ಆ್ಯಂಡ್ ರನ್ಗೆ ಸವಾರ ಬಲಿ
ಬೆಂಗಳೂರು: ಆನೇಕಲ್ ಪಟ್ಟಣದ ಮಿರ್ಜಾರಸ್ತೆಯ ಪೊಲೀಸ್ ಕ್ವಾಟ್ರಸ್ ಮುಂಭಾಗದಲ್ಲಿ ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರ ಬಲಿಯಾದ ಧಾರುಣ ಘಟನೆ ನಡೆದಿದೆ. ಡಿಕ್ಕಿ ಹೊಡೆದು ವಾಹನ ಸಮೇತವಾಗಿ ಚಾಲಕ ಪರಾರಿಯಾಗಿದ್ದಾನೆ. ಇನ್ನು ಪೊಲೀಸರು ಮೃತ ಬೈಕ್ ಸವಾರನ ಗುರುತು ಪತ್ತೆ ಹಚ್ಚುತ್ತಿದ್ದಾರೆ. ವಾಹನ ಡಿಕ್ಕಿ ರಭಸಕ್ಕೆ ಸವಾರನ ತಲೆ ಭಾಗ ಸಂಪೂರ್ಣ ಛಿದ್ರವಾಗಿದೆ. ಈ ಘಟನೆ ಮೂಲಕ ಆನೇಕಲ್ನ ಮಿರ್ಜಾ ರಸ್ತೆಯಲ್ಲಿ ಒಂದೇ ವಾರದಲ್ಲಿ 2 ಅಪಘಾತ ಸಂಭವಿಸಿದಂತಾಗಿದೆ. 3-4 ದಿನಗಳ ಹಿಂದೆಯಷ್ಟೇ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದರು. ಅಪಘಾತ ಸ್ಥಳಕ್ಕೆ ಆನೇಕಲ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:55 am, Fri, 5 April 24