AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡ್ರಗ್ಸ್​​ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?: 55.88 ಕೋಟಿ ರೂ. ಮೌಲ್ಯದ MDMA ಸೀಜ್​​; ನಾಲ್ವರು ಅರೆಸ್ಟ್​​

ಮಹಾರಾಷ್ಟ್ರದ ANTF ಪೊಲೀಸರು ಬೆಂಗಳೂರಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ, 55.88 ಕೋಟಿ ರೂ. ಮೌಲ್ಯದ MDMA ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಆರ್.ಜೆ. ಈವೆಂಟ್' ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದ ನಾಲ್ವರನ್ನು ಬಂಧಿಸಲಾಗಿದೆ. ರಾಜಸ್ಥಾನ ಮೂಲದ ಕಿಂಗ್‌ಪಿನ್‌ಗಳಿರುವ ಈ ಜಾಲ, ದೇಶದ ಹಲವು ರಾಜ್ಯಗಳಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದೆ ಎಂಬ ಶಂಕೆ ವ್ಯಕ್ತವಾಗಿದೆ.

ಡ್ರಗ್ಸ್​​ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?: 55.88 ಕೋಟಿ ರೂ. ಮೌಲ್ಯದ MDMA ಸೀಜ್​​; ನಾಲ್ವರು ಅರೆಸ್ಟ್​​
ಡ್ರಗ್ಸ್​​ ಸೀಜ್​​
ಪ್ರಸನ್ನ ಹೆಗಡೆ
|

Updated on:Dec 28, 2025 | 11:10 AM

Share

ಬೆಂಗಳೂರು, ಡಿಸೆಂಬರ್​​ 28: ಮಹಾರಾಷ್ಟ್ರದ ANTF ಕೊಂಕಣ ವಿಭಾಗದ ಪೊಲೀಸರು ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ಬೇಟೆ ನಡೆಸಿದ್ದಾರೆ. ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್​ ಸೀಜ್ ಮಾಡಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. RJ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿರೋದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ.

ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿತ್ತು. ಈ ವೇಳೆ ಅರೆಸ್ಟ್​​ ಆಗಿದ್ದ ಅಬ್ದುಲ್ಲಾ ಖಾದರ್ ಶೇಕ್ ಎಂಬಾತ ವಿಚಾರಣೆ ವೇಳೆ ಹಲವು ವಿಷಯ ಬಾಯ್ಬಿಟ್ಟಿದ್ದ. ಇದರ ಅನ್ವಯ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಲಾಗಿತ್ತು. ಪಾಟೀಲ್ ಮಾಹಿತಿ ಮೇರೆಗೆ ಬೆಂಗಳೂರಿನ ಮೂರು ಕಡೆ ದಾಳಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದಾರೆ. ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಹೊಸ ವರ್ಷ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ; 2 ಪ್ರತ್ಯೇಕ ಪ್ರಕರಣಗಳಲ್ಲಿ 28 ಕೋಟಿ ರೂ.ಮೌಲ್ಯದ ಗಾಂಜಾ ಸೀಜ್

ದಾಳಿ ವೇಳೆ 4.1 ಕೆಜಿ ಘನ MDMA ಮತ್ತು 17 ಕೆಜಿ ದ್ರವ MDMA ಸೇರಿ 55.88 ಕೋಟಿ ರೂ. ಮೌಲ್ಯದ ಒಟ್ಟು 21.4 ಕೆಜಿ‌ ಡ್ರಗ್ಸ್​​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರ ಬಂಧಿಸಲಾಗಿದೆ. ಈ ಫ್ಯಾಕ್ಟರಿಗಳಿಂದ ದೇಶದ ಅನೇಕ ರಾಜ್ಯಗಳಿಗೆ ಡ್ರಗ್ಸ್ ಸಪ್ಲೈ ಶಂಕೆ ವ್ಯಕ್ತವಾಗಿದ್ದು, ಮಹಾರಾಷ್ಟ್ರ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಬೆಂಗಳೂರಿನ ಎಲ್ಲೆಲ್ಲಿ ಡ್ರಗ್ಸ್​​ ಫ್ಯಾಕ್ಟರಿ?

  • ಸ್ಥಳ 1: ಬಾಗಲೂರು ಪೊಲೀಸ್ ಠಾಣೆ ಮಿತಿಯೊಳಗಿನ ಸ್ಪಂದನ ಲೇಔಟ್ ಕಾಲೋನಿ
  • ಸ್ಥಳ 2: ಕೊತ್ತನೂರು ಪೊಲೀಸ್ ಠಾಣೆ ಮಿತಿಯೊಳಗಿನ ಎನ್.ಜಿ. ಗೋಲ್ಲಹಳ್ಳಿ ಪ್ರದೇಶದಲ್ಲಿ ಆರ್.ಜೆ. ಈವೆಂಟ್ ಎಂಬ ಹೆಸರಿನ ಕಾರ್ಖಾನೆ
  • ಸ್ಥಳ 3: ಅವಲಹಳ್ಳಿ ಪೊಲೀಸ್ ಠಾಣೆ ಮಿತಿಯೊಳಗಿನ ಯರಪ್ಪನಹಳ್ಳಿ ಮನೆ

ರಾಜಸ್ಥಾನ ಮೂಲದ ಕಿಂಗ್​​ಪಿನ್​​ಗಳು ಬೆಂಗಳೂರಲ್ಲಿ ಡ್ರಗ್ಸ್​​ ಫ್ಯಾಕ್ಟರಿ ನಡೆಸುತ್ತಿದ್ದು, ಯೋಗಿರಾಜ್ ಕುಮಾರ್ ಮತ್ತು ನಯನ್ ಪವರ್ ಇದರ ಪ್ರಮುಖ ರೂವಾರಿಗಳಾಗಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ಹಲವೆಡೆ ಇವರು ಡ್ರಗ್ಸ್​​ ಫ್ಯಾಕ್ಟರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳಿಗೂ ಮಹಾರಾಷ್ಟ್ರ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ವರದಿ: ಪ್ರದೀಪ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 9:33 am, Sun, 28 December 25

ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳು, ಲೋಕೋ ಪೈಲಟ್ ಜೊತೆ ಮೋದಿ ಸಂವಾದ
ವಂದೇ ಭಾರತ್ ರೈಲಿನಲ್ಲಿ ವಿದ್ಯಾರ್ಥಿಗಳು, ಲೋಕೋ ಪೈಲಟ್ ಜೊತೆ ಮೋದಿ ಸಂವಾದ
ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ
ಎಣ್ಣೆ ಕೊಡಿಸಿಲ್ಲವೆಂದು ಮಚ್ಚು ಹಿಡಿದು ನಡುರಸ್ತೆಯಲ್ಲೇ ವ್ಯಕ್ತಿ ಪುಂಡಾಟ
ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಮೋದಿ ಚಾಲನೆ
ಮಾಲ್ಡಾದಲ್ಲಿ ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಮೋದಿ ಚಾಲನೆ
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!
ನಿಧಿ ಸಿಕ್ಕ ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಪುರಾತನ ವಸ್ತು ಪತ್ತೆ!
ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು
ಬೆಂಗಳೂರಿನಲ್ಲಿ ಮುಗಿಯುತ್ತಿಲ್ಲ ರಸ್ತೆ ಗುಂಡಿ ಗೋಳು
ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಶ್ರೀ ಮಹಾಕಾಳೇಶ್ವರನಿಗೆ ವಿರಾಟ್ ಕೊಹ್ಲಿ ವಿಶೇಷ ಪೂಜೆ
ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!
ಗದಗ: ಆಂಜನೇಯ ದೇಗುಲದಲ್ಲಿ 3 ದಿನಗಳಿಂದ ನಿರಂತರ ನಿಗೂಢ ಗೆಜ್ಜೆ ಶಬ್ದ!
ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!
ಬೆಳ್ಳಂಬೆಳಗ್ಗೆ ಗುದ್ದಲಿ, ಪೊರಕೆ ಹಿಡಿದು ಬೀದಿಗಿಳಿದ ಟೆಕ್ಕಿಗಳು!
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ವಿಡಿಯೋ ನೋಡಿ
ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಹೇಗಿದೆ ಗೊತ್ತಾ? ವಿಡಿಯೋ ನೋಡಿ
ಪೌರಾಯುಕ್ತೆಗೆ ಅವಾಚ್ಯ ಶಬ್ದ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್
ಪೌರಾಯುಕ್ತೆಗೆ ಅವಾಚ್ಯ ಶಬ್ದ ನಿಂದನೆ ಪ್ರಕರಣ; ಕ್ಷಮೆ ಕೇಳಿದ ನಟ ಝೈದ್ ಖಾನ್