Karnataka Assembly Elections 2023: ಕರ್ನಾಟಕ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದಂತೆ ಚುನಾವಣೆ ಕಾವು ಹೆಚ್ಚಾಗಿದೆ. ಹಾಸನದಲ್ಲಿ ಟಿಕೆಟ್ಗಾಗಿ ಜೆಡಿಎಸ್ ಫ್ಯಾಮಿಲಿ ವಾರ್ ಶುರುವಾಗಿದೆ. ಮತ್ತೊಂದೆಡೆ ಇಂದು ಬೆಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು ಏರ್ ಶೋ ಉದ್ಘಾಟಿಸಿದ್ದಾರೆ. ಪ್ರಧಾನಿ ಭೇಟಿಯ ಲಾಭ ಪಡೆಯಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಇದರೊಂದಿಗೆ ಕೋಲಾರದತ್ತ ಗಮನ ಹರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ ಇಂದು ಪ್ರವಾಸ ಕೈಗೊಂಡಿದ್ದಾರೆ. ಹಾಗೂ ವೇಮಗಲ್ ನಲ್ಲಿ ಮಹಿಳಾ ಸಮಾವೇಶ ಹಮ್ಮಿಕೊಂಡಿದ್ದಾರೆ. ಈ ಮೂಲಕ ಮಹಿಳೆಯರ ಮತ ಸೆಳೆಯಲು ಮುಂದಾಗಿದ್ದಾರೆ. ರಾಜಕೀಯ ವಲಯದಲ್ಲಾಗುತ್ತಿರುವ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಪಡೆಯಿರಿ.
ಬೆಂಗಳೂರು: ಕರ್ನಾಟಕದ ಹೆಮ್ಮೆಯಾದ HAL ಜತೆ ರಫೇಲ್ ಒಪ್ಪಂದ ಬದಲಿಸಿ. ಗೆಳೆಯರ ಅನುಕೂಲಕ್ಕೆ ಧಾರೆ ಎರೆದುಕೊಟ್ಟಿದ್ದ ಮೋದಿಯವರೇ, ತಾವು ಹೆಚ್ಎಎಲ್ಗೆ ಎಸಗಿದ ದ್ರೋಹವನ್ನು ಕನ್ನಡಿಗರು ಮರೆತಿಲ್ಲ. ಇಂದು ಅದ್ಯಾವ ನೈತಿಕತೆಯಲ್ಲಿ ಏರೋಶೋ ಉದ್ಘಾಟನೆ ಮಾಡಿದ್ರಿ? ಕರ್ನಾಟಕ, ಕನ್ನಡಿಗರಿಗೆ ಮೋದಿ ಕೊಡುಗೆ-ದ್ರೋಹ, ಅನ್ಯಾಯ ಮಾತ್ರ ಎಂದು ಟ್ವೀಟ್ ಮೂಲಕ ರಾಜ್ಯ ಕಾಂಗ್ರೆಸ್ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಬೆಳಗಾವಿ: ಚನ್ನಪಟ್ಟಣದಲ್ಲಿ ನಟಿ ರಮ್ಯಾ ಸೇರಿದಂತೆ ಯಾರು ಬೇಕಾದ್ರೂ ಸ್ಪರ್ಧಿಸಲಿ. ಇದು ಆಯಾಯ ಪಕ್ಷಕ್ಕೆ ಬಿಟ್ಟ ವಿಚಾರ, ಈ ಬಗ್ಗೆ ತಲೆಕೆಡಿಸಿಕೊಳ್ಳಲ್ಲ ಎಂದು ಮಾಜಿ ಸಿಎಂ ಹೆಚ್. ಡಿ ಕುಮಾರಸ್ವಾಮಿ ಹೇಳಿದರು. ಈಗಲೂ ರಾಮನಗರ, ಚನ್ನಪಟ್ಟಣದಲ್ಲಿ ಜೆಡಿಎಸ್ ಬಗ್ಗೆ ವಿಶ್ವಾಸ ಇದೆ. ಈ ಸಲ ನನ್ನ ವಿರುದ್ಧ ಅಭ್ಯರ್ಥಿ ಯಾರು ಅನ್ನುವ ಪ್ರಶ್ನೆ ಇಲ್ಲ. ಚನ್ನಪಟ್ಟಣದಲ್ಲಿ ಮನೆ ಮಗನಿಗಿಂತ ಹೆಚ್ಚಾಗಿ ಪ್ರಿತಿಸುತ್ತಾರೆ ಎಂದರು.
ಬೆಳಗಾವಿ: ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧಿಸಲ್ಲ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರಿಬ್ಬರು ಆತಂತರಿಕವಾಗಿ ಒಬ್ಬರಿಗೊಬ್ಬರು ವಿಶ್ವಾಸದಲ್ಲಿ ಇದ್ದಾರೆ. 2008ರಲ್ಲಿ ಉಪಚುನಾವಣೆಯಲ್ಲಿ ಆಪರೇಷನ್ ಕಮಲ ಚುನಾವಣೆಯಲ್ಲಿ ಸಿದ್ದರಾಮಯ್ಯ ಸುಪಾರಿ ತಗೊಂಡರು. ಸುಪಾರಿಗೆ ಎಷ್ಟು ತಗೊಂಡಿದ್ದಾರೆ ಎಂದು ನಾನು ಸಾವಿರ ಸಲ ಕೇಳಿದ್ದೇನೆ, ಈವರೆಗೂ ಉತ್ತರ ಸಿಕ್ಕಿಲ್ಲ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಕೋಲಾರ: ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಲು ಕೋಲಾರ ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷರಿಗೆ ಬಿಜೆಪಿ ಟಿಕೆಟ್ ಆಫರ್ ನೀಡಲಾಗಿದೆ ಎಂದು ಶಾಸಕ ಶ್ರೀನಿವಾಸಗೌಡ ಹೊಸ ಬಾಂಬ್ ಸಿಡಿಸಿದ್ದಾರೆ. ಆರೋಗ್ಯ ಸಚಿವ ಡಾ. ಕೆ. ಸುಧಾಕರ್ರಿಂದಆಪರ್ ನೀಡಲಾಗಿದೆ ಎನ್ನಲಾಗುತ್ತಿದೆ. ಜ. 25ರಂದು ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣಾರೆಡ್ಡಿ ಮನೆಗೆ ಸುಧಾಕರ್ ಭೇಟಿ ನೀಡಿದ್ದು, ನಾವೇ ದುಡ್ಡು ಕೊಡ್ತೀವಿ ಎಲೆಕ್ಷನ್ಗೆ ನಿಂತ್ಕೊಳ್ಳಿ ಎಂದಿದ್ರಂತೆ ಎಂದು ಹೇಳಿದರು.
ಕೋಲಾರ: ಚಾಮುಂಡೇಶ್ವರಿ ಹಾಗೂ ಕೋಲಾರಕ್ಕೆ ಕಂಪೇರ್ ಮಾಡೋದು ಬೇಡ. ಅಲ್ಲಿ ನಮಗೆ ಕೆಲವು ಪ್ರತಿಕೂಲ ವಾತಾವಣ ಇರಲಿಲ್ಲ. ಕೋಲಾರದಲ್ಲೂ ಹಾಗೆ ಕಂಪೇರ್ ಮಾಡೋಕಾಗೋಲ್ಲ. ಅಲ್ಲಿ ಬಿಜೆಪಿ ಅವರು ವೀಕ್ ಕ್ಯಾಂಡಿಡೇಟ್ ಹಾಕಿದ್ದರು, ಜೆಡಿಎಸ್ಗೆ ಎಲ್ಲಾ ಮತಗಳು ಟ್ರಾನ್ಸ್ ಫರ್ ಆಯಿತು. ಜೆಡಿಎಸ್ ಹಾಗೂ ಬಿಜೆಪಿಯ ಒಳ ಒಪ್ಪಂದಿಂದ ಸೋಲಬೇಕಾಯಿತು.
ಇಲ್ಲಿ ಬಿಜೆಪಿ ಜೆಡಿಎಸ್ ಒಪ್ಪಂದ ಮಾಡಿಕೊಂಡರೂ ಏನೂ ಆಗೋಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ಕೋಲಾರ: ಕ್ಷೇತ್ರದಲ್ಲಿ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ, ಹೀಗಾಗಿ ಗೆದ್ದೆ ಗೆಲ್ತಿವಿ. ಅಹಿಂದಾ ರಿಪೋರ್ಟ್ ಯಾರೂ ಸಹ ಕೊಟ್ಟಿಲ್ಲ. ನನಗೆ ಎಲ್ಲರೂ ಹೇಳಿದ್ದಾರೆ, ನಿಮ್ಮ ಪರವಾಗಿ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಕೋಲಾರದಲ್ಲಿ ಅಭ್ಯರ್ಥಿ ಆದ ನಂತರ ಕೋಲಾರ ಭಾಗದಲ್ಲಿ ಕೆಲಸ ಮಾಡುವಂತಹವರು ಯಾರು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ.
ಬೆಂಗಳೂರು: ದೇಶದಲ್ಲಿ ಈಗಾಗಲೇ ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಲಾಗಿದೆ. ಪಿಎಫ್‌ಐ ರೀತಿ ಎಸ್ಡಿಪಿಐ ಸಂಘಟನೆ ಕೂಡ ಬ್ಯಾನ್ ಮಾಡಬೇಕು. ಈ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸುತ್ತೇನೆ ಎಂದು ನಗರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. SDPI ಸಂಘಟನೆಯವರು ಉಗ್ರರನ್ನು ಕರೆತಂದು ಟಿಕೆಟ್ ಕೊಡ್ತಾರೆ. ಆಗ ಅವರಿಗೂ ಭದ್ರತೆ ಕೊಡಬೇಕಾಗುತ್ತೆ. ಬಳಿಕ ಅವರನ್ನು ಬಿಡುಗಡೆ ಮಾಡುವಂತೆ ಕೋರ್ಟ್ಗೆ ಹೋಗ್ತಾರೆ. ಪ್ರವೀಣ್ ಹತ್ಯೆಯಲ್ಲಿ ಭಾಗಿಯಾದವನು ಚುನಾವಣೆಗೆ ಸ್ಪರ್ಧಿಸುತ್ತಿದ್ದಾನೆ. SDPI ಸಂಘಟನೆ ದೇಶವಿರೋಧಿ ಚಟುವಟಿಕೆಯ ಅಂಗ ಎಂದು ವಾಗ್ದಾಳಿ ಮಾಡಿದರು.
ಮಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ ಇನ್ನೇನು ಕೆಲ ತಿಂಗಳು ಬಾಕಿ ಇದೆ. ಪ್ರತಿಯೊಂದು ಪಕ್ಷಗಳು ಸಹ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಇತ್ತ ಎಸ್ಡಿಪಿಐ (SDPI) ಕೂಡ ಚುನಾವಣೆಗೆ ತಯಾರಿ ನಡೆಸಿದ್ದು, ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆ (Shafi Bellare) ಗೆ ಎಸ್ಡಿಪಿಐ ಮುಂದಿನ ವಿಧಾನಸಭಾ ಚುನಾವಣೆಗೆ ಪುತ್ತೂರಿನಿಂದ ಟಿಕೆಟ್ ಘೋಷಿಸಿದೆ. ಎಸ್ಡಿಪಿಐನ ಈ ನಡೆ ವಿವಾದ ಕೂಡ ಉಂಟುಮಾಡಿದೆ. ಸಾಕ್ಷ್ಯಾಧಾರ ಮುಂದಿಟ್ಟು ಎನ್ಐಎ ಶಾಫಿ ಬೆಳ್ಳಾರೆಯನ್ನು ಬಂಧಿಸಿದೆ. ಸದ್ಯ ಕೇಂದ್ರ ತನಿಖಾ ಸಂಸ್ಥೆಗಳ ವಶದಲ್ಲಿದ್ದು, ಜೈಲಿನಿಂದಲೇ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.
ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಶಾಫಿ ಬೆಳ್ಳಾರೆಗೆ ಟಿಕೆಟ್ ಘೋಷಿಸಿದ ಎಸ್ಡಿಪಿಐ
ಕೋಲಾರದಲ್ಲಿ ಮಹಿಳಾ ಸಮಾವೇಶದಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡ ಭಾಷಣ ಮಾಡಿದ್ದು ಸಿದ್ದರಾಮಯ್ಯರನ್ನು ಹೊಗಳಿ ಕೊಂಡಾಡಿದ್ದಾರೆ. ಕೋಲಾರದಲ್ಲಿ ಬಾಗಿಲು ಹಾಕಿದ್ದಂತ ಡಿಸಿಸಿ ಬ್ಯಾಂಕ್ ಪುನಶ್ಚೇತನನಗೊಳಿಸಿದ್ದು ಸಿದ್ದರಾಮಯ್ಯ, ಸಿದ್ದರಾಮಯ್ಯ ಸಿಎಂ ಆಗಿದ್ದ ಸಂದರ್ಭದಲ್ಲಿ ವಿಶೇಷ ಅನುದಾನ ಕೊಟ್ಟು ಡಿಸಿಸಿ ಬ್ಯಾಂಕ್ ಗೆ ಮರುಜೀವ ಕೊಟ್ಟಿದ್ದಾರೆ. ಅವರು ರೈತರಿಗೆ ಹಾಗೂ ಮಹಿಳೆಯರಿಗೆ ಬಡ್ಡಿ ರಹಿತ ಸಾಲ ನೀಡಿದ್ದು ಗ್ರಾಮೀಣ ಭಾಗದಲ್ಲಿ ಇವತ್ತು ಕೃಷಿ, ಹೈನುಗಾರಿಕೆ, ರೇಷ್ಮೆ ಇನ್ನೂ ಜೀವಂತವಾಗಿದೆ ಅಂದರೆ ಅದಕ್ಕೆ ಕಾರಣ ಮಹಿಳೆಯರು, ಅದಕ್ಕಾಗಿ ಮಹಿಳೆಯರಿಗೆ ಸಾಲ ನೀಡುವ ಆಲೋಚನೆ ಮಾಡಿದ್ದು ಸಿದ್ದರಾಮಯ್ಯ ಎಂದಿದ್ದಾರೆ.
ಚುನಾವಣೆಗೆ ಎಸ್ಡಿಪಿಐ ವಿವಾದಾತ್ಮಕ ನಡೆ. ಎಸ್ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಘೋಷಿಸಿದೆ. ಪುತ್ತೂರು ವಿಧಾನ ಸಭಾ ಕ್ಷೇತ್ರ ದಿಂದ ಶಾಫಿ ಬೆಳ್ಳಾರೆ ಅವರನ್ನು ಕಣಕ್ಕಿಳಿಸಿದೆ. ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಖಾನ್ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಶಾಫಿ ಬೆಳ್ಳಾರೆ ಅಭ್ಯಾರ್ಥಿಯಾಗಿ ಘೋಷಣೆ ಮಾಡಿದ್ದಾರೆ. ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ NIA ಬಂಧನದಲ್ಲಿರುವ ಶಾಫಿ ಬೆಳ್ಳಾರೆಯನ್ನು ಕಣಕ್ಕಿಳಿಸಿದೆ.
ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ಹೈವೇಗೆ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೆದ್ದಾರಿಗೆ ವ್ಯಕ್ತಿ ಹೆಸರಿಡುವ ಪದ್ಧತಿ ಇಲ್ಲ ಎಂದು ಮೈಸೂರು-ಕೊಡಗು ಕ್ಷೇತ್ರದ BJP ಸಂಸದ ಪ್ರತಾಪ್ ಸಿಂಹ ಹೇಳಿದ್ರು. ಹೆಸರಿಡಿ ಎಂದು ಹೇಳೋರು ಇದನ್ನು ತಿಳಿದುಕೊಂಡು ಮಾತಾಡಲಿ. ಎಲ್ಲ ಜಿಲ್ಲೆಗಳಲ್ಲೂ ಕಾವೇರಿ ತಾಯಿಯನ್ನು ಭಕ್ತಿಯಿಂದ ನೋಡುತ್ತಾರೆ. ಕಾವೇರಿ ನದಿ ಬಗ್ಗೆ ಈ ಭಾಗದ ಜನರಲ್ಲಿ ಪೂಜ್ಯನೀಯ ಭಾವನೆ ಇದೆ. ರೈಲಿಗೂ ಒಡೆಯರ್ ಹೆಸರು ಇಟ್ಟಿದ್ದೇವೆ. ಈಗ ರಸ್ತೆಯ ನಾಮಕರಣ ವಿಚಾರದಲ್ಲಿ ಅನಗತ್ಯ ವಿವಾದ ಬೇಡ ಎಂದರು.
ಶಾಸಕ ರಂಗನಾಥ್ ನೀಡಿದ್ದ ಕುಕ್ಕರ್, ಡಿನ್ನರ್ ಸೆಟ್ ರಸ್ತೆಗೆ ಎಸೆದು ಪುಡಿಪುಡಿ ಮಾಡಲಾಗಿದೆ. ತುಮಕೂರು ಜಿಲ್ಲೆ ಕುಣಿಗಲ್ ಕ್ಷೇತ್ರದ ಶಾಸಕ ಡಾ.ರಂಗನಾಥ್ ಕಳೆದ 2 ತಿಂಗಳಿಂದ ಬಾಕ್ಸ್ ಮೇಲೆ ಶಾಸಕ ರಂಗನಾಥ್ ಫೋಟೋ ಮುದ್ರಿಸಿ ತಮ್ಮ ಕ್ಷೇತ್ರದಲ್ಲಿ ಕುಕ್ಕರ್, ಡಿನ್ನರ್ ಸೆಟ್ ಹಂಚುತ್ತಿದ್ದಾರೆ. ಆದ್ರೆ ಶಾಸಕರು ನೀಡಿದ್ದ ಕುಕ್ಕರ್, ಡಿನ್ನರ್ ಸೆಟ್ ರಸ್ತೆಗೆ ಎಸೆದು ಕಲ್ಲು ಹಾಕಿ ಪುಡಿ ಪುಡಿ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ.
ಬ್ರಾಹ್ಮಣ ಸಮಾಜದ ಬಗ್ಗೆ ಹೆಚ್ಡಿಕೆ ಆಕ್ಷೇಪಾರ್ಹ ಪದ ಬಳಕೆ ವಿಚಾರಕ್ಕೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುತ್ತಿದೆ. ವಿಶ್ವ ವಿಪ್ರ ಸೇವಾ ಟ್ರಸ್ಟ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬ್ರಾಹ್ಮಣ ಸಮಾಜಕ್ಕೆ ಹೆಚ್.ಡಿ.ಕುಮಾರಸ್ವಾಮಿ ಅವಮಾನ ಮಾಡಿದ್ದಾರೆ. ಪ್ರಹ್ಲಾದ್ ಜೋಶಿ ಪೇಶ್ವೆ ವಂಶಸ್ಥರು ಅಂತಾ ಹೇಳಿರುವುದು ನೋವಾಗಿದೆ. ಕುಮಾರಸ್ವಾಮಿ ಕ್ಷಮೆ ಕೇಳದಿದ್ದರೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಬಿಜೆಪಿಯ ಮಾಜಿ ಶಾಸಕನಿಗೆ ಹೆಚ್ಡಿ ಕುಮಾರಸ್ವಾಮಿ ಗಾಳ ಹಾಕಿದ್ದಾರೆ. ಹುಬ್ಬಳ್ಳಿ ಧಾರವಾಡ ಪೂರ್ವ ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲರವಿಗೆ ಕುಮಾರಸ್ವಾಮಿ ಗಾಳ ಹಾಕಿದ್ದಾರೆ. ಹುಬ್ಬಳ್ಳಿಯಲ್ಲಿ ಹಾಲರವಿ ಕುಮಾರಸ್ವಾಮಿಯನ್ನು ಭೇಟಿ ಮಾಡಿದ್ದಾರೆ. ಖಾಸಗಿ ಹೋಟೆಲ್ ನಲ್ಲಿ ಕುಮಾರಸ್ವಾಮಿ ಜೊತೆ ಚರ್ಚೆ ನಡೆಸಿದ್ದಾರೆ.
ಸಿದ್ದರಾಮಯ್ಯ ಅಲ್ಲ ಸುಳ್ಳಿನ ರಾಮಯ್ಯ ಎಂದು ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ದರಾಮಯ್ಯ ಕಾರಣ. ಮೈತ್ರಿ ಸರ್ಕಾರ ಬಂದ 2 ತಿಂಗಳಲ್ಲೇ ಸರ್ಕಾರ ಪತನ ಬಗ್ಗೆ ಹೇಳಿದ್ರು. ಬಿಜೆಪಿಯ ಅಕ್ರಮ ಹೊರ ತಂದಿದ್ದು ನಾನು, ಸಿದ್ದರಾಮಯ್ಯ ಅಲ್ಲ. ನಿಮ್ಮ ಯೋಗ್ಯತೆಗೆ ಸರಿಯಾದ ರೀತಿಯಲ್ಲೇ ಮಾತನಾಡಿ. ಸಿದ್ದರಾಮಯ್ಯ ಕುರ್ಚಿಗಾಗಿ ಕುತಂತ್ರದ ರಾಜಕಾರಣ ಮಾಡ್ತಿದ್ದಾರೆ. ಬಿಜೆಪಿಯವರೂ ನನಗೆ ಸಿಎಂ ಸ್ಥಾನ ಕೊಡುವುದಕ್ಕೆ ಸಿದ್ಧರಿದ್ದರು. ಇನ್ನೂ 10 ವರ್ಷವಾದ್ರೂ ಇವರಿಗೆ ಬಿಜೆಪಿ ತೆಗೆಯಲು ಆಗಲ್ಲ. ಜೆಡಿಎಸ್ನಿಂದ ಮಾತ್ರ ಬಿಜೆಪಿ ತೆಗೆಯೋಕೆ ಸಾಧ್ಯ ಎಂದು ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ವಿರುದ್ಧ H.D.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಇಡೀ ಬ್ರಾಹ್ಮಣ ಸಮುದಾಯ ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ನನ್ನ ಪ್ರಶ್ನೆಗೆ ಯಾರೂ ಉತ್ತರ ಕೊಡುತ್ತಿಲ್ಲ. ಪೇಶ್ವೆ ಮೂಲದ ಬಗ್ಗೆ ಪ್ರಶ್ನೆ ಮಾಡಿದ್ದು, ಅದಕ್ಕೆ ಉತ್ತರ ಕೊಡಲಿ. ಬ್ರಾಹ್ಮಣರು ಸಿಎಂ ಆಗಬಾರದೆಂದು ನಾನು ಹೇಳಿಲ್ಲ. ಪೇಶ್ವೆ ಡಿಎನ್ಎ ಸಿಎಂ ಆಗಬಾರದು ಎಂದು ನಾನು ಹೇಳಿದ್ದೇನೆ. ಬ್ರಾಹ್ಮಣರ ಕುರಿತ ಹೇಳಿಕೆಗೆ ನಾನು ಈಗಲೂ ಬದ್ಧನಾಗಿದ್ದೇನೆ. ಆದರೆ ಪೇಶ್ವೆ ಡಿಎನ್ಎ ಇರೋರು ಮುಖ್ಯಮಂತ್ರಿ ಆಗಬಾರದು ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರಕ್ಕೆ ಆಗಮಿಸಿದ್ದಾರೆ. ಕೋಲಾರ ತಾಲೂಕಿನ ಬೆಳ್ಳೂರು ಬಳಿಯಿರುವ ಯೋಗಗುರು ಬಿಕೆಎಸ್ ಅಯ್ಯಂಗಾರ್ ಯೋಗಮಂದಿರಕ್ಕೆ ಭೇಟಿ ನೀಡಿದ್ದಾರೆ. ಬಿಕೆಎಸ್ ಅಯ್ಯಂಗಾರ್ಗೆ ಗೌರವ ನಮನ ಸಲ್ಲಿಸಿದ್ದಾರೆ.
ಕೋಲಾರದಲ್ಲಿಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರವಾಸ ಹಿನ್ನೆಲೆ ಮತ್ತೆ ದಲಿತ ಸಿಎಂ ವಿಚಾರ ಮುನ್ನೆಲೆಗೆ ಬಂದಿದೆ. ಕೋಲಾರ ನಗರದಲ್ಲಿ ದಲಿತ ಮುಖಂಡನಿಂದ ಪೋಸ್ಟರ್ ಅಭಿಯಾನ ನಡೆಯುತ್ತಿದೆ. ಮತದಾರರ ಕೂಗು ದಲಿತ ಮುಖ್ಯಮಂತ್ರಿ ಕಡೆಗೆ ಅನ್ನೋ ಪೋಸ್ಟರ್ ಗಳು ಅಂಟಿಸಲಾಗಿದೆ. ಸಿದ್ದರಾಮಯ್ಯ ಪ್ರವಾಸ ಬೆನ್ನಲ್ಲೆ ನಗರದೆಲ್ಲೆಡೆ ಪೋಸ್ಟರ್ ಅಭಿಯಾನ ನಡೆಯುತ್ತಿದೆ.
JDS ಅಧಿಕಾರಕ್ಕೆ ಬಂದರೆ ಕುರುಬರಿಗೆ ಡಿಸಿಎಂ ಸ್ಥಾನ ನೀಡುತ್ತೇವೆ. ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಸ್ವಾಗತಿಸಿದ ಸಿದ್ದರಾಮಯ್ಯ. ಕುರುಬರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡಿದರೆ ಬಹಳ ಸಂತಸ ಎಂದರು. ಇನ್ನು ಇದೇ ವೇಳೆ ಚುನಾವಣೆ ಸಂದರ್ಭದಲ್ಲಿ ರಾಜ್ಯಕ್ಕೆ ಪದೇಪದೆ ಮೋದಿ ಭೇಟಿ ವಿಚಾರಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಬರಲಿಬಿಡಿ, ಬೇಡವೆಂದು ಹೇಳಲು ಆಗುತ್ತಾ? ಎಂದು ಪ್ರಶ್ನಿಸಿ ಪ್ರತಿಕ್ರಿಯೆ ನೀಡಿದರು.
ಬೆಂಗಳೂರಿನ ಯಲಹಂಕ ಏರ್ಬೇಸ್ನಲ್ಲಿ ಪ್ರಧಾನಮಂತ್ರಿ ಮೋದಿ ಏರೋ ಇಂಡಿಯಾ-2023 ಉದ್ಘಾಟಿಸಿದ್ದಾರೆ. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಕ್ಷಣಾ ಇಲಾಖೆ ಸಚಿವ ರಾಜನಾಥ್ ಸಿಂಗ್, ರಾಜ್ಯಪಾಲ ಗೆಹ್ಲೋಟ್, ಸಚಿವರಾದ ಆರಗ ಜ್ಞಾನೇಂದ್ರ, ನಿರಾಣಿ, ಅಶೋಕ್ ಸೇರಿ ಹಲವರು ಭಾಗಿಯಾಗಿದ್ದಾರೆ.
#WATCH live via ANI Multimedia | PM Modi inaugurates #AeroIndia2023 in Bengaluru | Source: DDhttps://t.co/IzNqr0Mdw7
— ANI (@ANI) February 13, 2023
ವಿಧಾನಪರಿಷತ್ ಸದಸ್ಯ ಹಾಗೂ ಅಂಬಿಗರ ಚೌಡಯ್ಯ ನಿಗಮದ ಸ್ಥಾನಕ್ಕೆ ರಾಜಿನಾಮೆ ನೀಡಿ ಬಾಬುರಾವ್ ಚಿಂಚನಸೂರ ಅವರು ಕಾಂಗ್ರೆಸ್ ಸೇರ್ಪಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇವತ್ತೆ ಬಿಜೆಪಿಗೆ ರಾಜಿನಾಮೆ ನೀಡಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಕಾಂಗ್ರೆಸ್ ಸೇರ್ಪಡೆಯಾಗುವ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ. ಶಿವಕುಮಾರ್, ವೀರಪ್ಪ ಮೊಯ್ಲಿ ಅವರ ಜೊತೆ ಈಗಾಗಲೇ ಮಾತುಕತೆ ನಡೆಸಿದ್ದಾರೆ.
ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಕಾಂಗ್ರೆಸ್ ಭಿನ್ನಮತ ತಾರಕಕ್ಕೇರಿದೆ. ಹೀಗಾಗಿ ಭಿನ್ನಮತ ಶಮನ ಮಾಡಲು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಎಂಟ್ರಿ ಕೊಟ್ಟಿದ್ದು ರಾಯರೆಡ್ಡಿ ಮಾತಿಗೂ ಟಿಕೆಟ್ ಆಕಾಂಕ್ಷಿಗಳು ಡೋಂಟ್ಕೇರ್ ಎಂದಿದ್ದಾರೆ. ಭಿನ್ನಮತದಿಂದ ಕಾಂಗ್ರೆಸ್ನ ಪ್ರಜಾಧ್ವನಿ ಸಮಾವೇಶವೇ ಮುಂದೂಡಿಕೆಯಾಗಿದೆ. ಫೆ.16ರಂದು ಕುಂದಗೋಳದಲ್ಲಿ ನಡೆಯಬೇಕಿದ್ದ ಪ್ರಜಾಧ್ವನಿ ಸಮಾವೇಶ ಪಕ್ಷದ ಒಳಜಗಳದಿಂದ ರದ್ದಾಗಿದೆ. ಶಾಸಕಿ ಕುಸುಮಾಗೆ ಟಿಕೆಟ್ ನೀಡಬಾರದೆಂದು ಕೆಲ ಮುಖಂಡರು ಪಟ್ಟು ಹಿಡಿದಿದ್ದಾರೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಮನವೊಲಿಸಲು ರಾಯರೆಡ್ಡಿ ಹರಸಾಹಸ ಪಡುತ್ತಿದ್ದಾರೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಬನ್ನೂರಿನಲ್ಲಿ ನಡೆದ ಜಾತ್ರೆಯಲ್ಲಿ ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ. ಜೊತೆಗೆ ಮುಂದಿನ ಎಂಎಲ್ಎ ಸುನೀಲ್ ಬೋಸ್ ಎಂದು ಕೂಡ ಬರೆದು ಪ್ರಾರ್ಥಿಸಿದ್ದಾರೆ.
ಮೈಸೂರು: ಡಿ.ಕೆ.ಶಿವಕುಮಾರ್ ಮುಂದಿನ ಸಿಎಂ ಆಗಲಿ; ಬಾಳೆಹಣ್ಣಿನ ಮೇಲೆ ಬರೆದು ಬನ್ನೂರು ಹೇಮಾದ್ರಾಂಬನಿಗೆ ಬೇಡಿಕೆ ಇಟ್ಟ ಅಭಿಮಾನಿ#KarnatakaAssemblyElections2023 #DKShivakumar @DKShivakumar @dkshivakumarfa1 #Mysuruhttps://t.co/GExgH7n9Y8
— TV9 Kannada (@tv9kannada) February 13, 2023
ಇಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೋಲಾರ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ 9.30ಕ್ಕೆ ಬೆಂಗಳೂರಿನಿಂದ ತೆರಳುವ ಮಾಜಿ ಸಿಎಂ ಸಿದ್ದರಾಮಯ್ಯ ಅಂತಾರಾಷ್ಟ್ರೀಯ ಯೋಗ ಕೇಂದ್ರಕ್ಕೆ ಭೇಟಿ ನೀಡಿ ಬಳಿಕ ಪದ್ಮಭೂಷಣ ಬಿಕೆಎಸ್ ಅಯ್ಯಂಗಾರ್ಗೆ ಗೌರವ ಸಮರ್ಪಣೆ ಮಾಡಲಿದ್ದಾರೆ. ರೇಣುಕಾ ಯಲ್ಲಮ್ಮ, ಧರ್ಮರಾಯಸ್ವಾಮಿ ದೇವಸ್ಥಾನಗಳಿಗೆ ಭೇಟಿ ನೀಡಿ ನಂತರ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 12ಕ್ಕೆ ರೈತರು ಹಾಗೂ ಮಹಿಳಾ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ಸ್ಥಳೀಯ ನಗರಸಭಾ ಸದಸ್ಯರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
#SiddaramaiahKolarVisit: ಮಹಿಳಾ ಮತಗಳ ಮೇಲೆ ಸಿದ್ದರಾಮಯ್ಯ ಕಣ್ಣು; ಇಂದು ಕೋಲಾರ ಪ್ರವಾಸ, ವೇಮಗಲ್ ನಲ್ಲಿ ಮಹಿಳಾ ಸಮಾವೇಶ#Siddaramaiah #Kolar #karnatakaassemblyelection2023 #Congresshttps://t.co/2g2gcIvnhq
— TV9 Kannada (@tv9kannada) February 13, 2023
Published On - 9:11 am, Mon, 13 February 23