ಸ್ವಾಗತಾರ್ಹ: BMTC ಸಮಸ್ಯೆಗಳ ಪರಿಹಾರಕ್ಕಾಗಿ ಸ್ಥಳೀಯ ಸಂಸ್ಥೆಗಳ ಜತೆಗೂಡಿ ಸಮನ್ವಯ ಸಾಧಿಸಲು ಡಿಪೋ ಗಡಿ ಮಿತಿ ಹಾಕಿಕೊಂಡ ಬಿಎಂಟಿಸಿ
ಪ್ರಸ್ತುತ, ಬಿಎಂಟಿಸಿ ತನಗೆ ಸೇರಿದ 50 ಡಿಪೋಗಳ ಮೂಲಕ ನಗರ ಮತ್ತು ಸುತ್ತಮುತ್ತಲಿನ ಬಸ್ ಮಾರ್ಗಗಳ ಸೇವೆಯಲ್ಲಿ ತೊಡಗಿದ್ದು, ಇದು ಸ್ಥಳೀಯ ವಾರ್ಡ್‌ಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ, BMTC ತನ್ನ ಪ್ರತಿ ಡಿಪೋಗೆ ಕಾನೂನು ವ್ಯಾಪ್ತಿಯ ನಕ್ಷೆಯನ್ನು ರಚಿಸಿದೆ. ಅದು ಆಯಾ ವಾರ್ಡ್‌ಗಳು ಅಥವಾ ಸ್ಥಳೀಯ ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡಿರುತ್ತದೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸ್ಥಳೀಯ ಸಂಸ್ಥೆಗಳ ಜತೆಗೂಡಿ ಸಮನ್ವಯ ಸಾಧಿಸಲು ತನ್ನ ಡಿಪೋ ಗಡಿರೇಖೆಗಳನ್ನು ಗುರುತಿಸಿದೆ. ಇದು ಸಾರಿಗೆಯನ್ನು ಪರಿಣಾಮಕಾರಿಯಾಗಿ ಯೋಜಿಸಲು ಮತ್ತು ಬಸ್‌ಗಳು ಎದುರಿಸುವ ಪಾರ್ಕಿಂಗ್ ಅಂತಹ ಸಮಸ್ಯೆಗಳನ್ನು ತತ್ಕ್ಷಣ ಪರಿಹರಿಸಲು ಅನುವು ಮಾಡಿಕೊಡುತ್ತದೆ. ಮೊದಲ ಬಾರಿಗೆ BMTC ಸ್ಥಳೀಯ ಸರ್ಕಾರಿ ಘಟಕಗಳು ಮತ್ತು ನಿವಾಸಿಗಳೊಂದಿಗೆ (Residents’ Welfare Associations -RWAs) ಸುಲಭವಾದ ಸಮನ್ವಯಕ್ಕಾಗಿ BBMP ವಾರ್ಡ್ ಮಿತಿಗಳೊಂದಿಗೆ ಅಸ್ತಿತ್ವದಲ್ಲಿರುವ ಡಿಪೋ ಗಡಿಗಳನ್ನು ಪರಿಚಯಿಸಿದೆ. ಸಾರಿಗೆಯನ್ನು ಪರಿಣಾಮಕಾರಿಯಾಗಿ ಯೋಜಿಸಲು ಮತ್ತು ಪಾರ್ಕಿಂಗ್‌ನಂತಹ ಬಸ್‌ಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಹೊಸ ವ್ಯವಸ್ಥೆಯನ್ನು ರಚಿಸಲು ಇದು ಸಾಧ್ಯವಾಗಿಸುತ್ತದೆ.
ಪ್ರಸ್ತುತ, ಬಿಎಂಟಿಸಿ ತನಗೆ ಸೇರಿದ 50 ಡಿಪೋಗಳ ಮೂಲಕ ನಗರ ಮತ್ತು ಸುತ್ತಮುತ್ತಲಿನ ಬಸ್ ಮಾರ್ಗಗಳ ಸೇವೆಯಲ್ಲಿ ತೊಡಗಿದ್ದು, ಇದು ಸ್ಥಳೀಯ ವಾರ್ಡ್‌ಗಳಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ, BMTC ತನ್ನ ಪ್ರತಿ ಡಿಪೋಗೆ ಕಾನೂನು ವ್ಯಾಪ್ತಿಯ ನಕ್ಷೆಯನ್ನು ರಚಿಸಿದೆ. ಅದು ಆಯಾ ವಾರ್ಡ್‌ಗಳು ಅಥವಾ ಸ್ಥಳೀಯ ಸರ್ಕಾರಿ ಸಂಸ್ಥೆಗಳನ್ನು ಒಳಗೊಂಡಿರುತ್ತದೆ. ಸಾರ್ವಜನಿಕರಿಗೆ ಸಂಪರ್ಕದ ಕೇಂದ್ರವನ್ನು ಒದಗಿಸುವುದರ ಜೊತೆಗೆ, ಹೊಸ ವ್ಯವಸ್ಥೆಯು ಏಜೆನ್ಸಿಗಳ ನಡುವೆ ಪರಸ್ಪರ ಕಲಿಕೆಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ. ಡಿಪೋ ಮ್ಯಾನೇಜರ್‌ಗಳು ತಮ್ಮ ತಮ್ಮ ವಾರ್ಡ್‌ಗಳಲ್ಲಿ ಸಮಿತಿ ಸಭೆಗಳಲ್ಲಿ ಭಾಗವಹಿಸುತ್ತಾರೆ. ಅವರು ಬಿಎಂಟಿಸಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲು ವಾರ್ಡ್‌ನಲ್ಲಿರುವ ಕೌನ್ಸಿಲರ್‌ಗಳು ಮತ್ತು ಇತರ ಅಧಿಕಾರಿಗಳೊಂದಿಗೆ ಕೆಲಸ ಮಾಡುತ್ತಾರೆ” ಎಂದು ಬಿಎಂಟಿಸಿ ನಿರ್ದೇಶಕ (ಐಟಿ) ಸೂರ್ಯ ಸೇನ್ ತಿಳಿಸಿದ್ದಾರೆ.
ವಾರ್ಡ್ ಸಮಿತಿಗಳಿಗೆ ಡಿಪೋ ಮ್ಯಾನೇಜರ್‌ಗಳನ್ನು ಸೇರಿಸಲು ಬಿಬಿಎಂಪಿಗೆ ಒತ್ತಾಯಿಸಲಾಗುವುದು. ಸಭೆಯ ದಿನಾಂಕಗಳ ಬಗ್ಗೆ ಅವರಿಗೆ ತಿಳಿಸಲಾಗುವುದು ಮತ್ತು ಮುಂದಿನ ಕ್ರಮಕ್ಕಾಗಿ ಡಿಪೋ ಮ್ಯಾನೇಜರ್‌ಗಳಿಗೆ ಅಂತಹ ಸಭೆಗಳ ವಿವರಗಳನ್ನು ತಿಳಿಸುವ ಬಗ್ಗೆ ಚಿಂತನೆ ನಡೆದಿದೆ.
ವಾರ್ಡ್ ಸಮಿತಿ ಸಭೆಯು ಸಾರ್ವಜನಿಕರು ಮತ್ತು ಬಿಎಂಟಿಸಿ ನಡುವೆ ಔಪಚಾರಿಕ ಸಂವಹನ ಮಾರ್ಗವನ್ನು ಸ್ಥಾಪಿಸುತ್ತದೆ. ಕೌನ್ಸಿಲರ್‌ಗಳು, ಸಾರ್ವಜನಿಕರು ಮತ್ತು ಡಿಪೋ ಮ್ಯಾನೇಜರ್‌ಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು ಇದರಿಂದ ಸಾಧ್ಯವಾಗುತ್ತದೆ. ಅನಧಿಕೃತ ಪಾರ್ಕಿಂಗ್‌ನಂತಹ ತೀವ್ರತರ ಸಮಸ್ಯೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು deccanherald ಜಾಲತಾಣ ವರದಿ ಮಾಡಿದೆ.
ಸಾರ್ವಜನಿಕರೊಂದಿಗೆ ಹೀಗೆ ಮುಕ್ತ ಸಂವಾದಗಳಲ್ಲಿ ತೊಡಗುವುದರಿಂದ BMTC ಗೆ ಪ್ರಯಾಣಿಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿರ್ದಿಷ್ಟವಾಗಿ ಬಸ್ಸುಗಳ ಕೊರತೆ ಮತ್ತು ಮಾರ್ಗದ ಸೇವೆಯಲ್ಲಿ ವ್ಯತ್ಯಯ ಮಾಹಿತಿಯನ್ನು ಸಕಾಲದಲ್ಲಿ ಒದಗಿಸಬಹುದು ಎಂದು ಸೇನ್ ಹೇಳಿದರು.
ನಮ್ಮ ಪ್ರಯಾಣಿಕರ ಬೇಡಿಕೆಗಳ ಬಗ್ಗೆ ಬೆಳಕು ಚೆಲ್ಲುವುದು ಈ ಹೊಸ ಪ್ರಯತ್ನದ ಗುರಿಯಾಗಿದೆ. ಸಾರಿಗೆಯು ನಗರ ಆಡಳಿತದ ದೊಡ್ಡ ಭಾಗವಾಗಿರುವುದರಿಂದ, ಇದು BMTC ಯೊಂದಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಕಾರ್ಯತಂತ್ರಗಳಲ್ಲಿ ಕೆಲಸ ಮಾಡಲು ಕೌನ್ಸಿಲರ್‌ಗಳಿಗೆ ಅನುವು ಮಾಡಿಕೊಡುತ್ತದೆ ಎನ್ನುತ್ತಾರೆ ಹಿರಿಯ ಅಧಿಕಾರಿ ಸೇನ್.