ಬೆಂಗಳೂರು: ಬಜೆಟ್ ಅಧಿವೇಶನದ ಮುಂದುವರಿದ ಭಾಗವಾಗಿ ವಿಧಾನ ಪರಿಷತ್ನಲ್ಲಿ ಇಂದು ರಾಜಧಾನಿ ಬೆಂಗಳೂರಿನ ಬಗ್ಗೆ ಗಹನವಾದ ಚರ್ಚೆ ನಡೆಯಿತು. ಕಾಂಗ್ರೆಸ್ ಶಾಸಕ ಪಿ.ಆರ್. ರಮೇಶ್ ವಿಷಯ ಪ್ರಸ್ತಾಪ ಮಾಡಿದಾಗ ಅರ್ಧ ಗಂಟೆ ಚರ್ಚೆ ನಡೆಯಿತು. ಬೆಂಗಳೂರಿನಲ್ಲಿ ಹುಕ್ಕಾ ಬಾರ್, ಡ್ಯಾನ್ಸ್ ಬಾರ್, ಕ್ಯಾಸಿನೋಗಳು ಅಕ್ರಮವಾಗಿ ನಡೆಯುತ್ತಿವೆ. ಬೆಂಗಳೂರಿನ ಗಲ್ಲಿ ಗಲ್ಲಿಗೂ ಅಕ್ರಮ ಡ್ಯಾನ್ಸ್ ಬಾರ್ ಕ್ಯಾಸಿನೋ ಪ್ರವೇಶಿಸಿವೆ. ಇಲ್ಲಿ ಇಸ್ಪೀಟು ಆಡ್ತಾರೆ. 5 ಲಕ್ಷ ಕಿಟ್ಟಿ ಕಲೆಕ್ಟ್ ಆಗುತ್ತದೆಯಂತೆ. ಇದೊಂದು ದಂಧೆಯಾಗಿದೆ. ಅದೆಷ್ಟೋ ಕುಟುಂಬಗಳು ಬೀದಿಗೆ ಬಿದ್ದಿವೆ ಎಂದು ಪಿ.ಆರ್. ರಮೇಶ್ ಪ್ರಸ್ತಾಪಿಸಿದ್ದಾರೆ.
ಹುಕ್ಕಾ ಬಾರ್ನಲ್ಲಿ ಡ್ರಗ್ಸ್ ಹೊಡೆಯುವವರು ಬರ್ತಾರೆ. ಇನ್ನು ಇಲ್ಲಿ ಹೆಚ್ಚು ಕಾಲೇಜು ವಿದ್ಯಾರ್ಥಿಗಳು ಬರ್ತಾರೆ. ಬೆಂಗಳೂರಿನಲ್ಲಿ ಅಕ್ರಮ ಹುಕ್ಕಾಬಾರ್ ಗಳು ಇವೆ. ಕೇವಲ 64 ಹುಕ್ಕಾಬಾರ್ ಅಂತ ಪೊಲೀಸರು ಕೊಟ್ಟಿದ್ದಾರೆ. ಈ ಮಾಹಿತಿ ತಪ್ಪು. ಗಲ್ಲಿ ಗಲ್ಲಿಯಲ್ಲಿ ರಿಕ್ರಿಯೇಷನ್ ಕ್ಲಬ್ ಇವೆ. ಇಲ್ಲಿ ಬೇರೆ ಬೇರೆ ಚಟುವಟಿಕೆಗಳು ನಡೆಯುತ್ತವೆ ಎಂದರು.
ಇನ್ನು ಕಾಂಗ್ರೆಸ್ನ ಪಿ.ಆರ್.ರಮೇಶ್ ಪ್ರಸ್ತಾಪಕ್ಕೆ ಗೃಹಸಚಿವ ಆರಗ ಜ್ಞಾನೇಂದ್ರ ಉತ್ತರ ನೀಡಿದ್ದು, ನಮ್ಮ ಕೈಲಾದ ರೀತಿಯಲ್ಲಿ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ. ಕ್ಯಾಸಿನೋ ನಿಲ್ಲಿಸೋದು ಅಷ್ಟು ಸುಲಭ ಅಲ್ಲ. ಆದರೂ ಕ್ಯಾಸಿನೋ ನಿಲ್ಲಿಸಿದ್ದೇನೆ ಎಂದಿದ್ದಾರೆ. ಎಲ್ಲಾದರೂ ಕ್ಯಾಸಿನೋ ನಡೆಯುತ್ತಿದ್ದರೆ ಮಾಹಿತಿ ಕೊಡಿ. ಕ್ಯಾಸಿನೋ ವಿರುದ್ಧ ಇಡೀ ಸಮಾಜವೇ ಎದ್ದು ನಿಲ್ಲಬೇಕಾಗಿದೆ ಎಂದರು.
ನಾನು ಸಚಿವನಾಗಿ ಮೊದಲ ಸಭೆಯಲ್ಲಿ ಕ್ಯಾಸಿನೋ, ಕ್ಯಾಬರೆ ಬೆಂಗಳೂರಿನಲ್ಲಿ ಎಲ್ಲೂ ನಡೆಯಬಾರದು ಅಂತ ಬಂದ್ ಮಾಡಿಸಿದ್ದೇವೆ. ಬಂದ್ ಮಾಡಿದ ಮೇಲೆ ನನಗೆ ಹೆಚ್ಚು ಒತ್ತಡ ಬಂತು. ಆದ್ರೆ ನಾನು ಸಾವಿರಾರು ಕುಟುಂಬದ ಹೊಟ್ಟೆ ಮೇಲೆ ಹೊಡೆಯುತ್ತಿದ್ದೀರಾ ಅಂತ ಹೇಳಿದೆ. ಯಾವುದೇ ಒತ್ತಡಕ್ಕೆ ಮಣಿಯೊಲ್ಲ ಅಂತ ಹೇಳಿದ್ದೇನೆ. ಇಸ್ಪೀಟ್ ಆಡೋ ಜಾಗದಲ್ಲಿ ಹಣ ಇಟ್ಟು ಆಡೋ ಬಗ್ಗೆ ಎಲ್ಲೂ ದೂರು ಬಂದಿಲ್ಲ. ನಮ್ಮ ಕೈಲಾದ ರೀತಿ ನಿಯಂತ್ರಣಕ್ಕೆ ಕ್ರಮವಹಿಸಲಾಗಿದೆ. ಕ್ಯಾಸಿನೋ ನಿಲ್ಲಿಸೋದು ಅಷ್ಟು ಸುಲಭ ಅಲ್ಲ. ಆದ್ರು ನಾನು ನಿಲ್ಲಿಸಿದ್ದೇನೆ. ಎಲ್ಲಾದ್ರು ನಡೆಯುತ್ತಿದ್ದರೆ ಮಾಹಿತಿ ಕೊಡಿ. ಹುಕ್ಕಾ ಬಾರ್ ನಲ್ಲಿ ಮಾದಕವಸ್ತು ಸಿಗುತ್ತಿಲ್ಲ. ಇದೊಂದು ಸಾಮಾಜಿಕ ಸಮಸ್ಯೆ. ಇದರ ಕಡಿವಾಣಕ್ಕೆ ಇಡೀ ಸಮಾಜ ಎದ್ದು ನಿಲ್ಲಬೇಕು ಎಂದರು.
ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ; ಅಪರಾಧಿ ಕಿರಣ್ ಕುಮಾರ್ಗೆ 20 ವರ್ಷ ಕಠಿಣ ಶಿಕ್ಷೆ
ಬೆಂಗಳೂರಲ್ಲಿ ಕಳುವಾಗಿದ್ದ ಮಿನಿ ಟ್ರಕ್ ಮಂಡ್ಯದ ಗ್ಯಾರೇಜೊಂದರಲ್ಲಿ ಬಿಡಿ ಬಾಗಗಳಲ್ಲಿ ಪತ್ತೆಯಾಯಿತು!!
Published On - 9:17 pm, Tue, 29 March 22