
ಬೆಂಗಳೂರು, ಡಿಸೆಂಬರ್ 16: ಬೆಂಗಳೂರಿನ (Bengaluru) ಬ್ಯಾಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕನ್ವರ್ಟರ್ ಸಾಮರ್ಥ್ಯವನ್ನು ಹೆಚ್ಚಿಸುವ ಸಲುವಾಗಿ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆ ಬ್ಯಾಡರಹಳ್ಳಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಡಿ.19ರ ವರೆಗೆ ಬೆಳಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.
ಮಾದೇಶ್ವರನಗರ, ಪ್ರಸನ್ನ ಲೇಔಟ್, ಹೊಸಹಳ್ಳಿ, ಇಂಡಸ್ಟ್ರಿಯಲ್ ಏರಿಯಾ, ಹೇರೋಹಳ್ಳಿ, ತುಂಗಾನಗರ, ವಿಶ್ವೇಶ್ವರ ನಗರ, ಅಂಜನಾ ನಗರ, ಅನ್ನಪೂರ್ಣೇಶ್ವರಿ ನಗರ, ಸುಂಕದ ಕಟ್ಟಿ, ನೀಲಗಿರಿ ಹೆಗ್ಗನಹಳ್ಳಿ, ಕೊಡಿಗೆಹಳ್ಳಿ, ಸ್ಕಂದ ನಗರ, ಚಿಕ್ಕಗೊಲ್ಲರಹಟ್ಟಿ, ಸೀಗೆಹಳ್ಳಿ, ಪದ್ಮಾವತಿ ಇಂಡಸ್ಟ್ರಿಯಲ್ ಏರಿಯಾ, ಶಾಂತಿಲಾಲ್ ಲೇಔಟ್, ಬಿಬಿಎಂಪಿ ಪ್ಲಾಂಟ್, ರಂಗೇಗೌಡ ಲೇಔಟ್, ಕನ್ನಹಳ್ಳಿ, ಸುಂಕದಕಟ್ಟೆ ಇಂಡಸ್ಟ್ರಿಯಲ್ ಏರಿಯಾ, ಡಿ ಗ್ರೂಪ್ ಬಡಾವಣೆ, ಆರ್.ಎಚ್.ಸಿ.ಎಸ್ ಲೇಔಟ್ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಅಡಚಣೆಯಾಗಲಿದೆ ಎಂದು ಬೆಸ್ಕಾಂ ಪಶ್ಚಿಮ ವೃತ್ತದ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಗುರುವಾರದಂದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.
ವಿದ್ಯುತ್ ಸಂಪರ್ಕ ಸಂಬಂಧಿತ ದೂರುಗಳನ್ನು ವಾಟ್ಸ್ಆ್ಯಪ್ ಮೂಲಕವೇ ನೀಡಬಹುದು.ಬೆಸ್ಕಾಂ ಸಹಾಯವಾಣಿ ಸಂಖ್ಯೆಗಳ ವಿವರವನ್ನೂ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.