AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒಣ ಹವೆ

Karnataka Weather: ಕಳೆದ ಹಲವಾರು ದಿನಗಳಿಂದ ರಾಜ್ಯದೆಲ್ಲೆಡೆ ಒಣ ಹವೆಯ ವಾತಾವರಣ ಆವರಿಸಿದ್ದು, ಬೆಂಗಳೂರಿನಲ್ಲೂ ತಾಪಮಾನ ಸ್ವಲ್ಪ ಸುಧಾರಣೆ ಕಂಡಿದೆ. ಇಂದೂ ಸಹ ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, ಇನ್ನೂ ಮೂರು ದಿನಗಳವರೆಗೂ ಇದೇ ವಾತಾವರಣ ಇರಬಹುದು ಎಂದು ಇಲಾಖೆ ಮುನ್ಸೂಚನೆ ನಿಡಿದೆ.

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒಣ ಹವೆ
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಒಣ ಹವೆ
ಭಾವನಾ ಹೆಗಡೆ
|

Updated on: Feb 13, 2026 | 7:45 AM

Share

ಬೆಂಗಳೂರು, ಫೆಬ್ರವರಿ 13: ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನ ತಕ್ಕಮಟ್ಟಿಗೆ ಇಂದು ಸುಧಾರಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಶುಷ್ಕ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 16°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ
VIDEO: ಟಾಸ್ ಫಿಕ್ಸಿಂಗ್..? ಮುಂಬೈ ಇಂಡಿಯನ್ಸ್ ವಿರುದ್ಧ ಗಂಭೀರ ಆರೋಪ
ಉಗುರುಗಳಿಗೆ ಈ ಬಣ್ಣ ಹಚ್ಚಿದ್ರೆ ತೊಂದರೆ ತಪ್ಪಿದ್ದಲ್ಲ!
ಉಗುರುಗಳಿಗೆ ಈ ಬಣ್ಣ ಹಚ್ಚಿದ್ರೆ ತೊಂದರೆ ತಪ್ಪಿದ್ದಲ್ಲ!
ಇಂದು ಈ ರಾಶಿಯವರಿಗೆ ನಂಬಿದವರೇ ಮೋಸ ಮಾಡಬಹುದು; ಜಾಗರೂಕರಾಗಿರಿ!
ಇಂದು ಈ ರಾಶಿಯವರಿಗೆ ನಂಬಿದವರೇ ಮೋಸ ಮಾಡಬಹುದು; ಜಾಗರೂಕರಾಗಿರಿ!
ವಿದೇಶಿ ಅತಿಥಿಗಳ ಮುಂದೆ ಎಡವಿ ಬಿದ್ದ ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್
ವಿದೇಶಿ ಅತಿಥಿಗಳ ಮುಂದೆ ಎಡವಿ ಬಿದ್ದ ಪಾಕಿಸ್ತಾನ ಉಪ ಪ್ರಧಾನಿ ಇಶಾಕ್ ದಾರ್
ರಾಮುಲು-ಸಚಿವ ತಿಮ್ಮಾಪುರ ಪ್ರಚಾರದ ವೇಳೆ ಕೈ ಕೈ ಮಿಲಾಯಿಸಿಸಿದ ಕಾರ್ಯಕರ್ತರು
ರಾಮುಲು-ಸಚಿವ ತಿಮ್ಮಾಪುರ ಪ್ರಚಾರದ ವೇಳೆ ಕೈ ಕೈ ಮಿಲಾಯಿಸಿಸಿದ ಕಾರ್ಯಕರ್ತರು
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಬೆಂಗಳೂರಿನಲ್ಲಿ ಧರೆಗುರುಳಿದ ಮರದ ಬೃಹತ್ ರೆಂಬೆ: ತಪ್ಪಿದ ಭಾರೀ ಅನಾಹುತ
ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಗ್ಯಾಸ್ ಸಿಲಿಂಡರ್ ಅಭಾವ ಬಗ್ಗೆ ಭಕ್ತರಿಗೆ ಸಿದ್ಧಗಂಗಾಶ್ರೀ ಮಹತ್ವದ ಕರೆ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ಐಪಿಎಲ್‌ನಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ರೋಹಿತ್ ಶರ್ಮಾ
ತನ್ನ ಕಾರು ಚಾಲಕನ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್: ವಿಡಿಯೋ
ತನ್ನ ಕಾರು ಚಾಲಕನ ಮಗನಿಗೆ ಎಲೆಕ್ಷನ್ ಟಿಕೆಟ್ ಕೊಟ್ಟ ವಿಜಯ್: ವಿಡಿಯೋ
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?
ರಸ್ತೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ವಧು, ವರನ ಕಡೆಯವರು: ಆಗಿದ್ದೇನು?