ಬೆಂಗಳೂರು: ನಗರದಾದ್ಯಂತ ಯೋಜನಾ ಕಾಮಗಾರಿಗಳ ವಿಳಂಬದಿಂದಾಗಿ ನವೆಂಬರ್ 15 ರಿಂದ 17 ರವರೆಗೆ (ಸೋಮವಾರದಿಂದ ಬುಧವಾರ) ಬೆಂಗಳೂರಿನ ಕೆಲವು ಏರಿಯಾಗಳಲ್ಲಿ ವಿದ್ಯತ್ ಕಡಿತ ಉಂಟಾಗಲಿದೆ. ಬೆಂಗಳೂರು ಎಲೆಕ್ಟ್ರಿಕ್ ಸಪ್ಲೈ ಕಂಪನಿ (BESCOM) ಮತ್ತು ಕರ್ನಾಟಕ ಪವರ್ ಟ್ರಾನ್ಸ್ಮಿಷನ್ ಕಾರ್ಪೊರೇಷನ್ ಲಿಮಿಟೆಡ್ (KPTCL) ಕೈಗೊಂಡಿರುವ ಕೇಬಲ್ ಪರಿವರ್ತನೆಯ ಕೆಲಸದಿಂದ ಹಲವು ಏರಿಯಾಗಳಲ್ಲಿ ಇಂದು ಪವರ್ ಕಟ್ ಎದುರಾಗಲಿದೆ.
ಬೆಂಗಳೂರಿನಲ್ಲಿ ಇಂದು ಮಂಗಳವಾರ (ನವೆಂಬರ್ 16) ಎಚ್ಎಸ್ಆರ್ ಲೇಔಟ್, ವೀವರ್ಸ್ ಕಾಲೋನಿ, ಕೃಷ್ಣಪ್ಪ ಲೇಔಟ್, ಬಿಡಿಎ ಅಂಜನಾಪುರ, ಆವಲಹಳ್ಳಿ ಸೇರಿದಂತೆ ಮೀನಾಕ್ಷಿ ಲೇಔಟ್ನಲ್ಲಿ ಪವರ್ ಕಟ್ ಉಂಟಾಗಲಿದೆ. ನಾಳೆ ಬುಧವಾರ (ನವೆಂಬರ್ 17)ರಂದು ಬೆಂಗಳೂರಿನ 4ನೇ ಮೇನ್ ಎಚ್ಎಸ್ಆರ್ ಲೇಔಟ್ 17 ಕ್ರಾಸ್, ಅಂಜನಾಪುರ ಮೂರನೇ ಬ್ಲಾಕ್, ಜಯರಾಮ ರೆಡ್ಡಿ ಲೇಔಟ್, ರಾಘವನ್ ಪಾಳ್ಯ, ಸಹಾರ ಬೇಕರಿ ರಸ್ತೆ, ಆವಲಹಳ್ಳಿ ಸೇರಿದಂತೆ ಜಿಬಿ ಪಾಳ್ಯ ರಸ್ತೆಯಲ್ಲಿ ವಿದ್ಯುತ್ ಕಡಿತವಾಗಲಿದೆ.
ನಿನ್ನೆ ಸೋಮವಾರ (ನವೆಂಬರ್ 15)ರಂದು ಬೆಂಗಳೂರಿನ ಎಸ್ಬಿಐ ಲೇಔಟ್, ಆವಲಹಳ್ಳಿ, ಮೀನಾಕ್ಷಿ ಲೇಔಟ್, ವೆಂಕಟಪುರ, ಟೀಚರ್ಸ್ ಕಾಲೋನಿ, ಎಚ್ಎಸ್ಆರ್ ಸೆಕ್ಟರ್ 5 ಮತ್ತು ಜಕ್ಕಸಂದ್ರದಲ್ಲಿ ವಿದ್ಯುತ್ ಕಡಿತ ಉಂಟಾಗಿತ್ತು.
ಕಲ್ಲಿದ್ದಲು ಕೊರತೆ, ಕರ್ನಾಟಕದಲ್ಲಿ ವಿದ್ಯುತ್ ಕಡಿತದ ಭೀತಿಯಿದ್ದರೆ, ಬೆಂಗಳೂರು ನಗರದ ವಿವಿಧ ಭಾಗಗಳಲ್ಲಿ ನಡೆಯತ್ತಿರುವ ಕಾಮಗಾರಿಗಳಿಂದಾಗಿ ವಿದ್ಯುತ್ ಕಡಿತ ಉಂಟಾಗಲಿದೆ. ಕೊವಿಡ್ 19 ಎರಡನೇ ಅಲೆಯಿಂದ ಮತ್ತು ಗುತ್ತಿಗೆದಾರರ ಕೆಲಸದ ವಿಳಂಬದಿಂದಾಗಿ ಹೆಚ್ಚಿನ ಯೋಜನೆಗಳ ಕೆಲಸ ಸಾಗಲು ಸಮಯ ತೆಗೆದುಕೊಂಡಿದೆ. ಕೈಗೊಂಡ ಎಲ್ಲಾ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಲು ಸ್ವಲ್ಪ ಸಮಯ ಹಿಡಿಯುತ್ತದೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಕುರಿತಂತೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ:
Bengaluru Power Cut: ಬೆಂಗಳೂರಿನ ಈ ಏರಿಯಾಗಳಲ್ಲಿ ಇಂದಿನಿಂದ ಬುಧವಾರದವರೆಗೆ ಪವರ್ ಕಟ್
ಬೆಂಗಳೂರಿನಲ್ಲಿ ಫೆ. 26ರವರೆಗೆ ದಿನಾ 8 ಗಂಟೆ ಪವರ್ಕಟ್.. ಯಾವ ಯಾವ ಏರಿಯಾಗಳಲ್ಲಿ ಪವರ್ ಕಟ್?
Published On - 10:56 am, Tue, 16 November 21