ಬೆಂಗಳೂರಿನ ಆಟೋಗಳಲ್ಲಿ ಪ್ರಯಾಣಿಸುವ ಮುನ್ನ ಎಚ್ಚರ: ಪರ್ಮಿಟ್ ರಿನಿವಲ್ ಆಗದೆ ಸಂಚರಿಸುತ್ತಿವೆ ಸಾವಿರಾರು ಆಟೋಗಳು

ಬೆಂಗಳೂರಿನಲ್ಲಿ ಪ್ರತಿನಿತ್ಯ ಸಂಚಾರ ಮಾಡುತ್ತಿರುವ ಸಾವಿರಾರು ಆಟೋಗಳ ಪರ್ಮಿಟ್ ರಿನಿವಲ್ ಆಗುತ್ತಿಲ್ಲ ಎಂಬುದು ತಿಳಿದುಬಂದಿದೆ. ಕಾರಣ ವಾಹನ್- 3 ಅಡಿಯಲ್ಲಿ ನೋಂದಣಿ ಆಗಿರುವ ಆಟೋಗಳ ಮಾಹಿತಿ ರಾಜ್ಯ ಸಾರಿಗೆ ಇಲಾಖೆಯಲ್ಲಿ ಇಲ್ಲದಿರುವುದು! ಇದರಿಂದ ಆಟೋ ಪರ್ಮಿಟ್ ರಿನಿವಲ್ ಆಗುತ್ತಿಲ್ಲ. ಪರ್ಮಿಟ್ ರಿನಿವಲ್ ಆಗದ ಆಟೋ ಒಂದು ವೇಳೆ ಅಪಘಾತಕ್ಕೀಡಾದರೆ ಇನ್ಶುರೆನ್ಸ್ ಕ್ಲೈಮ್ ಆಗುವುದಿಲ್ಲ.

ಬೆಂಗಳೂರಿನ ಆಟೋಗಳಲ್ಲಿ ಪ್ರಯಾಣಿಸುವ ಮುನ್ನ ಎಚ್ಚರ: ಪರ್ಮಿಟ್ ರಿನಿವಲ್ ಆಗದೆ ಸಂಚರಿಸುತ್ತಿವೆ ಸಾವಿರಾರು ಆಟೋಗಳು
ಸಾಂದರ್ಭಿಕ ಚಿತ್ರ
Follow us
Kiran Surya
| Updated By: Ganapathi Sharma

Updated on: Jan 09, 2025 | 7:57 AM

ಬೆಂಗಳೂರು, ಜನವರಿ 9: ಬೆಂಗಳೂರು ನಗರದಲ್ಲಿ 2020ರ ಹಿಂದೆ ನೋಂದಣಿ ಆಗಿರುವ ಆಟೋ ಪರ್ಮಿಟ್​​ಗಳ ದಾಖಲೆಗಳೇ ಆರ್​ಟಿಒ ಕಚೇರಿಯಲ್ಲಿ ಇಲ್ಲವಂತೆ! ಬೆಂಗಳೂರಿನ ಶಾಂತಿನಗರ ಮುಖ್ಯ ಕಚೇರಿಯಲ್ಲಿ ವಾಹನ್- 3 ಅಡಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋಗಳ ದಾಖಲೆ ಇಲ್ಲ ಎಂಬುದು ತಿಳಿದುಬಂದಿದೆ. 2020 ರ ವರೆಗೆ ವಾಹನ್- 3 ಅಡಿಯಲ್ಲಿ ವಾಹನಗಳನ್ನು ರಿಜಿಸ್ಟ್ರೇಷನ್ ಮಾಡಲಾಗುತಿತ್ತು. 2020 ಮಾರ್ಚ್ ನಂತರ ವಾಹನ್ – 4 ಅಡಿಯಲ್ಲಿ ವಾಹನಗಳ ನೋಂದಣಿ ಮಾಡಲಾಗುತ್ತಿದೆ. ಆದರೆ ವಾಹನ್- 3ರ ಅಡಿಯಲ್ಲಿ ರಿಜಿಸ್ಟ್ರೇಷನ್ ಆಗಿರುವ ಸಾವಿರಾರು ಆಟೋ ಪರ್ಮಿಟ್​​ಗಳ ದಾಖಲೆಗಳೇ ಇಲ್ಲವಾಗಿದ್ದು, ಇದರಿಂದ ತುಂಬಾ ಸಮಸ್ಯೆ ಆಗುತ್ತಿದೆ ಎಂದು ಆಟೋ ಚಾಲಕರು ಅಳಲು ತೋಡಿಕೊಂಡಿದ್ದಾರೆ.

ದಾಖಲೆಗಳು ಇಲ್ಲದ ಕಾರಣ ಆಟೋ ಪರ್ಮಿಟ್​​ಗಳ ರಿನಿವಲ್ ಆಗುತ್ತಿಲ್ಲ. ಪರ್ಮಿಟ್ ರಿನಿವಲ್ ಆಗದಿರುವ ಆಟೋಗಳಿಗೆ ಆರ್​​ಟಿಓ ಅಧಿಕಾರಿಗಳು ಬರೋಬ್ಬರಿ ಐದು ಸಾವಿರ ರುಪಾಯಿ ದಂಡ ವಿಧಿಸುತ್ತಿದ್ದಾರೆ. ಪರ್ಮಿಟ್ ರಿನಿವಲ್ ಮಾಡುತ್ತಲೂ ಇಲ್ಲ, ದಂಡ ವಿಧಿಸುವುದನ್ನು ನಿಲ್ಲಿಸುತ್ತಲೂ ಇಲ್ಲ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಘಾತವಾದರೆ ಇನ್ಶುರೆನ್ಸ್ ಕ್ಲೈಮ್ ಆಗಲ್ಲ

ಪರ್ಮಿಟ್ ರಿನಿವಲ್ ಆಗದ ಆಟೋಗಳಲ್ಲಿ ಪ್ರಯಾಣಿಕರು ಪ್ರಯಾಣ ಮಾಡುವ ವೇಳೆ ಆಟೋ ಅಪಘಾತಕ್ಕೀಡಾದರೆ ಇನ್ಶುರೆನ್ಸ್ ಕ್ಲೈಮ್ ಆಗುವುದಿಲ್ಲ. ಈ ಬಗ್ಗೆ ಪ್ರಯಾಣಿಕರು ಕೂಡ ಆರ್​​ಟಿಒ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಯಾಣಿಕರಿಗೆ ಮತ್ತೊಂದು ಶಾಕ್​: ಬಿಎಂಟಿಸಿ ಬಸ್ ಪಾಸ್​​ ದರ ಏರಿಕೆ!

ಒಟ್ಟಿನಲ್ಲಿ ಆಟೋ ಪರ್ಮಿಟ್ ರಿನಿವಲ್ ಮಾಡಿ ಅಂದರೆ ನಮ್ಮ ಬಳಿ ನಿಮ್ಮ ದಾಖಲೆಗಳಿಲ್ಲ ಎನ್ನುತ್ತಾರೆ ಆರ್​ಟಿಒ ಅಧಿಕಾರಿಗಳು. ರಸ್ತೆಯಲ್ಲಿ ಆಟೋಗಳನ್ನು ತಪಾಸಣೆ ಮಾಡುವ ವೇಳೆ ಪರ್ಮಿಟ್ ರಿನಿವಲ್ ಆಗಿಲ್ಲ ಎಂದು ದಂಡವನ್ನೂ ವಿಧಿಸುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ಆಟೋ ಚಾಲಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸಾರಿಗೆ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ