ಬೆಂಗಳೂರು: ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳಿಗೆ ಬೆಂಗಳೂರು ವಿಶ್ವವಿದ್ಯಾಲಯ (Bengaluru Universit) ಬ್ರೇಕ್ ಹಾಕಿದೆ. ಬೆಂಗಳೂರು ವಿವಿಯಲ್ಲಿ ಪ್ರತಿಭಟನೆಗಳಿಗೆ ಅವಕಾಶವಿಲ್ಲ. ಯಾವುದೇ ಬಾಹ್ಯ ಸಂಘಟನೆಗಳಿಂದ ಧರಣಿಗೆ (Protest) ಅವಕಾಶವಿಲ್ಲ. ರಾಜಕೀಯ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳ ಫ್ಲೆಕ್ಸ್, ಬ್ಯಾನರ್ಗಳು ಹಾಕದಂತೆ ವಿಶ್ವವಿದ್ಯಾಲಯ ಕುಲಸಚಿವರು ಸುತ್ತೋಲೆ ಹೊರಡಿಸಿದ್ದಾರೆ. ಸದ್ಯ ಕೊರೊನಾ ಕಾರಣಕ್ಕೆ ಯಾರಿಗೂ ಪ್ರತಿಭಟನೆಗೆ ಅವಕಾಶ ಇಲ್ಲ. ಬಳಿಕ ಏನೇ ಸಮಸ್ಯೆ ಇದ್ದರೂ, ಸಂಶೋಧನಾ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳ ಒಕ್ಕೂಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನು ಹೊರತು ಪಡಿಸಿ ರಾಜಕೀಯ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳ ಫ್ಲೆಕ್ಸ್, ಬ್ಯಾನರ್ ಹಾಕದಂತೆ ನಿರ್ಬಂಧ ಹೇರಲಾಗಿದೆ.
ರಾಜಕೀಯ ವಿದ್ಯಾರ್ಥಿ ಸಂಘಟನೆ ದೂರವಿಡಲು ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ರಚನೆ ಮಾಡಲಾಗಿದ್ದು, ಎಬಿವಿಪಿ (ABVP), (ಎನ್ಎಸ್ಯುಐ) NSUI, (ಎಸ್ಎಫ್ಐ) SFI ಹಾಗೂ (ಸಿಎಫ್ಐ) CFI ರಾಜಕೀಯ ಪ್ರೇರಿತ ವಿದ್ಯಾರ್ಥಿ ಸಂಘಟನೆಗಳಿಗೆ ವಿವಿ ಆವರಣದಲ್ಲಿ ನಿರ್ಬಂಧ ಹಾಕಲಾಗಿದೆ. ನಿನ್ನೆ ನಡೆದ ABVP ಹಾಗೂ NSUI ಪ್ರತಿಭಟನೆಯಲ್ಲಿ ಫ್ಲೆಕ್ಸ್, ಬ್ಯಾನರ್ ಪ್ರದರ್ಶನ ನಿಷೇಧಿಸಲಾಗಿತ್ತು. ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳು ಇನ್ನು ಮುಂದೆ ರಾಜಕೀಯ ಪಕ್ಷಕ್ಕೆ ಸೇರಿದರೆ ಅಂತ ಸಂಘಟನೆಗಳಿಗೆ ಪ್ರತಿಭಟನೆಗೆ ಅವಕಾಶ ಇಲ್ಲ.
ವಿವಿ ವಿದ್ಯಾರ್ಥಿಗಳೇ ನೇರವಾಗಿ ಸಮಸ್ಯೆಗಳನ್ನು ಬಗೆಹರಿಸಲು ಸಹಕಾರವಾಗುವಂತೆ ವಿವಿ ಸಂಶೋಧನಾ ವಿದ್ಯಾರ್ಥಿ ಒಕ್ಕೂಟ ರಚನೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ವಿವಿ ಸಂಶೋಧನಾ ವಿದ್ಯಾರ್ಥಿಗಳು ವಿವಿ ಕುಲಪತಿಗಳಿಗೆ ಪತ್ರ ನೀಡಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾರಾಮಾರಿ:
ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪ್ರತಿಭಟನೆ ನಡೆಸಿದ್ದು, ಧರಣಿ ನಿರತ ಎಬಿವಿಪಿ ಕಾಯರ್ಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಬೆಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಸಮಸ್ಯೆ ಬಗೆಹರಿಸಲು ಆಗ್ರಹಿಸಿ ನಿನ್ನೆ (ಜನವರಿ 31) ಎಬಿವಿಪಿ ಪ್ರತಿಭಟನೆ ನಡೆಸಿತ್ತು. ಪರೀಕ್ಷೆ ಮೌಲ್ಯಮಾಪನ, ಫಲಿತಾಂಶಕ್ಕೆ ಸಮಸ್ಯೆಯಾಗಿದೆ. ಇದನ್ನು ಆದಷ್ಟು ಬೇಗ ಬಗೆಹರಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದರು. ಈ ವೇಳೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದು, ಹಲವರು ಗಾಯಗೊಂಡಿದ್ದರು.
ವಿವಿ ಮುತ್ತಿಗೆ ಹಾಕಲು ಮುಂದಾಗಿದ್ದ ಅಖಿಲಾ ಭಾರತೀಯ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದರು. ಹಾಸ್ಟೆಲ್ ಸಮಸ್ಯೆ, ವಿದ್ಯಾರ್ಥಿ ವೇತನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ವಿವಿಗೆ ವಿದ್ಯಾರ್ಥಿಗಳು ಮುಂದಾಗಿದ್ದರು. ಈ ವೇಳೆ ವಿದ್ಯಾರ್ಥಿ ಸಂಘಟನೆಗಳು ನಡವೆಯೇ ಮಾರಾಮಾರಿಯಾಗಿತ್ತು.
ಇದನ್ನೂ ಓದಿ
ಚಿತ್ತಾಪುರ: ಶಂಕಿತ ಚಿಕನ್ ಪಾಕ್ಸ್ ಗೆ ಇಬ್ಬರು ಮಕ್ಕಳು ಸಾವು, ಕುಟುಂಬದವರಿಗೂ ಚಿಕನ್ ಪಾಕ್ಸ್!
ನಾಳೆ ದೆಹಲಿಗೆ ಹಾರಲಿರುವ ಸಿಎಂ ಬೊಮ್ಮಾಯಿ; ಬಜೆಟ್ ಕುರಿತು ವರಿಷ್ಠರ ಜೊತೆ ಚರ್ಚೆ
Published On - 12:58 pm, Wed, 2 February 22