ಮೆಜೆಸ್ಟಿಕ್​​-ಗಾಂಧಿನಗರ ಲಾಡ್ಜ್ ಮೇಲೆ ಉಪ್ಪಾರಪೇಟೆ ಪೊಲೀಸರಿಂದ ದಾಳಿ, ಕೋಟಿ ಕೋಟಿ ಹವಾಲ ಹಣ ಪತ್ತೆ?

| Updated By: ಸಾಧು ಶ್ರೀನಾಥ್​

Updated on: Oct 05, 2023 | 2:32 PM

ಬೆಂಗಳೂರು ಮೆಜೆಸ್ಟಿಕ್​​ ಬಳಿಯಿರುವ ಗಾಂಧಿ ನಗರದಲ್ಲಿನ ಸರಸ್ವತಿ ಲಾಡ್ಜ್ ಮೇಲೆ ಉಪ್ಪಾರಪೇಟೆ ಪೊಲೀಸರು (Bangalore Upparapet police) ದಾಳಿ ನಡೆಸಿದ್ದು, ಸುಮಾರು 2 ಕೋಟಿ ರೂಪಾಯಿ ಹಣ ಸಿಕ್ಕಿದೆ ಅನ್ನೋ ಮಾಹಿತಿ ಸಿಕ್ಕಿದೆ. ಗಾಂಧಿನಗರ ಲಾಡ್ಜ್ ಮೇಲೆ ದಾಳಿ ಮಾಡಿದ ಪೊಲೀಸರು ಸುಮಾರು ಒಂದು ಗಂಟೆ ಪರಿಶೀಲನೆ ನಡೆಸಿದ್ದಾರೆ.

ಮೆಜೆಸ್ಟಿಕ್​​-ಗಾಂಧಿನಗರ ಲಾಡ್ಜ್ ಮೇಲೆ ಉಪ್ಪಾರಪೇಟೆ ಪೊಲೀಸರಿಂದ ದಾಳಿ, ಕೋಟಿ ಕೋಟಿ ಹವಾಲ ಹಣ ಪತ್ತೆ?
ಗಾಂಧಿನಗರ ಲಾಡ್ಜ್ ಮೇಲೆ ಉಪ್ಪಾರಪೇಟೆ ಪೊಲೀಸರು ದಾಳಿ
Follow us on

ಬೆಂಗಳೂರು, ಅಕ್ಟೋಬರ್​​ 5: ಮೆಜೆಸ್ಟಿಕ್​​ ಬಳಿಯಿರುವ ಗಾಂಧಿ ನಗರದಲ್ಲಿನ ಸರಸ್ವತಿ ಲಾಡ್ಜ್ ಮೇಲೆ ಉಪ್ಪಾರಪೇಟೆ ಪೊಲೀಸರು (Bangalore Upparapet police) ದಾಳಿ ನಡೆಸಿದ್ದು, ಸುಮಾರು 2 ಕೋಟಿ ರೂಪಾಯಿ ಹಣ ಸಿಕ್ಕಿದೆ ಅನ್ನೋ ಮಾಹಿತಿ ಸಿಕ್ಕಿದೆ. ಗಾಂಧಿನಗರ ಲಾಡ್ಜ್ ( Lodge in Majestic Gandhinagar) ಮೇಲೆ ದಾಳಿ ಮಾಡಿದ ಪೊಲೀಸರು ಸುಮಾರು ಒಂದು ಗಂಟೆ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ವಿಚಾರವಾಗಿ ಏನು ನಡೆದಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಆದಾಗ್ಯೂ ಪೊಲೀಸರು ಬಂದು ಪರಿಶೀಲನೆ ನಡೆಸಿರುವ ದೃಶ್ಯ ಲಭ್ಯವಾಗಿದೆ.

ಇನ್ನು ಪೊಲೀಸರು ಬಂದಿದ್ದ ವಿಚಾರವನ್ನು ಲಾಡ್ಜ್ ಮಾಲೀಕ ಸಹ ಒಪ್ಪಿಕೊಂಡಿದ್ದಾರೆ. ಈ ವಿಚಾರವಾಗಿ ಯಾವ ದೂರು ಕೂಡ ದಾಖಲಾಗಿಲ್ಲ. ಪೊಲೀಸರಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ಮಾಡಲಾಗ್ತಿದ್ಯಾ ಎಂಬ ಅನುಮಾನ ಕಾಡ್ತಿದೆ.

ಪೊಲೀಸರು ಇಂದು ಗುರುವಾರ ಬೆಳಗ್ಗೆ 10.30 ಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಲಾಡ್ಜ್ ನಲ್ಲಿದ್ದ 48 ರೂಮುಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹವಾಲ ಹಣದ (Hawala money) ಮಾಹಿತಿ ಮೇರೆಗೆ ಪೊಲೀಸರು ದಾಳಿ‌ ಮಾಡಿರುವ ಸಾಧ್ಯತೆಯಿದೆ ಎನ್ನಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ