ಬೆಂಗಳೂರು: ಭ್ರಷ್ಟಾಚಾರ ಆರೋಪದ ಮೇಲೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB)ಯ 13 ಭ್ರಷ್ಟ ಅಧಿಕಾರಿಗಳನ್ನು ಅಮಾನತುಗೊಳಿಸಿ ಜಲಮಂಡಳಿಯ ಅಧ್ಯಕ್ಷ ಜಯರಾಂ ಆದೇಶ ಹೊರಡಿಸಿದ್ದಾರೆ. ವಂಚನೆ ಮಾಡಿರುವವರು ಗುತ್ತಿಗೆ ನೌಕರರು. ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುವುದಕ್ಕೆ ಇವರು ವಿಫಲರಾಗಿದ್ದಾರೆ. ಈ ವೈಫಲ್ಯದಿಂದ ಜಲಮಂಡಳಿಗೆ ಆದಾಯದ ನಷ್ಟವಾಗಿದೆ. ಇನ್ನೂ ಈ ಗುತ್ತಿಗೆ ನೌಕರರ ವಂಚನೆ ಪತ್ತೆಹಚ್ಚಲು ವಿಫಲರಾದ ಗೆಜೆಟೆಡ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಜಲ ಮಂಡಳಿ ನೋಟ್ ಬ್ಯಾನ್ ಮತ್ತು ಕೋವಿಡ್ ವೇಳೆ ನಗದು ಪಾವತಿಗೆ ಅವಕಾಶ ನೀಡಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಮಂಡಳಿಯ ಕೋಟಿ ಕೋಟಿ ಹಣ ವಂಚನೆ ಮಾಡಿದ್ದರು. ಮಂಡಳಿಯ 45 ಉಪ ವಿಭಾಗಗಳಲ್ಲಿ ಹಣ ದುರ್ಬಳಕೆ ಮಾಡಿಕೊಂಡಿದ್ದರು. ಈ ಸಂಬಂಧ ಮಂಡಳಿ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ನೀಡಿದ್ದರು.
ಇದನ್ನೂ ಓದಿ: ವಿಧಾನಸಭೆ ಚುನಾವಣೆಗೆ ಭರ್ಜರಿ ತಯಾರಿ, ಕೇಂದ್ರ ಚುನಾವಣಾಧಿಕಾರಿಗಳಿಂದ ಪೂರ್ವ ತಯಾರಿ ಪರಿವೀಕ್ಷಣೆ
ಅಧಿಕಾರಿಗಳು ಅಡಿಟ್ನಲ್ಲಿ ಪತ್ತೆಯಾಗದಂತೆ ಹಣ ಗುಳುಂ ಮಾಡಿದ್ದರು. ಈ ಸಂಬಂಧ ಮಂಡಳಿ ಅಕ್ರಮ ಭೇದಿಸಲು 3 ತಂಡ ರಚನೆ ಮಾಡಿತ್ತು. ಈ ಮಂಡಳಿಯ ಆಂತರಿಕ ತನಿಖೆಯಲ್ಲಿ ಹಣ ದುರ್ಬಳಕೆ ಪತ್ತೆಯಾಗಿದೆ. ಈ ಹಿನ್ನೆಲೆ ಇಂಜಿನಿಯರ್, ಕಂದಾಯ ವ್ಯವಸ್ಥಾಪಕರು, ಸಹಾಯಕರ ಕಲ್ಯಾಣ ಅಧಿಕಾರಿಗಳು ಸೇರಿದಂತೆ 13 ಭ್ರಷ್ಟ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:32 pm, Tue, 3 January 23