ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿ, ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಸಿಗ್ತಿಲ್ಲ ಮುಕ್ತಿ

ಬೆಳಿಗ್ಗೆಯಿಂದ ಬಂದ ಮೃತದೇಹಗಳ ಅಂತ್ಯಕ್ರಿಯೆ ತಡರಾತ್ರಿವರೆಗೂ ನಡೆಯುತ್ತಿದೆ. ಹಾಗಾಗಿ ಸಂಜೆ ವೇಳೆ ಬಂದ ಮೃತದೇಹಗಳಿಗೆ ನೋ ಎಂಟ್ರಿ ಎನ್ನಲಾಗುತ್ತಿದೆ. ಚಿತಾಗಾರದ ಸಿಬ್ಬಂದಿಗಳು ಬೇರೆ ಕಡೆ ಹೋಗುವಂತೆಯೂ ಸಂಬಂಧಿಕರಿಗೆ ಸೂಚಿಸುತ್ತಿದ್ದಾರೆ.

ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿ, ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಸಿಗ್ತಿಲ್ಲ ಮುಕ್ತಿ
ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿ, ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಸಿಗ್ತಿಲ್ಲ ಮುಕ್ತಿ
ಸಾಧು ಶ್ರೀನಾಥ್​

Updated on: Apr 20, 2021 | 4:55 PM

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಮುಕ್ತಿ ಸಿಗ್ತಿಲ್ಲ. ಬೆಡ್ ಸಮಸ್ಯೆ, ಲಸಿಕೆ ಸಮಸ್ಯೆ, ಚಿತಾಗಾರ ಸಮಸ್ಯೆ ಬಳಿಕ ಈಗ ಆ್ಯಂಬುಲೆನ್ಸ್‌ಗಳ ಸಮಸ್ಯೆ ಸೃಷ್ಟಿಯಾಗಿದೆ.

ಕೊರೊನಾಗೆ ಬಲಿಯಾದವರ ಶವ ಸಾಗಿಸಲು ಪರದಾಡುತ್ತಿರುವ ಸಂಬಂಧಿಕರು ಆ್ಯಂಬುಲೆನ್ಸ್ ಸಿಗದೆ ಹೈರಾಣಗೊಂಡಿದ್ದಾರೆ. ಆ್ಯಂಬುಲೆನ್ಸ್‌ಗಾಗಿ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಉದ್ಭವವಾಗಿದೆ. ಹಣ ಪಾವತಿ ಮಾಡುವುದಾಗಿ ಹೇಳಿದ್ರೂ ಸಿಗುತ್ತಿಲ್ಲ ಎಂದು ಅಳಲು ಸಂಬಂಧಿಕರು ತೋಡಿಕೊಂಡಿದ್ದಾರೆ.

ವೃತ್ತಿಯಲ್ಲಿ ಕೆಎಸ್ ಎಫ್ ಸಿ (ಕರ್ನಾಟಕ ಸ್ಟೇಟ್ ಫೈನಾನಿಶಿಯಲ್ ಕಾರ್ಪೊರೇಷನ್) ಅಧಿಕಾರಿಯಾಗಿರುವ 58 ವರ್ಷದ ಕೆ ಎಚ್ ಬಿ ಕಾಲೋನಿ ನಿವಾಸಿಯೊಬ್ಬರು ಕೊರೊನಾ ಸೋಂಕಿನಿಂದಾಗಿ ಇದೇ ತಿಂಗಳ 14ನೇ ತಾರೀಖು ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೊಂಕು ಹಿನ್ನೆಲೆ ಚಿಕಿತ್ಸೆ ನಡೆಯುತ್ತಿತ್ತು.

ಆದ್ರೆ ಇಂದು ಬೆಳಗ್ಗೆ ಅವರು ಮೃತಪಟ್ಟಿದ್ದು, ಬೆಳಿಗ್ಗೆಯಿಂದ ಆ್ಯಂಬುಲೆನ್ಸ್ ಗಾಗಿ ಸಂಬಂಧಿಕರು ಪರದಾಟ ನಡೆಸಿದ್ದಾರೆ. ಅವರ ಕಡೆಯವರು ಇದುವರೆಗೂ ಬರೊಬ್ಬರಿ 25 ಸಾವಿರ ರೂಪಾಯಿ ಕೊಟ್ಟು ಖಾಸಗಿ ಆ್ಯಂಬುಲೆನ್ಸ್ ಬುಕ್ ಮಾಡಿದ್ದಾರೆ. ಕೊನೆಗೂ ಇದೀಗ ಆ್ಯಂಬುಲೆನ್ಸ್ ಸಿಕ್ಕಿದೆ. ಕುಟುಂಬಸ್ಥರು ಈಗ ಸಪ್ತಗಿರಿ ಆಸ್ಪತ್ರೆಯಿಂದ ಸುಮ್ಮನಹಳ್ಳಿ ಚಿತಾಗಾರಕ್ಕೆ ಮೃತದೇಹ ಸಾಗಿಸುತ್ತಿದ್ದಾರೆ.

ಸಂಜೆ ವೇಳೆ ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆ ಮರುದಿನವೇ..
ಕೊರೊನಾದಿಂದ ಸಂಜೆ ವೇಳೆ ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆ ಮರುದಿನವೇ ಎಂಬಂತಾಗಿದೆ. ಸಂಜೆ ನಂತರ ಚಿತಾಗಾರದ ಬಳಿ ಬಂದ್ರೆ ಜಾಗವೇ ಸಿಗುತ್ತಿಲ್ಲ. ಚಿತಾಗಾರದ ಸುತ್ತಮುತ್ತ ಆ್ಯಂಬುಲೆನ್ಸ್ ಗಳು ಕಾದು ನಿಂತಿವೆ. ಬೆಳಿಗ್ಗೆಯಿಂದ ಬಂದ ಮೃತದೇಹಗಳ ಅಂತ್ಯಕ್ರಿಯೆ ತಡರಾತ್ರಿವರೆಗೂ ನಡೆಯುತ್ತಿದೆ. ಹಾಗಾಗಿ ಸಂಜೆ ವೇಳೆ ಬಂದ ಮೃತದೇಹಗಳಿಗೆ ನೋ ಎಂಟ್ರಿ ಎನ್ನಲಾಗುತ್ತಿದೆ. ಚಿತಾಗಾರದ ಸಿಬ್ಬಂದಿಗಳು ಬೇರೆ ಕಡೆ ಹೋಗುವಂತೆಯೂ ಸಂಬಂಧಿಕರಿಗೆ ಸೂಚಿಸುತ್ತಿದ್ದಾರೆ.

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us