ಸೈಟ್ ರಿಜಿಸ್ಟ್ರೇಷನ್ ಆಗದೇ ಪರದಾಡುತ್ತಿದ್ದವರಿಗೆ ಗುಡ್ ನ್ಯೂಸ್

ಕರ್ನಾಟಕ ಸರ್ಕಾರವು ಬಿ-ಖಾತಾ ನಿವೇಶನಗಳ ನೋಂದಣಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಿದೆ. ಆ ಮೂಲಕ ಬಿ-ಖಾತಾ ನಿವೇಶನದಾರರಿಗೆ ಕೊನೆಗೂ ಗುಡ್ ನ್ಯೂಸ್ ನೀಡಿದೆ. ಅಕ್ಟೋಬರ್ 30 ರಿಂದ ಸ್ಥಗಿತಗೊಂಡಿದ್ದ ಈ ಪ್ರಕ್ರಿಯೆ ಮುಂದಿನ ವಾರದಿಂದ ಪುನರಾರಂಭಗೊಳ್ಳಲಿದೆ. 30 ಲಕ್ಷ ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಆಸ್ತಿ ನೋಂದಣಿಗೆ ಪ್ಯಾನ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ.

ಸೈಟ್ ರಿಜಿಸ್ಟ್ರೇಷನ್ ಆಗದೇ ಪರದಾಡುತ್ತಿದ್ದವರಿಗೆ ಗುಡ್ ನ್ಯೂಸ್
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: May 28, 2025 | 3:43 PM

ಬೆಂಗಳೂರು, ಮೇ 28: ಬಿ ಖಾತಾ ನಿವೇಶನದಾರರಿಗೆ (B Khata Property) ಸದ್ಯದಲ್ಲೇ ಮತ್ತೆ ನೋಂದಣಿ ಪ್ರಕ್ರಿಯೆ ಶುರುವಾಗಲಿದೆ. ಆ ಮೂಲಕ ಸೈಟ್ ರಿಜಿಸ್ಟ್ರೇಷನ್ (Site Registration) ಆಗದೇ ಪರದಾಡುತ್ತಿದ್ದವರಿಗೆ ಸರಕಾರ ಕೊನೆಗೂ ಗುಡ್ ನ್ಯೂಸ್ ನೀಡಿದೆ. ಮುಂದಿನ ವಾರದಿಂದ ಮತ್ತೆ ಬಿ ಖಾತಾ ನಿವೇಶನಗಳನ್ನು ನೋಂದಣಿ ಮಾಡಲು ಸರಕಾರ ತೀರ್ಮಾನಿಸಿದೆ ಎಂದು ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತ ಕೆ.ಎ ದಯಾನಂದ ಹೇಳಿದ್ದಾರೆ.

ಆಯುಕ್ತ ಕೆ.ಎ ದಯಾನಂದ ಹೇಳಿದ್ದಿಷ್ಟು

ಈ ಬಗ್ಗೆ ಟಿವಿ9 ಜೊತೆಗೆ ಮಾತನಾಡಿರುವ ನೋಂದಣಿ ಮಹಾಪರಿವೀಕ್ಷಕರು ಹಾಗೂ ಮುದ್ರಾಂಕ ಆಯುಕ್ತ ಕೆ.ಎ ದಯಾನಂದ, ಕಳೆದ ಅಕ್ಟೋಬರ್ 30 ರಿಂದ ಇ ಸ್ವತ್ತು ಆಗದ ಯಾವುದೇ ಸೈಟ್ ರಿಜಿಸ್ಟ್ರೇಷನ್​​ ಆಗುತ್ತಿರಲಿಲ್ಲ. ಇದೀಗ ಬಿಬಿಎಂಪಿ ಹಾಗೂ ಆರ್​​ಡಿಪಿಆರ್​​ ಇಲಾಖೆ ಜೊತೆ ಮಾತುಕತೆ ಆಗಿದ್ದು, 2024 ಅಕ್ಟೋಬರ್​​ 31 ರೊಳಗೆ ಯಾವುದೆಲ್ಲಾ ಬಿ ಖಾತಾ ರಿಜಿಸ್ಟ್ರೇಷನ್ ಆಗಿದೆಯೋ ಅಂತಹ ಸೈಟ್​ಗಳಿಗೆ ಇ ಸ್ವತ್ತು ನೀಡಲು ನಿರ್ಧರಿಸಲಾಗಿದೆ. ಇದರಿಂದ ಲಕ್ಷಾಂತರ ನಿವೇಶನದಾರರಿಗೆ ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ಮುಂದೆ ಮನೆ ಕಟ್ಟುವ ಮುಂಚೆ OC ಸರ್ಟಿಫಿಕೆಟ್ ಕಡ್ಡಾಯ: ಇಲ್ಲಾಂದ್ರೆ ವಿದ್ಯುತ್, ನೀರಿನ ಸಂಪರ್ಕವಿಲ್ಲ

ಇದನ್ನೂ ಓದಿ
ಯಾದಗಿರಿ ಜಿಲ್ಲೆಯಲ್ಲಿ ಪ್ರವಾಹದ ಆತಂಕ
‘ಬಿ ಖಾತಾ ಆಸ್ತಿ ಮಾಲೀಕರಿಗೆ ಇನ್ನು ಬೆಸ್ಕಾಂ ತಾತ್ಕಾಲಿಕ ಸಂಪರ್ಕ ಸಿಗಲ್ಲ!’
ವಿದ್ಯುತ್ ಮತ್ತು ನೀರಿನ ಸಂಪರ್ಕಕ್ಕೆ OC ಸರ್ಟಿಫಿಕೆಟ್ ಕಡ್ಡಾಯ: ಬಿಬಿಎಂಪಿ
ವಿದ್ಯುತ್ ಸಮಸ್ಯೆ ಬಗ್ಗೆ ಬೆಸ್ಕಾಂಗೆ ವಾಟ್ಸ್​ಆ್ಯಪ್​ನಲ್ಲೇ ದೂರು ನೀಡಿ!

ಜೊತೆಗೆ 30 ಲಕ್ಷಕ್ಕಿಂತ ಮೇಲ್ಪಟ್ಟ ಆಸ್ತಿ ನೋಂದಣಿಗೆ ಪ್ಯಾನ್ ಕಾರ್ಡ್ ಫಾರ್ಮ್ ಕಡ್ಡಾಯ. ರಿಜಿಸ್ಟ್ರೇಷನ್ ಜೊತೆಯೇ ಪಾನ್ ಕಾರ್ಡ್ ಸಹಿಯುಳ್ಳ ಪ್ರತ್ಯೇಕ ಫಾರ್ಮ್ ಕೊಡಲೇಬೇಕು. ಆ ಮೂಲಕ ಐಟಿ ಇಲಾಖೆಗೆ ಯಾಮರಿಸುವುದನ್ನು ತಡೆಯಬಹುದಾಗಿದೆ. ನಿಮ್ಮ ಇಂಚಿಂಚು ಆದಾಯದ ಲೆಕ್ಕ ನೋಂದಣಿ ಜೊತೆಯೇ ಸಿಗುತ್ತದೆ. ಇವೆರೆಡು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಆಯುಕ್ತ ಕೆ.ಎ ದಯಾನಂದ ಹೇಳಿದ್ದಾರೆ.

ಇನ್ನು ಸರ್ಕಾರ ಸೈಟ್ ರಿಜಿಸ್ಟ್ರೇಷನ್​​ಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ಮಾಡಿದೆ. ಇತ್ತೀಚೆಗಷ್ಟೇ ಆಸ್ತಿಯಲ್ಲಿ ಮಾಲೀಕರ ಹೆಸರು ಸೇರ್ಪಡೆ ಮಾಡುವುದಕ್ಕೆ ಸಹ ಶುಲ್ಕ ನಿಗದಿ ಮಾಡಲಾಗಿತ್ತು. ಆ ಮೂಲಕ ಆಸ್ತಿಗಳ ಮಾರಾಟ ಹಾಗೂ ಖರೀದಿಯಲ್ಲಿ ಆಗುವ ಮೋಸವನ್ನು ತಪ್ಪಿಸುವುದಾಗಿದೆ.

ಇದನ್ನೂ ಓದಿ: ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ವಾಟ್ಸ್​ಆ್ಯಪ್​ನಲ್ಲೇ ಕಳುಹಿಸಿ ದೂರು ನೀಡಿ: ಬೆಸ್ಕಾಂ ಸಂಖ್ಯೆಗಳ ವಿವರ ಇಲ್ಲಿದೆ

ಸೈಟ್ ರಿಜಿಸ್ಟ್ರೇಷನ್​ ಹೊಸ ನಿಯಮದಲ್ಲಿ ಆಧಾರ್‌ ಕಾರ್ಡ್‌ ಜೋಡಣೆ ಕೂಡ ಮಾಡಿರಬೇಕು. ಜೊತೆಗೆ ಅಧಿಕೃತ ಮೊಬೈಲ್ ನಂಬರ್, ಬಯೋಮೆಟ್ರಿಕ್ ಆಸ್ಟ್ರೇಟ್ ಹಾಗೂ ಹೆಸರು ಹೊಂದಾಣಿಕೆ ಆಗಿದೆಯಾ ಎನ್ನುವ ಅಂಶಗಳನ್ನು ಖಚಿತಪಡಿಸಿಕೊಳ್ಳಬೇಕು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.