ಆನೇಕಲ್, ಫೆಬ್ರುವರಿ 1: ರೈತರ (farmers) ಜಮೀನುಗಳ ಮೇಲೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಲಿ (KIADB) ಕಣ್ಣು ಬಿದ್ದಿದೆ. 19 ವರ್ಷಗಳ ಬಳಿಕ ಭೂ ಸ್ವಾಧೀನ ಹಿನ್ನೆಲೆ ಕೆಐಎಡಿಬಿ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಇಗ್ಗಲೂರು ರೈತ ಜಯರಾಮ್ ಕುಟುಂಬ ಆಕ್ರೋಶ ಹೊರಹಾಕಿದ್ದಾರೆ. ಇಗ್ಗಲೂರು ಸರ್ವೆ ನಂ 83/4 ರಲ್ಲಿನ, 1ಎಕರೆ 36 ಗುಂಟೆ ಜಮೀನನ್ನು 2005 ರಲ್ಲಿ ಕೆಐಎಡಿಬಿಯಿಂದ ಭೂ ಸ್ವಾಧೀನಕ್ಕೆ ನೋಟಿಸ್ ನೀಡಿದ್ದಾರೆ. ಅಂದಿನಿಂದ ರೈತ ಜಯರಾಮ್ ಕುಟುಂಬ ಕಾನೂನು ಹೋರಾಟ ಮಾಡುತ್ತಿದೆ. ಜೊತೆಗೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದಾರೆ.
ಜಮೀನು ವಿಚಾರ ನ್ಯಾಯಾಲಯದಲ್ಲಿದ್ದರು. ಕೆಐಎಡಿಬಿಯಿಂದ ಬೇರೆ ಬೇರೆ ಕಂಪನಿಗಳಿಗೆ ಜಮೀನು ಅಲಾಟ್ಮೆಂಟ್ ಮಾಡಲಾಗಿದೆ. ನ್ಯಾಯಾಂಗ ನಿಂದನೆ ಹಿನ್ನೆಲೆ ಕೆಲ ಕಂಪನಿಗಳು ಜಮೀನು ತಿರಸ್ಕರಿಸಿದ್ದವು. ತಾವು ಪಾವತಿಸಿದ್ದ ಹಣ ವಾಪಸ್ ಪಡೆದಿದ್ದವು. ಕಂಪನಿಗಳು ಜಮೀನು ತಿರಸ್ಕಾರ ಹಿನ್ನೆಲೆ ಕೆಐಎಡಿಬಿ ಅಧಿಕಾರಿಗಳು ಕೃಷಿಯೋಗ್ಯ ಭೂಮಿ ಎಂದು ಡಿನೋಟಿಫಿಕೇಶನ್ ಮಾಡುವುದಾಗಿ ತಿಳಿಸಿದ್ದರು.
ನಾವು ಸಹ ಜಮೀನು ಉಳಿಯಿತು ಎಂದು ತೋಟ ಮಾಡಿಕೊಂಡಿದ್ದೆವು. ಆದರೆ ನ್ಯಾಯಾಲಯದಲ್ಲಿ ನಮ್ಮ ಅರ್ಜಿ ವಜಾ ಆಗಿದೆ ಎಂದು ಮರಳಿ ಬಂದಿದ್ದಾರೆ. ನ್ಯಾಯಾಲಯದ ಮುಂದೆ ಇನ್ನೊಂದು ಅರ್ಜಿ ಇದೆ. ತಡೆಯಾಜ್ಞೆ ಸಹ ಇದ್ದರೂ ಒತ್ತಾಯಪೂರ್ವಕವಾಗಿ ಜಮೀನು ವಶಕ್ಕೆ ಬಂದಿದ್ದಾರೆ.
ಇದನ್ನೂ ಓದಿ: ಟಿವಿ9 ವರದಿ ಇಂಪ್ಯಾಕ್ಟ್: ಒತ್ತುವರಿಯಾಗಿದ್ದ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಜಮೀನು ತೆರವು
ಇಡೀ ಕುಟುಂಬ ನೇಣು ಬಿಗಿದುಕೊಂಡಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ನಮ್ಮ ಸಮಾಧಿಗಳ ಜೊತೆಗೆ ಜಾಗವನ್ನ ಅಧಿಕಾರಿಗಳು ವಶಕ್ಕೆ ಪಡೆಯಲಿ. ಆದರೆ ಜಮೀನು ಭೂ ಸ್ವಾಧೀನಕ್ಕೆ ಬಿಡುವುದಿಲ್ಲ ಎಂದು ರೈತರ ವ್ಯಾಪಕ ವಿರೋಧದ ಬಳಿಕ ಅಧಿಕಾರಿಗಳು ವಾಪಸ್ ತೆರಳಿದ್ದಾರೆ.
ಬೆಂಗಳೂರು ಗ್ರಾಮಾಂತರ: ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಕೆಐಎಡಿಬಿ ಇದೀಗ ಬೆಂಗಳೂರು ಹೊರವಲಯದ ಕಡೆ ಕೈಗಾರಿಕಾ ವಲಯ ಸ್ಥಾಪನೆಗೆ ಸಾವಿರಾರು ಎಕರೆ ರೈತರ ಭೂಮಿಯನ್ನ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದ್ದರು. ಇದರ ನಡುವೆ ದೊಡ್ಡಬಳ್ಳಾಪುರ ತಾಲೂಕಿನ ಲಿಂಗನಹಳ್ಳಿ ಗ್ರಾಮದ ಬಳಿ 550 ಎಕರೆ ಮೊದಲನೇ ಹಂತದಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು. ಇದರ ನಡುವೆ ಕೊನಘಟ್ಟ ಗ್ರಾಮ ಸೇರಿದಂತೆ ಇನ್ನಿತರ ಮೂರು ಗ್ರಾಮಗಳ 971 ಎಕರೆ ಕೃಷಿ ಭೂಮಿಯನ್ನ ಕೆಐಎಡಿಬಿ ಸ್ವಾಧೀನಕ್ಕೆ ಮುಂದಾಗಿದ್ದು ಕಳೆದ ಹಲವು ದಿನಗಳಿಂದ ರೈತರು ವಿರೋಧಿಸಿಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದೆ ಲೋಕಾಯುಕ್ತಕ್ಕೆ ಸುಳ್ಳು ವರದಿ ಆರೋಪ; ಗ್ರಾಮಸ್ಥರ ಪ್ರತಿಭಟನೆ
ಇದರ ನಡುವೆ ಇದೀಗ ಸರ್ಕಾರ ಕೊನಘಟ್ಟ ಗ್ರಾಮದಲ್ಲಿ ಎಕರೆಗೆ 1 ಕೋಟಿ 50 ಲಕ್ಷ ರೂ. ಪರಿಹಾರ ನಿಗದಿ ಮಾಡಿದ್ದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರದ 2013 ಆದೇಶದಂತೆ 1/4 ರಂತೆ ಪರಿಹಾರ ಕೊಡಿ ಇಲ್ಲವೇ ನಾವು ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.