ಅಪಾರ್ಟ್​ಮೆಂಟ್​​​ ಅಡವಿಟ್ಟು ಲೋನ್ ಪಡೆದ ಮಾಲೀಕ: 29 ಫ್ಲ್ಯಾಟ್​ಗಳನ್ನು ಸೀಜ್​ ಮಾಡಿ ನಿವಾಸಿಗಳಿಗೆ ಶಾಕ್ ನೀಡಿದ ಬ್ಯಾಂಕ್​​​​ ಸಿಬ್ಬಂದಿ

ಅಪಾರ್ಟ್​ಮೆಂಟ್​​​ ಅಡವಿಟ್ಟು ಲೋನ್ ಪಡೆದ ಮಾಲೀಕನಿಗೆ ಬಿಗ್​ ಶಾಕ್​ ಎದುರಾಗಿದ್ದು, ಅಪಾರ್ಟ್​ಮೆಂಟ್​​ನ 29 ಫ್ಲ್ಯಾಟ್​ಗಳನ್ನು ಬ್ಯಾಂಕ್​ ಸೀಜ್​ ಮಾಡಿದೆ.

ಬೆಂಗಳೂರು: ಅಪಾರ್ಟ್​ಮೆಂಟ್ (apartment)​​​ ಅಡವಿಟ್ಟು ಲೋನ್ ಪಡೆದ ಮಾಲೀಕನಿಗೆ ಬಿಗ್​ ಶಾಕ್​ ಎದುರಾಗಿದ್ದು,  ಅಪಾರ್ಟ್​ಮೆಂಟ್​​ನ 29 ಫ್ಲ್ಯಾಟ್​ಗಳನ್ನು ಬ್ಯಾಂಕ್​ ಸೀಜ್​ ಮಾಡಿದೆ. ರಾಜಾಜಿನಗರದ ಶಿವನಹಳ್ಳಿಯಲ್ಲಿರುವ ಶಿವಣ್ಣ ಎಂಬುವರಿಗೆ ಸೇರಿದ ಐಶ್ವರ್ಯ ಅಪಾರ್ಟ್​ಮೆಂಟ್​ನ್ನು ಬ್ಯಾಂಕ್​ ಒಂದರಲ್ಲಿ ಅಡವಿಟ್ಟು ₹15 ಕೋಟಿ ರೂ. ಸಾಲ ಪಡೆದಿದ್ದಾರೆ. ಆದರೆ ಸಾಲ ಮರುಪಾವತಿಸದಿದ್ದಾಗ ನ್ಯಾಯಾಲಯದ ಆದೇಶದಂತೆ ಬ್ಯಾಂಕ್​ ಸಿಬಂದ್ದಿಗಳು ಸೀಜ್​ ಮಾಡಿದ್ದಾರೆ. ಆ ಮೂಲಕ ಲೀಸ್​ ಮತ್ತು ಬಾಡಿಗೆಗೆ ಇದ್ದ ನಿವಾಸಿಗಳಿಗೆ ಬ್ಯಾಂಕ್​​​​ ಸಿಬ್ಬಂದಿ ಶಾಕ್​ ನೀಡಿದ್ದಾರೆ. ಮನೆ ತೆರವು ವೇಳೆ ಬ್ಯಾಂಕ್ ಸಿಬ್ಬಂದಿ ಹಾಗೂ ನಿವಾಸಿಗಳ ನಡುವೆ ವಾಗ್ವಾದ ಉಂಟಾಗಿದೆ. ಸದ್ಯ ಮನೆಗಳಲ್ಲಿದ್ದ ಸಾಮಾಗ್ರಿಗಳನ್ನ ಕೆನರಾ ಬ್ಯಾಂಕ್ ಸಿಬ್ಬಂದಿಗಳು ಹೊರ ಹಾಕುತ್ತಿದ್ದಾರೆ. ಸುಮಾರು 100ಕ್ಕೂ ಹೆಚ್ಚು ಜನರು ಬೀದಿಗೆ ಬಿದ್ದಿದ್ದಾರೆ.

ಬ್ಯಾಂಕ್​ನವರು ತುಂಬಾ ಹಿಂಸೆ ಕೊಡ್ತಿದ್ದಾರೆಂದು ಆರೋಪಿಸಿದ ಬಿಲ್ಡಿಂಗ್ ಮಾಲೀಕ 

ಬಿಲ್ಡಿಂಗ್ ಮಾಲೀಕ ಶಿವಣ್ಣ ಭಾವ ಶಶಿಕುಮಾರ್ ಮಾತನಾಡಿ, ಈ ಬಿಲ್ಡಿಂಗ್ ಗ್ಯಾರಂಟರ್ ನಾವು. ಬೇರೆ ಯಾರು ಅಲ್ಲ. ಮೇನ್ ಒನರ್ ಚಿಕ್ಕನಾಯಕನಹಳ್ಳಿ ಮೇನ್ಸ್ ಒನರ್​ಗೆ ಗ್ಯಾರಂಟಿ ಕೊಟ್ಟಿದ್ದೇವೆ. ಮೇನ್ಸ್ ನಿಂತು ಹೋದ ಮೇಲೆ ಕಟ್ಟಿಲ್ಲ. ಇವರದು 46 ಪ್ರಾಪರ್ಟಿ. ಮೇನ್ ಬ್ಯಾರೇರ್ ಹತ್ರ ಹೋಗ್ತಿಲ್ಲ. ಬ್ಯಾಂಕ್​ನವರು ನೋಟಿಸ್ ಕೊಡದೇ ಬಂದಿದ್ದಾರೆ. ನಾಳೆ ಹೈಕೋರ್ಟ್​ನಲ್ಲಿ ಇಯರಿಂಗ್ ಇದೆ. ಹೀಗಾಗಿ ಬ್ಯಾಂಕ್​ನವರು ಬೀಗ ತೆಗೆದು ಹೋಗಿದ್ದಾರೆ. ನಾವು ತಿಂದಿಲ್ಲ, ನಾವು ಶ್ಯೂರಿಟಿ ಕೊಟ್ಟಿದ್ದೇವೆ ಅಷ್ಟೇ. ಬ್ಯಾಂಕ್​ನವರು ತುಂಬಾ ಹಿಂಸೆ ಕೊಡ್ತಿದ್ದಾರೆಂದು ಆರೋಪ ಮಾಡಿದ್ದಾರೆ.

ಕಂಗಾಲಾದ ಬಾಡಿಗೆದಾರರು  

ದಿಕ್ಕು ತೋಚದೆ ಬಾಡಿಗೆದಾರರು ಕಂಗಾಲಾಗಿದ್ದಾರೆ. ಸಾಮಾಗ್ರಿಗಳ ಜೊತೆಗೆ ಬಾಡಿಗೆದಾರರ ಬದುಕು ಬೀದಿಗೆ ಬಂದಿದೆ. ಮನೆಯ ಸಾಮಾಗ್ರಿಗಳನ್ನ ಬೀದಿಲ್ಲಿಟ್ಟಿರುವ ಬಾಡಿಗೆ ನಿವಾಸಿಗಳು, ನಮ್ಮ ಹಣ ನಮಗೆ ವಾಪಾಸ್ ಕೊಟ್ಟುಬಿಡಿ ಅಂತ ಮಾಲೀಕರ ಜೊತೆ ಜಗಳ ಮಾಡುತ್ತಿದ್ದಾರೆ. ಸ್ವಲ್ಪ ಸಮಯ ಕೊಡಿ ಎಂದು ಮಾಲೀಕ ಶಿವಣ್ಣ ಕೇಳುತ್ತಿದ್ದಾರೆ.

ಇದನ್ನೂ ಓದಿ: ಅಡುಗೆ ಅನಿಲ ಸಿಲಿಂಡರ್ ಬೆಲೆ ರೂ. 450 ಆದಾಗ ಬೀದಿಗಿಳಿದು ಪ್ರತಿಭಟನೆ ನಡೆಸಿದ ಬಿಜೆಪಿಯ ಮಹಾನ್ ನಾಯಕಿಯರು ಈಗೆಲ್ಲಿ? ಕುಸುಮಾ, ಕಾಂಗ್ರೆಸ್ ಕಾರ್ಯಕರ್ತೆ

ಬ್ಯಾಂಕ್ ಸಿಬ್ಬಂದಿಗಳು ಮತ್ತು ಮಾಲೀಕರ ನಡುವೆ ವಾಗ್ವಾದ

ಇನ್ನು ಬ್ಯಾಂಕ್ ಸಿಬ್ಬಂದಿಗಳು ಮತ್ತು ಮಾಲೀಕರ ನಡುವೆ ವಾಗ್ವಾದ ಉಂಟಾಗಿದ್ದು, ಮಾಹಿತಿ ನೀಡದೆಯೇ ಸೀಜ್ ಮಾಡೋಕೆ ಬಂದಿದ್ದೀರಾ ಅಂತ ಗಲಾಟೆ ಮಾಡಿದರು. ಗಲಾಟೆ ತಿಳಿಗೊಳಿಸಲು ಪೊಲೀಸರು ಎಂಟ್ರಿ ಕೊಟ್ಟಿದ್ದಾರೆ. ಬಳಿಕ ಸೀಜ್ ಕಾರ್ಯಚರಣೆ ಸ್ಥಗಿತ ಮಾಡಲಾಗಿದೆ. ನಾಳೆ ಮತ್ತೆ ಮುಟ್ಟುಗೋಕು ಹಾಕಲು ಬರುತ್ತೇವೆ ಬ್ಯಾಂಕ್ ಸಿಬ್ಬಂದಿಗಳು ಹೇಳಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:50 pm, Thu, 2 March 23