ಬೆಳ್ಳಿ ಅಂಗಡಿಗೆ ಬರ್ತಿದ್ದ ವ್ಯಾಪಾರಿಯಿಂದ ಕಳ್ಳತನ: ಇಬ್ಬರ ಬಂಧನ, 12 ಕೆಜಿ ಬೆಳ್ಳಿ ವಶಕ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 25, 2025 | 5:39 PM

ಕಬ್ಬನ್ ಪೇಟೆಯ ಬೆಳ್ಳಿ ಅಂಗಡಿಯಲ್ಲಿ 19 ಕೆಜಿ ಬೆಳ್ಳಿ ಕಳ್ಳತನವಾಗಿದೆ. ತಮಿಳುನಾಡಿನ ದರ್ಶನ್ ಮತ್ತು ಅವನ ಸಹಚರ ಕಳ್ಳತನ ಮಾಡಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ. ಅಂಗಡಿ ಮಾಲೀಕ ಮತ್ತು ದರ್ಶನ್ ನಡುವೆ ಮನಸ್ತಾಪವಿತ್ತು. ಪೊಲೀಸರು ಇಬ್ಬರನ್ನೂ ಬಂಧಿಸಿ 12 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಬೆಳ್ಳಿ ಅಂಗಡಿಗೆ ಬರ್ತಿದ್ದ ವ್ಯಾಪಾರಿಯಿಂದ ಕಳ್ಳತನ: ಇಬ್ಬರ ಬಂಧನ, 12 ಕೆಜಿ ಬೆಳ್ಳಿ ವಶಕ್ಕೆ
ಬೆಳ್ಳಿ ಅಂಗಡಿಗೆ ಬರ್ತಿದ್ದ ವ್ಯಾಪಾರಿಯಿಂದ ಕಳ್ಳತನ: ಇಬ್ಬರ ಬಂಧನ, 12 ಕೆಜಿ ಬೆಳ್ಳಿ ವಶಕ್ಕೆ
Follow us on

ಬೆಂಗಳೂರು, ಜನವರಿ 25: ಬೆಳ್ಳಿ ಅಂಗಡಿಯಲ್ಲಿ ವ್ಯಾಪಾರಕ್ಕೆ ಬರ್ತಿದ್ದವನೇ ಕಳ್ಳತನ (theft) ಮಾಡಿರುವಂತಹ ಘಟನೆ ನಗರದ ಕಬ್ಬನ್ ಪೇಟೆಯ ವರ್ಧರಾಜ್ ಪೆರುಮಾಳ್ ಸಿಲ್ವರ್ ಎಂಬುವವರಿಗೆ ಸೇರಿದ ಬೆಳ್ಳಿ ತಯಾರಿಕೆ ಅಂಗಡಿಯಲ್ಲಿ ನಡೆದಿದೆ. 19 ಕೆಜಿ ಬೆಳ್ಳಿ ಕದ್ದ ಅಸಾಮಿಗಳ ಕರಾಮತ್ತು ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇಬ್ಬರು ಆರೋಪಿಗಳನ್ನ ಬಂಧಿಸಿ 12 ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ತಮಿಳುನಾಡಿನ ದರ್ಶನ್  ಮತ್ತು ಆತನ ಸಹಚರರಿಂದ ಕಳ್ಳತನ ಮಾಡಿದ್ದಾರೆ. ಒಬ್ಬ ಕಳ್ಳತನ ಮಾಡಿದರೆ ಮತ್ತೊಬ್ಬನಿಂದ ಕಾವಲು ಕಾಯುತ್ತಿದ್ದರು. ಬೆಳ್ಳಿ ವಸ್ತುಗಳನ್ನು ಮಾಡಿಸಿಕೊಳ್ಳಲು ದರ್ಶನ್ ಆಗಾಗ ಅಂಗಡಿಗೆ ಬರುತ್ತಿದ್ದ. ಆದರೆ ಇತ್ತೀಚೆಗೆ ಅಂಗಡಿ ಮಾಲೀಕ ಮತ್ತು ದರ್ಶನ್ ಮಧ್ಯೆ ಮನಸ್ತಾಪ ಉಂಟಾಗಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆ ಶವ ಪತ್ತೆ: 3 ಮಕ್ಕಳ ತಾಯಿಯನ್ನ ಕೊಂದು ಬಿಸಾಡಿರುವ ದುಷ್ಕರ್ಮಿಗಳು

ಕಳೆದ ಡಿ.23ರಂದು ದರ್ಶನ್ ಮತ್ತು ಸಹಚರರು ಅಂಗಡಿಗೆ ಬಂದಿದ್ದರು. ಈ ವೇಳೆ ಮಾಲೀಕ ಸೆಂದಿಲ್ ಅಂಗಡಿಯಲ್ಲಿ ಇರಲಿಲ್ಲ. ಈ ಅವಕಾಶ ಉಪಯೋಗಿಸಿಕೊಂಡು ಕೆಲಸದವನ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡಿದ್ದಾರೆ. 20 ಲಕ್ಷ ರೂ. ಮೌಲ್ಯದ 19 ಕೆಜಿ ಬೆಳ್ಳಿ ವಸ್ತುವನ್ನು ತನ್ನ ಬ್ಯಾಗ್​ನಲ್ಲಿ ಹಾಕಿ ಪರಾರಿಯಾಗಿದ್ದರು. ಈ ಬಗ್ಗೆ ಹಲಸೂರು ಗೇಟ್ ಠಾಣೆಗೆ ಅಂಗಡಿ‌ ಮಾಲೀಕ ದೂರು ನೀಡಿದ್ದರು.

ಶೇಖರ್​ ಹೆಚ್​.ಟಿ ಹೇಳಿದ್ದಿಷ್ಟು 

ಬೆಂಗಳೂರಿನಲ್ಲಿ ಕೇಂದ್ರ ವಿಭಾಗ ಡಿಸಿಪಿ ಶೇಖರ್​ ಹೆಚ್​.ಟಿ ಹೇಳಿಕೆ ನೀಡಿದ್ದು, ನಗರದ ಕಬ್ಬನ್ ಪೇಟೆಯಲ್ಲಿ ಬೆಳ್ಳಿ ತಯಾರಿಕೆ ಅಂಗಡಿಯಲ್ಲಿ ಕಳ್ಳತನವಾಗಿದೆ. ತಮಿಳುನಾಡಿನ ದರ್ಶನ್  ಮತ್ತು ಆತನ ಸಹಚರ ಕಳ್ಳತನ ಮಾಡಿದ್ದಾರೆ. 20 ಲಕ್ಷ ರೂ. ಮೌಲ್ಯದ 19 ಕೆಜಿ ಬೆಳ್ಳಿ ವಸ್ತು ಕದ್ದು ಪರಾರಿಯಾಗಿದ್ದಾರೆ. ಹಲಸೂರು ಗೇಟ್ ಠಾಣೆಗೆ ಅಂಗಡಿ‌ ಮಾಲೀಕ ದೂರು ನೀಡಿದ್ದರು. ತನಿಖೆ ವೇಳೆ ಇಬ್ಬರನ್ನು ಬಂಧಿಸಿ 12 ಕೆಜಿ ಬೆಳ್ಳಿ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

ನಶೆಯಲ್ಲಿ ಸ್ನೇಹಿತನನ್ನೇ ಕೊಂದ ಆರೋಪಿ ಅರೆಸ್ಟ್

ಮತ್ತೊಂದು ಪ್ರಕರಣದಲ್ಲಿ ಪತ್ನಿ ಅನೈತಿಕ ಸಂಬಂಧದ ಬಗ್ಗೆ ಮಾತನಾಡಿದ್ದಕ್ಕೆ ಕೊಲೆ ಮಾಡಿದ್ದ ಆರೋಪಿ ಮಾದೇಶ(38) ನನ್ನು ಜಿಗಣಿ ಠಾಣೆ ಪೊಲೀಸರಿಂದ ಬಂಧಿಸಲಾಗಿದೆ. ಜನವರಿ 17ರಂದು ಕುಡಿದ ಅಮಲಿನಲ್ಲಿ ರಾಜಾಪುರ ಬಳಿಯ ಶೆಡ್​ನಲ್ಲಿ ಕಬ್ಬಿಣದ ರಾಡ್, ದೊಣ್ಣೆಯಿಂದ ಹೊಡೆದು, ಕಲ್ಲು ಎತ್ತಿಹಾಕಿ ಜಗದೀಶ್(45) ನನ್ನು ಮಾದೇಶ ಕೊಂದಿದ್ದ. ಜಗದೀಶ್ ಹತ್ಯೆಗೆ ಸಹಕರಿಸಿದ್ದ ಭುವನೇಶ್​ಗಾಗಿ ಜಿಗಣಿ ಠಾಣೆ ಪೊಲೀಸರಿಂದ ಶೋಧ ಮುಂದುವರೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.