ಬಾಲ್ಡ್ ಬೆಂಗಳೂರು: ಇದು ಬೆಂಗಳೂರಿಗರ ‘ಒಂದು ಮೊಟ್ಟೆ’ಯ ಕಥೆ!
ಸಖತ್ ಪರ್ಸನಾಲಿಟಿ, ಒಳ್ಳೆಯ ಮೈಬಣ್ಣ, ಆದರೆ ಪಾಪ ತಲೆಕೂದಲಿಲ್ಲ. ಬೊಕ್ಕ ತಲೆ! ಇತ್ತೀಚಿಗೆ ಸಾಕಷ್ಟು ಜನ ತಮ್ಮ ಕೂದಲು ಉದುರುವಿಕೆಯಿಂದಾಗಿ ಒಂದು ಮೊಟ್ಟೆಯ ಕಥೆಯ ಹೀರೋ ಆಗ್ತಿದ್ದಾರೆ. ಈ ಸಮಸ್ಯೆಯಿಂದ ಎಷ್ಟೋ ಹುಡುಗರನ್ನು ಮದುವೆಯಾಗಲು ಹುಡುಗಿಯರು ಒಪ್ಪುತ್ತಿಲ್ಲ. ಹುಡುಗರಷ್ಟೆ ಅಲ್ಲ, ಕೂದಲು ಉದುರುವಿಕೆಯಿಂದ ಹುಡುಗಿಯರು ಕೂಡ ತಮ್ಮ ಬ್ಯೂಟಿ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಈ ಬಗ್ಗೆ ವೈದ್ಯರು ಹೇಳುವುದೇನು? ಇಲ್ಲಿದೆ ವಿವರ.
ಬೆಂಗಳೂರು, ಜನವರಿ 25: ಇತ್ತೀಚಿಗೆ ಯುವಕರ ಹಾಗೂ ಯುವತಿಯರ ತೆಲೆ ಮೇಲಿನ ಕೂದಲು ಮಾಯವಾಗುತ್ತಿದೆ. 100 ಜನರಲ್ಲಿ 30 ಕ್ಕೂ ಹೆಚ್ಚು ಜನರಲ್ಲಿ ತಲೆ ಕೂದಲು ಉದರುವ ಸಮಸ್ಯೆ ಕಂಡು ಬರುತ್ತಿದೆ. ಬೆಂಗಳೂರಿನ ಜನರಲ್ಲಿಯೇ ತಲೆ ಕೂದಲು ಉದುರುವಿಕೆ ಹೆಚ್ಚಾಗಿ ಕಂಡು ಬರುತ್ತಿದೆ. ಮುಖ್ಯವಾಗಿ 25 ರಿಂದ 35 ವಯಸ್ಸಿನ ಜನರಲ್ಲಿಯೇ ಈ ಸಮಸ್ಯೆ ಹೆಚ್ಚಾಗಿದೆ.
ಈ ಸಮಸ್ಯೆ ಇಷ್ಟಕ್ಕೇ ಮುಗಿಯಿತು ಅಂದುಕೊಳ್ಳಬೇಡಿ. ಈ ಸಮಸ್ಯೆಯಿಂದ ಸಾಕಷ್ಟು ಯುವಕರಿಗೆ ಮದವೆಗೆ ಹುಡುಗೀಯರೇ ಸಿಗುತ್ತಿಲ್ಲವಂತೆ. ಇದೇ ಒತ್ತಡದಲ್ಲಿ ವೈದ್ಯರ ಬಳಿ ಬರುವ ಯುವಕರ ಸಂಖ್ಯೆ ಹೆಚ್ಚಾಗಿದೆಯಂತೆ. ಈ ಬಗ್ಗೆ ಕೆಸಿ ಜನರಲ್ ಆಸ್ಪತ್ರೆ ಡರ್ಮಟಾಲಜಿಸ್ಟ್ ಡಾ ಧ್ಯಾನೇಶ್ ಕೂಡ ಮಾಹಿತಿ ನೀಡಿದ್ದಾರೆ.
40 ವರ್ಷದೊಳಗಿನವರಲ್ಲಿಯೇ ತಲೆ ಕೂದುಲು ಉದರುವಿಕೆ ಹೆಚ್ಚಾಗಿರುವುದು ಆತಂಕ ಹೆಚ್ಚಿಸಿದೆ. ಮದುವೆಯಾಗುತ್ತಿಲ್ಲ, ಹುಡಗಿ ಸಿಗುತ್ತಿಲ್ಲ, ಸೌಂದರ್ಯ ಹಾಳಾಗುತ್ತಿದೆ ಎಂದು ಸಾಕಷ್ಟಯ ಯುವಕರು ಆದಿವಾಸಿ ಸೇರಿದಂತೆ ನಾನಾ ಚಿಕಿತ್ಸೆ ಮೊರೆ ಹೋಗುತ್ತಿದ್ದಾರೆ. ಹೀಗೆ ಮಾಡಿ ಲಕ್ಷಂತಾರ ದುಡ್ಡು ಕಳೆದುಕೊಳ್ಳದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಯುವಕರಲ್ಲೇ ಯಾಕೆ ಕೂದಲು ಉದುರುವಿಕೆ ಹೆಚ್ಚು?
ಡರ್ಮಾಟಾಲಿಜಿಸ್ಟ್ ಹೇಳುವ ಪ್ರಕಾರ, ಕರ್ನಾಟಕದ ಇತರೆಡೆಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿಯೇ ಈ ಸಮಸ್ಯೆ ಹೆಚ್ಚಾಗಿದೆ. ಇದಕ್ಕೆ ರಾಜಧಾನಿಯ ಹಾರ್ಡ್ ವಾಟರ್, ಆಹಾರ ಪದ್ಧತಿ, ಅತಿಯಾದ ಡಯಟ್, ವಾಯುಮಾಲಿನ್ಯ ಕೂಡಾ ಕಾರಣವಾಗುತ್ತಿದೆ ಎಂದು ಆಹಾರ ತಜ್ಞೆ ಡಾ. ಪ್ರೇಮಾ ಹೇಳಿದ್ದಾರೆ.
ಕೂದಲು ಉದುರುವಿಕೆಗೆ ಹೆಚ್ಚಿನವರು ದೂರುವುದು ಬೆಂಗಳೂರಿನ ನೀರು ಹಾಗೂ ಮಾಲಿನ್ಯ. ಅದರಲ್ಲೂ ಬೋರ್‌ನ ಹಾರ್ಡ್‌ವಾಟರ್‌ನಿಂದ ತಲೆ ಕೂದಲು ಉದುರಿಹೋಗುತ್ತಿದೆ ಎಂದು ಹೇಳುತ್ತಿದ್ದಾರೆ. ಆದರೆ, ಕೇವಲ ಕಾವೇರಿ ನೀರಿನ ಸಂಪರ್ಕ ಮಾತ್ರ ಇರುವ ಕಡೆಗಳಲ್ಲಿ ಇಂಥ ಪರಿಸ್ಥಿತಿಯಿಲ್ಲ. ಬೋರ್‌ವೆಲ್ ವಾಟರ್ ಬಳಸುವ ಪ್ರತಿ ಮನೆಗಳಲ್ಲೂ ಇಂಥದ್ದೊಂದು ಸಮಸ್ಯೆ ಎದ್ದು ಕಾಣುತ್ತಿದೆ.
ಇದನ್ನೂ ಓದಿ: “ನಾನು ವಿಷ್ಣುವಿನ ಮಗ, ಸತ್ಯ ಹುಡುಕಲು ಹೋಗುತ್ತಿದ್ದೇನೆ” ಪತ್ರ ಬರೆದಿಟ್ಟು ಬಾಲಕ ನಾಪತ್ತೆ
ಒಟ್ಟಿನಲ್ಲಿ ಕೇವಲ ಹಾರ್ಡ್ ವಾಟರ್ ಅಷ್ಟೇ ಅಲ್ಲ ರಾಜಧಾನಿಯ ಜೀವನ ಶೈಲಿ, ವಾಯು ಮಾಲಿನ್ಯ ಹಾಗೂ ಆಹಾರ ಪದ್ಧತಿಯೂ ಬೊಕ್ಕ ತಲೆಗೆ ಕಾರಣ ಎನ್ನುತ್ತಿದ್ದಾರೆ ತಜ್ಞರು. ಮಾನಸಿಕ ಒತ್ತಡ, ಡಯೆಟ್, ಆರೋಗ್ಯ ಸಮಸ್ಯೆಗಳಿಂದ ಬೆಂಗಳೂರಿನ ಸಾಕಷ್ಟು ಜನ ಒಂದು ಮೊಟ್ಟೆಯ ಕಥೆಯ ಹೀರೋ, ಹಿರೋಯಿನ್ ಆಗುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:30 pm, Sat, 25 January 25