AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮಕ್ಕ ಸುಧಾಕ್ಕನಿಗೆ ದೊಡ್ಡ ನಮಸ್ಕಾರ: ಕಿದ್ವಾಯಿ ಆಸ್ಪತ್ರೆಯ ವಿವಿಧ ಘಟಕಗಳನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ ಮಾತು

Basavaraj Bommai on Sudha Murty: ಹಲವರಿಗೆ ಐಶ್ವರ್ಯವಿರುತ್ತೆ, ದಾನ ಮಾಡುವ ಮನಸ್ಸಿರಲ್ಲ. ಆದರೆ ಸುಧಾಮೂರ್ತಿಯವರು ನಿಜಕ್ಕೂ ಗ್ರೇಟ್. ದಾನಿಗಳು ಇಲ್ಲದಿದ್ದರೆ ಇವತ್ತು ಜಗತ್ತು ಇರುತ್ತಿರಲಿಲ್ಲ. ಸಹಾಯ ಮಾಡಲು ಇನ್ನಷ್ಟು ದಾನಿಗಳು ಮುಂದೆ ಬರಬೇಕು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ನಮ್ಮಕ್ಕ ಸುಧಾಕ್ಕನಿಗೆ ದೊಡ್ಡ ನಮಸ್ಕಾರ: ಕಿದ್ವಾಯಿ ಆಸ್ಪತ್ರೆಯ ವಿವಿಧ ಘಟಕಗಳನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ ಮಾತು
ಸುಧಾ ಮೂರ್ತಿ ಹಾಗೂ ಬಸವರಾಜ ಬೊಮ್ಮಾಯಿ
TV9 Web
| Updated By: ganapathi bhat|

Updated on:Aug 23, 2021 | 4:57 PM

Share

ಬೆಂಗಳೂರು: ಕಿದ್ವಾಯಿ ನಿರ್ದೇಶಕ ರಾಮಚಂದ್ರರಿಂದ ಉತ್ತಮ ಕೆಲಸ ಆಗುತ್ತಿದೆ. ನಾನು ನಮ್ಮಕ್ಕ ಸುಧಕ್ಕನಿಗೆ ದೊಡ್ಡ ನಮಸ್ಕಾರ ಮಾಡುತ್ತೇನೆ. ಹಲವರಿಗೆ ಐಶ್ವರ್ಯವಿರುತ್ತೆ, ದಾನ ಮಾಡುವ ಮನಸ್ಸಿರಲ್ಲ. ಆದರೆ ಸುಧಾಮೂರ್ತಿಯವರು ನಿಜಕ್ಕೂ ಗ್ರೇಟ್. ದಾನಿಗಳು ಇಲ್ಲದಿದ್ದರೆ ಇವತ್ತು ಜಗತ್ತು ಇರುತ್ತಿರಲಿಲ್ಲ. ಸಹಾಯ ಮಾಡಲು ಇನ್ನಷ್ಟು ದಾನಿಗಳು ಮುಂದೆ ಬರಬೇಕು. ಇಂದು ಏನೇನು ಉದ್ಘಾಟಿಸಿದ್ದೇನೆ ಎಂದು ನನಗೆ ಗೊತ್ತಿಲ್ಲ. ನಾನು ಕೇವಲ ರಿಬ್ಬನ್ ಅಷ್ಟೇ ಕಟ್ ಮಾಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ವಿವಿಧ ಘಟಕಗಳ ಉದ್ಘಾಟನೆಯನ್ನು ಇಂದು (ಆಗಸ್ಟ್ 23) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೆರವೇರಿಸಿದ್ದಾರೆ. ಇನ್ಫೋಸಿಸ್ ಪ್ರತಿಷ್ಠಾನದಿಂದ ನಿರ್ಮಿಸಿರುವ ಒಪಿಡಿ ಬ್ಲಾಕ್, ಅಸ್ತಿಮಜ್ಜೆ ಕಸಿ ಘಟಕ, ಪೆಟ್ ಸ್ಕ್ಯಾನ್ ಬಂಕರ್, ಡೇ-ಕೇರ್ ವಾರ್ಡ್ ನವೀಕರಣ, ಸ್ಟೆಪ್ ಒನ್ ಐಸಿಯು ಸೇರಿ ವಿವಿಧ ಘಟಕಗಳನ್ನು ಸಿಎಂ ಬೊಮ್ಮಾಯಿ ಉದ್ಘಾಟಿಸಿದ್ದಾರೆ. ಬಸವರಾಜ ಬೊಮ್ಮಾಯಿಗೆ ಆರೋಗ್ಯ ಸಚಿವ ಸುಧಾಕರ್ ಸಾಥ್ ನೀಡಿದ್ದಾರೆ.

ಕಾಗದರಹಿತ ಆಸ್ಪತ್ರೆಯಾಗಿ ಕಿದ್ವಾಯಿ ಸಂಸ್ಥೆ ಮಾರ್ಪಟ್ಟಿದೆ. ಕಿದ್ವಾಯಿ ಸಂಸ್ಥೆಯಲ್ಲಿ ಇ-ಆಸ್ಪತ್ರೆ ಸಂವಹನ ವ್ಯವಸ್ಥೆ, ಅತ್ಯಾಧುನಿಕ ಡಿಜಿಟಲ್ ವ್ಯವಸ್ಥೆ ಮಾಡಲಾಗಿದೆ. ರೋಗಿಗಳ ತಪಾಸಣಾ ವರದಿಗಳು ಬೆರಳ ತುದಿಯಲ್ಲಿ ಲಭ್ಯ ಆಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಇ ಹಾಸ್ಟಿಟಲ್ ತಂತ್ರಾಂಶ ಅಳವಡಿಕೆ ಮಾಡಲಾಗಿದೆ. ಇದರಿಂದ ರೋಗಿಗಳು ವರದಿಗಾಗಿ ಓಡಾಡಬೇಕಾಗಿಲ್ಲ ಎಂದು ಮಾಹಿತಿ ನೀಡಲಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಕ್ಯಾನ್ಸರ್ ಆಸ್ಪತ್ರೆಗಾಗಿ ಜಮೀನು ಸೇರಿದಂತೆ ರಾಜ್ಯ ಸರ್ಕಾರ ಎಲ್ಲ ಸೌಲಭ್ಯ ನೀಡುತ್ತದೆ. ಆಸ್ಪತ್ರೆ ನಿರ್ಮಾಣಕ್ಕೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ಗೆ ಸಿಎಂ ಬೊಮ್ಮಾಯಿ ಸೂಚಿಸಿದ್ದಾರೆ. ಕನಿಷ್ಠ ದರದಲ್ಲಿ ಔಷಧ ಕೊಡುವ ವ್ಯವಸ್ಥೆ ಮಾಡುತ್ತೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ನಾವು ರಾಜ್ಯ ಸರ್ಕಾರದ ಜೊತೆ ಸೇರಿ ಕೆಲಸ ಮಾಡುತ್ತಿದ್ದೇವೆ: ಸುಧಾಮೂರ್ತಿ ಸಿಎಂ ನಮ್ಮ ಜಿಲ್ಲೆಯವರು, ಅವರ ಮೇಲೆ ವಿಶೇಷ ಅಭಿಮಾನವಿದೆ. ನಾನು ಶ್ರೀಮಂತರಿಗಾಗಿ ಏನೂ ಮಾಡುವುದಿಲ್ಲ. ಬಡವರಿಗಾಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಒಪಿಡಿ ಬ್ಲಾಕ್ ನಿರ್ಮಾಣ ಮಾಡಲಾಗಿದೆ. ಬಡವರ ಆರೋಗ್ಯ ಚೆನ್ನಾಗಿ ಇರಬೇಕೆಂದು ಕೆಲಸ ಮಾಡುತ್ತೇವೆ. ನಾವು ರಾಜ್ಯ ಸರ್ಕಾರದ ಜತೆ ಜೊತೆ ಸೇರಿ ಕೆಲಸ ಮಾಡುತ್ತಿದ್ದೇವೆ. ನಮ್ಮ ದೇಶದಲ್ಲೇ ಇದು ಪ್ರಥಮ ದರ್ಜೆ ಆಸ್ಪತ್ರೆಯಾಗಬೇಕು ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಈ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪಾಡ್; ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಕ್ರಾಂತಿ: ಬಸವರಾಜ ಬೊಮ್ಮಾಯಿ

ಸೈಬರ್ ಕ್ರೈಂ ವಿಭಾಗ ಬಲಪಡಿಸಲು ಇನ್ಫೋಸಿಸ್​ ನೆರವು: ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ

Published On - 4:53 pm, Mon, 23 August 21