ನ್ಯಾಯಾಂಗ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉನ್ನತ ಮಟ್ಟದ ಸಭೆ

ಸಮಾಲೋಚನಾ ಸಭೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ, ನ್ಯಾ. ಸತೀಶ್​ ಚಂದ್ರ ಶರ್ಮಾ, ನ್ಯಾ. ಬಿ.ವಿ.ನಾಗರತ್ನಾ, ನ್ಯಾ.ಅರವಿಂದ ಕುಮಾರ್, ನ್ಯಾ.ಅಲೋಕ್ ಆರಾಧ್ಯ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರಗೌಡ ಹಾಗೂ ಎಜಿ ಪ್ರಭುಲಿಂಗ್ ನಾವದಗಿ ಭಾಗಿಯಾಗಿದ್ದಾರೆ.

ನ್ಯಾಯಾಂಗ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉನ್ನತ ಮಟ್ಟದ ಸಭೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ganapathi bhat

Updated on:Aug 23, 2021 | 8:17 PM

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಇಂದು (ಆಗಸ್ಟ್ 23) ನ್ಯಾಯಾಂಗ ವಿಷಯಗಳ ಕುರಿತು ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಸಮಾಲೋಚನಾ ಸಭೆಯಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಒಕಾ, ನ್ಯಾ. ಸತೀಶ್​ ಚಂದ್ರ ಶರ್ಮಾ, ನ್ಯಾ. ಬಿ.ವಿ.ನಾಗರತ್ನಾ, ನ್ಯಾ.ಅರವಿಂದ ಕುಮಾರ್, ನ್ಯಾ.ಅಲೋಕ್ ಆರಾಧ್ಯ, ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಟಿ.ಜಿ.ಶಿವಶಂಕರಗೌಡ ಹಾಗೂ ಎಜಿ ಪ್ರಭುಲಿಂಗ್ ನಾವದಗಿ ಭಾಗಿಯಾಗಿದ್ದಾರೆ. ಬೆಂಗಳೂರಿನ ಕುಮಾರಕೃಪಾ ಅತಿಥಿಗೃಹದಲ್ಲಿ ಸಭೆ ನಡೆದಿದೆ.

ಇತ್ತ, ಲೋಕಾಯುಕ್ತ ವರದಿ ಆಧರಿಸಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದೆ. ಹೈಕೋರ್ಟ್​ಗೆ ಸಮಗ್ರ ವರದಿ ಸಲ್ಲಿಸಲು ಅಧಿಕಾರಿಗಳ ನೇಮಕ ಮಾಡಲಾಗಿದೆ. ಡಿಪಿಎಆರ್​ನ ಜಂಟಿ ಕಾರ್ಯದರ್ಶಿ ನೋಡಲ್ ಅಧಿಕಾರಿ ನೇಮಿಸಲಾಗಿದೆ. 24 ಇಲಾಖೆಗಳ ಪೈಕಿ 14 ಇಲಾಖೆಯಿಂದ ಮಾಹಿತಿ ಬಂದಿದೆ. ಉಳಿದ ಇಲಾಖೆಗಳಿಂದ ಮಾಹಿತಿ ಪಡೆದು ವರದಿ ಸಲ್ಲಿಸಲಾಗುವುದು ಎಂದು ಸರ್ಕಾರಿ ವಕೀಲರು ಹೇಳಿಕೆ ನೀಡಿದ್ದಾರೆ.

ಲೋಕಾಯುಕ್ತ, ಉಪ ಲೋಕಾಯುಕ್ತರು ವಿಚಾರಣಾ ವರದಿ ನೀಡಿದ್ದಾರೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ವರದಿ ನೀಡಿದ್ದಾರೆ. ಆದರೆ ಸರ್ಕಾರ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿ ಸಾಯಿದತ್ತಾ ಎಂಬುವರು ಪಿಐಎಲ್​ ಸಲ್ಲಿಸಿದ್ದರು. ಈ ಬಗ್ಗೆ ಹೈಕೋರ್ಟ್ ಸರ್ಕಾರದಿಂದ ಸಮಗ್ರ ಮಾಹಿತಿ ಕೇಳಿತ್ತು.

ಶಾಲೆಗಳಲ್ಲಿ ಕೊರೊನಾ ಮಾರ್ಗಸೂಚಿ ಪಾಲನೆಗೆ ಕ್ರಮ ಕೈಗೊಳ್ಳಿ ಶಾಲೆಗಳಲ್ಲಿ ಕೊವಿಡ್ ಮಾರ್ಗಸೂಚಿ ಪಾಲನೆಗೆ ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ಸೂಚನೆ ನೀಡಿದೆ. 9, 10ನೇ ತರಗತಿಗಳು ಆರಂಭವಾಗಿರುವ ಹಿನ್ನೆಲೆ, ಶಾಲೆಗಳ ಪುನಾರಂಭದಿಂದ ಕೊವಿಡ್ ಹರಡುವಂತಾಗಬಾರದು. ಕೊರೊನಾ ಸೋಂಕು ಇನ್ನೂ ನಿವಾರಣೆಯಾಗಿಲ್ಲ. ಎಸ್ಒಪಿ ಪಾಲನೆ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರು ಭೇಟಿ ನೀಡಬೇಕು. ಕೈಗೊಂಡ ಸುರಕ್ಷತಾ ಕ್ರಮಗಳ ಪರಿಶೀಲನೆ ನಡೆಸಬೇಕು. ಮಧ್ಯಾಹ್ನದ ಊಟ ಒದಗಿಸಲು ಕೈಗೊಂಡ‌ ಕ್ರಮ, ಶಾಲಾ ಸಿಬ್ಬಂದಿಗೆ ಲಸಿಕೆ ಹಾಕಿರುವ ಮಾಹಿತಿ ನೀಡಲು ಕೋರ್ಟ್ ಸೂಚನೆ ನೀಡಿದೆ. ಬಳಿಕ, ವಿಚಾರಣೆ ಆಗಸ್ಟ್ 30ಕ್ಕೆ ಮುಂದೂಡಲಾಗಿದೆ.

ಶಾಲೆ ಆರಂಭದ ಬಗ್ಗೆ ಬಸವರಾಜ ಬೊಮ್ಮಾಯಿ ಇಂದು ಮಾತನಾಡಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮೂಲಕ ದೊಡ್ಡ ಬದಲಾವಣೆ ಆಗಲಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಯಶಸ್ವಿಯಾದರೆ, ಆಗಸ್ಟ್ 23 ಎಜುಕೇಷನ್ ಡೇ ಆಗಲಿದೆ. ರಾಜ್ಯದಲ್ಲಿ ಡಿಜಿಟಲೀಕರಣ ಹೊಸ ನೀತಿ ಜಾರಿಗೆ ತರುತ್ತೇವೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ (ಆಗಸ್ಟ್ 23) ಹೇಳಿಕೆ ನೀಡಿದ್ದರು. ಮೊದಲು ಜ್ಞಾನ, ನಂತರ ವಿಜ್ಞಾನ, ಬಳಿಕ ತಂತ್ರಜ್ಞಾನ. ಆದರೆ ಈಗ ತಂತ್ರಾಂಶ ಜ್ಞಾನ ಮುಂಚೂಣಿಯಲ್ಲಿ ಇದೆ. ಹಾಗಾಗಿ ಡಿಜಿಟಲೈಸೇಷನ್ ಈಗ ಬಹಳ ಮುಖ್ಯವಾಗಿದೆ ಎಂದು ಅವರು ತಿಳಿಸಿದ್ದರು.

ಕಾಕತಾಳೀಯವೋ ಏನೋ ಗೊತ್ತಿಲ್ಲ. ಕೊವಿಡ್ ನಿಂದ ಶಾಲೆಗಳು ತೆರೆಯಲು ಆಗಿರಲಿಲ್ಲ, ಇವತ್ತು ಶಾಲೆಗಳಿಗೆ ಮಕ್ಕಳು ಬಂದಿದ್ದಾರೆ. ಇನ್ನೊಂದೆಡೆ ಇವತ್ತು ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ದಿನ. ಈ ಎರಡು ಕಾರಣಗಳಿಂದಾಗಿ ಇವತ್ತು ಲಿಬರೇಷನ್ ಡೇ . ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ ಯಶಸ್ವಿಯಾದ್ರೆ ಆಗಸ್ಟ್ 23 ಎಜ್ಯುಕೇಶನ್ ಡೇ ಆಗಲಿದೆ. ಭವಿಷ್ಯವನ್ನು ಕಟ್ಟುವ ಕೆಲಸ ಮಾಡಲಾಗಿದೆ. ಇಡೀ ದೇಶದಲ್ಲೇ ಅಮೂಲ್ಯ ಬದಲಾವಣೆ ಆಗಿದೆ. ಜಡ್ಡುಗಟ್ಟಿದ್ದ ವ್ಯವಸ್ಥೆಗೆ ಲಿಬರೇಷನ್ ಸಿಕ್ಕಿದೆ ಎಂದು ಸಿಎಂ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದರು.

ಇದನ್ನೂ ಓದಿ: ನಮ್ಮಕ್ಕ ಸುಧಾಕ್ಕನಿಗೆ ದೊಡ್ಡ ನಮಸ್ಕಾರ: ಕಿದ್ವಾಯಿ ಆಸ್ಪತ್ರೆಯ ವಿವಿಧ ಘಟಕಗಳನ್ನು ಉದ್ಘಾಟಿಸಿ ಸಿಎಂ ಬೊಮ್ಮಾಯಿ ಮಾತು

ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಐಪಾಡ್; ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಯಿಂದ ಕ್ರಾಂತಿ: ಬಸವರಾಜ ಬೊಮ್ಮಾಯಿ

Published On - 7:32 pm, Mon, 23 August 21