ಬೆಂಗಳೂರಿನಲ್ಲಿ 56 ಕಿಮೀ ಉದ್ದದ 2 ಮೆಟ್ರೋ ಮಾರ್ಗ ನಿರ್ಮಾಣಕ್ಕೆ 5 ಕೋಟಿ ಡಾಲರ್ ಸಾಲ: ಒಪ್ಪಂದಕ್ಕೆ ಸಹಿ

Namma Metro: ಈ ಒಪ್ಪಂದದ ಪ್ರಕಾರ ಬೆಂಗಳೂರಿನಲ್ಲಿ 56 ಕಿಲೋಮೀಟರ್ ಉದ್ದದ 2 ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ 500 ಮಿಲಿಯನ್ ಡಾಲರ್ ಸಾಲ ದೊರೆಯಲಿದೆ.

ಬೆಂಗಳೂರಿನಲ್ಲಿ 56 ಕಿಮೀ ಉದ್ದದ 2 ಮೆಟ್ರೋ ಮಾರ್ಗ ನಿರ್ಮಾಣಕ್ಕೆ 5 ಕೋಟಿ ಡಾಲರ್ ಸಾಲ: ಒಪ್ಪಂದಕ್ಕೆ ಸಹಿ
ನಮ್ಮ ಮೆಟ್ರೋ
Follow us
TV9 Web
| Updated By: guruganesh bhat

Updated on:Aug 23, 2021 | 8:19 PM

ದೆಹಲಿ; ಬೆಂಗಳೂರಿನಲ್ಲಿ ಮೆಟ್ರೋ ಕಾಮಗಾರಿ ನಡೆಸಲು 500 ಮಿಲಿಯನ್ ಅಮೆರಿಕನ್ ಡಾಲರ್ ಸಾಲದ ಒಪ್ಪಂದಕ್ಕೆ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಜತೆ ಕೇಂದ್ರ ಸರ್ಕಾರ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಬೆಂಗಳೂರಿನಲ್ಲಿ 56 ಕಿಲೋಮೀಟರ್ ಉದ್ದದ 2 ಮೆಟ್ರೋ ಮಾರ್ಗಗಳ ನಿರ್ಮಾಣಕ್ಕೆ 500 ಮಿಲಿಯನ್ ಡಾಲರ್ ಸಾಲ ದೊರೆಯಲಿದೆ. ಬೆಂಗಳೂರಿನ ಜೀವನದ ಗುಣಮಟ್ಟವನ್ನು ಇನ್ನಷ್ಟು ಹೆಚ್ಚಿಸಲು ಈ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಉನ್ನತ ಮೂಲಗಳು ತಿಳಿಸಿವೆ.

ಈ ಯೋಜನೆಗೆ ದೊರೆಯುವ ಸಾಲದಿಂದ ಔಟರ್ ರಿಂಗ್ ರೋಡ್ ಮತ್ತು ರಾಷ್ಟ್ರೀಯ ಹೆದ್ದಾರಿ 44ರ ಜತೆಗೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ 30 ನಿಲ್ದಾಣಗಳುಳ್ಳ ಮೆಟ್ರೋ ಮಾರ್ಗ ಕಾಮಗಾರಿ ನಡೆಯಲಿದೆ.

ಇದನ್ನೂ ಓದಿ: 

Greenland Rain: ಇತಿಹಾಸದಲ್ಲೇ ಮೊದಲ ಬಾರಿಗೆ ಭರ್ಜರಿ ಮಳೆ; ಇಲ್ಲಿ ಮಳೆ ಸುರಿದದ್ದೇ ಜಾಗತಿಕ ಮಟ್ಟದಲ್ಲಿ ಚಿಂತೆಗೆ ಕಾರಣ 

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

(Bengaluru Namma Metro Loan for Construction of 56 Km 2 Metro Line by Asian Development bank)

Published On - 7:32 pm, Mon, 23 August 21