ಹೊಸ ವರ್ಷ ಸಂಭ್ರಮಾಚರಣೆಗೆ ಗಬ್ಬೆದ್ದ ನಗರ, ಒಂದೇ ರಾತ್ರಿಗೆ ಬರೋಬ್ಬರಿ 8 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹ
ಬೆಂಗಳೂರು ನಗರದ ಪ್ರಮುಖ ಬೀದಿಗಳಲ್ಲಿ ಭರ್ಜರಿ ವರ್ಷಾಚರಣೆ ನಡೆದಿದ್ದು ಒಂದೇ ರಾತ್ರಿಗೆ ಬರೋಬ್ಬರಿ 8 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‌ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಕಸದ ರಾಶಿ ಕಂಡು ಬಂದಿದ್ದು 8 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ.
ಬೆಂಗಳೂರು, ಜ.01: ಕೆಲವೇ ಗಂಟೆಗಳ ಹಿಂದೆ ಜನ ಸಾಗರದಿಂದ ತುಂಬಿ ತುಳುಕುತ್ತಿದ್ದ ಎಂಜಿ ರೋಡ್ (MG Road), ಬ್ರಿಗೇಡ್ ರೋಡ್ (Brigade Road), ಚರ್ಚ್ಸ್ಟ್ರೀಟ್ನಲ್ಲಿ (Church Street) ಕಸದ ರಾಶಿ ಕಂಡು ಬಂದಿದೆ. ಹೊಸ ವರ್ಷವನ್ನು (New Year) ಸಂಭ್ರಮದಿಂದ ಸ್ವಾಗತಿಸಲು ಡಿ.31ರ ರಾತ್ರಿ ಜನಸಮೂಹ ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್ಸ್ಟ್ರೀಟ್ನಲ್ಲಿ ಜಮಾಯಿಸಿದ್ದರು. ಸದ್ಯ ಹೊಸ ವರ್ಷಾಚರಣೆ ಮುಗಿದಿದ್ದು ಜನರೆಲ್ಲ ತಮ್ಮ ಮನೆ ಸೇರಿದ್ದಾರೆ. ಆದರೆ ಬಿಬಿಎಂಪಿ (BBMP) ಪೌರ ಕಾರ್ಮಿಕರಿಗೆ ದೊಡ್ಡ ತಲೆ ನೋವಾಗಿದೆ.
ನಗರದ ಪ್ರಮುಖ ಬೀದಿಗಳಲ್ಲಿ ಭರ್ಜರಿ ವರ್ಷಾಚರಣೆ ನಡೆದಿದ್ದು ಒಂದೇ ರಾತ್ರಿಗೆ ಬರೋಬ್ಬರಿ 8 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತ್ತಿಯಾಗಿದೆ. ಎಂಜಿ ರೋಡ್, ಬ್ರಿಗೇಡ್ ರೋಡ್, ಚರ್ಚ್‌ಸ್ಟ್ರೀಟ್, ಇಂದಿರಾನಗರ, ಕೋರಮಂಗಲ ಸೇರಿದಂತೆ ನಗರದ ಪ್ರಮುಖ ಬೀದಿಗಳಲ್ಲಿ ಕಸದ ರಾಶಿ ಕಂಡು ಬಂದಿದ್ದು 8 ಮೆಟ್ರಿಕ್ ಟನ್ ತ್ಯಾಜ್ಯ ಸಂಗ್ರಹವಾಗಿದೆ. ನಸುಕಿನ ಜಾವ 3 ಗಂಟೆಯಿಂದ ಬೆಳಿಗ್ಗೆ 8 ಗಂಟೆ ವರೆಗೆ ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯ ಮಾಡಿದರು. 100ಕ್ಕೂ ಅಧಿಕ ಪೌರಕಾರ್ಮಿಕರು ನಗರದ ಬೀದಿಗಳನ್ನು ಗುಡಿಸಿ ಸ್ವಚ್ಚಗೊಳಿಸಿದ್ದಾರೆ. ಸ್ವಚ್ಛತಾ ಕಾರ್ಯಕ್ಕೆ 2 ಕಾಂಪ್ಯಾಕ್ಟರ್, 25 ಆಟೋ ಟಿಪ್ಪರ್ ಬಳಕೆ ಮಾಡಲಾಗಿದೆ.
ಇದನ್ನೂ ಓದಿ: ಹೊಸವರ್ಷ ದಿನದಂದು ನಮ್ಮ ಮೆಟ್ರೋಗೆ ಭರ್ಜರಿ ಆದಾಯ ಬಂದಿದೆ.
ಬಿಬಿಎಂಪಿ ಪೌರಕಾರ್ಮಿಕರ ಜೊತೆ ಕೈ ಜೋಡಿಸಿದ ಉದ್ಯೋಗಿಗಳು
ಇನ್ನು ಹೊಸ ವರ್ಷ ಹಿನ್ನೆಲೆ ನಗರದ ಪ್ರಮುಖ ರಸ್ತೆ, ಬೀದಿಗಳಲ್ಲಿ ಜನ ಹಾಡುತ್ತಾ, ಕುಡಿಯುತ್ತಾ, ಕುಣಿಯುತ್ತಾ ಸಂಭ್ರಮಿಸಿದರು. ಜನ ಮೋಜು, ಮಸ್ತಿ ನಡೆಸಿದ ಸ್ಥಳಗಳು, ಮದ್ಯದ ಬಾಟಲಿ ಮತ್ತು ತಿಂದು ಬಿಟ್ಟ ತಿಂಡಿಗಳು, ಪೇಪರ್-ಪ್ಯಾಕೆಟ್ಗಳಿಂದ ಗಬ್ಬೆದಿತ್ತು. ಈ ವೇಳೆ ಬಿಬಿಎಂಪಿ ಪೌರಕಾರ್ಮಿಕರು ಸ್ವಚ್ಛತೆ ಕಾರ್ಯ ಮಾಡಿದ್ದಾರೆ. ಇನ್ನು ವಿಶೇಷವೆಂದರೆ ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಸಂಸ್ಥಯೊಂದರ ಉದ್ಯೋಗಿಗಳು ಖುದ್ದು ತಾವೇ ಬೀದಿಗಿಳಿದು ಸುತ್ತಮುತ್ತಲಿನ ಜಾಗವನ್ನು ಸ್ವಚ್ಛ ಮಾಡಿದ್ದಾರೆ. ಈ ವಿವೇಕವಂತ ಮತ್ತು ಪರಿಸರ ಹಾಗೂ ಸ್ವಚ್ಛತೆಯ ಬಗ್ಗೆ ಕಾಳಜಿಯುಳ್ಳ ಜನ ಉಳಿದ ನಗರವಾಸಿಗಳಿಗೆ ಮಾದರಿಯೆನಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ