ಹೊಸ ವರ್ಷಕ್ಕೆ ನಗರ ಕಮಿಷನರ್ ಮಾದರಿ ನಡೆ; ಬೊಕ್ಕೆ, ಸಿಹಿತಿನಿಸು ಬೇಡ, ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದರು
ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ( B Dayanand) ಅವರು ಕಿರಿಯ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿ ಮಾದರಿಯಾಗಿದ್ದಾರೆ. ಬೊಕ್ಕೆ, ಸಿಹಿತಿನಿಸು ಬೇಡ, ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು ಸೂಚಿಸಿದ್ದಾರೆ. ಅನಾಥಾಶ್ರಮಗಳಿಗೆ ಸಹಾಯ ಮಾಡಿದ ಆ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ. ಫೋಟೋ ಹಂಚಿಕೊಳ್ಳುವುದರಿಂದ ಮತ್ತೊಬ್ಬರಿಗೂ ಮಾದರಿಯಾಗುತ್ತೀರ ಎಂದು ಸಲಹೆ ನೀಡಿದ್ದಾರೆ.
ಬೆಂಗಳೂರು, ಜ.01: ಎಣ್ಣೆ ಪಾರ್ಟಿ ಮಾಡಿ, ಕೇಕ್ ಕತ್ತರಿಸಿ ಜನ ಹೊಸ ವರ್ಷವನ್ನು (New Year 2024) ಬರ ಮಾಡಿಕೊಂಡಿದ್ದಾರೆ. ಮತ್ತೊಂದೆಡೆ ವರ್ಷಕ್ಕೆ ಒಮ್ಮೆ ಅಂತ ಬಿಕಾಬಿಟ್ಟಿಯಾಗಿ ದುಂದು ವೆಚ್ಚ ಮಾಡುತ್ತ ಹೊಸ ವರ್ಷಾಚರಣೆ ಮಾಡುವವರ ನಡುವೆ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ( B Dayanand) ಅವರು ಕಿರಿಯ ಅಧಿಕಾರಿಗಳಿಗೆ ವಿಶೇಷ ಸೂಚನೆ ನೀಡಿ ಮಾದರಿಯಾಗಿದ್ದಾರೆ. ಬೊಕ್ಕೆ, ಸಿಹಿತಿನಿಸು ಬೇಡ, ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಎಂದು ಸೂಚಿಸಿದ್ದಾರೆ.
ಹೊಸ ವರ್ಷ ಮತ್ತು ಕೆಲ ವಿಶೇಷ ದಿನಗಳಲ್ಲಿ ಹಿರಿಯ ಅಧಿಕಾರಿಗಳಿಗೆ ಕಿರಿಯ ಅಧಿಕಾರಿಗಳು ಹೂ ಗುಚ್ಚ, ಸಿಹಿ ತಿನಿಸು ನೀಡಿ ಶುಭಾಶಯ ಕೋರೋದು ವಾಡಿಕೆ. ಆದರೆ ಈ ಬಾರಿ ಹೊಸ ವರ್ಷಕ್ಕೆ ವಿಶ್ ಮಾಡಲು ಬರುವ ಕಿರಿಯ ಅಧಿಕಾರಿಗಳು ಬೊಕ್ಕೆ, ಸಿಹಿ ತಿನಿಸು ತರದೆ ಆ ಹಣವನ್ನ ಅನಾಥಾಶ್ರಮಕ್ಕೆ ನೀಡಿ ಅಂತ ನಗರ ಪೊಲೀಸ್ ಆಯುಕ್ತ ದಯಾನಂದ್ ಸೂಚಿಸಿದ್ದಾರೆ. ಎಸಿಪಿ ಮತ್ತು ಇನ್ಸ್ಪೆಕ್ಟರ್ ಹಂತದ ಅಧಿಕಾರಿಗಳ ವರ್ಚ್ಯುಯಲ್ ಮೀಟಿಂಗ್ನಲ್ಲಿ ಕಮಿಷನರ್ ದಯಾನಂದ್ ಈ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: 700ಕ್ಕೂ ಹೆಚ್ಚು ಡ್ರಿಂಕ್ ಆ್ಯಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಿದ ಟ್ರಾಫಿಕ್ ಪೊಲೀಸ್
ಅಧಿಕಾರಿಗಳು ಹೂ ಗೂಚ್ಚ ಮತ್ತು ಸಿಹಿತಿನಿಸಿಗಾಗಿ ಸಾವಿರಾರು ರೂಪಾಯಿ ಖರ್ಚು ಮಾಡ್ತಾರೆ. ಸುಖಾಸುಮ್ಮನೆ ಹೂ ಗೂಚ್ಚ ವ್ಯರ್ಥವಾಗುತ್ತೆ. ಇದರಿಂದ ಯಾರಿಗೂ ಉಪಯೋಗವಿಲ್ಲ. ಹೀಗಾಗಿ ಆ ಹಣವನ್ನ ನಿಮ್ಮ ವ್ಯಾಪ್ತಿಯ ಅನಾಥಾಶ್ರಮಳಿಗೆ ದಿನಸಿ, ಸಿಹಿತಿನಿಸು ಅಥವಾ ಊಟಕ್ಕೆ ವ್ಯಯಿಸಿ ಎಂದು ಸಲಹೆ ನೀಡಿದ್ದಾರೆ. ಇನ್ನು ಅನಾಥಾಶ್ರಮಗಳಿಗೆ ಸಹಾಯ ಮಾಡಿದ ಆ ಫೋಟೋವನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ. ಫೋಟೋ ಹಂಚಿಕೊಳ್ಳುವುದರಿಂದ ಮತ್ತೊಬ್ಬರಿಗೂ ಮಾದರಿಯಾಗುತ್ತೀರ ಎಂದು ಸಲಹೆ ನೀಡಿದ್ದಾರೆ. ಸದ್ಯ ನಗರ ಪೊಲೀಸ್ ಆಯುಕ್ತರ ಮಾದರಿ ನಡೆಗೆ ಅಧಿಕಾರಿ ವರ್ಗವು ಫುಲ್ ಖುಷ್ ಆಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:21 pm, Mon, 1 January 24