AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್ ರೂಪಾಂತರಿ ವೈರಾಣು ಆತಂಕ: ಕೊವಿಡ್ ತಜ್ಞರ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತರ ಸಭೆ

ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ ಕೊವಿಡ್ ತಜ್ಞರ ಸಮಿತಿ ಜೊತೆ ಸಭೆ ನಡೆಸಿದರು. ಕೊವಿಡ್ ರೂಪಾಂತರಿ ವೈರಸ್​​ ನಿಯಂತ್ರಿಸುವ ಕುರಿತು ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಲಾಯಿತು

ಕೊವಿಡ್ ರೂಪಾಂತರಿ ವೈರಾಣು ಆತಂಕ: ಕೊವಿಡ್ ತಜ್ಞರ ಜೊತೆ ಬಿಬಿಎಂಪಿ ಮುಖ್ಯ ಆಯುಕ್ತರ ಸಭೆ
ಬಿಬಿಎಂಪಿ (ಪ್ರಾತಿನಿಧಿಕ ಚಿತ್ರ)
TV9 Web
| Edited By: |

Updated on: Dec 01, 2021 | 10:49 PM

Share

ಬೆಂಗಳೂರು: ಕೊವಿಡ್ ರೂಪಾಂತರಿ ವೈರಾಣು ನಿಯಂತ್ರಿಸುವ ಸಂಬಂಧ ಸೂಕ್ತ ಸಲಹೆ ಸೂಚನೆಗಳನ್ನು ಜಾರಿಗೆ ತರಲು ನಗರದಲ್ಲಿ ಬುಧವಾರ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್​ ಗುಪ್ತ ಕೊವಿಡ್ ತಜ್ಞರ ಸಮಿತಿ ಜೊತೆ ಸಭೆ ನಡೆಸಿದರು. ಕೊವಿಡ್ ರೂಪಾಂತರಿ ವೈರಸ್​​ ನಿಯಂತ್ರಿಸುವ ಕುರಿತು ಸಭೆಯಲ್ಲಿ ಮುಖ್ಯವಾಗಿ ಚರ್ಚಿಸಲಾಯಿತು. ವಿದೇಶಗಳಿಂದ ಬರುವ ಪ್ರಯಾಣಿಕರಿಗೆ ಟೆಸ್ಟ್ ಮಾಡಬೇಕು. ಕ್ವಾರಂಟೈನ್, ಜಿನೋಮ್​​ ಸೀಕ್ವೆನ್ಸಿಂಗ್​​ಗೆ ಸ್ಯಾಂಪಲ್ಸ್​​ ಕಳಿಸುವುದು, ನಗರದ ಕಂಟೇನ್ಮೆಂಟ್ ಜೋನ್​ಗಳ ಮೇಲೆ ನಿಗಾವಹಿಸುವುದು, ಕ್ಲಸ್ಟರ್​ಗಳಾದರೆ ಅವುಗಳ ಮೇಲೆ ಹೆಚ್ಚು ಗಮನ ಹರಿಸುವುದು, ಸಭೆ-ಸಮಾರಂಭಗಳಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು. ಪಾಲ್ಗೊಳ್ಳುವ ಜನರ ಸಂಖ್ಯೆಗೆ ಮಿತಿ ಹೇರಬೇಕು. ಅಗತ್ಯಬಿದ್ದರೆ ಕೊವಿಡ್​ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಬೇಕು ಎಂದು ತಜ್ಞರು ಸಲಹೆ ಮಾಡಿದರು. ಸಭೆಯಲ್ಲಿ ವಿಶೇಷ ಆಯುಕ್ತ (ಆರೋಗ್ಯ) ಡಾ.ತ್ರಿಲೋಕ್ ಚಂದ್ರ, ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್, ನಿರ್ಮಲಾ ಬುಗ್ಗಿ ಇತರರು ಪಾಲ್ಗೊಂಡಿದ್ದರು.

ಸಮಿತಿಯಲ್ಲಿ ವ್ಯಕ್ತವಾದ ಮುಖ್ಯ ಸಲಹೆಗಳು ಇವು – ನಗರದ ಉದ್ಯಾನ, ಚಿತ್ರಮಂದಿರ, ಮಾಲ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಪ್ರವೇಶ ನೀಡಬೇಕು – ಹೊಸದಾಗಿ ಬಂದಿರುವ ಓಮೈಕ್ರಾನ್ ಹಾಗೂ ಇನ್ನಿತರೆ ವೈರಾಣು ಹರಡದಂತೆ ಪೂರ್ವ ಸಿದ್ದತೆ ಮಾಡಿಕೊಳ್ಳಬೇಕು – ಶಾಲೆಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆ ಶೇ 10ರಷ್ಟು ಮಕ್ಕಳಿಗೆ ಪರೀಕ್ಷೆ ಮಾಡಬೇಕು – ವಿದೇಶದಿಂದ ಬರುವ ಪ್ರಯಾಣಿಕರಿಗೆ ಟೆಸ್ಟಿಂಗ್, ಕ್ವಾರಂಟೈನ್ ಮಾಡುವುಡು. ಸಂಗ್ರಹಿಸಿರುವ ಮಾದರಿಯನ್ನು ಜಿನೋಮ್ ಸೀಕ್ವೆನ್ಸಿಂಗ್​ಗೆ ಕಳುಹಿಸುವುದು‌ – ನಗರದಲ್ಲಿರುವ ಕಂಟೈನ್ಮೆಂಟ್ ಜೋನ್​ಗಳ ಮೇಲೆ ನಿಗಾವಹಿಸುವುದು – ಕ್ಲಸ್ಟರ್​ಗಳಾದರೆ ಹೆಚ್ಚು ಗಮನ ಹರಿಸುವುದು – ಸಭೆ-ಸಮಾರಂಭಗಳು, ಪಾರ್ಟಿ, ಕಾರ್ಯಕ್ರಮಗಳಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಿ ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಭಾಗವಹಿಸುವುದು – ಅವಶ್ಯಕತೆ ಬಿದ್ದಲ್ಲಿ ಕೋವಿಡ್ ಟೆಸ್ಟಿಂಗ್ ಪ್ರಮಾಣವನ್ನು ಹೆಚ್ಚಿಸುವುದು – ನಗರದ ಉದ್ಯಾನ, ಚಿತ್ರಮಂದಿರ, ಮಾಲ್ ಸೇರಿದಂತೆ ಇನ್ನಿತರ ಸಾರ್ವಜನಿಕ ಸ್ಥಳಗಳಿಗೆ ಎರಡೂ ಡೋಸ್ ಲಸಿಕೆ ಪಡೆದವರಿಗೆ ಪ್ರವೇಶ ನೀಡುವುದು – ಹೊಸದಾಗಿ ಬಂದಿರುವ ಓಮೈಕ್ರಾನ್ ಹಾಗೂ ಇನ್ನಿತರೆ ವೈರಾಣು ಹರಡದಂತೆ ಪೂರ್ವ ಸಿದ್ದತೆ ಮಾಡಿಕೊಳ್ಳುವುದು – ಶಾಲೆಗಳಲ್ಲಿ ಕನಿಷ್ಠ ತಿಂಗಳಿಗೊಮ್ಮೆ ಶೇ.10 ರಷ್ಟು ಮಕ್ಕಳಿಗೆ ಪರೀಕ್ಷೆ ಮಾಡುವುದು

ಆಯುಕ್ತರು ಕೊಟ್ಟ ಸೂಚನೆಗಳು – ನಗರದಲ್ಲಿ ಕೋವಿಡ್ ನಿಯಮಗಳನ್ನು ಅನುಸರಿಸಬೇಕು – ಅರ್ಹ ಫಲಾನುವಿಗಳು ಕಡ್ಡಾಯವಾಗಿ ಎರಡೂ ಡೋಸ್ ಪಡೆಯುವ ಸಂಬಂಧ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ ಗಮನ ಹರಿಸಬೇಕು – ಹೋಟೆಲ್, ವ್ಯಾಪಾರಿಗಳು ಸೇರಿದಂತೆ ವರ್ತಕರ ಸಂಘಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಬೇಕು – ತಜ್ಞರ ಸಮಿತಿ ನೀಡಿರುವ ಸಲಹೆಗಳಿಗೆ ಸಂಬಂಧಿಸಿದಂತೆ ಸೂಕ್ತವಾಗಿರುವ ಅಂಶಗಳನ್ನು ಪಾಲಿಕೆ ವ್ಯಾಪ್ತಿಯಲ್ಲಿ ಜಾರಿಗೆ ತರಲು ಮುಖ್ಯ ಆಯುಕ್ತರು ವಿಶೇಷ ಆಯುಕ್ತರಿಗೆ ಸೂಚನೆ ನೀಡಿದರು

ಧಾರವಾಡ ಎಸ್​ಡಿಎಂ ಆಸ್ಪತ್ರೆ ಮೇಲೆ ನಿರ್ಬಂಧ ಮುಂದುವರಿಕೆ ಧಾರವಾಡ: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಕೊರೊನಾ ಪ್ರಕರಣಗಳು ಸ್ಫೋಟಗೊಂಡ ಹಿನ್ನೆಲೆಯಲ್ಲಿ ಹಲವು ಶಿಸ್ತುಕ್ರಮಗಳನ್ನು ಅಧಿಕಾರಿಗಳು ಮುಂದುವರಿಸಿದ್ದಾರೆ. ಇನ್ನೂ 140 ಜನರ ಜಿನೋಮ್ ಸೀಕ್ವೆನ್ಸ್‌ ವರದಿ ಬಾಕಿಯಿರುವ ಹಿನ್ನೆಲೆಯಲ್ಲಿ ಎಸ್​ಡಿಎಂ ವೈದ್ಯಕೀಯ ಆಸ್ಪತ್ರೆ ಒಪಿಡಿ ಮೇಲಿನ ನಿರ್ಬಂಧ ಮುಂದುವರಿಸಲಾಗಿದೆ. ಎಸ್‌ಡಿಎಂ ಆಸ್ಪತ್ರೆಗೆ ಜನರ ಪ್ರವೇಶಕ್ಕೆ ನಾಳೆಯೂ ನಿರ್ಬಂಧ ಮುಂದುವರಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ. ಆಸ್ಪತ್ರೆಯ 500 ಮೀಟರ್ ಸುತ್ತಮುತ್ತಲಿನ ಪ್ರದೇಶದಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಅನುಮತಿ ನೀಡಲಾಗಿದೆ.

ಇದನ್ನೂ ಓದಿ: ಲಸಿಕೆ ಹಾಕದ ಕೊವಿಡ್ ರೋಗಿಗಳಿಗೆ ಕೇರಳ ಸರ್ಕಾರ ಉಚಿತ ಚಿಕಿತ್ಸೆ ನೀಡುವುದಿಲ್ಲ: ಪಿಣರಾಯಿ ವಿಜಯನ್ ಇದನ್ನೂ ಓದಿ: ಈ ರಾಜ್ಯಗಳಲ್ಲಿ ಲಸಿಕೆ ಹಾಕದವರಿಗೆ ಉಚಿತ ಕೊವಿಡ್ ಚಿಕಿತ್ಸೆ ಇಲ್ಲ, ಪಡಿತರ ಮತ್ತು ಪಿಂಚಣಿಯೂ ಸಿಗಲ್ಲ; ಯಾವ ರಾಜ್ಯ ಯಾವ ರೀತಿಯ ಕ್ರಮ ಕೈಗೊಂಡಿದೆ?

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್