ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ (coronavirus) ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸದ್ಯ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBPM) ವ್ಯಾಪ್ತಿಯಲ್ಲಿ ಕೊವಿಡ್ಗೆ ಸಂಬಂಧಿಸಿದ ಮಾಹಿತಿಗಾಗಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದೆ. ಎಂಟು ವಲಯಗಳಲ್ಲಿ ನಿಯಂತ್ರಣಾ ಕೊಠಡಿಗಳನ್ನು ತೆರೆಯಲಾಗಿದ್ದು, ಬಿಬಿಎಂಪಿ ಪತ್ರಿಕಾ ಪ್ರಕಟಣೆಯಲ್ಲಿ ಹೆಲ್ಪ್ಲೈನ್ ನಂಬರ್ಗಳನ್ನ ತಿಳಿಸಿದೆ.
Here are the details of the 16 Covid Care Centres (CCC) with 1387 beds within BBMP limits. Call the helpline at 1533 for any queries related to Covid-19.
Please remember, Vaccination & Covid Appropriate Behaviour is the only way to save ourselves from the Covid 19 pandemic. pic.twitter.com/TwgEtn8u78
— Gaurav Gupta (@BBMPCOMM) January 18, 2022
ನಗರದ ಎಲ್ಲಾ ನಾಗರೀಕರು ಕೊವಿಡ್ಗೆ ಸಂಬಂಧಿಸಿದಂತೆ ಟ್ರಯಾಜಿಂಗ್, ಕೊವಿಡ್ ಪರೀಕ್ಷೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮಾಹಿತಿ, ಆಸ್ಪತ್ರೆಗೆ ದಾಖಲು, ಲಸಿಕೆ ಪಡೆಯುವುದು ಸೇರಿದಂತೆ ಇತರೆ ವಿಷಯಗಳ ಬಗ್ಗೆ ನಿಯಂತ್ರಣ ಕೊಠಡಿಯ ಸಿಬ್ಬಂದಿಯಿಂದ ಮಾಹಿತಿ ಪಡೆಯಬಹುದು. ದಿನದ 24 ಗಂಟೆಯೂ ಅಗತ್ಯ ಮಾಹಿತಿ ನೀಡಲಿದ್ದಾರೆ ಅಂತ ಬಿಬಿಎಂಪಿ ತಿಳಿಸಿದೆ.
ಕೋವಿಡ್ ಪ್ರಕರಣಗಳ ಏರಿಕೆ ಹಿನ್ನಲೆಯಲ್ಲಿ ಬಿಬಿಎಂಪಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಕೋವಿಡ್ ಕೇರ್ ಸೆಂಟರ್ ಆರಂಭಿಸಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1,387 ಹಾಸಿಗೆಗಳನ್ನು ಹೊಂದಿರುವ 16 ಕೋವಿಡ್ ಕೇರ್ ಸೆಂಟರ್‌ಗಳಿವೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ.
ಅಲ್ಲದೇ ಕೋವಿಡ್ ಸೋಂಕಿತರಿಗೆ ಸಹಾಯವಾಗಲು, ಯಾವುದೇ ಪ್ರಶ್ನೆಗಳಿಗೆ ಉತ್ತರ ನೀಡಲು ಬಿಬಿಎಂಪಿ ಸಹಾಯವಾಣಿ ಆರಂಭಿಸಿದೆ. ಸಹಾಯವಾಣಿ ಸಂಖ್ಯೆ 1533.
ಕೋವಿಡ್ ಕೇರ್ ಸೆಂಟರ್ ವಿವರ ಪಶ್ಚಿಮ ವಿಭಾಗ:
ಗಾಂಧಿ ನಗರ, ಮಹಾಲಕ್ಷ್ಮೀಪುರಂನಲ್ಲಿ ಎರಡು ಕೋವಿಡ್ ಕೇರ್ ಸೆಂಟರ್ ಇದೆ. ಇವುಗಳಲ್ಲಿ ಸಾಮಾನ್ಯ ಬೆಡ್ 100, ಆಕ್ಸಿಜನ್ ಬೆಡ್ 100 ಸೇರಿದಂತೆ ಒಟ್ಟು 200 ಹಾಸಿಗೆಗಳ ವ್ಯವಸ್ಥೆ ಇದೆ.
ದಕ್ಷಿಣ ವಿಭಾಗ; ಜಯನಗರ (40 ಸಾಮಾನ್ಯ, 8 ಆಕ್ಸಿಜನ್ ಬೆಡ್), ಬಿಟಿಎಂ ಲೇಔಟ್ (4 ಸಾಮಾನ್ಯ, 20 ಆಕ್ಸಿಜನ್ ಬೆಡ್), ಚಿಕ್ಕಪೇಟೆ (4 ಸಾಮಾನ್ಯ, 20 ಆಕ್ಸಿಜನ್ ಬೆಡ್), ವಿಜಯನಗರ (38 ಆಕ್ಸಿಜನ್ ಬೆಡ್), ಬಸವನಗುಡಿ (5 ಸಾಮಾನ್ಯ, 5 ಆಕ್ಸಿಜನ್ ಬೆಡ್)ಗಳಿವೆ. ಪರ‍್ವ ವಿಭಾಗದ ಸಿ. ವಿ. ರಾಮನ್ ನಗರದಲ್ಲಿ ಕೋವಿಡ್ ಕೇರ್ ಸೆಂಟರ್ ಇದೆ, 30 ಆಕ್ಸಿಜನ್ ಬೆಡ್ ವ್ಯವಸ್ಥೆ ಇಲ್ಲಿದೆ. ಆರ್. ಆರ್. ನಗರ ವಿಭಾಗದಲ್ಲಿ ಯಶವಂತಪುರದಲ್ಲಿ 50 ಸಾಮಾನ್ಯ, 50 ಆಕ್ಸಿಜನ್ ಬೆಡ್ ವ್ಯವಸ್ಥೆ ಇದೆ. ಬೊಮ್ಮನಹಳ್ಳಿ ವಿಭಾಗದಲ್ಲಿ ಬೊಮ್ಮನಹಳ್ಳಿಯಲ್ಲಿ 30 ಸಾಮಾನ್ಯ, 20 ಆಕ್ಸಿಜನ್ ಬೆಡ್ ಇದೆ. ಮಹದೇವಪುರ ವಿಭಾಗದಲ್ಲಿ ಮಹದೇವಪುರದಲ್ಲಿ 153 ಸಾಮಾನ್ಯ ಬೆಡ್ ಇದೆ. ಕೆ. ಆರ್. ಪುರಂನಲ್ಲಿ 88 ಸಾಮಾನ್ಯ, 50 ಆಕ್ಸಿಜನ್ ಬೆಡ್ ವ್ಯವಸ್ಥೆ ಮಾಡಲಾಗಿದೆ. ಯಲಹಂಕ ವಿಭಾಗದಲ್ಲಿ ಯಲಹಂಕದಲ್ಲಿ 60 ಸಾಮಾನ್ಯ, 40 ಆಕ್ಸಿಜನ್ ಬೆಡ್, ಬ್ಯಾಟರಾಯನಪುರದಲ್ಲಿ 280 ಸಾಮಾನ್ಯ, 100 ಆಕ್ಸಿಜನ್ ಬೆಡ ವ್ಯವಸ್ಥೆ ಇದೆ. ದಾಸರಹಳ್ಳಿ ವಿಭಾಗದಲ್ಲಿ 75 ಸಾಮಾನ್ಯ, 30 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಇದೆ.
ಕೋವಿಡ್ 3ನೇ ಅಲೆ ಸಂದರ್ಭದಲ್ಲಿ ಆಸ್ಪತ್ರೆ ಸೇರುವವರ ಸಂಖ್ಯೆ ಕಡಿಮೆ ಇದೆ. ಅಲ್ಲದೇ ಆಕ್ಸಿಜನ್ ಬೆಡ್‌ಗಳಿಗೆ ಸಹ ಬೇಡಿಕೆ ಬಂದಿಲ್ಲ. ಕೋವಿಡ್ ಸೋಂಕಿತರು ಹೋಂ ಐಸೋಲೇಷನ್‌ನಲ್ಲಿಯೇ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿದ್ದಾರೆ. ಆದರೆ ನಗರದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ಮತ್ತೆ ಆರಂಭಿಸಲಾಗಿದೆ. ಅಲ್ಲಿ ಆಕ್ಸಿಜನ್ ಬೆಡ್‌ಗಳಿಗೆ ಸಹ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆಯಾದರೆ ಆಗ ಇದು ಸಹಾಯಕ್ಕೆ ಬರಲಿದೆ. ನಗರದ ಖಾಸಗಿ ಆಸ್ಪತ್ರೆಗಳಲ್ಲಿ ಸಹ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತಿದೆ. ಈ ವಾರದ ಅಂತ್ಯದಲ್ಲಿ 5 ಸಾವಿರಕ್ಕೂ ಅಧಿಕ ಹಾಸಿಗೆಗಳು ಲಭ್ಯವಾಗಲಿವೆ. ಪ್ರಸ್ತುತ ನಗರದಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು 1836 ಹಾಸಿಗೆಗಳಲ್ಲಿ 1667ಹಾಸಿಗೆಗಳು ಖಾಲಿ ಇವೆ. 166 ಸೋಂಕಿತರು ಮಾತ್ರ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ:
ಓಮಿಕ್ರಾನ್ ಆತಂಕ: ಬಟ್ಟೆಯ ಮಾಸ್ಕ್ಗಳ ಬಳಕೆ ಬೇಡ ಎಂದ ತಜ್ಞರು
ಕೊರೊನಾ ಶಾಶ್ವತವಾಗಿ ಮುಂದುವರೆಯುವುದಿಲ್ಲ, ಅದರ ಅಂತ್ಯ ಹತ್ತಿರದಲ್ಲೇ ಇದೆ: ತಜ್ಞರ ಹೇಳಿಕೆ