Drinking Water Crisis: ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್​ವೆಲ್​​ ಕೊರೆಸಲು BBMP ನಿರ್ಧಾರ

ನೀರಿನ ಅಭಾವ ಹಾಗೂ ಟ್ಯಾಂಕರ್ ದಂದೆ ಬಗ್ಗೆ ಟಿವಿ9 ನಿರಂತರ ವರದಿ ಪ್ರಸಾರ ಮಾಡುತ್ತಿದೆ. ಸದ್ಯ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸಭೆ ನಡೆಸಿ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್​ವೆಲ್​​ ಕೊರೆಸಲು ಬಿಬಿಎಂಪಿ ತೀರ್ಮಾನಿಸಿದೆ.

Drinking Water Crisis: ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್​ವೆಲ್​​ ಕೊರೆಸಲು BBMP ನಿರ್ಧಾರ
ಬಿಬಿಎಂಪಿ
Follow us
| Updated By: ಆಯೇಷಾ ಬಾನು

Updated on:Feb 24, 2024 | 12:33 PM

ಬೆಂಗಳೂರು, ಫೆ.24: ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಕಡೆ ನೀರಿನ ಅಭಾವ ಸೃಷ್ಠಿಯಾಗಿದೆ (Drinking Water Crisis). ಹನಿ ನೀರಿಗಾಗಿಯೂ ಜನ ಪರದಾಡುತ್ತಿದ್ದು ದುಪ್ಪಟ್ಟು ಹಣ ನೀಡಿದರೂ ಜನರಿಗೆ ಟ್ಯಾಂಕರ್ ನೀರು ಸಿಗುತ್ತಿಲ್ಲ. ಬೇಸಿಗೆ ಆರಂಭಕ್ಕು ಮುನ್ನವೇ ನಗರದಲ್ಲಿ ಈ ರೀತಿಯ ಸ್ಥಿತಿ ನಿರ್ಮಾಣವಾಗಿರೋದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಬಿಬಿಎಂಪಿ (BBMP) ಇಂದು ಸಭೆ ನಡೆಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್ವಲ್​ ಕೊರೆಸಲು ನಿರ್ಧಾರ ಮಾಡಿದೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬಿಬಿಎಂಪಿ, ನಗರಾಭಿವೃದ್ಧಿ ಇಲಾಖೆಯಿಂದ ಹೈವೋಲ್ಟೇಜ್ ಸಭೆ ನಡೆದಿದ್ದು ಸದ್ಯ ಸಭೆ ಅಂತ್ಯಗೊಂಡಿದೆ. ಬಿಬಿಎಂಪಿ ವ್ಯಾಪ್ತಿಯ ಬಹುತೇಕ ಕಡೆ ನೀರಿನ ಅಭಾವ ಹಿನ್ನೆಲೆ ಜಲಮಂಡಳಿ ಹಾಗೂ ಬಿಬಿಎಂಪಿಗೆ ಸಾಲು ಸಾಲು ದೂರುಗಳು ಕೇಳಿಬರುತ್ತಿದ್ದವು. ನೀರಿನ ಅಭಾವ ಹಾಗೂ ಟ್ಯಾಂಕರ್ ದಂದೆ ಬಗ್ಗೆ ಟಿವಿ9 ನಿರಂತರ ವರದಿ ಪ್ರಸಾರ ಮಾಡುತ್ತಿದೆ. ಸದ್ಯ ವರದಿ ಬೆನ್ನಲ್ಲೇ ಎಚ್ಚೆತ್ತ ಅಧಿಕಾರಿಗಳು ಸಭೆ ನಡೆಸಿ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದಾರೆ.

ಇದನ್ನೂ ಓದಿ: ನೀರಿಗಾಗಿ ಹಾಹಾಕಾರ; ಜೀವಜಲಕ್ಕಾಗಿ ಮಹದೇವಪುರ, ವರ್ತೂರು ಜನ ಹೈರಾಣ

ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್​ವೆಲ್

BBMP ಕಚೇರಿಯಲ್ಲಿ ನೀರಿನ ಸಮಸ್ಯೆ ಬಗ್ಗೆ ನಡೆದ ಸಭೆ ಅಂತ್ಯಗೊಂಡಿದ್ದು ನೀರಿನ ಸಮಸ್ಯೆ ಬಗೆಹರಿಸಲು ಬೋರ್​ವೆಲ್ ಕೊರೆಸಲು ನಿರ್ಧಾರ ಮಾಡಲಾಗಿದೆ. ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್​ವೆಲ್​​ ಕೊರೆಸಲು ಬಿಬಿಎಂಪಿ ತೀರ್ಮಾನಿಸಿದೆ. ಸಭೆ ಬಳಿಕ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕ್ರಮಕೈಗೊಳ್ಳಲಾಗುತ್ತೆ. BBMP, BWSSB, BDA ಸಮನ್ವಯದಿಂದ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ. 1472 Mld ನೀರು ಸರಬರಾಜು ಮಾಡಬಹುದು. ಕಾವೇರಿ 5ನೇ ಹಂತ ಕಾಮಗಾರಿ ಮುಗಿದು ಏಪ್ರಿಲ್ ನಿಂದ ನೀರು ಪೂರೈಕೆ ಮಾಡಬಹುದು. ನಾವು ಹಾಗೂ BWSSB ನವರು ಈಗ ಬೋರ್​ವೆಲ್ ಕೊರೆಸುತ್ತೇವೆ. ನಾವು ಪ್ರತಿ ಕ್ಷೇತ್ರಕ್ಕೆ 10 ಕೋಟಿ ಹಣ bwssb ಗೆ ಕೊಡುತ್ತೇವೆ. ಡಿಸಿಎಂ ಗ್ರಾಂಟ್ ನಲ್ಲಿ ಮಾಡಿಸುತ್ತೇವೆ. 110 ಹಳ್ಳಿಗಳಿಗೆ 40 ಸಾವಿರ ಕನೆಕ್ಷನ್ ಕೊಟ್ಟಿದ್ದೇವೆ. ಕಾವೇರಿ 5ನೇ ಹಂತ ಬರುವರೆಗೂ ವಲಯ ಆಯುಕ್ತರು ಹಾಗೂ bwssb ಅಧಿಕಾರಿಗಳು ನಿರ್ವಹಣೆ ಮಾಡುತ್ತಾರೆ.

110 ಹಳ್ಳಿಗಳ ನೀರಿನ ನಿರ್ವಹಣೆ ಬಿಬಿಎಂಪಿ ಮಾಡುತ್ತದೆ. ಸಿಟಿ ಲಿಮಿಟ್ಸ್ ನಲ್ಲಿ bwssb ನಿರ್ವಹಣೆ ಮಾಡುತ್ತದೆ. ಖಾಸಗಿ ಟಾಂಕರ್ ಗಳನ್ನು ಕೂಡ ನಾವು ದುಡ್ಡು ಕೊಟ್ಟು ಕೆಲ ದಿನ ಖರೀದಿ ಮಾಡುತ್ತೇವೆ. ಖಾಸಗಿ ಟ್ಯಾಂಕರ್ ದರ ಕಡಿಮೆ ಮಾಡಲು ನಾವು ಅವರಿಂದ ಖರೀದಿ ಮಾಡುತ್ತೇವೆ. 200 ಟ್ಯಾಂಕರ್ ನಾವು ತೆಗೆದುಕೊಂಡಿದ್ದೇವೆ ಎಂದರು.

ಖಾಸಗಿ ಟ್ಯಾಂಕರ್​ಗಳಿಗೆ ಯಾವುದೇ ದರ ನಿಗದಿ ಮಾಡಿಲ್ಲ. ಖಾಸಗಿ ನೀರಿನ ಟ್ಯಾಂಕರ್​ಗಳನ್ನು ನಾವೇ ತೆಗೆದುಕೊಳ್ಳುತ್ತೇವೆ. ಖಾಸಗಿ ನೀರಿನ ಟ್ಯಾಂಕರ್​ಗಳಿಗೆ ನಾವೇ ದರ ನಿಗದಿ ಮಾಡ್ತೇವೆ. ಆ ದರವನ್ನು ಖಾಸಗಿ ಟ್ಯಾಂಕರ್​​ ಮಾಲೀಕರಿಗೆ ನೀಡುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:17 pm, Sat, 24 February 24

ತಾಜಾ ಸುದ್ದಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಮಗನನ್ನು ನೋಡಲು ಜೈಲಿಗೆ ಬಂದ ರೇವಣ್ಣ ಮಾಧ್ಯಮದವರನ್ನು ಕಂಡು ಸಿಡುಕಿದರು!
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಭೂಕುಸಿತದಲ್ಲಿ ಸಿಲುಕಿರುವ ಕಾರ್ಮಿಕನ ಕೈ ಗೋಚರ: ಸುರಂಗದ ಮೂಲಕ ಚಿಕಿತ್ಸೆ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ಮುಡಾ ಹಗರಣ ಸಿಬಿಐ ತನಿಖೆಗೆ ನೀಡಬೇಕೆನ್ನುವ ನೈತಿಕತೆ ಬಿಜೆಪಿಗಿದೆಯಾ? ಸಿಎಂ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
ವಿದ್ಯಾರ್ಥಿಗೆ ಬಾಸುಂಡೆ ಬರುವಂತೆ ಹೊಡೆದ ಶಿಕ್ಷಕಿ! ಪೋಷಕರಿಂದ ಶಾಲೆಗೆ ಬೀಗ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ
 ಪವಿತ್ರಾ ಗೌಡರನ್ನು ನೋಡಲು ಬುತ್ತಿಯೊಂದಿಗೆ ಜೈಲಿಗೆ ಬಂದ ತಂದೆ-ತಾಯಿ, ಸಹೋದರ