ಇಂದು ಕೂಡ ಬೆಂಗಳೂರಿನಲ್ಲಿ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ, ಕಣ್ಣೀರಾಕಿದ ಮಾಲೀಕರು

ಬಿಬಿಎಂಪಿ ನಗರದ ಎಂಟು ಜೋನ್ ಗಳಲ್ಲಿ ತೆರವು ಕಾರ್ಯಚಾರಣೆ ಆರಂಭಿಸಿದೆ. ನಿನ್ನೆ ವಿಜಯನಗರ ಹಾಗೂ ಜಯಮಹಲ್ ನಾ ಎರಡು ರಸ್ತೆಯಲ್ಲಿ ತೆರವು ಕಾರ್ಯಚಾರಣೆ ಮಾಡಲಾಗಿತು. ಇಂದು ಹಲಸೂರಿನ ಬಜಾರ್​​​ ಸ್ಟ್ರೀಟ್​​ನಲ್ಲಿ ತೆರವು ಕಾರ್ಯಾರಣೆ ನಡೆಯುತ್ತಿದೆ.

ಇಂದು ಕೂಡ ಬೆಂಗಳೂರಿನಲ್ಲಿ ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ, ಕಣ್ಣೀರಾಕಿದ ಮಾಲೀಕರು
ಬೀದಿಬದಿ ಅಂಗಡಿಗಳ ತೆರವು ಕಾರ್ಯಾಚರಣೆ
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Nov 18, 2023 | 1:05 PM

ಬೆಂಗಳೂರು, ನ.18: ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ವ್ಯಾಪಾರ ವಹಿವಾಟು ನಡೆಸುತ್ತಿರುವ ಹಿನ್ನೆಲೆ ಬಿಬಿಎಂಪಿ (BBMP) ಇಂದು ಕೂಡ ಒತ್ತುವರಿ ಕಾರ್ಯಚಾರಣೆಯನ್ನ (Encroachment Clearance) ಮುಂದುವರಿಸಿದ್ದು, ಹಲಸೂರಿನ ಬಜಾರ್​​​ ಸ್ಟ್ರೀಟ್​​ನಲ್ಲಿ ಬಿಬಿಎಂಪಿ ಸಿಬ್ಬಂದಿ ಅನಧಿಕೃತ ಅಂಗಡಿಗಳ ತೆರವು ಕಾರ್ಯಚಾರಣೆ ಮಾಡುತ್ತಿದ್ದಾರೆ. ಪಾದಚಾರಿ ಮಾರ್ಗದಲ್ಲಿರುವ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ. ಅಂಗಡಿಗಳನ್ನ ತೆರವು ಮಾಡಿ ಟ್ರಾಕ್ಟರ್​ನಲ್ಲಿ ತುಂಬಿಕೊಂಡು ಹೋಗುತ್ತಿದ್ದಾರೆ.

ರಾಜಾಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಬೀದಿ ಬದಿ ವ್ಯಾಪಾರಸ್ಥರ ಸಂಖ್ಯೆ ಜಾಸ್ತಿಯಾಗುತ್ತಿದೆ. ಜೊತೆಗೆ ಅನಧಿಕೃತ ವ್ಯಾಪಾರ ವಹಿವಾಟು ಮಾಡುವವರ ಸಂಖ್ಯೆಯು ಜಾಸ್ತಿಯಾಗಿದ್ದು, ಫುಟ್ ಪಾತ್​ಗಳಲ್ಲಿ ನಡೆದುಕೊಂಡು ಹೋಗಲು ಜಾಗವೇ ಇಲ್ಲದಂತಾಗಿದೆ. ಹೀಗಾಗಿ ಇದಕ್ಕೆಲ್ಲ ಮುಕ್ತಿ ಹಾಡುವ ಸಲುವಾಗಿ ಬಿಬಿಎಂಪಿ ನಗರದ ಎಂಟು ಜೋನ್ ಗಳಲ್ಲಿ ತೆರವು ಕಾರ್ಯಚಾರಣೆ ಆರಂಭಿಸಿದೆ. ನಿನ್ನೆ ವಿಜಯನಗರ ಹಾಗೂ ಜಯಮಹಲ್ ನಾ ಎರಡು ರಸ್ತೆಯಲ್ಲಿ ತೆರವು ಕಾರ್ಯಚಾರಣೆ ಮಾಡಲಾಗಿತು. ಇಂದು ಹಲಸೂರಿನ ಬಜಾರ್​​​ ಸ್ಟ್ರೀಟ್​​ನಲ್ಲಿ ತೆರವು ಕಾರ್ಯಾರಣೆ ನಡೆಯುತ್ತಿದೆ.

ಇದನ್ನೂ ಓದಿ: ಬೀದಿ ಬದಿ ವ್ಯಾಪಾರಸ್ತರಿಗೆ ಶಾಕ್​​ ನೀಡಿದ ಬಿಬಿಎಂಪಿ ಅಧಿಕಾರಿಗಳು: ಬೆಂಗಳೂರಿನ ಹಲವೆಡೆ ಅಂಗಡಿ ತೆರವು

ರಾಜಾಧಾನಿಯಲ್ಲಿ ಅನಧಿಕೃತ ಬೀದಿ ಬದಿ ವ್ಯಾಪಾರ ಮಾಡುವ ವ್ಯಾಪಾರಸ್ಥರ ಲೀಸ್ಟ್ ಅನ್ನ ಬಿಬಿಎಂಪಿ ಪಡೆದುಕೊಂಡಿದ್ದು, ನಿನ್ನೆ ನಾಲ್ಕು ಪಶ್ಚಿಮ ವಲಯ, ಯಲಹಂಕ, ಆರ್ ಆರ್ ನಗರ ಮತ್ತು ದಕ್ಷಿಣ ವಲಯದಲ್ಲಿ ತೆರವು ಕಾರ್ಯಚಾರಣೆ ಮಾಡಲಾಯಿತು.‌ ಅದ್ರಲ್ಲಿ ಜಯಮಹಲ್ ರಸ್ತೆಯ ನಂದಿದುರ್ಗ ರಸ್ತೆ ಹಾಗೂ ವಿಜಯನಗರದಲ್ಲಿ ಫುಟ್ ಪಾತ್​ನಲ್ಲಿರುವ ಅಂಗಡಿಗಳು, ಗಾಡಿ ಪಾರ್ಕಿಂಗ್, ಪೆಟ್ಟಿಗೆ ಅಂಗಡಿ, ಸಮಾಧಿಕಲ್ಲುಗಳ ವ್ಯಾಪರ ಹಾಗೂ ಹಣ್ಣಿನ ಅಂಗಡಿಗಳಂತಹ 50 ಕ್ಕು ಹೆಚ್ಚು ಅಂಗಡಿಗಳನ್ನ ತೆರವು ಮಾಡಲಾಯಿತು.

ತೆರವು ಕಾರ್ಯಚಾರಣೆ ಆರಂಭವಾಗುತ್ತಿದ್ದಂತೆ ವ್ಯಾಪರಸ್ಥರು ಆಕ್ರೋಶ ವ್ಯಕ್ತಪಡಿಸಿದ್ರು. 30 ವರ್ಷಗಳಿಂದ ಇದೇ ರಸ್ತೆಯಲ್ಲಿ ವ್ಯಾಪಾರ ಮಾಡ್ತಿದ್ವಿ. ಇದೀಗಾ ಏಕಾಏಕಿ ಅಂಗಡಿಗಳನ್ನ ತೆರವು ಮಾಡ್ತಿದ್ದಾರೆ. ಕೈ‌ಮುಗಿದ್ರು ಬಿಡ್ತಿಲ್ಲ. ಇದೇ ವ್ಯಾಪರವನ್ನ ನಂಬಿಕೊಂಡು ನಮ್ಮ ಜೀವನ ನಡೆತ ಇದೆ.‌ ಈಗಾ ತೆರವು ಮಾಡಿದ್ರೆ ನಮ್ಮ ಜೀವನ ಹೇಗೆ. ಸಾವಿರಾರು ರುಪಾಯಿ ಬಂಡವಾಳ ಹಾಕಿ ವ್ಯಾಪಾರ ನಡುಸ್ತಾ ಇದ್ವಿ. ಇದೀಗಾ ನಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿದ್ದಾರೆ.‌ ನಮ್ಮ ಈ ಬೀದಿ ವ್ಯಾಪಾರ ವಹಿವಾಟು ಬೇರೆ ಏನು ಗೊತ್ತಿಲ್ಲ ಅಂತ ಬಿಬಿಎಂಪಿ ಅಧಿಕಾರಿಗಳ ವಿರುದ್ದ ವ್ಯಾಪಾರಸ್ತರು ಆಕ್ರೋಶ ವ್ಯಕ್ತಪಡಿಸಿದ್ರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ