4 ಕೋಟಿ ವೆಚ್ಚದಲ್ಲಿ ಬೆಂಗಳೂರಿನ 8 ವಲಯಗಳಲ್ಲಿ ಮರಗಳ ಸರ್ವೇಗೆ ಬಿಬಿಎಂಪಿ ಪ್ಲಾನ್

| Updated By: ಆಯೇಷಾ ಬಾನು

Updated on: Jan 20, 2024 | 7:01 AM

ಮರ ಕಡಿಯಲು ಅನುಮತಿ ಪಡೀಬೇಕು ಅನ್ನೋ ನಿಯಮ ಇದ್ರೂ ಕದ್ದು ಮುಚ್ಚಿ ಮರ ಕಡಿಯುತ್ತಿದ್ದವರಿಗೆ ಬ್ರೇಕ್ ಹಾಕೋಕೆ ಬಿಬಿಎಂಪಿ ಹೊಸ ಪ್ಲಾನ್ ಗೆ ಮುಂದಾಗಿದೆ. ಬೆಂಗಳೂರಿನ 8 ವಲಯಗಳಲ್ಲಿ ಮರಗಳ ಸರ್ವೇಗೆ ಸಜ್ಜಾಗಿರೋ ಪಾಲಿಕೆ, ಈಗಾಗಲೇ 4 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದೆ. ಬೆಂಗಳೂರಿನ ಎಲ್ಲಾ ರಸ್ತೆಗಳು, ಸಾರ್ವಜನಿಕ ಸ್ಥಳಗಳು, ಹಾಗೂ 50ಕ್ಕಿಂತ ಕಡಿಮೆ ಮರಗಳಿರೋ ಖಾಸಗಿ ಜಾಗಗಳಲ್ಲಿ ಮರಗಳ ಸರ್ವೇ ಮಾಡೋಕೆ ಪಾಲಿಕೆ ಚಿಂತನೆ ನಡೆಸಿದೆ.

4 ಕೋಟಿ ವೆಚ್ಚದಲ್ಲಿ ಬೆಂಗಳೂರಿನ 8 ವಲಯಗಳಲ್ಲಿ ಮರಗಳ ಸರ್ವೇಗೆ ಬಿಬಿಎಂಪಿ ಪ್ಲಾನ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜ.20: ಸಿಲಿಕಾನ್ ಸಿಟಿ, ಐಟಿಬಿಟಿ ಸಿಟಿ ಅಂತೆಲ್ಲ ಕರೆಯಲ್ಪಡುವ ರಾಜ್ಯ ರಾಜಧಾನಿ ಬೆಂಗಳೂರನ್ನ ಗ್ರೀನ್ ಸಿಟಿ ಮಾಡೋಕೆ ಬಿಬಿಎಂಪಿ (BBMP) ಪಣತೊಟ್ಟಿದೆ. ಇಷ್ಟು ದಿನ ಕದ್ದುಮುಚ್ಚಿ ಮರ ಕಡಿಯುತ್ತಿದ್ದವರಿಗೆ ಲಗಾಮು ಹಾಕಲು ಸಜ್ಜಾಗಿರೋ ಪಾಲಿಕೆ, ಬೆಂಗಳೂರಿನ ಎಂಟು ವಲಯಗಳಲ್ಲಿ ಎಲ್ಲಾ ಮರಗಳ ಸರ್ವೇಗೆ (Tree Survey In Bengaluru) ಮುಂದಾಗಿದೆ. ಸರ್ವೇ ಮೂಲಕ ಅನುಮತಿ ಇಲ್ಲದೇ ಮರ ಕಡಿಯುವವರಿಗೆ ಬಿಸಿ ಮುಟ್ಟಿಸೋಕೆ ಸಜ್ಜಾಗಿದೆ.

ಅಭಿವೃದ್ಧಿಯ ಹೆಸರಲ್ಲಿ ಮರ-ಗಿಡಗಳನ್ನ ಕಳೆದುಕೊಂಡು ಕಾಂಕ್ರಿಟ್ ಕಾಡಾಗಿ ಬದಲಾಗ್ತಿರೋ ಬೆಂಗಳೂರಿನ ಹಸಿರು ಉಳಿಸೋಕೆ ಪಾಲಿಕೆ ಸಜ್ಜಾಗಿದೆ. ಮರ ಕಡಿಯಲು ಅನುಮತಿ ಪಡೀಬೇಕು ಅನ್ನೋ ನಿಯಮ ಇದ್ರೂ ಕದ್ದು ಮುಚ್ಚಿ ಮರ ಕಡಿಯುತ್ತಿದ್ದವರಿಗೆ ಬ್ರೇಕ್ ಹಾಕೋಕೆ ಹೊಸ ಪ್ಲಾನ್ ಗೆ ಮುಂದಾಗಿದೆ. ಬೆಂಗಳೂರಿನ 8 ವಲಯಗಳಲ್ಲಿ ಮರಗಳ ಸರ್ವೇಗೆ ಸಜ್ಜಾಗಿರೋ ಪಾಲಿಕೆ, ಈಗಾಗಲೇ 4 ಕೋಟಿ ವೆಚ್ಚದಲ್ಲಿ ಟೆಂಡರ್ ಕರೆದಿದೆ.

ಇದನ್ನೂ ಓದಿ: ಕನ್ನಡ ಬೋರ್ಡ್ ಅಳವಡಿಕೆಗೆ ಫೆ.28 ಡೆಡ್ ಲೈನ್; ಅಂಗಡಿಗಳ ಮಾಲೀಕರಿಗೆ ಬಿಬಿಎಂಪಿಯಿಂದ ನೋಟಿಸ್ ಜಾರಿ

ಇನ್ನು ಬೆಂಗಳೂರಿನ ಎಲ್ಲಾ ರಸ್ತೆಗಳು, ಸಾರ್ವಜನಿಕ ಸ್ಥಳಗಳು, ಹಾಗೂ 50ಕ್ಕಿಂತ ಕಡಿಮೆ ಮರಗಳಿರೋ ಖಾಸಗಿ ಜಾಗಗಳಲ್ಲಿ ಮರಗಳ ಸರ್ವೇ ಮಾಡೋಕೆ ಪಾಲಿಕೆ ಚಿಂತನೆ ನಡೆಸಿದೆ. ಹೀಗೆ ಸರ್ವೇ ಮಾಡಿದ ಬಳಿಕ ಮರಗಳಿಗೆ ಕ್ಯೂ.ಆರ್.ಕೋಡ್ ಅಳವಡಿಸಿ, ಆ ಮೂಲಕ ಆ ಏರಿಯಾದ ಮರಗಳ ಮೇಲೆ ನಿಗಾ ಇಡೋದರ ಜೊತೆಗೆ ಅಕ್ರಮವಾಗಿ ಮರಗಳನ್ನ ಕಡಿಯೋದಕ್ಕೆ ಕಡಿವಾಣ ಹಾಕೋಕು ಚಿಂತನೆ ನಡೆದಿದೆ ಎಂದು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎಲ್.ಜಿ. ಸ್ವಾಮಿ ಮಾಹಿತಿ ನೀಡಿದರು.

ಸದ್ಯ ಕಬ್ಬನ್ ಪಾರ್ಕ್, ಲಾಲ್ ಬಾಗ್ ಸೇರಿದಂತೆ ಕೆಲ ಸ್ಥಳಗಳಲ್ಲಿ ಈಗಾಗಲೇ ಮರಗಳ ಸರ್ವೇ ಆಗಿದ್ದು, ಇದೀಗ ಸಾರ್ವಜನಿಕ ರಸ್ತೆಗಳು, ಫುಟ್ ಪಾತ್ ಗಳಲ್ಲಿರೋ ಮರಗಳ ಸರ್ವೇಗೆ ಪಾಲಿಕೆಯ ಅರಣ್ಯ ವಿಭಾಗ ಸಿದ್ಧತೆ ನಡೆಸಿದೆ. ಇನ್ನು ಈ ಸರ್ವೇ ಮೂಲಕ ಮರಗಳ ಮಾರಣಹೋಮಕ್ಕೆ ಬ್ರೇಕ್ ಹಾಕಲು ಬಿಬಿಎಂಪಿ ತಯಾರಾಗಿದ್ದು, ಪಾಲಿಕೆಯ ಈ ಐಡಿಯಾದಿಂದ ಬೆಂಗಳೂರಿನ ಮರಗಳ ಜೀವಕ್ಕೆ ಎಷ್ಟರಮಟ್ಟಿಗೆ ರಕ್ಷಣೆ ಸಿಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ