Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸ ತೆಗೆಯಲು ವಾರ್ಷಿಕ 100 ರೂ ನಿರ್ವಹಣಾ ವೆಚ್ಚ; ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಸ್ಪಷ್ಟನೆ

ಬಿಡಿಎ ಬಡಾವಣೆಗಳಲ್ಲಿ ನಿರ್ವಹಣೆ ವೆಚ್ಚ ಹೆಚ್ಚಳದಿಂದ ಖರೀದಿದಾರರ ಆಕ್ರೋಶದ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು. ಕೆಂಪೇಗೌಡ ಲೇಔಟ್​ನಲ್ಲಿ ಇನ್ನೂ ಮನೆಗಳನ್ನು ಕಟ್ಟಬೇಕಾಗಿದ್ದು, ಅಲ್ಲಿ 100 ರೂ ನಿರ್ವಹಣೆ ವೆಚ್ಚ ವಿನಾಯ್ತಿ‌ ನೀಡುವಂತೆ ಆಯುಕ್ತರಿಗೆ ತಿಳಿಸಿದ್ದೇವೆ: ಶಾಸಕ ಎಸ್.ಆರ್ ವಿಶ್ವನಾಥ್

ಕಸ ತೆಗೆಯಲು ವಾರ್ಷಿಕ 100 ರೂ ನಿರ್ವಹಣಾ ವೆಚ್ಚ; ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಸ್ಪಷ್ಟನೆ
ಬಿಡಿಎ ಹೆಡ್ ಆಫೀಸ್
Follow us
TV9 Web
| Updated By: guruganesh bhat

Updated on: Jun 29, 2021 | 3:06 PM

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಬರುವ ಕೆಲ ಬಡಾವಣೆಗಳನ್ನು ಬಿಡಿಎಗೆ ಸುಪರ್ದಿಗೆ ಇನ್ನೂ ನೀಡಿಲ್ಲ. ಆದರೆ, ಅಂತಹ ಬಡಾವಣೆಗಳಲ್ಲಿನ ಕಸವನ್ನು ಬಿಬಿಎಂಪಿ ತೆಗೆಯುವುದರಿಂದ ಬಿಡಿಎಗೆ ವಾರ್ಷಿಕ ಬಿಲ್ ಕಳಿಸುತ್ತಾರೆ. ಹೀಗಾಗಿ ವಾರ್ಷಿಕವಾಗಿ 100 ರೂ ನಿರ್ವಹಣೆ ವೆಚ್ಚವನ್ನು ನಿಗದಿಪಡಿಸಿದ್ದೇವೆ ಎಂದು ಬಿಡಿಎ ಅಧ್ಯಕ್ಷ ಮತ್ತು ಶಾಸಕ ಎಸ್.ಆರ್ ವಿಶ್ವನಾಥ್ ತಿಳಿಸಿದರು.

ಯಲಹಂಕದ ಅರಕೆರೆ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ಅವರು ಬಿಡಿಎ ಬಡಾವಣೆಗಳಲ್ಲಿ ನಿರ್ವಹಣೆ ವೆಚ್ಚ ಹೆಚ್ಚಳದಿಂದ ಖರೀದಿದಾರರ ಆಕ್ರೋಶದ ಕುರಿತು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದರು. ಕೆಂಪೇಗೌಡ ಲೇಔಟ್​ನಲ್ಲಿ ಇನ್ನೂ ಮನೆಗಳನ್ನು ಕಟ್ಟಬೇಕಾಗಿದ್ದು, ಅಲ್ಲಿ 100 ರೂ ನಿರ್ವಹಣೆ ವೆಚ್ಚ ವಿನಾಯ್ತಿ‌ ನೀಡುವಂತೆ ಆಯುಕ್ತರಿಗೆ ತಿಳಿಸಿದ್ದೇವೆ. ಉಳಿದಂತೆ ಇತರರು ವಾರ್ಷಿಕ 100/200 ರೂ ನಿರ್ವಹಣೆಗೆ ಕಟ್ಟಲೇಬೇಕು. ಬಿಬಿಎಂಪಿ ವ್ಯಾಪ್ತಿಗೆ ಬರುವ ಕೆಲ ಬಡಾವಣೆಗಳನ್ನು ಬಿಡಿಎಗೆ ಸುಪರ್ದಿಗೆ ಇನ್ನೂ ನೀಡಿಲ್ಲ. ಆದರೆ, ಆ ಬಡಾವಣೆಗಳಲ್ಲಿನ ಕಸವನ್ನು ಬಿಬಿಎಂಪಿ ತೆಗೆಯುವುದರಿಂದ ಬಿಡಿಎಗೆ ವಾರ್ಷಿಕ ಬಿಲ್ ಕಳಿಸುತ್ತದೆ. ಹೀಗಾಗಿ ವಾರ್ಷಿಕ ನಿರ್ವಹಣೆ ವೆಚ್ಚವನ್ನು ನೀಡಬೇಕಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪದಡಿ ದೂರು ದಾಖಲು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ದೂರು ಬಿಡಿಎ ಇಂಜಿನಿಯರ್​​ ಆರ್.ಕೆ.ಮೋಹನ್ ಎಂಬುವವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವರಾಮ ಕಾರಂತ ಲೇಔಟ್​ ವಿರೋಧಿಸಿ ಧರಣಿ ನಡೆಸಿ ಬಿಡಿಎ ವಿರುದ್ಧ ಜನರನ್ನು ಎತ್ತಿಕಟ್ಟಿದ ಆರೋಪದಡಿ ಕೋಡಿಹಳ್ಳಿ ಚಂದ್ರಶೇಖರ್​ ವಿರುದ್ಧ ಕೆ.ಮೋಹನ್ ಎಂಬುವವರು ದೂರು ದಾಖಲಿಸಿದ್ದಾರೆ.

ಕೋಡಿಹಳ್ಳಿ ಚಂದ್ರಶೇಖರ್ ಜನರಿಗೆ​ ತಪ್ಪು ಮಾಹಿತಿ ನೀಡಿದ್ದಾರೆ. ಶಿವರಾಮ ಕಾರಂತ ಬಡಾವಣೆ ವಿಚಾರದಲ್ಲಿ ದಾರಿ ತಪ್ಪಿಸಿದ್ದಾರೆ. ಈಗಾಗಲೇ ನ್ಯಾಯಾಂಗ ನಿಂದನೆ ಅಡಿಯಲ್ಲಿ ನೋಟಿಸ್ ಕೂಡ ಕೊಡಲಾಗಿದೆ. ಪೊಲೀಸರು ಅವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ​ಸುಪ್ರೀಂಕೋರ್ಟ್​ ನೇಮಿಸಿದ್ದ ಸಮಿತಿಗೆ ದಾಖಲೆ ನೀಡದಂತೆ ಜನರ ದಾರಿ ತಪ್ಪಿಸಿ ಪ್ರತಿಭಟನೆ ಮಾಡಿಸಿದ್ದಾರೆಂದು ಆರೋಪಿಸಿ ಕೆ.ಮೋಹನ್ ಎಂಬುವವರು ದೂರು ನೀಡಿದ್ದಾರೆ.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ಜೂ.21ರಂದು ಕೊವಿಡ್​ 19 ಲಸಿಕೆ ಪಡೆದ 13 ವರ್ಷದ, ಅಂಗವಿಕಲ ಬಾಲಕ..!; ಇದೊಂದು ಮಹಾ ಎಡವಟ್ಟು

Big Update: ರಾಜ್ಯದಲ್ಲಿ ಕೊವಿಡ್ 3ನೇ ಅಲೆ ಎದುರಿಸಲು ಹೊಸ ಸಮಿತಿ ರಚನೆಗೆ ತೀರ್ಮಾನ

(BDA President MLA SR Vishwanath clarifies about 100 Rs annual maintenance cost for garbage disposal in some BDA sites)

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು