ಬೆಂಗಳೂರಿನಲ್ಲಿ ಐಬಿ ಅಧಿಕಾರಿ ಎಂದು ನಂಬಿಸಿ 89 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿ ಅರೆಸ್ಟ್!

ಆರೋಪಿ ಪ್ರಧಾನಮಂತ್ರಿಗಳ ಕಾರ್ಯಾಲಯದ ಹೆಸರಿನಲ್ಲಿ ಮಹಾ ವಂಚನೆ ಮಾಡಿದ್ದಾನೆ. ಯುಪಿ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ವೀಸಾ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಈತ ನಂಬಿಸಿದ್ದ.

ಬೆಂಗಳೂರಿನಲ್ಲಿ ಐಬಿ ಅಧಿಕಾರಿ ಎಂದು ನಂಬಿಸಿ 89 ಲಕ್ಷ ರೂ. ಪಡೆದು ವಂಚಿಸಿದ್ದ ಆರೋಪಿ ಅರೆಸ್ಟ್!
ಆರೋಪಿ ಮೋಹನ್ ಕುಮಾರ್
Follow us
TV9 Web
| Updated By: sandhya thejappa

Updated on:May 01, 2022 | 1:01 PM

ಬೆಂಗಳೂರು: ಐಬಿ (IB) ಅಧಿಕಾರಿ ಅಂತಾ ಹೇಳಿಕೊಂಡು ವಂಚಿಸಿದ್ದ ಆರೋಪಿಯನ್ನು ಬೆಂಗಳೂರಿನ (Bengaluru) ಬೆಳ್ಳಂದೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೋಹನ್ ಕುಮಾರ್ ಅಲಿಯಾಸ್ ಅರಹಂತ್ ಲಕ್ಕವಳ್ಳಿ ಬಂಧನಕ್ಕೊಳಗಾದ ಆರೋಪಿ. ಮೋಹನ್ RAW, IB, PMO ಅಧಿಕಾರಿಯೆಂದು ನಂಬಿಸಿ ವಂಚಿಸಿದ್ದ. ಬರೋಬ್ಬರಿ 89 ಲಕ್ಷ ಹಣ ಪಡೆದು ವಂಚಿಸಿದ್ದಾನೆ. ವಂಚಿಸಿ ಪಡೆದ ಹಣದಲ್ಲಿ ವರ್ಷಕ್ಕೆ ಹಲವು ಬಾರಿ ವಿದೇಶಿ ಪ್ರವಾಸ ಮಾಡುತ್ತಿದ್ದ. ಸಿಂಗಾಪುರ, ಮಲೇಷಿಯಾ, ಯುರೋಪ್ ಪ್ರವಾಸಕ್ಕೆ ಹೋಗುತ್ತಿದ್ದ. ರಾಜಕೀಯ ವ್ಯಕ್ತಿಗಳ ಲಿಂಕ್ ಇರೋದಾಗಿ ನಂಬಿಸುತ್ತಿದ್ದ. ಪೊಲೀಸ್ ಅಧಿಕಾರಿಗಳು, ಗಣ್ಯರ ಲಿಂಕ್ ಇದೆ ಎಂದು ನಂಬಿಸಿದ್ದ. ನಂತರ ಉತ್ತರ ಪ್ರದೇಶದ ಮಹಿಳೆಗೆ ವಂಚಿಸಿ ತಗಲಾಕಿಕೊಂಡಿದ್ದಾನೆ.

ಆರೋಪಿ ಪ್ರಧಾನಮಂತ್ರಿಗಳ ಕಾರ್ಯಾಲಯದ ಹೆಸರಿನಲ್ಲಿ ಮಹಾ ವಂಚನೆ ಮಾಡಿದ್ದಾನೆ. ಯುಪಿ ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ಮೇರೆಗೆ ಬಂಧಿಸಲಾಗಿದೆ. ವೀಸಾ ಸಮಸ್ಯೆಗೆ ಪರಿಹಾರ ಕೊಡಿಸುವುದಾಗಿ ಈತ ನಂಬಿಸಿದ್ದ. ಉಗ್ರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿದೆ ಎಂದು ಹೆದರಿಸಿದ್ದ. ಹೀಗೆ ನಂಬಿಸಿ ಮಹಿಳೆಯಿಂದ ದೊಡ್ಡ ಮಟ್ಟದ ಹಣ ದೋಚಿದ್ದ. ಬಳಿಕ ಅಸಲಿ ಸಂಗತಿ ತಿಳಿದು ಬೆಂಗಳೂರಿನಲ್ಲಿ ಎಫ್ಐಆರ್ ದಾಖಲಾಗಿತ್ತು.

ತನಿಖೆ ವೇಳೆ ಆರೋಪಿಯಿಂದ ಹಲವು ಸಂಗತಿಗಳು ಬಯಲಾಗಿದೆ. ಕೆಲಸ ಇಲ್ಲದಿದ್ದರೂ 10 ಬ್ಯಾಂಕ್ಗಳಲ್ಲಿ 16 ಖಾತೆ ಹೊಂದಿದ್ದಾನೆ. ಪಾಸ್​ಪೋರ್ಟ್​ನಲ್ಲಿ ಹಲವು ದೇಶಗಳ ಸುತ್ತಾಟದ ಪಟ್ಟಿ ಬೆಳಕಿಗೆ ಬಂದಿದೆ. ವಂಚಕ ಮೋಹನ್ ಮೂಲತಃ ಶಿವಮೊಗ್ಗ ಮೂಲದವನು. ಬೆಂಗಳೂರಿನ ರಾಜಾಜಿನಗರದಲ್ಲಿ ಸೋದರನೊಂದಿಗೆ ವಾಸವಿದ್ದ. ರಿಯಲ್ ಎಸ್ಟೇಟ್ ಬ್ಯುಸಿನೆಸ್ ಮಾಡ್ತಿರೋದಾಗಿ ಮನೆಯಲ್ಲಿ ಹೇಳಿದ್ದ. ಮೋಹನ್ ಕುಮಾರ್ ಬಂಧನದ ಬಳಿಕ ಪೋಷಕರು ಶಾಕ್ ಆಗಿದ್ದಾರೆ. ಮೊಬೈಲ್ ಪಾಸ್​ವರ್ಡ್​ ನೀಡದೆ ಪೊಲೀಸರ ಜೊತೆ ಚೆಲ್ಲಾಟ ಆಡಿದ್ದಾನೆ. ಸುಳ್ಳು ಪಾಸ್​ವರ್ಡ್​ ನೀಡಿ ಮೋಹನ್ ಕುಮಾರ್ ಹುಚ್ಚಾಟ ಮೆರೆದಿದ್ದಾನೆ.

ಈತನ ಕೆಲಸಕ್ಕೆ ಬೇಸತ್ತು ಪೊಲೀಸರು ಕೋರ್ಟ್ ಮೊರೆಹೋಗಿದ್ದಾರೆ. ನ್ಯಾಯಾಲಯದ ಅನುಮತಿ ಪಡೆದು ಮೊಬೈಲ್ ಅನ್​ಲಾಕ್​ಗೆ ಮುಂದಾಗಿದ್ದಾರೆ. ವಿಚಾರಣೆಗೆ ಆರೋಪಿ ಮೋಹನ್ ಸಹಕರಿಸದ ಹಿನ್ನೆಲೆ ಅನುಮಾನ ಹೆಚ್ಚಾಗಿದೆ. ಈವರೆಗೂ ಯುಪಿ ಯುವತಿ ಬಿಟ್ಟರೆ ಯಾವುದೇ ಕೇಸ್ ಬಾಯಿಬಿಟ್ಟಿಲ್ಲ. ಇದೇ ಮಾದರಿ ಹಲವರಿಗೆ ದೊಡ್ಡವರ ಹೆಸರು ಹೇಳಿ ವಂಚನೆ ಮಾಡಿರುವ ಶಂಕೆ ಮೂಡಿದೆ. ಸದ್ಯ ಬೆಳ್ಳಂದೂರು ಪೊಲೀಸರು ಮೋಹನ್​ ಕುಮಾರ್​ನ​ ವಿಚಾರಣೆ ಮಾಡುತ್ತಿದ್ದಾರೆ.

ಇದನ್ನೂ ಓದಿ

Imran Tahir: ತನ್ನ ಮಡದಿಗಾಗಿ ಪಾಕಿಸ್ತಾನವನ್ನು ಬಿಟ್ಟು ದ. ಆಫ್ರಿಕಾಕ್ಕೆ ಬಂದ ಇಮ್ರಾನ್ ತಾಹಿರ್ ಬಗ್ಗೆ ನಿಮಗೆಷ್ಟು ಗೊತ್ತು?

Crime News: ವಿವಿಧೆಡೆ ಅಪಘಾತ; 6 ಮಂದಿ ಸಾವು, ಬಾಗಲಕೋಟೆಯಲ್ಲಿ ಪೆಟ್ರೋಲ್ ಕಳ್ಳತನ

Published On - 12:58 pm, Sun, 1 May 22

ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್