ಗೇಮ್ ಆ್ಯಪ್ ಮೂಲಕ ಪ್ರೀತಿ, ಮದುವೆ; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಬಂಧನ

| Updated By: ಆಯೇಷಾ ಬಾನು

Updated on: Jan 23, 2023 | 11:03 AM

ಗೇಮ್ ಆ್ಯಪ್ ಲೂಡೊ ಆಟದ ಮುಖಾಂತರ ಇಕ್ರಾ ಹಾಗೂ ಮುಲಾಯಂ ಪರಸ್ಪರ ಪರಿಚಯವಾಗಿದೆ. ಬಳಿಕ ಒಬ್ಬರ ನಡುವೆ ಪ್ರೀತಿ ಶುರುವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆಗ ಇಕ್ರಾ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಳು.

ಗೇಮ್ ಆ್ಯಪ್ ಮೂಲಕ ಪ್ರೀತಿ, ಮದುವೆ; ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಬಂಧನ
ಇಕ್ರಾ ಜೀವನಿ-ಮುಲಾಯಂ ಸಿಂಗ್
Follow us on

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನದ​​ ಇಕ್ರಾ ಜೀವನಿ(19) ಎಂಬ ಮಹಿಳೆಯನ್ನು ಬೆಳ್ಳಂದೂರು ಪೊಲೀಸರು ಬಂಧಿಸಿದ್ದಾರೆ. ಯುಪಿ ನಿವಾಸಿ ಮುಲಾಯಂ ಸಿಂಗ್ ಜೊತೆ ಮದುವೆ ಆಗಿದ್ದ ಇಕ್ರಾ, ಸರ್ಜಾಪುರ ರಸ್ತೆಯ ಜುನ್ನಸಂದ್ರದಲ್ಲಿ ಪತಿ ಜೊತೆ ನೆಲೆಸಿದ್ದರು. ಸದ್ಯ ಪೊಲೀಸರು ಪಾಕ್ ಮಹಿಳೆ ಇಕ್ರಾ ಜೀವನಿ, ಮುಲಾಯಂ ಸಿಂಗ್ ಇಬ್ಬರನ್ನೂ ಬಂಧಿಸಿದ್ದಾರೆ.

ನೇಪಾಳದ ಮೂಲಕ ಭಾರತ ಗಡಿ ಪ್ರವೇಶಿಸಿದ್ದ ಪಾಕ್​ನ ಇಕ್ರಾ, ಡೇಟಿಂಗ್ ಌಪ್​ ಮೂಲಕ ಮುಲಾಯಂ ಸಿಂಗ್ ಜೊತೆ ಮದುವೆ ಆಗಿದ್ದಳು. ನಂತರ ಬೆಂಗಳೂರಿನ ಜುನ್ನಸಂದ್ರದಲ್ಲಿ ಪತಿ ಜೊತೆ ನೆಲೆಸಿದ್ದಳು. ಈ ನಡುವೆ ತನ್ನ ತಾಯಿಯನ್ನು ಸಂಪರ್ಕಿಸಲು ಯತ್ನಿಸಿದ್ದ ಇಕ್ರಾ ಬಗ್ಗೆ ಕೇಂದ್ರ ಗುಪ್ತಚರ ಇಲಾಖೆ ರಾಜ್ಯಕ್ಕೆ ಮಾಹಿತಿ ನೀಡಿತ್ತು. ಮಾಹಿತಿ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಿ ಇಕ್ರಾ ಜೀವನಿ, ಮುಲಾಯಂನನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ರಾವಾ ಯಾದವ್​ ಎಂದು ಹೆಸರು ಬದಲಿಸಿ ಪಾಸ್​​ಪೋರ್ಟ್​ಗೆ ಅರ್ಜಿ ಹಾಕಿರುವ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಪೊಲೀಸರು ಎಫ್​ಆರ್​​ಆರ್​ಒ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಇಕ್ರಾಳನ್ನು ಮಹಿಳಾ ಪುನರ್ವಸತಿ ಕೇಂದ್ರದಲ್ಲಿರಿಸಲಾಗಿದೆ.

ಇದನ್ನೂ ಓದಿ: Mysore News: ಟಿ.ನರಸೀಪುರ ತಾಲೂಕಿನಲ್ಲಿ ನಿರಂತರವಾಗಿ ಚಿರತೆ ದಾಳಿ, 15 ದಿನಗಳಲ್ಲಿ ಕಬ್ಬು ಕಟಾವಿಗೆ ಆದೇಶ

ಗೇಮ್ ಆ್ಯಪ್ ಮೂಲಕ ಪರಿಚಯ

ಇನ್ನು ಗೇಮ್ ಆ್ಯಪ್ ಲೂಡೊ ಆಟದ ಮುಖಾಂತರ ಇಕ್ರಾ ಹಾಗೂ ಮುಲಾಯಂ ಪರಸ್ಪರ ಪರಿಚಯವಾಗಿದೆ. ಬಳಿಕ ಒಬ್ಬರ ನಡುವೆ ಪ್ರೀತಿ ಶುರುವಾಗಿ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದರು. ಆಗ ಇಕ್ರಾ ಪಾಕಿಸ್ತಾನ ತೊರೆದು ಭಾರತಕ್ಕೆ ಬಂದಿದ್ದಳು. ಮುಲಾಯಂ ಸಿಂಗ್ ಬೆಂಗಳೂರಿನ ಖಾಸಗಿ ಕಂಪನಿಯ ಸೆಕ್ಯೂರಿಟಿಯಾಗಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಇಕ್ರಾ ಭಾರತಕ್ಕೆ ಬಂದಿದ್ದಳು. ಸದ್ಯ ಈಗ ಇಬ್ಬರ ವಿರುದ್ಧವೂ ಎಫ್​ಐಆರ್ ದಾಖಲಾಗಿದೆ.

ಮನೆ ಬಾಡಿಗೆ ಕೊಟ್ಟ ಮಾಲೀಕನ ಮೇಲೂ ಕೇಸ್ ದಾಖಲು

ಮತ್ತೊಂದೆಡೆ ಇಕ್ರಾ ಹಾಗೂ ಮುಲಾಯಂಗೆ ಮನೆ ಬಾಡಿಗೆ ಕೊಟ್ಟ ಗೋವಿಂದರೆಡ್ಡಿ ಮೇಲೂ ಕೇಸ್ ದಾಖಲಾಗಿದೆ. ಪಾಕ್ ಮೂಲದ ಮಹಿಳೆ ಹಾಗೂ ಮುಲಾಯಂ ಸಿಂಗ್ ಪೂರ್ವ ಮಾಹಿತಿ ಕಲೆ ಹಾಕದೆ ಮನೆ ಬಾಡಿಗೆ ನೀಡಿದ ಆರೋಪ ಹಿನ್ನೆಲೆ ಜುನ್ನಸಂದ್ರದ ಮನೆ ಮಾಲೀಕ ಗೋವಿಂದರೆಡ್ಡಿ ಮೇಲೂ ಎಫ್ಐಆರ್ ದಾಖಲಾಗಿದೆ. ಸೆಪ್ಟೆಂಬರ್ 28 ರಂದು ಬೆಂಗಳೂರಿಗೆ ಅಗಮಿಸಿದ್ದ ಇಕ್ರ ಜಿವಾನಿ ಮತ್ತು ಮುಲಾಯಂ ಸಿಂಗ್, ಭಾರತದ ನಾಗರೀಕ ಸೌಲಭ್ಯ ಒದಗಿಸಲು ನಕಲಿ ಹೆಸರಲ್ಲಿ ಆಧಾರ್ ಕಾರ್ಡ್ ಸೃಷ್ಟಿಸಿದ್ದರು.

ಬಾರ್​​ ಮ್ಯಾನೇಜರ್​ ಸೇರಿದಂತೆ ಐವರನ್ನು ಬಂಧಿಸಿದ ಪೊಲೀಸರು

ಬೆಂಗಳೂರಿನಲ್ಲಿ ವ್ಯಕ್ತಿ ಮೇಲೆ ಬಾರ್​ ಸಿಬ್ಬಂದಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಾರ್​​ ಮ್ಯಾನೇಜರ್​ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಪೆರುಮಾಳ್​ ಎಂಬಾತನ ಮೇಲೆ ಆರೋಪಿಗಳು ಹಲ್ಲೆ ನಡೆಸಿದ್ದರು. ಬಾರ್​​ನ ಕೌಂಟರ್​​ನಲ್ಲಿ ಮದ್ಯ ಸೇವಿಸಿದ್ದಕ್ಕೆ ಹಲ್ಲೆ ನಡೆಸಿದ್ದರು. ಈ ಬಗ್ಗೆ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಸಂಬಂಧ ಬಸವೇಶ್ವರ ನಗರ ಠಾಣೆ ಪೊಲೀಸರು ಐವರನ್ನು ಬಂಧಿಸಿದ್ದಾರೆ. ರಂಗಸ್ವಾಮಿ, ಕುಮಾರ್, ಗಿರೀಶ್, ಬೀರಪ್ಪ, ಗಣೇಶ್ ಬಂಧಿತ ಆರೋಪಿಗಳು. ಇನ್ನೂ ಕೆಲವರ ಬಂಧನ ಸಾಧ್ಯತೆಇದ್ದು ಸದ್ಯ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:16 am, Mon, 23 January 23