Bengaluru: 8ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲ; ವಾಹನ ಸಂಚಾರ ಸ್ಥಗಿತ

| Updated By: ganapathi bhat

Updated on: Dec 25, 2021 | 4:29 PM

ಗೊರಗುಂಟೆ ಪಾಳ್ಯ ಹಾಗೂ ನೆಲಮಂಗಲ ಎಲಿವೇಟೆಡ್ ರಸ್ತೆಯಲ್ಲಿ ರೋಪ್‌‌ಗಳ ಬಿರುಕು ಕಂಡುಬಂದಿದ್ದು ಘಟನೆ ಸಂಭವಿಸಿದೆ. ಫ್ಲೈ‌ಓವರ್‌ನಲ್ಲಿ ರೋಪ್‌ಗಳದ್ದೆ ಮಹತ್ವದ ಪಾತ್ರ ಇರುತ್ತದೆ. ಇದೀಗ ಪಿಲ್ಲರ್ 101 ಹಾಗೂ 102 ರ ನಡುವಿನ ರೋಪ್‌ ಸಡಿಲ ಆಗಿದೆ.

Bengaluru: 8ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲ; ವಾಹನ ಸಂಚಾರ ಸ್ಥಗಿತ
8ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲ
Follow us on

ನೆಲಮಂಗಲ: 8ನೇ ಮೈಲಿಯ ಫ್ಲೈಓವರ್‌ನಲ್ಲಿ ರೋಪ್ ಸಡಿಲ ಆಗಿದ್ದು ರೋಪ್ ಸಡಿಲಗೊಂಡಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿದೆ. ಬೆಂಗಳೂರಿನ 8ನೇ ಮೈಲಿಯ ಫ್ಲೈಓವರ್‌ನಲ್ಲಿ ಘಟನೆ ನಡೆದಿದೆ. ಬೆಂಗಳೂರು ಗೇಟ್ ವೇ ಪ್ಲೈ ಒವರ್​ನ ರೋಪ್ ವೇ ಕಟ್ಟಾಗಿ ಸಂಚಾರ ಸ್ಥಗಿತಗೊಂಡಿದೆ. ಇಂಜಿನಿಯರ್​ಗಳ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ.

ಗೊರಗುಂಟೆ ಪಾಳ್ಯ ಹಾಗೂ ನೆಲಮಂಗಲ ಎಲಿವೇಟೆಡ್ ರಸ್ತೆಯಲ್ಲಿ ರೋಪ್‌‌ಗಳ ಬಿರುಕು ಕಂಡುಬಂದಿದ್ದು ಘಟನೆ ಸಂಭವಿಸಿದೆ. ಫ್ಲೈ‌ಓವರ್‌ನಲ್ಲಿ ರೋಪ್‌ಗಳದ್ದೆ ಮಹತ್ವದ ಪಾತ್ರ ಇರುತ್ತದೆ. ಇದೀಗ ಪಿಲ್ಲರ್ 101 ಹಾಗೂ 102 ರ ನಡುವಿನ ರೋಪ್‌ ಸಡಿಲ ಆಗಿದೆ. ತಕ್ಷಣ ಎಚ್ಚೆತ್ತ ಟೋಲ್ ಆಡಳಿತ ಮಂಡಳಿ ಫ್ಲೈ‌ಓವರ್ ಸಂಚಾರ ಬಂದ್ ಮಾಡಿದೆ. ಸರ್ವೀಸ್ ರಸ್ತೆಯಲ್ಲಿ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಸ್ಥಳಕ್ಕೆ NHAI ಅಧಿಕಾರಿಗಳು ಹಾಗೂ ಪೀಣ್ಯ ಪೊಲೀಸರು ದೌಡಾಯಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮತ್ತೊಂದು ಒಮಿಕ್ರಾನ್ ಕೇಸ್ ಪತ್ತೆ; 60 ವರ್ಷದ ವ್ಯಕ್ತಿಗೆ ಸೋಂಕು ಧೃಡ

ಇದನ್ನೂ ಓದಿ: ಒಮಿಕ್ರಾನ್ ಆತಂಕದ ಮಧ್ಯೆ ಶೇ.100ರಷ್ಟು ಎರಡು ಡೋಸ್ ಲಸಿಕೆ ಪೂರ್ಣಗೊಳಿಸಿದ ಬೆಂಗಳೂರು, ಯಾವ ಜಿಲ್ಲೆಯಲ್ಲಿ ಎಷ್ಟು ಲಸಿಕೆ?