AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರಿನಲ್ಲಿ ಸಿಕ್ತು ಕಂತೆ ಕಂತೆ ನೋಟು; ಹಣ ಎಣಿಸುವ ಮಷಿನ್ ತಂದ IT ಸಿಬ್ಬಂದಿ

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಜಯನಗರದಲ್ಲಿ (Jayanagar) ಇಂದು(ಏ.13) ಎರಡು ಕಾರು ಒಂದು ಬೈಕ್​ನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಬೈಕ್​ನಲ್ಲಿ ಒಂದು ಬ್ಯಾಗ್, ಎರಡು ಕಾರ್​ನಲ್ಲಿ ತಲಾ ಒಂದೊಂದು ಬ್ಯಾಗ್​​ನ್ನು ಜಪ್ತಿ ಮಾಡಲಾಗಿದ್ದು, ಫಾರ್ಚುನರ್ ಕಾರಿನಲ್ಲಿದ್ದ ಐವರು ಎಸ್ಕೇಪ್ ಆಗಿದ್ದಾರೆ. ಇನ್ನು ಮೂರು ಬ್ಯಾಗ್​ನಲ್ಲಿದ್ದ ಹಣ ಎಣಿಸಲಾಗದೆ ಇದೀಗ ಐಟಿ ಸಿಬ್ಬಂದಿ ಹಣ ಎಣಿಸುವ ಮಷಿನ್ ತಂದಿದ್ದಾರೆ.

ಕಾರಿನಲ್ಲಿ ಸಿಕ್ತು ಕಂತೆ ಕಂತೆ ನೋಟು; ಹಣ ಎಣಿಸುವ ಮಷಿನ್ ತಂದ IT ಸಿಬ್ಬಂದಿ
ಬೆಂಗಳೂರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಹಣ ಜಪ್ತಿ
TV9 Web
| Edited By: |

Updated on:Apr 13, 2024 | 4:14 PM

Share

ಬೆಂಗಳೂರು, ಏ.13: ಲೋಕಸಭಾ ಚುನಾವಣೆ ಹಿನ್ನಲೆ ಯಾವುದೇ ಅಕ್ರಮ ನಡೆಯದಂತೆ ಚೆಕ್​​ಪೋಸ್ಟ್​ ನಿರ್ಮಿಸಿ ಹದ್ದಿನ ಕಣ್ಣು ಇಡಲಾಗಿದೆ. ಅದರಂತೆ ಇಂದು(ಏ.13) ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಜಯನಗರದಲ್ಲಿ (Jayanagar) ಎರಡು ಕಾರು ಒಂದು ಬೈಕ್​ನ್ನು ಚುನಾವಣಾ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಬೈಕ್​ನಲ್ಲಿ ಒಂದು ಬ್ಯಾಗ್, ಎರಡು ಕಾರ್​ನಲ್ಲಿ ತಲಾ ಒಂದೊಂದು ಬ್ಯಾಗ್​​ನ್ನು ಜಪ್ತಿ ಮಾಡಲಾಗಿದ್ದು, ಫಾರ್ಚುನರ್ ಕಾರಿನಲ್ಲಿದ್ದ ಐವರು ಎಸ್ಕೇಪ್ ಆಗಿದ್ದಾರೆ. ಇನ್ನು ಹಣ ಎಣಿಸಲು ಸಾಧ್ಯವಾಗದೆ ಬ್ಯಾಗ್​ನ್ನು ಚುನಾವಣಾ ಅಧಿಕಾರಿಗಳು ಪೊಲೀಸ್ ಠಾಣೆಗೆ ತಂದಿದ್ದಾರೆ.

ಹಣ ಎಣಿಸುವ ಮಷಿನ್ ತಂದ ಐಟಿ ಸಿಬ್ಬಂದಿ

ಸ್ಥಳದಲ್ಲಿ MCC ನೋಡಲ್ ಅಧಿಕಾರಿ ಮನೀಷ್ ಮೌದ್ಗಿಲ್ ಇದ್ದು, ಇದೀಗ ಐಟಿ ಸಿಬ್ಬಂದಿ ಹಣ ಎಣಿಸುವ ಮಷಿನ್ ತಂದಿದ್ದಾರೆ. ಸದ್ಯ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಕಾಯುತ್ತಿದ್ದಾರೆ. ಇನ್ನು ಸೀಜ್​ ಆದ ಬೈಕ್​ ಧನಂಜಯ ಎಂಬುವರಿಗೆ ಸೇರಿದ್ದಾಗಿದ್ದು, ಕಾರು ಸೋಮಶೇಖರ್ ಎಂಬುವರಿಗೆ ಸೇರಿದೆ ಎನ್ನಲಾಗಿದೆ. ಸಧ್ಯ ಅಧಿಕಾರಿಗಳು ಎರಡು ಕೌಂಟಿಂಗ್ ಮೆಷಿನ್ ಮೂಲಕ ಹಣ ಎಣಿಸಲು ಮುಂದಾಗಿದ್ದಾರೆ.

ಇದನ್ನೂ ಓದಿ:ಬಳ್ಳಾರಿಯಲ್ಲಿ 5 ಕೋಟಿಗೂ ಅಧಿಕ ಹಣ ಜಪ್ತಿ ಪ್ರಕರಣ: ವಿಚಾರಣೆ ವೇಳೆ ಸ್ಪೋಟಕ ಮಾಹಿತಿ ಬಹಿರಂಗ

ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ವಶಕ್ಕೆ ಪಡೆದ ಚುನಾವಣಾಧಿಕಾರಗಳು

ಇದೇ ವೇಳೆ ಕಾರಿನ ಒಳಗಡೆ ಇದ್ದ ದಾಖಲಾತಿಗಳನ್ನ ಚುನಾವಣಾಧಿಕಾರಗಳು ವಶಕ್ಕೆ ಪಡೆದಿದ್ದಾರೆ. ಕಾರಿನ ಒಳಗಡೆ ಇದ್ದ ಒಂದು ಮೊಬೈಲ್ ಮತ್ತುಒಂದಷ್ಟು ದಾಖಲಾತಿಗಳು ಚುನಾವಣಾಧಿಕಾರಿಗಳಿಗೆ ಲಭ್ಯವಾಗಿದ್ದು, ಸೋಮಶೇಖರ್ ಗಂಗಾಧರಯ್ಯ ಎಂಬುವರ ಹೆಸರಲ್ಲಿ ಕೆಲವು ದಾಖಲೆಗಳು ಇರುವುದನ್ನು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ತನಿಖೆ ಬಳಿಕ ನಿಖರ ಮಾಹಿತಿ ದೊರೆಯಲಿದೆ.

ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಸ್ಪಷ್ಟನೆ

ಇನ್ನು ಈ ಘಟನೆ ಕುರಿತು ಬೆಂಗಳೂರಿನಲ್ಲಿ ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ಮಾತನಾಡಿ, ‘ಇಂದು ಬೆಳಗ್ಗೆ ಹಣ ಸಾಗಿಸುತ್ತಿದ್ದ ಬಗ್ಗೆ ನಮಗೆ ಒಂದು ಕರೆ ಬಂದಿತ್ತು. ಚುನಾವಣಾ ಅಧಿಕಾರಿ ವಿನೋದಪ್ರಿಯಾ ಸ್ಥಳಕ್ಕೆ ಭೇಟಿ ನೀಡಿದ್ದರು. ನಮ್ಮ ಅಧಿಕಾರಿಗಳ ಜೊತೆ ನಾನು ಸ್ಥಳಕ್ಕೆ ತಕ್ಷಣ ಭೇಟಿ ನೀಡಿದ್ದೆ. ಸ್ಕೂಟರ್​ನಿಂದ ಫಾರ್ಚೂನರ್​​ ಕಾರಿಗೆ ಹಣ ಶಿಫ್ಟ್ ಮಾಡುತ್ತಿದ್ದರು. ಈ ವೇಳೆ ವಿನೋದಪ್ರಿಯಾ ಒಬ್ಬರೇ ಇದ್ದು ಅವರನ್ನೂ ಪ್ರಶ್ನಿಸಿದ್ದಾರೆ. ತಕ್ಷಣ ದ್ವಿಚಕ್ರ ವಾಹನದಲ್ಲಿದ್ದ ಒಂದು ಬ್ಯಾಗ್​ನ್ನು ವಶಕ್ಕೆ ಪಡೆದರು. ಹಣದ ಕೌಂಟಿಂಗ್ ನಡೆಯುತ್ತಿದೆ. 1 ಕೋಟಿಗೂ ಹೆಚ್ಚು ಹಣ ಇದೆ. ಪರಾರಿಯಾದ ಫಾರ್ಚೂನರ್ ಕಾರಿನ ನಂಬರ್​ ಬರೆದುಕೊಂಡಿದ್ದಾರೆ. ಕಾರು ಯಾರಿಗೆ ಸೇರಿದ್ದು ಎಂದು ಪೊಲೀಸರು ಪರಿಶೀಲನೆ ನಡೆಸುತ್ತಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Sat, 13 April 24