ಮೋದಿ ಪ್ರಯಾಣಿಸಲಿರುವ ಮೆಟ್ರೋಗೆ ಮಹಿಳಾ ಲೋಕೋ ಪೈಲಟ್: ಪ್ರಧಾನಿ ಜತೆ 117 ಮಂದಿ ಪ್ರಯಾಣ

ಮೆಟ್ರೋ ಹಳದಿ ಮಾರ್ಗ ಲೋಕಾರ್ಪಣೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ರಾಗಿಗುಡ್ಡ ಮೆಟ್ರೋ ನಿಲ್ದಾಣದಿಂದ ಕೋನಪ್ಪನ ಅಗ್ರಹಾರಕ್ಕೆ ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ. ಮಹಿಳಾ ಲೋಕೋಪೈಲಟ್ ವಿನುತಾ ಅವರು ಈ ರೈಲಿಗೆ ಸಾರಥಿಯಾಗಲಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗೆ ಒಟ್ಟು 117 ಜನರು ಪ್ರಯಾಣಿಸಲಿದ್ದಾರೆ.

ಮೋದಿ ಪ್ರಯಾಣಿಸಲಿರುವ ಮೆಟ್ರೋಗೆ ಮಹಿಳಾ ಲೋಕೋ ಪೈಲಟ್: ಪ್ರಧಾನಿ ಜತೆ 117 ಮಂದಿ ಪ್ರಯಾಣ
ರಾಗಿಗುಡ್ಡ ಮೆಟ್ರೋ ಸ್ಟೇಷನ್
Edited By:

Updated on: Aug 10, 2025 | 11:02 AM

ಬೆಂಗಳೂರು, ಆಗಸ್ಟ್ 10: ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ (Yellow metro line) ಲೋಕಾರ್ಪಣೆಗೆ ಸಜ್ಜಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಹಸಿರು ನಿಶಾನೆ ತೋರಲಿದ್ದಾರೆ. ರಾಗಿಗುಡ್ಡ ಮೆಟ್ರೋ ನಿಲ್ದಾಣದಲ್ಲೇ ಹಳದಿ ಮಾರ್ಗಕ್ಕೆ ಹಸಿರು ನಿಶಾನೆ ತೋರಲಿರುವ ಪ್ರಧಾನಿ ಮೋದಿ, ಎಲೆಕ್ಟ್ರಾನಿಕ್ ಸಿಟಿ ಮೆಟ್ರೋ ಸ್ಟೇಷನ್​ವರೆಗೆ ಸಂಚರಿಸಲಿದ್ದಾರೆ. ಈ ವೇಳೆ ಮೋದಿಗೆ ಮೆಟ್ರೋ ಮಹಿಳಾ ಲೋಕೋ ಪೈಲಟ್ ವಿನುತಾ ಸಾರಥಿ ಆಗಲಿದ್ದಾರೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​ ಸೇರಿ 117 ಜನರು ಪ್ರಯಾಣ ಮಾಡಲಿದ್ದಾರೆ.

ಮೋದಿ ಸಂಚಾರ ಮಾಡುವ ರೈಲಿಗೆ ಮಹಿಳಾ ಲೋಕೋ ಪೈಲಟ್

ಸದ್ಯ ರಾಗಿಗುಡ್ಡ ಮೆಟ್ರೋ ಸ್ಟೇಷನ್​ ಹಳದಿ, ಪಿಂಕ್‌, ನೇರಳೆ, ಬಿಳಿ ಬಣ್ಣದ ಹೂವುಗಳಿಂದ ಸಿಂಗಾರಗೊಂಡಿದೆ. ಎರಡನೇ ಮೆಟ್ರೋ ಸ್ಟೇಷನ್ ರಾಗಿಗುಡ್ಡದಿಂದ ಹದಿಮೂರನೇ ಮೆಟ್ರೋ ಸ್ಟೇಷನ್​ ಕೋನಪ್ಪನ ಅಗ್ರಹಾರ (ಇನ್ಫೋಸಿಸ್ ಫೌಂಡೇಶನ್ ಮೆಟ್ರೋ ಸ್ಟೇಷನ್ ) ವರೆಗೆ ಮೋದಿ ಮೆಟ್ರೋ ರೈಲಿನಲ್ಲಿ ಸಂಚಾರ ಮಾಡಲಿದ್ದಾರೆ. ಇದೇ ರೈಲಿಗೆ ವಿನುತಾ ಎಂಬುವವರು ಲೋಕೋ ಪೈಲಟ್ ಇರಲಿದ್ದಾರೆ.

ಇದನ್ನೂ ಓದಿ: ಬೆಂಗಳೂರಿಗೆ ಪ್ರಧಾನಿ: ಮೋದಿ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಆ 13 ಜನರು ಯಾರ್ಯಾರು?

ಇನ್ನು ಪ್ರಧಾನಿ ಮೋದಿ ಜೊತೆಗೆ ಎಂಟು ಜನ ಮಕ್ಕಳು, ಎಂಟು ಮೆಟ್ರೋ ಉದ್ಯೋಗಿಗಳು, ಸರ್ಕಾರಿ ಹೈಸ್ಕೂಲ್​ನಿಂದ 16 ವಿದ್ಯಾರ್ಥಿಗಳು, ಆರ್.ವಿ ರೋಡ್ ಟು ಬೊಮ್ಮಸಂದ್ರ ಯೆಲ್ಲೋ ಲೈನ್ ಮಾರ್ಗದಲ್ಲಿ  ಮಾರ್ಗದಲ್ಲಿ ಕೆಲಸ ಮಾಡಿದ ಎಂಟು ಕಾರ್ಮಿಕರು ಮತ್ತು 8 ಜನಸಾಮಾನ್ಯರಿಗೆ ಅವಕಾಶ ನೀಡಲಾಗಿದೆ.  ಇವೆರಲ್ಲಾ ಮೋದಿ ಜೊತೆಗೆ ಫಸ್ಟ್‌ ಕೋಚ್​ನಲ್ಲಿ ಪ್ರಯಾಣ ಮಾಡಲಿದ್ದಾರೆ.

ಆರು ಮೆಟ್ರೋ ಸ್ಟೇಷನ್​ಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಪ್ರತಿ ಕಾರ್ಯಕ್ರಮಕ್ಕೆ ಐದು ನಿಮಿಷಗಳ ಕಾಲಾವಕಾಶ ನೀಡಲಾಗಿದೆ. ರಾಗಿಗುಡ್ಡದಿಂದ ಮೆಟ್ರೋ ರೈಲು ಸಂಚಾರ ಆರಂಭಗೊಂಡು ಜಯದೇವ ಮೆಟ್ರೋ ಸ್ಟೇಷನ್​ನಲ್ಲಿ ಐದು ನಿಮಿಷ ನಿಲ್ಲಲ್ಲಿದೆ. ನಂತರ ಸಿಲ್ಕ್ ಬೋರ್ಡ್, ಹೊಂಗಸಂದ್ರ, ಸಿಂಗಸಂದ್ರ, ಎಲೆಕ್ಟ್ರಾನಿಕ್ ಸಿಟಿ, ಕೊನಪ್ಪನ ಅಗ್ರಹಾರ ಮೆಟ್ರೋ ಸ್ಟೇಷನ್​ನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಎಲ್ಲಾ ಗಣ್ಯರು ರೈಲಿನಿಂದ ಇಳಿಯಲಿದ್ದಾರೆ.

ಸದ್ಯಕ್ಕಿಲ್ಲ ಡ್ರೈವರ್ ಲೆಸ್ ರೈಲು ಸಂಚಾರ

ಯೆಲ್ಲೋ ಲೈನ್ ಮಾರ್ಗ ಓಪನ್ ಆಗುತ್ತಿರುವುದು ಗುಡ್ ನ್ಯೂಸ್ ಆದರೆ, ಇಂದಿನಿಂದ ಡ್ರೈವರ್ ಲೆಸ್ ರೈಲು ಸಂಚಾರ ಮಾಡುತ್ತಿಲ್ಲ. ತಾಂತ್ರಿಕ ದೋಷ ಹಿನ್ನಲೆ ಆರು ತಿಂಗಳ ನಂತರ ಡ್ರೈವರ್ ಲೆಸ್​​ ರೈಲು ಸಂಚಾರ ಮಾಡಲಿದೆಯಂತೆ. ಹಾಗಾಗಿ ಪ್ರಧಾನಿ ಮೋದಿ ಸಂಚಾರ ಮಾಡುವ ರೈಲಿಗೆ ಲೋಕೋ ಪೈಲಟ್ ಇರಲಿದ್ದಾರೆ. ಆರು ತಿಂಗಳ ನಂತರ ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ಮಾಡಿ, ಗ್ರೀನ್ ಸಿಗ್ನಲ್ ನೀಡಿದ ನಂತರ  ಡ್ರೈವರ್ ಲೆಸ್ ಸಿಸ್ಟಮ್ ಆರಂಭವಾಗಲಿದೆ.

ಇದನ್ನೂ ಓದಿ: PM Modi in Bengaluru LIVE: 4 ಗಂಟೆಯಲ್ಲಿ 3 ಕಾರ್ಯಕ್ರಮ, ಪ್ರಧಾನಿ ಮೋದಿ ಬೆಂಗಳೂರು ಭೇಟಿ ನೇರಪ್ರಸಾರ

ಇಂದು ಹಳದಿ ಮಾರ್ಗಕ್ಕೆ ಚಾಲನೆ ಸಿಕ್ಕರೂ ಪ್ರಯಾಣಿಕರಿಗೆ ಸಂಚಾರ ಮಾಡಲು ಅವಕಾಶವಿಲ್ಲ. ನಾಳೆ ಬೆಳಿಗ್ಗೆ ಐದು ಗಂಟೆಯಿಂದ ಹಳದಿ ಲೈನ್​​ನಲ್ಲಿ ಪ್ರಯಾಣಿಕರು ಸಂಚಾರ ಮಾಡಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:59 am, Sun, 10 August 25